ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ನಾಗರಾಜ ದೇವಾಡಿಗ (40),  ತಂದೆ:  ನಾರಾಯಣ ದೇವಾಡಿಗ,  ವಾಸ: ಮನೆ ನಂ 2/114 ,ಗುಂಡ್ಮಿ ,ಸಾಸ್ತಾನ ,ಗುಂಡ್ಮಿ ಗ್ರಾಮ ಇವರು ದಿನಾಂಕ 04/12/2022  ರಂದು ಸಂಜೆ ವೇಳೆಗೆ  ಸಾಲಿಗ್ರಾಮದಿಂದ ಎಡಬೆಟ್ಟು ಆಟೋ ಸ್ಟ್ಯಾಂಡ್ ಕಡೆಗೆ ಕಂದಾಪುರ –ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಾ ರಾತ್ರಿ 8:05 ಗಂಟೆಗೆ ಚೇಂಪಿ ದೇವಸ್ಥಾನದ ಎದುರು ತಲುಪಿದಾಗ ರಸ್ತೆಯ ಮಧ್ಯದಲ್ಲಿ ಒಂದು ಸ್ಕೂಟಿ ಹಾಗೂ ಒಬ್ಬ ವ್ಯಕ್ತಿಗೆ  ಅಪಘಾತವಾಗಿರುವುದಾಗಿ ಕಂಡು ಬಂದಿದ್ದು ಹತ್ತಿರ ಹೋಗಿ ನೋಡಿದಾಗ ಆತನ ಮುಖಕ್ಕೆ ತೀವೃ ತರಹದ ಗಾಯವಾಗಿದ್ದು ತಲೆ ಸಂಪೂರ್ಣ ಒಡೆದು ಮೆದುಳು ಹೊರ ಬಂದಿದ್ದು ಕಾಲಿನ  ಮೂಳೆ ಮುರಿತದ ಗಾಯವಾಗಿರುತ್ತದೆ. ತಲೆಯಿಂದ ರಕ್ತ ಸೋರಿರುತ್ತದೆ. ಆತನು ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿ ಕಂಡು ಬರುತ್ತದೆ. ಆತನು  ಸ್ಕೂಟಿಯಿಂದ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ಯಾವುದೋ  ಘನ ವಾಹನ ಅತಿವೇಗ ಹಾಗೂ ನಿರ್ಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಢಿಕ್ಕಿ ಹೊಡೆದು ಪರಾರಿಯಾಗಿರುವುದಾಗಿ ಕಂಡು ಬಂದಿರುತ್ತದೆ. ಸ್ಕೂಟಿಯನ್ನ ನೋಡಲಾಗಿ ಸ್ಕೂಟಿ ನಂಬ್ರ  KA-26-EB-3526 ಆಗಿರುತ್ತದೆ. ಅಲ್ಲೆ ಪಕ್ಕದಲ್ಲಿ ಬಿದ್ದಿದ್ದ ಆಧಾರ ಕಾರ್ಡ ನೋಡಲಾಗಿ ಮೃತನ ಹೆಸರು ಶಾಂತಪ್ಪ ಊಸಲ ಕೊಪ್ಪ ಗದಗ ಎಂಬುವುದಾಗಿ ತಿಳಿಯಿತು. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 221/2022 ಕಲಂ: 279, 304(A) ಐಪಿಸಿ & 134(A) (B) & 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ .
 • ಕುಂದಾಪುರ: ದಿನಾಂಕ 05/12/2022  ರಂದು  ಸಂಜೆ  06:45 ಗಂಟೆಗೆ, ಕುಂದಾಪುರ ತಾಲೂಕಿನ, ಹೆಮ್ಮಾಡಿ  ಗ್ರಾಮದ ಹೆಮ್ಮಾಡಿ – ಜಾಲಾಡಿ ರಸ್ತೆಯ ಪೂರ್ವ ಬದಿಯ  ರಾಷ್ಟ್ರೀಯ ಹೆದ್ದಾರಿ 66  ರಸ್ತೆಯಲ್ಲಿ, ಆಪಾದಿತ  ಮಹೇಶ್ ಹೆಗ್ಡೆ KA-18-EG-9624 ನೇ ಬೈಕನ್ನು  ಬೈಂದೂರು  ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಬೈಕನ್ನು ರಸ್ತೆಯ ತೀರಾ ಎಡಬದಿಗೆ ಚಾಲನೆ  ಮಾಡಿಕೊಂಡು ಬಂದು ರಸ್ತೆಯ ಪೂರ್ವ ಬದಿಯಲ್ಲಿ ಪಿರ್ಯಾದಿದಾರರಾದ ಮಂಜುನಾಥ (53), ತಂದೆ:  ದಿ. ಗೋವಿಂದ ಪೂಜಾರಿ, ವಾಸ:  ಸಂತೋಷ ನಗರ , ಕೋಟೆಬೆಟ್ಟು ಹೆಮ್ಮಾಡಿ ಗ್ರಾಮ ಕುಂದಾಪುರ ತಾಲೂಕು ಇವರ ಜೊತೆ ಬಸ್ಸಿಗಾಗಿ ಕಾಯುತ್ತ ನಿಂತುಕೊಂಡಿದ್ದ ಗೌರಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೌರಿರವರ ಬಲಕಾಲಿಗೆ , ತಲೆಗೆ, ಎಡ ಕಣ್ಣಿನ ಹತ್ತಿರ ಒಳಪೆಟ್ಟಾಗಿದ್ದು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ  ಸಿ ಆಸ್ಪತ್ರೆಗೆ ಹೋಗಿರುತ್ತಾರೆ ಹಾಗೂ ಬೈಕ್ ಸವಾರ ಮಹೇಶ್ ಹೆಗ್ಡೆಗೆ ಕುತ್ತಿಗೆ, ತಲೆಗೆ ಹಾಗೂ ಮೈ ಕೈ ಗೆ ಒಳ ಪೆಟ್ಟಾದ ಗಾಯವಾಗಿದ್ದು ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 129/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಕಿಶೋರ್‌  (28), ತಂದೆ: ಬಸವ ನಾಯ್ಕ್‌ , ವಾಸ: , ಕೂಟಂ ಬೈಲು ಪಡು  ಬೈದೆಬೆಟ್ಟು , 34ನೇ ಕುದಿ ಗ್ರಾಮದ ಬ್ರಹ್ಮಾವರ ತಾಲೂಕು ಇವರ ತಂದೆ ಬಸವ ನಾಯ್ಕ್‌ (60) ಇವರು ಶರಾಬು ಕುಡಿಯುವ ಹವ್ಯಾಸದವರಾಗಿದ್ದು  ಸುಮಾರು 1 ವರ್ಷದ ಹಿಂದೆ ಕುಡಿತದ ಪರಿಣಾಮ  ಆರೋಗ್ಯ ಸ್ಥಿತಿ ಗಂಭೀರವಾಗಿ ಬ್ರಹ್ಮಾವರ ಮಹೇಶ ಆಸ್ಪತ್ರೆಯಲ್ಲಿ  ಚಿಕಿತ್ಸೆಯನ್ನು ಪಡೆದಿದ್ದು ನಂತರ ಅವರಿಗೆ ಬಿ.ಪಿ ಕಾಯಿಲೆಯ ಬಗ್ಗೆ  ಚಿಕಿತ್ಸೆಯನ್ನು ಪಡೆಯುತ್ತಿದ್ದು ದಿನನಿತ್ಯ  ಬಿ.ಪಿ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದು ಶರಾಬು ಕುಡಿತ ಮುಂದುವರಿಸಿಕೊಂಡು  ಕೆಲವೊಮ್ಮೆ  ಕೆಲಸಕ್ಕೆ ಹೋಗುತ್ತಿರಲಿಲ್ಲ. ದಿನಾಂಕ 04/12/2022 ರಂದು ಮನೆಯಿಂದ ಹೋದವರು ರಾತ್ರಿ ಮನೆಗೆ ಬಾರದೇ ಇದ್ದು ಹುಡುಕಾಡಿದ್ದಲ್ಲಿ  ಸಿಗಲಿಲ್ಲ. ದಿನಾಂಕ 05/12/2022 ರಂದು ಬೆಳಿಗ್ಗೆ 8:00 ಗಂಟೆಗೆ ಪಿರ್ಯಾದಿದಾರರ ಮನೆಯ ಸಮೀಪದ ಜಯ ಹೆಗ್ಡೆಯವರು ಹಾಡಿಯಲ್ಲಿ ಬಿದ್ದುಕೊಂಡಿರುವ ಬಗ್ಗೆ ಪಿರ್ಯಾದಿದಾರರ ತಮ್ಮನ ಸ್ನೇಹಿತರು  ತಿಳಿಸಿದಂತೆ  ಅಲ್ಲಿಗೆ ಹೋಗಿ ನೋಡಿದಾಗ ಪಿರ್ಯಾದಿದಾರರ ತಂದೆ ಶರಾಬಿನ ಅಮಲಿನಲ್ಲಿ ಇದ್ದಂತೆ  ಕಂಡು ಬಂದಿದ್ದು  ಸ್ವಲ್ಪ ಉಸಿರಾಟ  ಇರುವುದು ಕಂಡು ಬಂದು ಕೂಡಲೇ ಒಂದು ವಾಹನದಲ್ಲಿ  ಚಿಕಿತ್ಸೆಯ ಬಗ್ಗೆ  ಬ್ರಹ್ಮಾವರದ ಜೀವನ ಜ್ಯೋತಿ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು  ಬೆಳಿಗ್ಗೆ 9:45 ಗಂಟೆಗೆ ಪರೀಕ್ಷಿಸಿ ದಾರಿ ಮಧ್ಯದಲ್ಲಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 62/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತರ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾದ ಜಯರಾಮ ಶೆಟ್ಟಿ  (46), ತಂದೆ:ರಾಮಣ್ಣ  ಶೆಟ್ಟಿ, ವಾಸ, ತೆಂಕೊದ್ದು, ಉಳ್ಳೂರು  74  ಗ್ರಾಮ ಕುಂದಾಪುರ  ತಾಲೂಕು ಇವರಿಗೂ ಹಾಗೂ ಆರೋಪಿ ಕುಮಾರ್  ಇವರ ಕಡೆಯವರೊಳಗೆ ಮನಸ್ತಾಪ ಇರುತ್ತದೆ, ಇದೇ  ವಿಷಯದಲ್ಲಿ  ಕೋಪಗೊಂಡ  ಆರೋಪಿಗಳು ಪಿರ್ಯಾದಿದಾರರನ್ನು ಕೊಲೆ  ಮಾಡುವ ಉದ್ದೇಶದಿಂದ  ದಿನಾಂಕ 04/12/2022  ರಂದು  20:30 ಗಂಟೆಗೆ ಪಿರ್ಯಾದಿದಾರರು  ಅವರ  ವಾಸದ ಮನೆಯಲ್ಲಿ ಇರುವಾಗ   ಆರೋಪಿಗಳಾದ 1)  ಪ್ರಸಾದ  ಶೆಟ್ಟಿ ಉಳ್ಳೂರು   74 ಗ್ರಾಮ, 2) ಕುಮಾರ್  ಶೆಟ್ಟಿ ಉಳ್ಳೂರು   74 ಗ್ರಾಮ, 3) ಸಂತೋಷ  ಕೊಠಾರಿ  ಹಾಗೂ  ಇತರ  4  ಜನರು ಕೂಡಿಕೊಂಡು   ಮನೆಯೊಳಗೆ  ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ  ಪ್ರಸಾದ ಹಾಗೂ  ಸಂತೋಷ  ಕೊಠಾರಿ  ಇವರು ಯಾವುದೊ ಆಯುಧದಿಂದ   ತಲೆಯ   ಮುಂಭಾಗಕ್ಕೆ  ಹೊಡೆದು   ಗಂಭೀರ  ಸ್ವರೂಪದ ಗಾಯವನ್ನುಂಟು ಮಾಡಿರುತ್ತಾರೆ, ಈ ಸಮಯ  ಫಿರ್ಯಾದುದಾರರು   ಬೊಬ್ಬೆ  ಹೊಡೆದಾಗ  ಫಿರ್ಯಾದುದಾರರ  ಹೆಂಡತಿ  ಶ್ರೀಮತಿ  ರುಕ್ಮಿಣಿ  ಹಾಗೂ  ಮನೆಯಲ್ಲಿ ಇದ್ದವರು  ಓಡಿ ಬಂದಾಗ  ಆರೋಪಿಗಳು ಅವಾಚ್ಯ  ಶಬ್ದದಿಂದ  ಬೈದು   ಜೀವ ಬೆದರಿಕೆ  ಹಾಕಿರುತ್ತಾರೆ, ಈ  ಸಮಯ ಗಲಾಟೆ  ತಪ್ಪಿಸಲು ಬಂದ  ಪಿರ್ಯಾದಿದಾರರ   ಹೆಂಡತಿ  ಶ್ರೀಮತಿ  ರುಕ್ಮಿಣಿ ಇವರಿಗೆ  ಸಹ   ಹಲ್ಲೆ  ಮಾಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 133/2022 ಕಲಂ: 143,147,148,324,354 307, 504 506 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .         

       

ಇತ್ತೀಚಿನ ನವೀಕರಣ​ : 05-12-2022 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080