ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ :ದಿನಾಂಕ 04.01.2023  ರಂದು ಫಿರ್ಯಾದಿ: ಶ್ರೀನಿವಾಸ  ಆಚಾರಿ  ಪ್ರಾಯ 58 ವರ್ಷ ತಂದೆ, ದಿ,ಮೋನ  ಆಚಾರಿ ವಾಸ, ಚಕ್ರಮೈದಾನ  ಹಳ್ಳಿಹೊಳೆ ಇವರು  ಕೆಎ  20 ಇಜೆ. 1259 ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ  ಸಿದ್ದಾಪುರದಿಂದ  ಹಳ್ಳಿಹೊಳೆಯ  ಮನೆಯ  ಕಡೆಗೆ ಹೋಗಲು  ಸುಮಾರು  19;30  ಘಂಟೆಗೆ  ಬೈಂದೂರು  ತಾಲೂಕಿನ  ಹಳ್ಳಿಹೊಳೆ ಗ್ರಾಮದ ಕಡಿಪಾಲು  ಎಂಬಲ್ಲಿ  ಹೋಗುತ್ತಿರುವಾಗ  ಆರೋಪಿಯು   ಮೋಟಾರ್  ಸೈಕಲ್‌‌ನ್ನು  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡಿದ್ದು, ಈ   ಸಮಯ ನಾಯಿ  ಅಡ್ಡ ಬಂದ  ಕಾರಣ ನಾಯಿ  ತಪ್ಪಿಸಲು  ಹೋಗಿ ರಸ್ತೆಯ  ಎಡಬದಿಯ   ಚರಂಡಿಗೆ  ಬೈಕ್‌‌ನ್ನು  ಹಾರಿಸಿದ್ದು, ಈ  ಸಮಯ  ಫಿರ್ಯಾದುದಾರರು   ಬೈಕ್‌‌ನಿಂದ ಹಾರಿ  ಧರೆಗೆ  ಬಿದ್ದಿದ್ದು,  ಇದರ  ಪರಿಣಾಮ ಅವರ  ತಲೆಗೆ ಪೆಟ್ಟಾಗಿದ್ದು, ಇದರಿಂದ  ಅಸ್ವಸ್ಥಗೊಂಡ  ಫಿರ್ಯಾಧುದಾ ರರನ್ನು ಕುಂದಾಪುರ  ನ್ಯೂ ಮೆಡಿಕಲ್  ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು, ಅಲ್ಲಿಂದ  ಹೆಚ್ಚಿನ ಚಿಕಿತ್ಸೆಯ  ಬಗ್ಗೆ  ಮಂಗಳೂರಿನ ಪಡೀಲ್‌‌ನಲ್ಲಿ ಇರಯವ   First  ನ್ಯೊರೊ  ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು, ಅಲ್ಲಿ  ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುತ್ತಾರೆ ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  1/2023 ಕಲಂ: 279,   338.ಐ.ಪಿಸಿ    ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು:ದಿನಾಂಕ : 06/01/2023 ರಂದು   ಪಿರ್ಯಾದಿ: ಸುಕನ್ಯಾ (20) ತಂದೆ: ಎಸ್.‌ ಜಯ ವಾಸ: ಕೃಷ್ಣ ಕೃಪಾ, ಸರಸ್ವತಿ ನಗರ ,ಪಾಂಗಳ ಗ್ರಾಮ, ಕಾಪು ಇವರು  ಹಾಗೂ ಭವ್ಯಶ್ರೀ ರವರು  ಉಡುಪಿಗೆ  ಹೋಗುವುದಕ್ಕಾಗಿ,  ಉಡುಪಿ ಕಡೆಗೆ ಹೋಗುವ ಬಸ್‌ನಿಲ್ದಾಣಕ್ಕೆ ಹೋಗಲು, ಪಾಂಗಾಳ ಗ್ರಾಮದ ಆಟೋ ರಿಕ್ಷಾ ನಿಲ್ದಾಣದ ಬಳಿ  ರಾ ಹೆ 66 ರ ಉಡುಪಿ ಮಂಗಳೂರು ಏಕಮುಖ ಸಂಚಾರ ರಸ್ತೆಯ ಪೂರ್ವ ಬದಿಯಲ್ಲಿ ನಿಂತು ವಾಹನಗಳನ್ನು ಅವಲೋಕಿಸುತ್ತಿರುವಾಗ ಸಮಯ ಸುಮಾರು ಬೆಳಗ್ಗೆ 08.40 ಗಂಟೆಗೆ ಉಡುಪಿ ಮಂಗಳೂರು ರಾ ಹೆ  66 ರಲ್ಲಿ ಕೆ.ಎ. 20 ಇ. ಎಕ್ಸ್ 8306 ನೇ ಸ್ಕೂಟರ್‌‌ಸವಾರ, ಸಹಸವಾರರನ್ನು ಕುಳ್ಳರಿಸಿಕೊಂಡು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ  ತನ್ನ ಬಾಬ್ತು ಸ್ಕೂಟರ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು, ಭವ್ಯಶ್ರೀ ಯವರಿಗೆ ಢಿಕ್ಕಿ ಹೊಡೆದು ಸ್ಕೂಟರ್ ನಿಲ್ಲಿಸದೇ  ಪರಾರಿಯಾಗಿದ್ದು, ಪರಿಣಾಮ ಭವ್ಯಶ್ರಿ ರವರು ರಸ್ತೆಗೆ ಬಿದ್ದು, ತಲೆಯ ಹಿಂಭಾಗಕ್ಕೆ ರಕ್ತಗಾಯ, ಮುಖದ ಬಲಭಾಗಕ್ಕೆ ರಕ್ತಗಾಯ ಹಾಗೂ ಎರಡು ಕಾಲಿನ ಮೂಳೆ ಮುರಿತದ ಗಾಯವಾಗಿರುವುದಾಗಿದೆ. ಕೂಡಲೇ  ಪಿರ್ಯಾದಿದಾರರು  ಅಲ್ಲಿನ ಸ್ಥಳೀಯರ ಸಹಾಯದಿಂದ  ಹಾಗೂ ಸ್ಥಳದಲ್ಲಿದ್ದ ಸೌಜನ್ಯರವರೊಂದಿಗೆ ಒಂದು ಆಟೋ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಭವ್ಯಶ್ರೀ ಯವರಿಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ಪರೀಕ್ಷಿಸಿದ ಅಲ್ಲಿನ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2023 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಪಿರ್ಯಾದಿ ಮಹಮ್ಮದ್‌ ಹನೀಫ, ಪ್ರಾಯ: 51 ವರ್ಷ, ತಂದೆ: ಅಬ್ದುಲ್‌ ಕರೀಂ, ವಾಸ: ರಾಜೀವ ನಗರ, ಹಿರ್ಗಾನ ಗ್ರಾಮ, ಇವರು ದಿನಾಂಕ: 04.01.2023 ರಂದು ಸಂಜೆ ಹಿರ್ಗಾನದಿಂದ ರಿಕ್ಷಾವನ್ನು ಚಲಾಯಿಸಿಕೊಂಡು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಮಹಾಲಕ್ಷ್ಮೀ ಟೈಲ್ಸ್‌ಅಂಗಡಿ ಬಳಿ ನಿಲ್ಲಿಸಿಕೊಂಡಿದ್ದು ಸಮಯ ಸುಮಾರು ಸಂಜೆ 6:15 ಗಂಟೆಗೆ ಜೋಡುರಸ್ತೆ ಕಡೆಯಿಂದ ಹೆಬ್ರಿ ಕಡೆಗೆ KA20ED0925 ನೇ ನೋಂದಣಿ ಸಂಖ್ಯೆಯ ಬಜಾಜ್‌ಡಿಸ್ಕವರಿ ಮೋಟಾರ್‌ಸೈಕಲ್‌ನ್ನು ಶಿವಪ್ಪ ಕುಲಾಲ್‌ಎಂಬವರು ಹೆಲ್ಮೆಟ್‌ಧರಿಸಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಕಾರ್ಕಳ ಜೋಡುರಸ್ತೆ ಕಡೆಯಿಂದ ಹೆಬ್ರಿ ಕಡೆಗೆ KA19AD4529 ನೇ ನೋಂದಣಿ ಸಂಖ್ಯೆಯ ಆಟೋರಿಕ್ಷಾವನ್ನು ಚಾಲಕ ಚಿಂಗ ಎಂಬಾತನು ಮೋಟಾರ್‌ಸೈಕಲ್‌ನ್ನು ಓವರ್‌ಟೇಕ್‌ಮಾಡಿಕೊಂಡು ಮುಂದೆ ಸಾಗುವಾಗ ಎದುರುಗಡೆಯಿಂದ ವಾಹನ ಬಂದಿದ್ದನ್ನು ನೋಡಿ ಆಟೋರಿಕ್ಷಾವನ್ನು ಚಾಲಕ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ಎಡಬದಿಗೆ ಚಲಾಯಿಸಿ ಶಿವಪ್ಪ ಕುಲಾಲ್‌ಸವಾರಿ ಮಾಡುತ್ತಿದ್ದ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ಸೈಕಲ್‌ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ ಮೋಟಾರ್‌ಸೈಕಲ್‌ಸವಾರ ಶಿವಪ್ಪ ಕುಲಾಲ್‌ರವರಿಗೆ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿ ಮಾತನಾಡುತ್ತಿರಲಿಲ್ಲ. ಗಾಯಗೊಂಡ ಶಿವಪ್ಪ ಕುಲಾಲ್‌ರವರನ್ನು ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 02/2023 ಕಲಂ 279,338 ಐಪಿಸಿ.  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 05/01/2023  ರಂದು  ಸಂಜೆ ಸುಮಾರು 7:30 ಗಂಟೆಗೆ, ಕುಂದಾಪುರ  ತಾಲೂಕಿನ, ಕರ್ಕುಂಜಿ  ಗ್ರಾಮದ  ಕೊಡಗಿ ಎಂಬಲ್ಲಿ, ಆಪಾದಿತ ರಾಮಣ್ಣ  ಶೆಟ್ಟಿ ಎಂಬವರು KA41-W-2292ನೇ ಬೈಕನ್ನು ನೇರಳಕಟ್ಟೆ ಕಡೆಯಿಂದ ಕೊಡ್ಲಾಡಿ  ಅತೀವೇಗ ಹಾಗೂ ನಿರ್ಲಕ್ಷ್ಯತನ ದಿಂದ ಚಾಲನೆ ಮಾಡಿಕೊಂಡಿಕೊಂಡು ರಸ್ತೆಯ ಬಲಬದಿಗೆ ಬಂದು, ರಾಘವೇಂದ್ರ ಎಂಬವರು KA20-EN-4157 ನೇ ಬೈಕಿನಲ್ಲಿ ಪಿರ್ಯಾದಿದಾರರಾದ ಪ್ರಮೋದ್‌ಮೆಂಡನ್‌ರವರನ್ನು  ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕೊಡ್ಲಾಡಿಯಿಂದ ಕುಂದಾಪುರ ಕಡೆಗೆ  ಸವಾರಿ ಮಾಡಿ ಹೋಗುತ್ತಿದ್ದ ಸದ್ರಿ ಬೈಕಿಗೆ ಎದುರುನಿಂದ ಡಿಕ್ಕಿ  ಹೊಡೆದ ಪರಿಣಾಮ, ರಾಘವೇಂದ್ರರವರ  ತಲೆಗೆ, ಎಡಕಣ್ಣಿಗೆ, ಒಳನೋವು ಹಾಗೂ ಮೈಕೈಗೆ ತರಚಿದ ಗಾಯವಾಗಿದ್ದು, ಆಪಾದಿತನಿಗೆ  ಎಡಕಾಲಿಗೆ, ತಲೆಗೆ ಹಾಗೂ ಕೆನ್ನಗೆ ಗಾಯಗಳಾಗಿದ್ದು, ರಾಘವೇಂದ್ರ ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಆಪಾದಿತ  ರಾಮಣ್ಣ  ಶೆಟ್ಟಿರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪ್ರಮೋದ್‌ಮೆಂಡನ್‌ ಪ್ರಾಯ  42  ವರ್ಷ   ತಂದೆ  ಶ್ರೀನಿವಾಸ ಮೆಂಡನ್‌    ವಾಸ:  ಕೊಟ ಪಡುಕೆರೆ, ಕೋಟತಟ್ಟು  ಗ್ರಾಮ  ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 03/2023 ಕಲಂ 279, 337   IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬೈಂದೂರು: ಪಿರ್ಯಾದಿ: ಶ್ರೀಮತಿ ವಿಶಾಲ (45 ವರ್ಷ)ಗಂಡ: ಕಿರಣ ವಾಸ: ಹೇನುಬೇರು ಕೆರೆಮನೆ ಪಡುವರಿ ಗ್ರಾಮ ಇವರ ಮಾವ ರಾಮ ದೇವಾಡಿಗ ರವರು ಹೇನಬೇರು ಕೆರೆಮನೆ ಎಂಬಲ್ಲಿ ವಾಸಮಾಡಿಕೊಂಡಿದ್ದು ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 20/10/2022 ರಂದು ಸಂಜೆ 5:00 ಗಂಟೆಗೆ ಫಿರ್ಯಾದಿದಾರರ ಮಾವ ರಾಮ ದೇವಾಡಿಗ (55 ವರ್ಷ)  ಇವರು ಮನೆಯಲ್ಲಿ  ಬಚ್ಚಲು  ಒಲೆಗೆ ಬೆಂಕಿ ಹಚ್ಚಿ ಕಟ್ಟಿಗೆ ಹಾಕುವ ಸಮಯದಲ್ಲಿ  ಕುಂಬಾರಹುಳು ಅವರ ಬಲಕೈ ಹಿಂಬಾಗಕ್ಕೆ ಕಚ್ಚಿದ್ದು ಇದರಿಂದ  ಕೈ ಬಾತು ಹೋಗಿ ಏಳಲು ಆಗದೇ ಇದ್ದುದರಿಂದ ರಾಮ ದೇವಾಡಿಗ ರವರನ್ನು ದಿನಾಂಕ 21/10/2022 ರಂದು ಚಿಕಿತ್ಸೆ ಬಗ್ಗೆ  ಬೈಂದೂರು  ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದ ಕಾರಣ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ   ತಲೆಯಲ್ಲಿ ರಕ್ತ ಸ್ರಾವ  ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಂಗಳೂರು  ವೆನ್ಲಾಕ್ ಆಸ್ಪತ್ರೆಗೆ  ವೈದ್ಯರ  ಸಲಹೆಯಂತೆ ಕರೆದುಕೊಂಡು ಹೋದಲ್ಲಿ ದಿನಾಂಕ 22-10-2022 ರಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದವರು  ಕುಂಬಾರ ಹುಳ ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ 06/01/2023 ರಂದು ಬೆಳಿಗ್ಗೆ  4:27 ಗಂಟೆಗೆ  ರಾಮ ದೇವಾಡಿಗ ರವರು  ಮೃತಪಟ್ಟಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಯುಡಿಆರ್ ನಂ 02/2023 ಕಲಂ 174 ಸಿ ಆರ್ ಪಿ ಸಿ  ಯಂತೆ  ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ಪಿರ್ಯಾದಿ: ಹರೀಶ(21 ವಷ), ತಂದೆ: ಅಣ್ಣಯ್ಯ, ವಾಸ: ನಡುಮನೆ ಮೊಗವೀರ ಪೇಟೆ, ಕೊಕ್ಕರ್ಣೇ ಪೆಜಮಂಗೂರು ಎಂಬಲ್ಲಿ ವಾಸ ಮಾಡಿಕೊಂಡಿರುವ ಪಿರ್ಯಾದಿದಾರರ ಅಣ್ಣನಾದ ಗಣೇಶ (23 ವರ್ಷ ) ಎಂಬವನು ಸುಮಾರು 5 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಅವನು ಮನೆಯಲ್ಲಿ ದಿನಾಂಕ 06.01.2023 ರಂದು ಮಲಗಿದ್ದಾಗ ಬೆಳಿಗ್ಗಿನ ಜಾವ 03:00 ಗಂಟೆಯ ಸಮಯಕ್ಕೆ  ಜೋರಾಗಿ ಉಸಿರಾಡುತ್ತಿದ್ದು, ಅಲ್ಲದೇ ಕೆಲವು ಬಾರಿ ಉಸಿರಾಡಲು ಒದ್ದಾಡುತ್ತಿದ್ದನು. ಕೂಡಲೇ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಢು ಹೋದಲ್ಲಿ ಪರೀಕ್ಷಿಸಿದ ವೈಧ್ಯರು  ಗಣೇಶನು ಮೃತಪಟ್ಟಿರುವುದಾಗಿ ಬೆಳಿಗ್ಗೆ ಸುಮಾರು 03:55  ಗಂಟೆಗೆ ತಿಳಿಸಿರುತ್ತಾರೆ . ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 02/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ: ದಿವ್ಯ ಪ್ರಾಯ : 33 ವರ್ಷ ಗಂಡ : ಆನಂದ ವಾಸ : ಪದಮತಿ ಹೌಸ್, ಪೆರುವಾಯಿ ಅಂಚೆ ಮತ್ತು ಗ್ರಾಮ ಇವರ ಗಂಡ ಆನಂದ ಪ್ರಾಯ 36 ವರ್ಷ ರವರು ಮಂಗಳೂರು ಬಂದರಿನಲ್ಲಿ ಸಾಯಿ ಪ್ರೇಮ್‌ಕುಂದರ ರವರ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ಗಂಡ ದಿನಾಂಕ 03-01-2023  ರಂದು ಬೆಳಗ್ಗೆ 06.45 ಗಂಟೆಗೆ ಮೀನು ಹಿಡಿಯುವ ಕೆಲಸಕ್ಕೆ ಬಂದರಿಗೆ ಹೋಗಿದ್ದು, ಆನಂದ ರವರು 11.45 ಗಂಟೆಯ ಸುಮಾರಿಗೆ ಬೋಟ್‌ನಿಂದ ಹೊರಗೆ ಬಂದು ಅದರ ದಂಡೆಯ ಮೇಲೆ ನಿಂತುಕೊಂಡಿದ್ದು, ಆಕಸ್ಮಿಕವಾಗಿ ಆನಂದ ರವರ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದು, ಅವರನ್ನು ಸಮುದ್ರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.  ಈ ದಿನ ದಿನಾಂಕ 06-01-2023 ರಂದು ಸುಮಾರು ಬೆಳಗ್ಗೆ 07.00 ಗಂಟೆಗೆ ಪ್ರೇಮ ಕುಂದರ್ ರವರು ಪಿರ್ಯಾದಿದಾರರ ಭಾವ ತಾರಾನಾಥ ಎನ್‌ಕುಂದರ್‌‌ರವರಿಗೆ  ಫೋನ್ ಕರೆ ಮಾಡಿ “ ನನಗೆ ಕಾಪು ಬಳಿ ಸಮುದ್ರದಲ್ಲಿ ಹೋಗುತ್ತಿದ್ದ ಮೀನುಗಾರರು ಫೋನ್ ಕರೆ ಮಾಡಿ  ಸಮುದ್ರದಲ್ಲಿ ಒಂದು ಗಂಡಸಿನ ಮೃತ ದೇಹ ಸಿಕ್ಕಿದ್ದು, ಅಜ್ಜರಕಾಡು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ನೀವು ಹೋಗಿ ನೋಡಿಕೊಂಡು ಬರುವಂತೆ ತಿಳಿಸಿದಂತೆ, ಪಿರ್ಯಾದಿದಾರರು ಸಂಬಂಧಿಕರೊಂದಿಗೆ ಅಜ್ಜರಕಾಡು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಮೃತ ದೇಹವನ್ನು ನೋಡಿ ಪಿರ್ಯಾದಿದಾರರು ತನ್ನ ಗಂಡ ಆನಂದ ರವರ ಮೃತ ದೇಹ ಆಗಿರುವುದಾಗಿ ಗುರುತಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ  ಯು.ಡಿ.ಆರ್. ನಂಬ್ರ 01/2023 ಕಲಂ 174 ಸಿಆರ್‌‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 06-01-2023 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080