ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 04.01.2022 ರಂದು ಪಿರ್ಯಾದಿ ಪ್ರಣಯ್‌‌ ಕಿಣಿ ರವರು ತನ್ನ ಬಾಬ್ತು POLYGON STRATTOS ಕಂಪೆನಿಯ ಸೈಕಲ್‌ನಲ್ಲಿ ಹಾಗೂ ಅವರ ಸ್ನೇಹಿತ ಭಾರ್ಗವ್ ರವರು GAINT VOLT ಕಂಪೆನಿಯ ಸೈಕಲ್‌ನಲ್ಲಿ ಉಡುಪಿಯಿಂದ ಹೊರಟು ಬ್ರಹ್ಮಾವರ ಕಡೆಗೆ ರಸ್ತೆಯ ಎಡಬದಿಯ ಅಂಚಿನಲ್ಲಿ ಇಬ್ಬರೂ ಸವಾರಿಮಾಡಿಕೊಂಡು ಹೋಗುತ್ತಾ ಸಂಜೆ 6:50 ಗಂಟೆ ಸುಮಾರಿಗೆ 52 ನೇ ಹೇರೂರು ಗ್ರಾಮದ ಬ್ರಹ್ಮಾವರ ಸುಪ್ರೀಂ ಪೀಡ್ಸ್‌‌‌ಕಾರ್ಖಾನೆ ಬಳಿ ತಲುಪುವಾಗ ಅವರ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಆರೋಪಿಯು ಅವರ ಬಾಬ್ತು KA.30.A.2280 ನೇ ಬಿಳಿ ಬಣ್ಣದ ಬೊಲೇರೋ ಜೀಪನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಲಕೈಗೆ ಡಿಕ್ಕಿ ಹೊಡೆದು ತಾಗಿಸಿಕೊಂಡು ವಾಹನವನ್ನು ನಿಲ್ಲಿಸದೇ ಬ್ರಹ್ಮಾವರ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಆರೋಪಿಯ ವಾಹನ ಪಿರ್ಯಾದಿದಾರರ ಕೈಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಪಿರ್ಯಾದಿದಾರರ ಹತೋಟಿ ತಪ್ಪಿ ಅವರ ಎದುರುಗಡೆಯಿಂಧ ಸೈಕಲ್‌‌ನಲ್ಲಿ ಹೋಗುತ್ತಿದ್ದ ಭಾರ್ಗವ್‌‌ನ ಸೈಕಲಿಗೆ ಡಿಕ್ಕಿಯಾಗಿ ಇಬ್ಬರೂ ಸೈಕಲ್‌ಗಳ ಸಮೇತ ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ಬಿದ್ದು, ಪಿರ್ಯಾದಿದಾರರ ಎಡ ಮೊಣಕೈ, ಎಡಮೊಣಕಾಲಿಗೆ ತರಚಿದ ಗಾಯ, ಮೈಕೈಗೆ ಗುದ್ದಿದ ನೋವಾಗಿದ್ದು , ಭಾರ್ಗವ್‌‌‌ಗೆ ಮೈಕೈಗೆ ನೋವಾಗಿರುತ್ತದೆ ಅಲ್ಲದೇ ಎರಡೂ ಸೈಕಲ್‌ಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ 279, 337 ಐಪಿಸಿ ಮತ್ತು ಸೆಕ್ಷನ್‌(ಎ)(ಬಿ) ಜೊತೆಗೆ 187 ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

  • ಕುಂದಾಪುರ : ಪಿರ್ಯಾದಿ ಶ್ರೀಮತಿ ಪ್ರೇಮಿ ಬರೆಟ್ಟೋ ಇವರು ಆಪಾದಿತ ಸಲಾಂ ತೊಟ್ಟಿಲ್ ರವರೊಂದಿಗೆ ದಿನಾಂಕ 25-10-2003 ರಂದು ಕುಂದಾಪುರ ಉಪನೋಂದಣಾಧಿಕಾರಿಯವರ ಕಛೇರಿಯಲ್ಲಿ ವಿವಾಹವಾಗಿ ನೊಂದಣಿ ಮಾಡಿಕೊಂಡಿದ್ದು ವಿವಾಹ ಪೂರ್ವದಲ್ಲಿ ಆರೋಪಿಯು ವರದಕ್ಷಿಣೆಗಾಗಿ ರೂ 6,00,000 /- ಕೊಡುವಂತೆ ಪಿರ್ಯಾದುದಾರರ ಅಕ್ಕ ಶ್ರೀಮತಿ ನಿರ್ಮಲಾ ಬರೆಟ್ಟೋರವರಿಗೆ  ಒತ್ತಡ ಹಾಕಿದ್ದು ಆರೋಪಿತನು  ರೂ 3,00,000/-ಹಣವನ್ನು  ಕುಂದಾಪುರ ಖಾರ್ವಿಕೇರಿಯ ಬರೆಟ್ಟೋ ಕಂಪೌಂಡ್ ನಲ್ಲಿರುವ  ಪಿರ್ಯಾದುದಾರರ ಮನೆಯಲ್ಲಿ ಪಡೆದುಕೊಂಡಿರುತ್ತಾನೆ. ಮದುವೆಯ ತರುವಾಯ ಆರೋಪಿತರು ಪಿರ್ಯಾದುದಾರ ರೊಂದಿಗೆ ಸಹಬಾಳ್ವೆ ಮಾಡಿಕೊಂಡಿದ್ದು ಪಿರ್ಯಾದುದಾರರು 2010 ರಲ್ಲಿ ಉದ್ಯೋಗ ನಿಮಿತ್ತ ಇಸ್ರೇಲ್ ಗೆ ಹೋಗಿದ್ದು ಊರಿಗೆ ಬಂದ ಸಮಯದಲ್ಲಿ ಆರೋಪಿತನು ಊರಲ್ಲಿ ಇದ್ದು, ಹೆಚ್ಚಿನ ವರದಕ್ಷಿಣೆಗಾಗಿ ಮದ್ಯಪಾನ ಮಾಡಿಕೊಂಡು ಬಂದು ಪಿರ್ಯಾದುದಾರರಿಗೆ ಕೈಯಿಂದ ಹೊಡೆದು ಹಿಂಸಿಸುತ್ತಿದ್ದು ಆರೋಪಿಯು ಒತ್ತಡ ಹಾಕಿ ಪಿರ್ಯಾದುದಾರರಿಂದ ರೂ 5,00,000/- ಹಣವನ್ನು  ಹೆಚ್ಚಿನ ವರದಕ್ಷಿಣೆ ರೂಪದಲ್ಲಿ ಪಡೆದುಕೊಂಡಿರುತ್ತಾನೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ  323, 324, 504 IPC & U/S 3,4,6 DP Act ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಕೇರಳ ರಾಜ್ಯದ ಕಣ್ಣೂರು ರೈಲ್ವೇ ಪೊಲೀಸ್ ಠಾಣೆಯಿಂದ ತಕ್ಷೀರು ಸ್ಥಳದ ಆಧಾರದ ಮೇಲೆ ಮಣಿಪಾಲ ಠಾಣೆಗೆ ವರ್ಗಾವಣೆ ಯಾಗಿ ಬಂದ ಕಣ್ಣೂರು ರೈಲ್ವೇ ಪೊಲೀಸ್ ಠಾಣಾ ಅ ಕ್ರ 36/2021 ಕಲಂ: 392 ಐಪಿಸಿ ಪ್ರಕರಣದ ಸಾರಾಂಶವೆನೆಂದರೆ. ದಿನಾಂಕ: 15.12.2021 ರಂದು ಪಿರ್ಯಾಧಿ ಪೊದಿಯಮ್ಮ ಡೆನಿಲ್ ಇವರು ತನ್ನ ಗಂಡ ಹಾಗೂ ಮಗನೊಂದಿಗೆ ಕುರ್ಲಾ – ಕಯಾಕುಲಂ ನೇತ್ರಾವತಿ ಎಕ್ಸ್ ಪ್ರೆಸ್ ಟ್ರೈನ್ ನಂಬ್ರ : 16345 S- 5 ಕೋಚ್ ಟ್ರೈನ್ ನಲ್ಲಿ  ಕಣ್ಣೂರಿನಿಂದ ಕಯಾಕುಲಂಗೆ ಪ್ರಯಾಣಿಸುತ್ತಿದ್ದಾಗ ದಿನಾಂಕ: 16.12.2021 ರಂದು ಮುಂಜಾನೆ ಸಮಯ 2:30  ಗಂಟೆಯ ಸಮಯಕ್ಕೆ ರೈಲು ಉಡುಪಿ ರೈಲ್ವೇ ನಿಲ್ದಾಣ ತಲುಪಿದಾಗ ಸುಮಾರು 30 ವರ್ಷ ಪ್ರಾಯದ ಸದೃಢ ಮೈಕಟ್ಟಿನ  ಸ್ಯಾಂಡಲ್ ಬಣ್ಣದ ಶರ್ಟ್ ಧರಿಸಿದ ಯುವಕ ಪಿರ್ಯಾದಿದಾರರ ಸ್ಯಾಂಡಲ್ ಬಣ್ಣದ ವ್ಯಾನಿಟಿ ಬ್ಯಾಗ್ ಸುಲಿಗೆ ಮಾಡಿ ರೈಲು ಕೋಚಿನ ಎಡ ಭಾಗದ ಬಾಗಿಲಿನಿಂದ ಹೊರಕ್ಕೆ ಹೋಗಿರುತ್ತಾನೆ. ಸದ್ರಿ ಬ್ಯಾಗ್ ನಲ್ಲಿ 1) 3 Sovereign 1 Mangal Sootr 2) 4.5 Sovereigns Gold Neck Chain 3) 2.5 Sovereigns Gold Nick Chain 4) 2.5 Sovereign Platinum Plated Bangles 5) 1 Sovereign Bangle 6) 1 Sovereign gold bracelet 7) 2 mobile phone 8) Cash 15000 Rs/- 9) 4 ATM Cards 10) 3 Adhar Card 11) Pan Card 12) Hospital ID ಸ್ವತ್ತುಗಳಿದ್ದು ಅವುಗಳ ಒಟ್ಟು ಅಂದಾಜು ಮೌಲ್ಯ 7 ಲಕ್ಷ ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022  ಕಲಂ:392 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-01-2022 05:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080