ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ನಾಗರಾಜ ಪುತ್ರನ್ (33), ತಂದೆ: ಕೃಷ್ಣ ಬಂಗೇರ, ವಾಸ: ಅಮ್ಮ ನಿಲಯ, ಕೋಟತಟ್ಟು ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 04/12/2021 ರಂದು ಬ್ರಹ್ಮಾವರ ತಾಲೂಕು ಚಿತ್ರಪಾಡಿ ಗ್ರಾಮದ  ನರ್ತಕಿ ಬಾರ್ ಎದುರು ಉಡುಪಿಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಬಳಿ ಬರುತ್ತಿರುವಾಗ ಸಂಜೆ 6:15 ಗಂಟೆಗೆ ಉಡುಪಿ ಕಡೆಯಿಂದ  ಕುಂದಾಪುರ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯಲ್ಲಿ KL-11-AR-6870 ನೇ ಕಾರಿನ ಚಾಲಕ ಅಮಿತ್ ಕೃಷ್ಣ ತನ್ನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಉಡುಪಿ ಕಡೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡ ಭಾಗಕ್ಕೆ  ಬಂದು ಬ್ರಹ್ಮಾವರ  ತಾಲೂಕು ಚಿತ್ರಪಾಡಿ ಗ್ರಾಮದ ನರ್ತಕಿ ಬಾರ್ ಎದುರು  ರಸ್ತೆಯ ಪಶ್ಚಿಮದ ಅಂಚಿನಲ್ಲಿ ರಸ್ತೆ ದಾಟಲು ನಿಂತುಕೊಂಡಿರುವ ಸುಮಾರು 30 ರಿಂದ 35 ವರ್ಷದ ಪ್ರಾಯದ ಅಪರಿಚಿತ ಗಂಡಸಿಗೆ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಗಂಡಸು ರಸ್ತೆಗೆ ಬಿದ್ದ ಪರಿಣಾಮ ಆತನ ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು ಕೂಡಲೇ ಪಿರ್ಯಾದಿದಾರರು ಅಂಬುಲೆನ್ಸ್ ನಲ್ಲಿ ಬ್ರಹ್ಮಾವರದ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಅಪರಿಚಿತ ಗಂಡಸು ಮೃತಪಟ್ಟಿರುವುದಾಗಿದೆ ತಿಳಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 208/2021 ಕಲಂ: 279,304 (A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 03/12/2021 ರಂದು ಪಿರ್ಯಾದಿದಾರರಾದ ಶ್ರೀಮತಿ ಅನಿತಾ ಶೆಟ್ಟಿ (34), ಗಂಡ: ದಿನಕರ ಶೆಟ್ಟಿ, ವಾಸ: ಮನೆ ನಂ: 2-58  ಮಮತಾ ನಿಲಯ ಹೊಸಮನೆ ಕಮ್ತ ಬೇಳಂಜೆ ಗ್ರಾಮ ಹೆಬ್ರಿ ತಾಲೂಕು ಇವರು  KA-20-EM-5703 ನೇ ಮೋಟಾರ್ ಸೈಕಲ್ ನಲ್ಲಿ ಸಹ ಸವಾರರನ್ನಾಗಿ ಶಿವರಾಮ ಶೆಟ್ಟಿ ರವರನ್ನು ಕುಳ್ಳಿರಿಸಿಕೊಂಡು ಹೆಬ್ರಿ ಕಡೆಯಿಂದ ಬೇಳಂಜೆ ಕಡೆಗೆ ಹೋಗುತ್ತಿರುವಾಗ ಅವರು ರಾತ್ರಿ 06:30 ಗಂಟೆಗೆ ಕುಚ್ಚೂರು ಗ್ರಾಮದ ಸಳ್ಳೆಕಟ್ಟೆ ಬಾಲಕೃಷ್ಣ ಭಜನಾ ಮಂಡಳಿ ಬಳಿ ತಲುಪುವಾಗ ಅವರ ಹಿಂದುಗಡೆಯಿಂದ ಹೆಬ್ರಿ ಕಡೆಯಿಂದ ಬೇಳಂಜೆ ಕಡೆಗೆ KA-15-C-6108 ನೇ TATA ಗೂಡ್ಸ್ ವಾಹನವನ್ನು ಅದರ ಚಾಲಕ ಬಸವರಾಜ.ಎನ್.ಜಿ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ ಬಲಬದಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಭುಜದ ಬಳಿ ಮೂಳೆ ಮುರಿತವಾಗಿರುತ್ತದೆ ಹಾಗೂ ಸಹ ಸವಾರರಿಗೆ ಮೈಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 03/12/2021 ರಂದು ತಮ್ಮ ಕೆಲಸದ ನಿಮಿತ್ತ ಪಿರ್ಯಾದಿದಾರರಾದ ಧನಲಕ್ಷ್ಮಿ ಜಯಶೀಲ (33), ಗಂಡ:ಪ್ರಣವ್ ಸ್ವರೂಪ್,   ವಾಸ:   ಸನ್ಮಾನ್ ಫ್ಲಾಜ್, ವೇಣುಗೋಪಾಲ ದೇವಸ್ಥಾನದ ಎದುರು, ಮಣಿಪಾಲ-ಅಲೆವೂರು ರಸ್ತೆ, ಮಣಿಪಾಲ ಶಿವಳ್ಳಿ ಗ್ರಾಮ ಉಡುಪಿ ಜಿಲ್ಲೆ ಇವರು KA-20-EJ-5547 ನೇ ಸ್ಕೂಟರ್ ನಲ್ಲಿ ಮಣಿಪಾಲ  ಕಡೆಯಿಂದ ಉಡುಪಿ ಕಲ್ಸಂಕ ಕಡೆಗೆ ರಾಷ್ಟ್ರೀಯ ಹೆದ್ದಾರಿ 169 (ಎ)  ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ  09:45 ಗಂಟೆಗೆ ಶಿವಳ್ಳಿ ಗ್ರಾಮದ ಎಂಜಿಎಂ ಬಳಿಯ ಕರ್ನಾಟಕ ಬ್ಯಾಂಕ್ ಎದುರು ತಲುಪುವಾಗ ಹಿಂದಿನಿಂದ ಅಂದರೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ KA-19-MD-626 ನೇ ಕಾರು ಚಾಲಕ ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಪಿರ್ಯಾದಿದಾರರ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಕೈ, ಬಲಕಾಲು, ತಲೆಗೆ ಗಾಯವಾಗಿದ್ದು ಹಾಗೂ ಬಲಭುಜಕ್ಕೆ ಮೂಳೆಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79/2021 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಅನುಷಾ (21), ತಂದೆ: ಬಾಲಕೃಷ್ಣ ಪೂಜಾರಿ, ವಾಸ: ಕೈಕಾಣ, ವಂಡ್ಸೆ ಗ್ರಾಮ, ಕುಂದಾಪುರ ತಾಲೂಕು ಇವರಿಗೆ 2021 ನೇ ಅಗಸ್ಟ್ ತಿಂಗಳಿನಲ್ಲಿ ಬೆಂಗಳೂರು ಏರ್ ಪೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ  ಜಿ-ಮೇಲ್ ಸಂದೇಶವೊಂದು ಬಂದಿದ್ದು, ಅದರಲಿದ್ದ ಮೊಬೈಲ್ ನಂಬ್ರಕ್ಕೆ ಪಿರ್ಯಾದಿದಾರರು ಸಂಪರ್ಕಿಸಿದಲ್ಲಿ ಉದ್ಯೋಗದ ಕ್ಲಿಯರೆನ್ಸ್ ಮತ್ತು ಇತರೇ ಚಾರ್ಜ್‌ ಎಂದು ಹೇಳಿ ಗೂಗಲ್ ಪೇ ಮುಖಾಂತರ ರೂಪಾಯಿ 65,000/- ಹಣವನ್ನು ಅಪರಿಚಿತ ವ್ಯಕ್ತಿಗಳ ಗೂಗಲ್ ಪೇ ನಂಬ್ರಕ್ಕೆ ಪಿರ್ಯಾದಿದಾರರು ಪಾವತಿಸಿದ್ದು, ಅಲ್ಲದೇ ನಂತರದ ದಿನಗಳಲ್ಲಿ ಪಿರ್ಯಾದಿದಾರರಿಗೆ 25 ಲಕ್ಷ ಬಹುಮಾನ ಗೆದ್ದಿದ್ದೀರಿ ಎಂಬುದಾಗಿ ವಾಟ್ಸ್ ಅಪ್ ನಲ್ಲಿ ಬಂದ ಸಂದೇಶವನ್ನು ನಂಬಿ ಅವರಿಚಿತರ ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆಗೆ ಒಟ್ಟು ರೂಪಾಯಿ 5,01,540/- ಹಣವನ್ನು ಪಿರ್ಯಾದಿದಾರರು ಗೂಗಲ್ ಪೇ ಮುಖೇನ ಪಾವತಿಸಿರುತ್ತಾರೆ. ಯಾರೋ ಅಪರಿಚಿತ ವ್ಯಕ್ತಿಗಳು ಉದ್ಯೋಗ ನೀಡುವುದಾಗಿ ನಂಬಿಸಿ ಮತ್ತು ಬಹುಮಾನ ಗೆದ್ದಿದ್ದೀರಿ ಎಂದು ನಂಬಿಸಿ, ಪಿರ್ಯಾದಿದಾರರಿಂದ ಒಟ್ಟು ರೂಪಾಯಿ  5,66,540/- ಹಣವನ್ನು ಪಡೆದು ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ:  66(ಡಿ) ಐ.ಟಿ. ಆಕ್ಟ್ ಮತ್ತು ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಣಿಪಾಲ: ದಿನಾಂಕ 4/12/2021 ರಂದು  ರಾತ್ರಿ  9:00 ಗಂಟೆಗೆ  ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಪಿರ್ಯಾದಿದಾರರಾದ ರಮೇಶ ಆಚಾರ್ಯ  (44), ತಂದೆ: ನಾರಾಯಣ ಆಚಾರ್ಯ,ವಾಸ : ಹೆರ್ಗಾ ಪೋಸ್ಟ್ , ಉಡುಪಿ ತಾಲೂಕು ಇವರು ಆರೋಪಿತ ಪ್ರಶಾಂತ್ ಎಂಬಾತನನ್ನು ಭೇಟಿಯಾಗಿದ್ದು ಆಗ ಆರೋಪಿತನು ಡ್ರಿಂಕ್ಸ್ ಕುಡಿಯುವ ಎಂದು ಹೇಳಿದಂತೆ ಉಡುಪಿಯಲ್ಲಿ ಬಿಯರ್‌‌ ಖರೀದಿಸಿ ಇಬ್ಬರೂ ಕರಂಬಳ್ಳಿ ಗುಜರಿ ಅಂಗಡಿಯ ಬಳಿ ಹೋಗಿ ಬಿಯರ್‌‌ ಸೇವನೆ ಮಾಡಿರುತ್ತಾರೆ. ರಾತ್ರಿ 10:30 ಗಂಟೆಗೆ ಆರೋಪಿತನು ಪಿರ್ಯಾದಿದಾರರಲ್ಲಿ ಮೊಬೈಲ್ ನೀಡುವಂತೆ  ಹೇಳಿದ್ದು ಪಿರ್ಯಾದಿದಾರರು ಮೊಬೈಲ್ ನೀಡಲು ನಿರಾಕರಿಸಿದಾಗ ಆರೋಪಿತನು ಪಿರ್ಯಾದಿದಾರ ಮುಖಕ್ಕೆ ಕೈಯಿಂದ ಹೊಡೆದು ರೆಡ್‌ ಮಿ ಮೊಬೈಲ್ ಪೋನನ್ನು ಕಸಿದುಕೊಂಡಿರುತ್ತಾನೆ. ಪಿರ್ಯಾದಿದಾರರು ಮೊಬೈಲ್ ಫೋನನ್ನು ವಾಪಾಸ್ ನೀಡುವಂತೆ ಹೇಳಿದಾಗ ಆರೋಪಿತನು ಪಿರ್ಯಾದಿದಾರಿಗೆ ಹಲ್ಲೆ ಮಾಡಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ  9 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ  ಸ್ಕೂಟರ್ ಕೀಯನ್ನು ಸುಲಿಗೆ ಮಾಡಿ  ಪಿರ್ಯಾದಿದಾರರ KA-20-EH-7892 ಸ್ಕೂಟರ್‌ನೊಂದಿಗೆ ಪರಾರಿಯಾಗಿರುತ್ತಾನೆ.  ಸುಲಿಗೆಯಾದ ಮೊಬೈಲ್ ಪೋನ್‌ನ ಮೌಲ್ಯ 10 ಸಾವಿರ ರೂಪಾಯಿ , ಚಿನ್ನದ ಚೈನ್‌ನ  ಮೌಲ್ಯ 30 ಸಾವಿರ ರೂಪಾಯಿ , ಹಾಗೂ ಸ್ಕೂಟರ್‌ನ ಮೌಲ್ಯ 30  ಸಾವಿರ ರೂಪಾಯಿ ಆಗಿರುವುಧಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 159/2021 ಕಲಂ: 394 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 05-12-2021 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080