ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶಶಿಕಾಂತ್ ನಾಯಕ್ (33), ತಂದೆ: ದಾಮೋದರ ನಾಯಕ್, ವಾಸ; ನಡಿಬೆಟ್ಟು ಮನೆ, ಕುಂದೇಶ್ವರ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಕಾರ್ಕಳ ತಾಲೂಕು ಇವರು ಹಿರ್ಗಾನ ಆಟೋಸ್ಟ್ಯಾಂಡ್‌ ಬಳಿ  ಆಟೋರಿಕ್ಷಾವನ್ನು ಬಾಡಿಗೆಗಾಗಿ ನಿಲ್ಲಿಸುತ್ತಿದ್ದು, ದಿನಾಂಕ 04/12/2022 ರಂದು ಸಂಜೆ 5:50 ಕ್ಕೆ ಹಿರ್ಗಾನ ಬಸ್ಟ್ಯಾಂಡ್‌ ಬಳಿ ಆಟೋರಿಕ್ಷಾವನ್ನು ಬಾಡಿಗೆಗಾಗಿ ನಿಲ್ಲಿಸಿಕೊಂಡಿದ್ದಾಗ KA-20-D-5749 ನೇ ನೋದಣಿ ಸಂಖ್ಯೆಯ ಖಾಸಗಿ ಬಸ್ಸನ್ನು ಚಾಲಕ ಇಲಿಯಾಸ್‌ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಚಲಾಯಿಸಿಕೊಂಡು ಬಂದು ಹಿರ್ಗಾನ ಬಸ್‌ ನಿಲ್ದಾಣದ ಬಳಿ ನಿಲ್ಲಿಸಿದ್ದು ಪಿರ್ಯಾದಿದಾರರ ಪರಿಚಯದ ಕೃಷ್ಣ ನಾಯಕ್‌ (೭೦) ಇವರು ನಿಲ್ಲಿಸಿದ್ದ ಬಸ್ಸನ್ನು ಹತ್ತುತ್ತಿರುವಾಗ ಬಸ್ಸಿನ ನಿರ್ವಾಹಕ ಜಯಪ್ರಕಾಶ್ ನಿರ್ಲಕ್ಷತನದಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಲು ಸೂಚನೆ ನೀಡಿದ್ದು, ಬಸ್ಸಿನ ಚಾಲಕ ಕೃಷ್ಣ ನಾಯಕ್‌ ರವರು ಬಸ್ಸನ್ನು ಹತ್ತುತ್ತಿರುವುದನ್ನು ನೋಡದೇ ನಿರ್ಲಕ್ಷತನದಿಂದ ವೇಗವಾಗಿ ಒಮ್ಮೆಲೇ ಹೆಬ್ರಿ ಕಡೆಗೆ ಚಲಾಯಿಸಿದ್ದು ಕೃಷ್ಣ ನಾಯಕ್‌ ರವರು ಬಸ್ಸಿನ ಬಾಗಿಲಿನಿಂದ ಹತ್ತುತ್ತಿರುವಾಗ ಹಿಡಿತ ತಪ್ಪಿ ಡಾಂಬಾರು ರಸ್ತೆಗೆ ಬಿದ್ದಿದ್ದು, ಬಸ್ಸಿನ ಹಿಂಬದಿ ಟಯರ್‌ ಕೃಷ್ಣ ನಾಯಕ್‌ ರವರ ಎಡಕಾಲಿನ ಮೇಲೆ ಹತ್ತಿ ಹೋಗಿ ಎಡಕಾಲಿಗೆ ತೀವ್ರ ಸ್ವರೂಪ ಗಾಯವಾಗಿದ್ದು, ಪಿರ್ಯಾದಿದಾರರು ಮತ್ತು ಶಿವಾನಂದರ ಎಂಬುವವರು ಕೃಷ್ಣ ನಾಯಕ್‌ ರವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಕೃಷ್ಣ ನಾಯಕ್‌ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 145/2022 ಕಲಂ:  279, 304 (A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಹೆರಿಯ  ಕುಲಾಲ್‌‌‌‌‌‌‌‌‌‌(46),  ತಂದೆ:  ದಿ: ಕರಿಯ  ಕುಲಾಲ್‌‌‌‌,  ಗೋಪಾಲಕೃಷ್ಣ  ನಗರ,  ಹೊಂಬಾಡಿ -  ಮಂಡಾಡಿ  ಗ್ರಾಮ,  ಕುಂದಾಪುರ  ತಾಲೂಕು ಇವರು  ದಿನಾಂಕ 04/12/2022  ರಂದು  ತನ್ನ ಬೈಕ್‌‌‌ನಲ್ಲಿ  ಹೊರಟು  ಹುಣ್ಸಿಮಕ್ಕಿ  -  ಕುಂದಾಪುರ  ರಸ್ತೆಯಲ್ಲಿ  ಸವಾರಿ  ಮಾಡಿಕೊಂಡು  ಬರುತ್ತಿರುವಾಗ ಮಧ್ಯಾಹ್ನ 12:00  ಗಂಟೆಯ ಸಮಯಕ್ಕೆ  ಪಿರ್ಯಾದಿದಾರರ  ಎದುರಿನಿಂದ KA-20-EK -5154ನೇ ಸ್ಕೂಟಿಯಲ್ಲಿ ಹಿಂಬದಿ  ಮಹಿಳೆಯನ್ನು  ಸಹಸವಾರಳಾಗಿ  ಕುಳ್ಳಿರಿಸಿಕೊಂಡು  ಹೋಗುತ್ತಾ ಇದ್ದು,  ಹಿಂದಿನಿಂದ ನಂಬ್ರ  KA-14-MA-3737  ಕಾರು ಚಾಲಕ   ನಾಸಿಫ್‌ ‌‌‌‌‌‌‌ತನ್ನ ಕಾರನ್ನು ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು  ಪಿರ್ಯಾದಿದಾರರನ್ನು   ಓವರ್‌‌‌‌‌ಟೇಕ್‌‌‌‌‌‌‌‌ಮಾಡಿ  ಹೊಂಬಾಡಿ  ಬಸ್‌‌‌‌‌ಸ್ಟಾಪ್‌ ‌‌‌‌‌‌‌ಹಾಗೂ  ಶ್ರೀ  ಚಕ್ರ  ಗ್ಯಾರೇಜ್‌ ‌‌‌‌‌‌ಬಳಿ  ಎದುರಿನಿಂದ  ಕ್ರಮದಂತೆ  ಹೋಗುತ್ತಿದ್ದ  ಸ್ಕೂಟಿಗೆ  ಹಿಂದಿನಿಂದ  ಡಿಕ್ಕಿ  ಹೊಡೆದ ರಭಸಕ್ಕೆ  ಸ್ಕೂಟಿ  ಸವಾರರು  ಸ್ಕೂಟಿ  ಸಮೇತ ಮುಂದಕ್ಕೆ  ಎಸೆಯಲ್ಪಟ್ಟು  ರಸ್ತೆಗೆ  ಬಿದ್ದಿದ್ದು  ಸ್ಕೂಟಿ  ಸವಾರರ  ಹೆಸರು  ಶೀನ  ಕುಲಾಲ್‌ ‌‌‌‌‌‌ಎಂಬುದಾಗಿ  ತಿಳಿಯಿತು  ಅವರಿಗೆ  ಬಲ ಭುಜ,  ಎರಡೂ  ಕಾಲಿಗೆ  ಹಾಗೂ  ಎರಡೂ  ಕೈಗೆ ತೀವ್ರ  ತರದ  ಗಾಯವಾಗಿದ್ದು,  ಹಿಂಬದಿ  ಸವಾರರ  ಹೆಸರು ಮಾಲತಿ  ಎಂಬುದಾಗಿದ್ದು,  ಅವರಿಗೆ  ತಲೆಗೆ  ತೀವ್ರ  ತರದ  ಗಾಯವಾಗಿದ್ದು,  ಕೈಕಾಲು ತರಚಿದ  ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 220/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಶಂಕರನಾರಾಯಣ: ದಿನಾಂಕ  04/12/2022 ರಂದು ಬೆಳಿಗ್ಗೆ 07:30 ಗಂಟೆಗೆ ಪಿರ್ಯಾದಿದಾರರಾದ ಸದಾಶಿವ ಶೆಟ್ಟಿ  (44),  ತಂದೆ: ಹೆರಿಯಣ್ಣ ಶೆಟ್ಟಿ, ವಾಸ: ಬೆಳ್ಳಾಲ ಗರಡಿ ಮನೆ ಮೂಡುಕುಂದ ಅಂಚೆ ಬೆಳ್ಳಾಲ  ಗ್ರಾಮ ಕೆರಾಡಿ  ಕುಂದಾಪುರ  ತಾಲೂಕು ಇವರು KA-20-ER-9734 ನೇ  ನೇ ನಂಬ್ರದ ಮೋಟಾರ್ ಸೈಕಲ್‌‌‌‌ನಲ್ಲಿ ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ  ಹೆಮ್ಮಕ್ಕಿ ಎಂಬಲ್ಲಿ  ನೇರಳಕಟ್ಟೆ  ಕಡೆಗೆ ಬರುತ್ತಿರುವಾಗ ಆರೋಪಿ KA-20-D-6368 ನೇ ನಂಬ್ರದ  ಬಸ್ಸನ್ನು  ಕೆರಾಡಿ ಕಡೆಯಿಂದ ಅತೀ ವೇಗ ಹಾಗೂ  ಅಜಾಗರೂಕೆಯಿಂದ  ಚಲಾಯಿಸಿ ಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು  ಹೋಗುತ್ತಿದ್ದ   ಮೋಟಾರ್  ಸೈಕಲ್‌  ಒವರಟೇಕ್   ಮಾಡಿದ್ದು,  ಆ  ಸಮಯ  ಎದುರುಗಡೆಯಿಂದ  ವಾಹನ  ಬರುತ್ತಿರುವುದನ್ನು  ನೋಡಿ ಬಸ್ಸನ್ನು  ಒಮ್ಮಲೇ ಬಲಬದಿಗೆ ತಿರುಗಿಸಿದ ಕಾರಣ  ಬಸ್ಸಿನ ಹಿಂಬದಿ ಮೋಟಾರ್ ಸೈಕಲ್‌ಗೆ  ತಾಗಿ  ಪಿರ್ಯಾದಿದಾರರು  ಮೋಟಾರ್  ಸೈಕಲ್  ಸಮೇತ  ರಸ್ತೆಯ  ಬದಿಯಲ್ಲಿ ಬಿದ್ದ ಪರಿಣಾಮ   ಪಿರ್ಯಾದಿದಾರರ ಬಲಭುಜ ಬಲಕಣ್ಣಿನ ಬಳಿ ಬಲಕೈ ಗೆ  ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 132/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .   

ಕಳವು ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ವಿರೂಪಾಕ್ಷ ಕೆ (43),ತಂದೆ:ದಿ. ಕೇಶವ ಕೆ, ವಾಸ: ಈಶಾನ  4-2-97ಎ ಕನ್ನರಪಾಡಿ ಕಾಲೋನಿ ,3 ನೇ ಕ್ರಾಸ್ ಕಿನ್ನಿಮೂಲ್ಕಿ ,ಕಡೇಕಾರು ಗ್ರಾಮ ಇವರು ದಿನಾಂಕ 03/12/2022  ರಂದು ಸಂಜೆ 6:30 ಗಂಟೆಗೆ  ತನ್ನ ಹೆಂಡತಿ ಮಕ್ಕಳೊಂದಿಗೆ  ಪಿರ್ಯಾದಿದಾರರ ತಾಯಿಯ  ಮನೆಯಾದ  ಕುಂದಾಪುರಕ್ಕೆ  ಹೋಗಿ ಉಳಿದುಕೊಂಡಿದ್ದು ,   ಬೆಳಿಗ್ಗೆ 11:00 ಗಂಟೆ ಸಮಯಕ್ಕೆ ವಾಪಸ್ಸುಕುಂದಾಪುರದಿಂದ ಮನೆಗೆ ಬಂದಾಗ ಮನೆಯ  ಎದುರು ಬಾಗಿಲು ಒಡೆದು ಹೋಗಿದ್ದು ಯಾರೋ ಮನೆಯೊಳಗೆ ಪ್ರವೇಶಿಸಿದಂತೆ ಕಂಡುಬಂದಿರುತ್ತದೆ. ಮನೆಯ ಒಳಕ್ಕೆ  ಹೋಗಿ ನೋಡಲಾಗಿ ಬೆಡ್ ರೂಮ್  ನಲ್ಲಿರುವ ಕಪಾಟನ್ನು ತೆರೆದು ಅದರಲ್ಲಿರುವ ಬಟ್ಟೆ ಹಾಗೂ ಇತರ ಸಾಮಾಗ್ರಿ ಎಳೆದು ಹಾಕಿದ್ದು  ಕಂಡುಬಂದಿದ್ದು, ಇನ್ನೊಂದು ರೂಮ್ ಗೆ ಹೋಗಿ ನೋಡಲಾಗಿ ಅಲ್ಲಿದ್ದ ಗೋಡ್ರೇಜ್ ನ್ನು ತೆರೆದು ಅದರಲ್ಲಿರುವ ವಸ್ತುಗಳನ್ನು ಜಾಲಾಡಿದಂತೆ  ಕಂಡು ಬಂದಿರುತ್ತದೆ.  ಪರಿಶೀಲಿಸಲಾಗಿ ಹವಳದ ಸರ 60 ಗ್ರಾಂ, ಚಿನ್ನದ ಸರ 14 ಗ್ರಾಂ, ಜುಮ್ಕ16 ಗ್ರಾಂ, ಚಿನ್ನದ ಕಾಯಿನ್ 8 ಗ್ರಾಂ, ಬೆಳ್ಳಿಯ 2 ಲೋಟ ,ಒಟ್ಟು 98 ಗ್ರಾಂ ಚಿನ್ನ ಹಾಗೂ ಬೆಳ್ಳಿ ಲೋಟ ಇವುಗಳನ್ನು ಯಾರೋ ಕಳ್ಳರು ದಿನಾಂಕ 03/12/2022 ರಂದು ಸಂಜೆ 6:30 ಗಂಟೆಯಿಂದ ದಿನಾಂಕ 04/12/2022 ರಂದು ಬೆಳಿಗ್ಗೆ11:00 ಗಂಟೆಯ ಮಧ್ಯಾವಧಿಯಲ್ಲಿ  ಪಿರ್ಯಾದಿದಾರರ ಮನೆಯ ಬಾಗಿಲನ್ನು  ಒಡೆದು  ಚಿನ್ನದ ಆಭರಣ ಹಾಗೂ ಬೆಳ್ಳಿಯ ಲೋಟವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸ್ವತ್ತಿನ ಮೌಲ್ಯ  5 ಲಕ್ಷ ರೂಪಾಯಿ ಆಗಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 109/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಬಜಿಲ್ (48), ತಂದೆ: ದಿ. ಜೋನಿ ಕೋತಾ, ವಾಸ: ಬಿ.ಸಿ ರೋಡ್ ಹುಣ್ಸೆಕಟ್ಟೆ ವಡೇರಹೋಬಳಿ ಗ್ರಾಮ ಇವರ ಅಣ್ಣ ಲಿಗೋರಿ ಕೋತಾ (52)  ರವರು  ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಬಿ.ಸಿ ರಸ್ತೆಯಲ್ಲಿ ಮನೆ ಮಾಡಿ ಒಂಟಿಯಾಗಿ   ವಾಸಮಾಡಿಕೊಂಡಿದ್ದು ಅವರು ವಿಪರೀತ ಮಧ್ಯ ಸೇವನೆ ಮಾಡುವ ಚಟ ಹೊಂದಿರುತ್ತಾರೆ.  ದಿನಾಂಕ 04/12/2022 ರಂದು ಲಿಗೋರಿ ಕೋತಾ ರವರು ಮನೆಯಿಂದ ಹೊರಗೆ ಬಾರದೇ ಇದ್ದುದನ್ನು ತಿಳಿದು ಪಿರ್ಯಾದಿದಾರರ ಅಣ್ಣನ ಮಗಳು ಸಂಜೆ 4:30 ಗಂಟೆಗೆ ನೋಡಲು ಬಂದಾಗ ಲಿಗೋರಿ ಕೋತಾ ರವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವುದನ್ನು ಕಂಡು  ಪಿರ್ಯಾದಿದಾರರಿಗೆ ವಿಚಾರ ತಿಳಿಸಿದ್ದು  ನಂತರ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು  ಬಂದಾಗ ಪರೀಕ್ಷಿಸಿದ ವೈದ್ಯರು 5:30 ಗಂಟೆಗೆ ದಾರಿಮದ್ಯೆ  ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 44/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಹೆಬ್ರಿ: ಪಿರ್ಯಾದಿದಾರರಾದ ಸೋಮೆಶ್ವರ ಓಕಾನ್ (34), ತಂದೆ: ಜಾಮ್ಲಾಓಕಾನ್,  ವಾಸ:ವಿಲ್ಸಂಗಾವ್ ಗಜಮೋಲಿ ಕರೌಂಡ್  ತಾನಾಗುಮ್ಲಾ ಕುಮಾರಿಯಾ ಜಾರ್ಖಂಡ್  ಇವರು 6 ವರ್ಷಗಳಿಂದ  ತನ್ನ ಹೆಂಡತಿ  ಮಗನೊಂದಿಗೆ  ಹೆಬ್ರಿ ಗ್ರಾಮದ  ಬಚ್ಚಪ್ಪು ಎಂಬಲ್ಲಿರುವ   ಆಂಟನಿಯವರ  ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಬಿಡಾರದಲ್ಲಿ  ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ 04/12/2022  ರಂದು  ಮುನೇಶ್ವರ ತೋಟದಲ್ಲಿ ಆಟವಾಡುತ್ತಿರುವಾಗ  ಬೆಳಿಗ್ಗೆ 11:15  ಗಂಟೆಯಿಂದ ಮದ್ಯಾಹ್ನ 01:00  ಗಂಟೆಯ ಮದ್ಯಾವಧಿಯಲ್ಲಿ  ತೋಟದಲ್ಲಿರುವ  ಸಗಣಿಗುಂಡಿಯಲ್ಲಿ  ಆಕಸ್ಮಿಕವಾಗಿ  ಕಾಲುಜಾರಿ ಬಿದ್ದು  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 34/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬೈಂದೂರು: ಪಿರ್ಯಾದಿದಾರರಾದ ಹರೀಶ್ ಮೊಗವೀರ (43), ತಂದೆ: ಗಣಪತಿ ಮೊಗವೀರ, ವಾಸ: ಬಾಡಿ ಮನೆ , ಗಂಗೈಬೈಲು , ಕೊಡೇರಿ, ಕಿರಿಮಂಜೇಶ್ವರ  ಗ್ರಾಮ ಬೈಂದೂರು ತಾಲೂಕು ಇವರ ತಮ್ಮ ಚಂದ್ರ  ಮೊಗವೀರ ( 39) ರವರು ಪಿರ್ಯಾದಿದಾರರೊಂದಿಗೆ ಕಿರಿಮಂಜೇಶ್ವರ ಗ್ರಾಮದ ಕೊಡೇರಿ, ಗಂಗೆ ಬೈಲು, ಬಾಡಿ ಮನೆ ಎಂಬಲ್ಲಿ ವಾಸಮಾಡಿಕೊಂಡಿದ್ದು  ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ.  ಚಂದ್ರ  ಮೊಗವೀರ  ರವರು ಮಧ್ಯಪಾನ  ಮಾಡುವ ಅಭ್ಯಾಸವನ್ನು ಹೊಂದಿದ್ದು ಬೋಟಿಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದರು. ದಿನಾಂಕ 04/12/2022 ರಂದು ಬೆಳಿಗ್ಗೆ 11:30 ಗಂಟೆಗೆ ಮನೆಯಲ್ಲಿ  ಮದ್ಯಪಾನ ಸೇವಿಸಿ ಮಲಗಿದ್ದವರನ್ನು ಪಿರ್ಯಾದಿದಾರರ ಅಕ್ಕ ಮಧ್ಯಾಹ್ನ ಊಟದ ಸಮಯ  ಎಬ್ಬಿಸಲು  ಹೊದಾಗ ಚಂದ್ರ ಮೋಗವೀರ ರವರು ಏಳದೇ ಇದ್ದುದನ್ನು ಕಂಡು ಪಿರ್ಯಾದಿದಾರರಿಗೆ  ದೂರವಾಣಿ ಕರೆ ಮಾಡಿ ತಿಳಿಸಿದ್ದು,  ಪಿರ್ಯಾದಿದಾರರು ಅಣ್ಣ  ಲಕ್ಷ್ಮಣ  ಮೊಗವೀರ ರವರಲ್ಲಿ  ಚಂದ್ರ ಮೊಗವೀರ ರವರನ್ನು ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ ಸೂಚಿಸಿದ್ದು  ಚಂದ್ರ ಮೊಗವೀರ  ನನ್ನು  ಚಿಕಿತ್ಸೆ ಬಗ್ಗೆ   108 ಅಂಬುಲೆನ್ಸ್  ವಾಹನದಲ್ಲಿ  ಕುಂದಾಪುರ ಸರಕಾರಿ ಆಸ್ಪತ್ರೆಗೆ  ಮಧ್ಯಾಹ್ನ  1:50 ಗಂಟೆಗೆ ಕರೆದುಕೊಂಡು  ಹೋದಲ್ಲಿ ವೈದ್ಯರು  ಪರೀಕ್ಷಿಸಿ  ಚಂದ್ರ ಮೊಗವೀರ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 63/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .


      

ಇತ್ತೀಚಿನ ನವೀಕರಣ​ : 05-12-2022 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080