ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ದಿನಾಂಕ 05/01/2022 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ರಾಜೇಶ್‌ ನಾಯಕ್‌ (49), ತಂದೆ: ಭಾಸ್ಕರ ನಾಯಕ್‌, ವಾಸ; ಹನುಮಾನ್‌ರೈಸ್‌ಮಿಲ್‌ಹತ್ತಿರ ತೆಕ್ಕಟ್ಟೆಗ್ರಾಮ ಕುಂದಾಪುರ ತಾಲೂಕು ಇವರು  ರೈಸ್‌‌‌‌‌‌‌‌ಮಿಲ್‌‌‌‌ನ  ಹೊರಗೆ  ನಿಂತುಕೊಂಡಿದ್ದು, ಕೃಷ್ಣಾನಂದ ಶ್ಯಾನುಭಾಗ್‌(85) ರವರು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಹನುಮಾನ್‌ ರೈಸ್‌ ಎದುರು ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಪಶ್ಚಿಮ ಡಿವೈಡರ್‌ ಬಳಿ ರಸ್ತೆ ದಾಟಲು ನಿಂತುಕೊಂಡಿರುವಾಗ ಬೆಳಿಗ್ಗೆ 06:45 ಗಂಟೆಗೆ ಕುಂದಾಪುರ ಕಡೆಯಿಂದ  ಉಡುಪಿ  ಕಡೆಗೆ  ಮೋಟಾರು ಸೈಕಲ್‌ ಸವಾರನು ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಚಾಲನೆ  ಮಾಡಿಕೊಂಡು  ಬಂದು ಕೃಷ್ಣಾನಂದ ಶ್ಯಾನುಭಾಗ್‌ರವರಿಗೆ ಡಿಕ್ಕಿ  ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ಹಾಗೂ ಕೃಷ್ಣಾನಂದ ಶ್ಯಾನುಭಾಗ್‌ರವರು ಇಬ್ಬರು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಅವರಿಬ್ಬರನ್ನು ಉಪಚರಿಸಿ ಅವರ ಕಾರಿನಲ್ಲಿ ಕೋಟೇಶ್ವರ ಎನ್‌ಆರ್‌ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಇಬ್ಬರ ತಲೆಗೂ ತೀವ್ರ ಸ್ವರೂಪದ ಪೆಟ್ಟಾಗಿರುವುದಾಗಿ ತಿಳಿಸಿದ್ದರಿಂದ ಪಿರ್ಯಾದಿದಾರರು ಕೃಷ್ಣಾನಂದ ಶ್ಯಾನುಭಾಗ್‌ರವರನ್ನು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಡಿಕ್ಕಿ ಹೊಡೆದ ಮೋಟಾರು ಸೈಕಲ್‌ ನಂಬ್ರ KA-20-V-2274 ಆಗಿದ್ದು, ಸವಾರ  ಮಹಮದ್‌ ಲತೀಪ್‌ ಎಂಬುವವರಾಗಿದ್ದು, ಅವರನ್ನು ಕೂಡಾ ಅವರ ಮನೆಯವರು ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಕೃಷ್ಣಾನಂದ ಶ್ಯಾನುಭಾಗ್‌ ರವರು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಇರುವಾಗಲೇ ಮದ್ಯಾಹ್ನ 2:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಪ್ರವೀಣ್ ಹಿರೇಮಠ (26), ತಂದೆ: ಪತ್ರಯ್ಯ ಹಿರೇಮಠ,  ವಾಸ: ಪ್ರಗತಿ ನಗ ರ ಅಲೆವೂರು ಗ್ರಾಮ ಮಣಿಪಾಲ ಉಡುಪಿ ತಾಲೂಕು ಇವರೊಂದಿಗೆ ಕೆಲಸ ಮಾಡಿಕೊಂಡಿದ್ದ ಗುಂಡಪ್ಪ(55) ರವರು ಮದ್ಯಾಹ್ನ 13:00 ಗಂಟೆಯ ವರೆಗೆ ತನ್ನ ಕೆಲಸವನ್ನು ಮಾಡಿಕೊಂಡಿದ್ದು, ಪಿರ್ಯಾದಿದಾರರು ಹಾಗೂ ಅವರೊಂದಿಗೆ ಕೆಲಸ ಮಾಡಿಕೊಂಡಿದ್ದ ಸಿದ್ದಪ್ಪ ರವರು ಊಟದ ಹೋದಾಗ ಮೃತ ಗುಂಡಪ್ಪ ನವರಿಗೆ ಊಟ ಮಾಡುವಂತೆ ವಿನಂತಿಸಿದಾಗ ತನಗೆ ಎದೆ ನೋವು ಇದೆ ನೀವು ಊಟ ಮಾಡು ಎಂದು ತಿಳಸಿದ್ದು ಪಿರ್ಯಾದಿದಾರರು ಹಾಗೂ ಸಿದ್ದಪ್ಪ ಊಟ ಮಾಡಿ ನಂತರ ಮೃತರು ತನಗೆ ಜೋರಾಗಿ ಎದೆ ನೋಯುತ್ತಿದೆ, ಮೆಸ್ತ್ರಿಯವ ರಿಗೆ ಕರೆ ಮಾಡಿ ತಿಳಿಸಿದ್ದು ,ಮೃತರು ಕೂತಲ್ಲೆ ಮಲಗಿದ್ದು ಸ್ವಲ್ಪ ಹೊತ್ತಿನ ಬಳಿಕ ಪಿರ್ಯಾದಿದಾರರು ಅವರನ್ನು ಮಾತನಾಡಿಸಿದಾಗ ಅವರ ಬಾಯಲ್ಲಿ ಬಿಳಿನೊರೆ ಇದ್ದು ಮಾತನಾಡದೇ ಇದ್ದು ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಶಂಕರನಾರಾಯಣ: ದಿನಾಂಕ 04/01/2022 ರಂದು 23:00 ಗಂಟೆಯಿಂದ ದಿನಾಂಕ 05/01/2022 ರ ಬೆಳ್ಳಗ್ಗಿನ ಜಾವ 05:00 ಗಂಟೆಯ ಮದ್ಯಾವಧಿಯಲ್ಲಿ ಕುಂದಾಪುರ ತಾಲೂಕು ಉಳ್ಳೂರು-74 ಗ್ರಾಮ ಬಂಟಕೋಡು ಹೊಳೆಬಾಗಿಲು ಎಂಬಲ್ಲಿನ ಪಿರ್ಯಾದಿದಾರರಾದ ಶ್ರೀಮತಿ ಜಯಲಕ್ಷ್ಮಿ ಶೇಡ್ತಿ(52), ಬಿನ್: ದಿ. ರಘುರಾಮ ಶೆಟ್ಟಿ, ವಾಸ: ಹೊಳೆಬಾಗಿಲು  ಬಂಟಕೋಡು ಉಳ್ಳೂರು-74 ಗ್ರಾಮ ಕುಂದಾಪುರ ತಾಲೂಕು ಇವರ ಪಟ್ಟಾ ಸ್ಥಳ ಸರ್ವೆ ನಂಬ್ರ 153- ಎ2  ರಲ್ಲಿನ ಜಾಗದ  8 ಅಡಿ ಎತ್ತರದ 60 ಸಿಮೆಂಟ್ ಬೇಲಿ ಕಂಬಗಳನ್ನು  ಹಾಗೂ 25,000/- ರೂಪಾಯಿ ಬೆಲೆ ಬಾಳುವ ಐಬಿಎಕ್ಸ್ ಕಬ್ಬಿಣದ ತಂತಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ನೆರೆಕೆರೆ ನಿವಾಸಿಗಳಾದ  ಅರೋಪಿ ಶ್ರೀಮತಿ  ಪ್ರೇಮ ಶೇಡ್ತಿ ಮತ್ತು ಅವರ ಮಕ್ಕಳಾದ ಪ್ರಭಾಕರ ಶೆಟ್ಟಿ, ಪ್ರವೀಣ ಶೆಟ್ಟಿ, ಪ್ರತಾಪ ಶೆಟ್ಟಿ  ಮತ್ತು ಪ್ರದೀಪ ಶೆಟ್ಟಿ ಇವರ ಮೇಲೆ ಸಂಶಯ ಇರುವುದಾಗಿದೆ. ಕಳವು ಆದ ಒಟ್ಟು ಸ್ವತ್ತಿ ನ ಮೌಲ್ಯ ರೂಪಾಯಿ ಎರಡು ಲಕ್ಷಕ್ಕೂಮಿಕ್ಕಿ ಅಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022  ಕಲಂ: 447, 379 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 06-01-2022 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080