ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಅಮಾಸೆಬೈಲು: ಪಿರ್ಯಾದಿದಾರರಾದ ಭಾಸ್ಕರ ಆಚಾರಿ (55) ತಂದೆ: ದಿ: ಬಚ್ಚು ಆಚಾರಿ ವಾಸ: ಗುಂಡಿಬೇರು ಅಮಾಸೆಬೈಲು ಗ್ರಾಮ ಕುಂದಾಪುರ ಇವರು ದಿನಾಂಕ 03/11/2022 ರಂದು ಪರಿಚಯದ ಪ್ರವೀಣ್ ಪೂಜಾರಿ ಅವರ  ಅಂಗಡಿಗೆ ಹೋಗಿದ್ದು ಆಗ ಪ್ರವೀಣ್ ಪೂಜಾರಿಯವರು ಭಾಸ್ಕರ ಆಚಾರಿ ರವರನ್ನು ಹಳೆ ಅಮಾಸೆಬೈಲಿಗೆ ಹೋಗಿ ಬರುವ ಎಂದು ಕರೆದಿದ್ದು ಇವರು ಪ್ರವೀಣ್ ಪೂಜಾರಿಯವರ ಮೋಟಾರು ಸೈಕಲ್ಲು ನಂಬ್ರ KA-20 EL-5202  ರಲ್ಲಿ ಸಹ ಸವಾರನಾಗಿ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು ಅಮಾಸೆಬೈಲು ಪೇಟೆಯಿಂದ  ಹಳೆ ಅಮಾಸೆಬೈಲು ಕಡೆಗೆ ಹೋಗುತ್ತಿರುವಾಗ 19:00 ಗಂಟೆ ಸಮಯಕ್ಕೆ ಅಮಾಸೆಬೈಲು ಗ್ರಾಮದ ಹಳೆ ಅಮಾಸೆಬೈಲು ಎಂಬಲ್ಲಿ ಗೋಪಾಲಕೃಷ್ಣ ಕಾಮತ್ ಮನೆಯ ಬಳಿ ಪ್ರವೀಣ್ ಪೂಜಾರಿಯವರು ಮೋಟಾರು ಸೈಕಲನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು ಆ ಸಮಯ ರಸ್ತೆಗೆ ಅಡ್ಡಲಾಗಿ  ಒಂದು ದನ ಅಡ್ಡ ಬಂದಿದ್ದು ಮೋಟಾರು ಸೈಕಲ್ಲು ಸವಾರ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ಲು ಸ್ಕಿಡ್ ಆಗಿ ರಸ್ತೆಗೆ ಬಿದ್ದು ಇಬ್ಬರೂ ರಸ್ತೆಗೆ ಬಿದ್ದ ಪರಿಣಾಮ ಭಾಸ್ಕರ ಆಚಾರಿ ರವರ ಎಡಕಾಲಿನ ಮೂಳೆ ಮುರಿತ ಉಂಟಾಗಿದ್ದು ಮೋಟಾರು ಸೈಕಲ್ಲು ಸವಾರ ಪ್ರವೀಣ್ ಅವರಿಗೆ ಸಹ ಹಣೆ ಎಡಕಾಲು ಎಡ ಕೈಗೆ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 30/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಬ್ರಹ್ಮಾವರ: ದಿನಾಂಕ 30/10/2022 ರಂದು ಪಿರ್ಯಾದಿ ಅಶೋಕ ಕುಲಾಲ್‌ , ತಂದೆ: ವೆಂಕಟೇಶ ಕುಲಾಲ್‌, ವಾಸ: ನಡೂರು, ಶ್ರೀ ಶಾಸ್ತ್ರ, ನಡೂರು ಗುಡ್ಡೆಯಂಗಡಿ, ನಡೂರು ಗ್ರಾಮ, ಬ್ರಹ್ಮಾವರ ರವರು ಅವರ ಮೋಟಾರ್‌ ಸೈಕಲ್‌ನಲ್ಲಿ ಮನೆಯಿಂದ ಬಾರ್ಕೂರು ಕಡೆಗೆ ಹೊರಟು ಬರುತ್ತಿರುವಾಗ ಸಂಜೆ ಸುಮಾರು 6:30 ಗಂಟೆಗೆ ನಡೂರು ಗ್ರಾಮದ ನಡೂರು-ಬಾರ್ಕೂರು ರಸ್ತೆಯ ಗೋಪಾಲ ಮರಕಾಲರವರ ಮನೆಯ ಬಳಿ  ತಲುಪುವಾಗ ಬಾರ್ಕೂರು ಕಡೆಯಿಂದ ನಡೂರು ಕಡೆಗೆ ಆರೋಪಿತೆ ನಿಶ್ಮಿತಾ ಎಂಬವರು ಅವರ KA-20 EX-6566 ನೇ ದ್ವಿಚಕ್ರವಾಹನವನ್ನು  ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೂರು ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಬಾಬು ಶೆಟ್ಟಿರವರಿಗೆ ಹಿಂದಿನಿಂದ ಡಿಕ್ಕಿಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಬಾಬು ಶೆಟ್ಟಿ ರವರ ಎಡಬದಿಯ ಕಣ್ಣಿನ ಮೇಲೆ ಹಾಗೂ ಎಡಬದಿಯ ತಲೆಗೆ ರಕ್ತಗಾಯ ವಾಗಿರುತ್ತದೆ, ಆರೋಪಿತೆಯು ಗಾಯಾಳುವಿನ ವೈಧ್ಯಕೀಯ ವೆಚ್ಚ ನೀಡುವುದಾಗಿ ಹೇಳಿ ಈಗ ನಿರಾಕರಿಸಿರುವುದರಿಂದ ದೂರು ನೀಡುವಾಗ ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 184/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಕೊಲ್ಲೂರು: ಪಿರ್ಯಾದಿದಾರರಾದ ಪ್ರಕಾಶ್(42) ತಂದೆ: ದಿ: ಅಂಬುಂಜಿ ವಾಸ: ಶೇಡಿ ಗುಂಡಿಮನೆ  ಮುದೂರು  ಗ್ರಾಮ ಬೈಂದೂರು ಇವರು ತನ್ನ KA-19 MF-8644ನೇ ಕಾರಿನಲ್ಲಿ ರಂಜಿತರವರೊಂದಿಗೆ ದಿನಾಂಕ 04/11/2022 ರಂದು ಕುಂದಾಪುರದಿಂದ ತನ್ನ ಮನೆ  ಮೂದೂರಿಗೆ ತೆರಳುವಾಗ ವಂಡ್ಸೆಯಲ್ಲಿ ಪರಿಚಯದ ಬೋಬಿ, ನಿಮ್ಮಿ, ನಿಬಿನ್ ರವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಸಮಯ 13:15 ಗಂಟೆಗೆ ಜಡ್ಕಲ್ ಗ್ರಾಮದ ಬೀಸಿನಪಾರೆ ಜೋಮೇಶ್ ಜಾರ್ಜ್ ರವರ ಅಂಗಡಿ ಬಳಿ ತಲುಪಿದಾಗ  ಎದುರಿನಿಂದ ಅಂದರೆ ಮುದೂರಿನಿಂದ ಜಡ್ಕಲ್ ಕಡೆಗೆ ಆರೋಪಿ ಥೋಮಸ್ ರವರು  KA-22 MB-0495ನೇ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಪ್ರಕಾಶ್‌ ರವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇವರ ಎಡ ಕಾಲಿನ ಗಂಟಿಗೆ ರಕ್ತಗಾಯವಾಗಿದ್ದು ಹಾಗೂ  ಕಾರಿನಲ್ಲಿದ್ದ ನಿಮ್ಮಿ ಹಾಗೂ ಬೋಬಿ ರವರಿಗೆ  ತುಟಿಗೆ  ಗಾಯವಾಗಿದ್ದು, ನಿಬಿನ್ ರವರಿಗೆ ಹಣೆಗೆ  ರಕ್ತ ಗಾಯವಾಗಿದ್ದು,  ರಂಜಿತ್ ಎಂಬವರಿಗೆ  ಬಲಕಾಲಿಗೆ ತೀವ್ರ ಸ್ವರೂಪದ ಮೂಳೆ ಮುರಿತದ ಗಾಯವಾಗಿದ್ದು ಅವರನ್ನು ಕೆ ಎಮ್ ಸಿ ಮಣಿಪಾಲ ಆಸ್ಪತ್ರೆಗೆ ಒಳರೋಗಿ ದಾಖಲಿಸಿದ್ದು, ಬೋಬಿರವರು  ಹೊರರೋಗಿ ಚಿಕಿತ್ಸೆ ಪಡೆದಿದ್ದು,  ಉಳಿದ ನಿಮ್ಮಿ, ನಿಬಿನ್ ಹಾಗೂ ಪ್ರಕಾಶ ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 47/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾಧ ಸುಕುಮಾರ ಶೆಟ್ಟಿ ತಂದೆ: ರಾಜೀವ ಶೆಟ್ಟಿ ವಾಸ; ಬೇಳಂಜೆ, ಬೇಳಮಜೆ ಗ್ರಾಮ ಹೆಬ್ರಿ ತಾಲೂಕು ರವರು ಮೂಲತ: ಗದಗ ಜಿಲ್ಲೆಯವರಾಗಿದ್ದು.  ಅವರ ಕುಟುಂಬದ ಜಾಗವು ಬೇಳಂಜೆಯಲ್ಲಿದ್ದು. ವಿಭಾಗ ಪತ್ರವು ಅಗಿರುತ್ತದೆ. ಸುಕುಮಾರ ಶೆಟ್ಟಿ ರೌರು ಅಗಾಗ ಬೇಳಂಜೆಗೆ ಬಂದು ಹೋಗುತಿರುವುದಾಗಿದೆ. ದಿನಾಂಕ 04/11/2022 ರಂದು ಸುಕುಮಾರ ಶೆಟ್ಟಿ ರವರು ತನ್ನ ತಾಯಿಯೊಂದಿಗೆ ಬೇಳಂಜೆಗೆ ಬಂದು ತಮ್ಮ ಜಾಗದಲ್ಲಿ ಜೆ.ಸಿ.ಬಿ ಯಿಂದ ಕೆಲಸ ಮಾಡಿಸುತ್ತಿರುವಾಗ ಸುಕುಮಾರ ಶೆಟ್ಟಿ ರವರ ಚಿಕ್ಕಮ್ಮ  ಆರೋಪಿತೆ ಅರುಣ  ಬಿ  ಶೆಟ್ಟಿ  ಅಲ್ಲಿಗೆ ಬಂದು ಜೆ.ಸಿ ಬಿ ಯ ಮುಂದೆ ಅಡ್ಡ ಮಲಗಿದವರನ್ನುಸುಕುಮಾರ ಶೆಟ್ಟಿ ರವರು ತಡೆಯಲು ಹೋದಾಗ ಆರೋಪಿತೆ ಅರುಣ ಬಿ ಶೆಟ್ಟಿ ಇವರು ಏಕಾಏಕಿ ಇವರ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿ ಓಡಿ ಹೋಗಿರುವುದಾಗಿದೆ.  ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 60/2022 ಕಲಂ:324,506,504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಹೆಬ್ರಿ: ಪಿರ್ಯಾದಿದಾರರಾದ ರಾಘವೇಂದ್ರ ಸಂಪಾದಕರು ಪಬ್ಲಿಕ್ ಮಿರರ್ ಹರಿಹರ ಬೀದಿ ಶೃಂಗೇರಿ. ಅವರು ದಿನಾಂಕ 03/11/2022 ರಂದು ಸಂಜೆ 7:00 ಗಂಟೆಗೆ ಸೊಮೇಶ್ವರದ ಮಯೂರ ಹೊಟೇಲ್ ನಲ್ಲಿ ಟೀ ಕುಡಿದು ಹೊರ ಬಂದಾಗ ಅಗುಂಬೆ ಕಡೆಯಿಂದ ಬಂದ ಕೆಂಪು ಬಣ್ಣದ ಕಿಯಾ ಕಾರು ಮುಂದೆ ಹೋಗಿ ನಂತರ ಹಿಂದೆ ಬಂದು ನನ್ನ ಬಳಿ ನಿಲ್ಲಿಸಿ ಅದರಿಂದ ಆರೋಪಿತರಾದ ಕೊಪ್ಪ ನಿವಾಸಿ ಪ್ರಸನ್ನ ಶೆಟ್ಟಿ @ ಪುಷ್ಠಿ ಪ್ರಸನ್ನ ಹಾಗೂ ಕೊಪ್ಪ ಪಟ್ಟಣ ಪಂಚಾಯತ್ ಸದಸ್ಯ ಶ್ರೀನಿವಾಸ ಶೆಟ್ಟಿ ಇವರು ಕಾರಿನಿಂದ ಇಳಿದು ಏಕಾಏಕಿ ನನ್ನ ಬಳಿ ಬಂದು ನಮ್ ಬಗ್ಗೆ ಬರೀತೀಯಾ... ಎಂದು ಅವಾಚ್ಯಶಬ್ದದಿಂದ ಬೈದು. ನಿನ್ನ ಕಾಲು ಕತ್ತರಿಸೋಕೆ ನಾವು ಕಾಯ್ತಾ ಇದ್ವಿ  ಇವತ್ತು ನಿನ್ನ ಸಾಯಿಸ್ತೀನಿ ಯಾರು ಬರ್ತಾರೆ  ಎಂಬುದಾಗಿ ಪ್ರಸನ್ನ ಶೆಟ್ಟಿ ಅವಾಚ್ಯವಾಗಿ ನಿಂದಿಸಿದ್ದು ಆರೋಪಿತ ಶ್ರೀನಿವಾಸ ಶೆಟ್ಟಿ ಈತನನ್ನು ರಾಘವೇಂದ್ರ ರವರನ್ನು ಅಪಹರಣ ಮಾಡುವ ಉದ್ದೇಶದಿಂದ ಎತ್ತಿ ಕಾರಿನೊಳಗೆ ಹಾಕಲು ಪ್ರಯತ್ನಿಸಿದ್ದು. ಈ ಸಮಯ ನನ್ನೊಂದಿಗೆ ಇದ್ದ ಚಾಲಕ ಕಾರ್ತೀಕ್ ಬಂದು ಏನಾಯಿತು ಎಂದು ಕೇಳಿದಾಗ ಆರೋಪಿತರು ಅತನಿಗೆ ಅವಾಚ್ಯಶಬ್ದದಿಂದ ಬೈದು ಸುಮ್ನೆ ಇಲ್ಲಿಂದ ಹೋಗು ಎಂದು ಬೆದರಿಸಿದ್ದಾರೆ ನಂತರ ಪ್ರಸನ್ನ ಶೆಟ್ಟಿ ತನಗೆ ಮನಸೊ ಇಚ್ಪೆ ಥಳಿಸಿ ಅವಾಚ್ಯಶಬ್ದದಿಂದ ಬೈದು ಆರೋಪಿತ ಶ್ರೀನಿವಾಸ ಶೆಟ್ಟಿ ಈತನು ತನ್ನಲ್ಲಿ ಕಾರಿನಲ್ಲಿ ಲಾಂಗ್ ಇದೆ ಎಂದು ಬೆದರಿಕೆ ಹಾಕಿದ್ದು. ಆರೋಪಿತ ಪ್ರಸನ್ನ ಶೆಟ್ಟಿಯು ತನಗೆ ಹೊಡೆಯುತ್ತಾ  ನಿನ್ನ ಸಾಯಿಸದೇ  ಬಿಡಲ್ಲ ಎಂದು ಬೆದರಿಸಿ ಈಗ ನೀನು ಇಲ್ಲಿಂದ ಓಡು ಕಂಪ್ಲೇಂಟ್ ಕೊಟ್ರೆ ಮತ್ತೆ ಸಿಕ್ಕಿದಾಗ ನಿನ್ನ ಕತೆ ಮುಗಿಸುತ್ತೇನೆ ಎಂದು ಬೆದರಿಸಿ  ಓಡು ಎಂದಾಗ ತಾನು ಮಯೂರ ಹೋಟೇಲ್ ಮುಂಭಾಗದಿಂದ ಗಣೇಶ್ ದೇವಸ್ಥಾನದ ತನಕ ಓಡಿದಾಗ ಅಲ್ಲಿಗೆ ನನ್ನ ಕಾರನ್ನು ಕಾರ್ತಿಕ್ ತಂದರು  ರಾಘವೇಂದ್ರ ರವರು ಪತ್ರಕರ್ತರಾಗಿದ್ದು. ವರದಿಗೆ ಸಂಬಂದಿಸಿ ಆರೋಪಿತರುಗಳು ಈ ಕೃತ್ಯ ನಡೆಸಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 61/2022 ಕಲಂ:323,504,506,342,365 ಜೊತೆಗೆ 511,34ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಹೆಬ್ರಿ: ಪಿರ್ಯಾದಿದಾರರಾದ ಅರುಣ.ಬಿ.ಶೇಡ್ತಿ (55) ಗಂಡ: ಬಾಲಕೃಷ್ಣ ಶೆಟ್ಟಿವಾಸ : ಶ್ರೀ ದೇವಿ ಕೃಪಾ ನಡುಗುಡ್ಡೆ ಬೇಳಂಜೆ ಗ್ರಾಮ ಹೆಬ್ರಿ ಇವರು ತನ್ನ ಗಂಡನೊಂದಿಗೆ ಬೇಳಂಜೆ ಗ್ರಾಮದ  ನಡುಗುಡ್ಡೆ ಎಂಬಲ್ಲಿ ವಾಸವಾಗಿದ್ದು. ಅರುಣ.ಬಿ.ಶೇಡ್ತಿ ರವರಿಗೆ ತಾಯಿಯ ಹೆಸರಿನಲ್ಲಿದ್ದ ಜಾಗದ ಪಾಲಿನ ವಿಚಾರದಲ್ಲಿ ತಕರಾರು ಇರುತ್ತದೆ.  ದಿನಾಂಕ 04/11/2022 ರಂದು ಮದ್ಯಾಹ್ನ 12:00 ಗಂಟೆಗೆ ಅಕ್ಕ ಗುಲಾಬಿ ಮತ್ತು ಅವರ ಮಗ ಸುಕುಮಾರ ಇವರು ಜೆ.ಸಿ.ಬಿ ಯಲ್ಲಿ ಅರುಣ.ಬಿ.ಶೇಡ್ತಿ ರವರ ತಾಯಿಯವರಿಗೆ ಸೇರಿದ ಜಾಗದಲ್ಲಿ ಕೆಲಸ ಮಾಡಿಸುವಾಗ ನಾನು ಅಲ್ಲಿಗೆ ಹೋಗಿ ಅವರಲ್ಲಿ ಈ ಜಾಗವು ತಾಯಿಯ ಹೆಸರಿನಲ್ಲಿದೆ  ಇಲ್ಲಿ ಕೆಲಸ ಮಾಡಬೇಡಿ ಎಂದು ಹೇಳಿ ತಡೆಯಲು ಹೋದಾಗ  ಆರೋಪಿತರು ಅವಾಚ್ಯಶಬ್ದದಿಂದ ಬೈದು ಕೈಯಿಂದ ನನಗೆ ಹೊಡೆದು ನನ್ನನ್ನು ದೂಡಿಕೊಂಡು ಹೋಗಿ ಅಲ್ಲಿಯೇ ಇದ್ದ ಅವರಣ ಇರದ ಬಾವಿಗೆ ದೂಡಿ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 59/2022 ಕಲಂ: 504,506,323,307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 05-11-2022 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080