ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಮಣಿಪಾಲ: ದಿನಾಂಕ 03/11/2021 ರಂದು 19:15 ಗಂಟೆಗೆ ಶಿವಳ್ಳಿ ಗ್ರಾಮದ ಮಣಿಪಾಲ ಸಿಂಡಿಕೇಟ್ ಸರ್ಕಲ್‌‌‌‌‌ ಬಳಿ OD-02-V-5073 ಮಾರುತಿ ಸೆಲೆರಿಯೋ ಕಾರಿನ ಚಾಲಕ ಡಾ|| ರಾಜ್ ಕುಮಾರ್ ಎಂಬುವವರು ತನ್ನ ಕಾರನ್ನು ಮಣಿಪಾಲ ಅನಂತನಗರ ಕಡೆಯಿಂದ DC ಕಛೇರಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಗಣಪತಿ ಶೇರಿಗಾರ್ ಎಂಬುವವರು ಚಲಾಯಿಸಿಕೊಂಡು ಹೋಗುತ್ತಿದ್ದ KA-20-Q-8223 ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಗಣಪತಿ ಶೇರಿಗಾರ್ ರವರಿಗೆ ಬಲಕಾಲಿನ ಪಾದದ ಮೇಲ್ಬದಿ ತೀವ್ರ ಒಳ ಜಖಂ ಹಾಗೂ ಬಲ ಭುಜ ಮತ್ತು ಬಲ ಕಾಲಿನ ಹೆಬ್ಬ್ರಳಿನ ಬಳಿ ತರಚಿದರಕ್ತ ಗಾಯವಾಗಿದ್ದು ಅವರನ್ನು ಮಣಿಪಾಲ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 145/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 02/11/2021 ರಂದು 21:15 ಗಂಟೆಗೆ ಪಿರ್ಯಾದಿದರರಾದ ಅಫ್ರಾಝ್ (23), ತಂದೆ: ಮಹಮ್ಮದ್ ಅಲ್ತಾಫ್, ವಾಸ: ಪೆಂಟಾ ಹೈಟ್ಸ್ 10 ಪ್ಲೋರ್ ವಿ ಪಿ ನಗರ 5 ನೇ ಮಖ್ಯ ಕ್ರಾಸ್ ಇಂದ್ರಾಳಿ, ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರು ತನ್ನ KA-20-MD-8600 ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಮಣಿಪಾಲ MIT ಜಂಕ್ಷನ್ ಕಡೆಯಿಂದ ಈಶ್ವರ ನಗರ ಡಿವೈಡರ್ ಕ್ರಾಸ್ ಬಳಿ ಮಣಿಪಾಲ ಕಡೆಗೆ U ಟರ್ನ್ ಮಾಡಿ ಬರುತ್ತಿರುವಾಗ ಬಿಗ್ ಬಾಸ್ ಕಡೆಯಿಂದ KA-20-EP-6154 ಮೋಟಾರ್ ಸೈಕಲನ್ನು ಅದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಬಲ ಬದಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಕಾರು ಜಖಂಗೊಂಡಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 146/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 03/11/2021 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಪ್ರಜ್ವಲ್ (‌19), ತಂದೆ: ಮಧ್ವರಾಜ್‌, ವಾಸ: ಶ್ರೀನಿವಾಸ ನಿಲಯ,ಕೊಮೆ ಶಾಲೆ ಹಿಂಭಾಗ, ಕೊಮೆ, ತೆಕ್ಕಟ್ಟೆ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಇವರು ಅಜ್ಜ ಶ್ರೀನಿವಾಸ(75), ಅಜ್ಜಿ, ಚಂದು (70) ರವರೊಂದಿಗೆ ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಪಡುಕೆರೆಯ ಬೈಲುಮನೆ ಎಂಬಲ್ಲಿರುವ ಕಾಡ್ತಿಯಮ್ಮ ಮಣ್ಣು ರಸ್ತೆಯ ಪೂರ್ವ ಬದಿಯಲ್ಲಿರುವ ಕೃಷಿ ಜಮೀನಿನಲ್ಲಿ ಯಂತ್ರದ ಮುಖಾಂತರ ಕಟಾವಾದ ಭತ್ತದ ಹುಲ್ಲನ್ನು ಸಂಗ್ರಹಿಸುವ ಕೆಲಸವನ್ನು ಮಾಡಿಕೊಂಡಿದ್ದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರ ಅಜ್ಜ ಶ್ರೀನಿವಾಸ ರವರು ಕೃಷಿ ಜಮೀನಿನಿಂದ ಮೇಲಕ್ಕೆ ಕಾಡ್ತಿಯಮ್ಮ ಮಣ್ಣು ರಸ್ತೆಗೆ ಬಂದು ರಸ್ತೆ ಬದಿಯಲ್ಲಿ ನಿಂತಿರುವಾಗ ನೆರೆ ಕೃಷಿ ಜಮೀನಿನ ಭತ್ತದ ಹಲ್ಲನ್ನು ತುಂಬಲು ಬಂದಿದ್ದ ಬೊಲೆರೊ ಪಿಕ್‌ಅಪ್‌ ವಾಹನ ನಂಬ್ರ KA-20-AA- 0957 ನೇದನ್ನು ಅದರ ಚಾಲಕ ವಿಜಯ ಕಾಡ್ತಿಯಮ್ಮ ಮಣ್ಣು ರಸ್ತೆಯಲ್ಲಿ ಫೀಶರಿಸ್‌ ರಸ್ತೆ ಕಡೆಯಿಂದ ಬೈಲು ಮನೆ ಕಡೆಗೆ ಹಿಮ್ಮುಖವಾಗಿ ಅತೀ ವೇಗ ಹಾಗೂ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಜ್ಜನಿಗೆ ಡಿಕ್ಕಿ ಹೊಡೆದು ವಾಹನದ ಹಿಂಬದಿ ಚಕ್ರವು ತಲೆ ಬದಿಯಿಂದ ಹರಿದು ಹೋಗಿದ್ದು ಪರಿಣಾಮ ಅವರ ತಲೆಯ ಬಲಬದಿ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಭುಜದ ಬಲಬದಿ ತರಚಿದ ರಕ್ತಗಾಯವಾಗಿದ್ದು, ಬಲಕೈ ಮೊಣಗಂಟಿನಲ್ಲಿ ಮೂಲೆ ಮುರಿತದ ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೆ ಇರುವವರನ್ನು ಚಿಕಿತ್ಸೆಗೆ ಅದೇ ವಾಹನದಲ್ಲಿ ಪಿರ್ಯಾದಿದಾರರು ತೆಕ್ಕಟ್ಟೆ ಪ್ರೇಮಾ ಕ್ಲಿನಿಕ್‌ಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ಪರೀಕ್ಷಿಸಿ ಅವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಮ್‌.ಸಿ. ಆಸ್ಪತ್ರೆಗೆ ಅಂಬುಲೆನ್ಸ್‌ ನಲ್ಲಿ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ . ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 186/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಪುನೀತ್ (28), ತಂದೆ: ಲಕ್ಷ್ಮಣ ದೇವಾಡಿಗ, ವಾಸ: ಜ್ಯೋತಿ ನಿಲಯ, ಮರವಂತೆ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ: 04/11/2021 ರಂದು ಬೆಳಿಗ್ಗೆ ಮರವಂತೆ ಮಾರಸ್ವಾಮಿ ದೇವಸ್ಥಾನದಿಂದ ರಾಷ್ಟ್ರೀಯ .ಹೆದ್ದಾರಿ 66 ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಬೆಳಿಗ್ಗೆ ಸಮಯ 7:15 ಗಂಟೆಗೆ ಬೈಂದೂರು ತಾಲೂಕು ಮರವಂತೆ ಗ್ರಾಮದ ಗಂಗಾಧರೇಶ್ವರ ದೇವಸ್ಥಾನದ ಬಳಿ ತಲುಪುವಾಗ ನಾಗೇಶ್ ಕುಂದರ್ ರವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಮಂಜುನಾಥ ಮೆಂಡನ್ ರವರು ತನ್ನ ಆಟೋ ರಿಕ್ಷಾ ನಂಬ್ರ KA-19-D-141 ನೇದನ್ನು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು ಅದೇ ಸಮಯದಲ್ಲಿ ಅದೇ ದಿಕ್ಕಿನಿಂದ ನೋಂದಣಿ ನಂಬ್ರ ತಿಳಿಯದ ಇನ್ಸುಲೇಟರ್ ವಾಹನವೊಂದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋರಿಕ್ಷಾದ ಹಿಂದುಗಡೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಉಲ್ಟವಾಗಿ ಮಗುಚಿ ಬಿದ್ದಿದ್ದು ರಿಕ್ಷಾ ಚಾಲಕ ಮಂಜುನಾಥ ಮೆಂಡನ್ ರವರಿಗೆ ಎಡತೊಡೆಗೆ ಮೂಳೆ ಮುರಿತದ ಗಾಯ, ಎಡ ಕೈ ತರಚಿದ ಗಾಯ ಹಾಗೂ ಬಲ ಕಣ್ಣಿನ ಮೇಲ್ಭಾಗ ಮತ್ತು ತಲೆಯ ಹಿಂಭಾಗಕ್ಕೆ ತರಚಿದ ರಕ್ತಗಾಯವಾಗಿರುತ್ತದೆ. ಆಟೋ ರಿಕ್ಷಾ ಪ್ರಯಾಣಿಕ ನಾಗೇಶ್ ಕುಂದರ್ ರವರಿಗೆ ಸಣ್ಣ ಪುಟ್ಟ ತರಚಿದಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಡಿಕ್ಕಿ ಹೊಡೆದ ಇನ್ಸುಲೇಟರ್ ವಾಹನ ಚಾಲಕನು ವಾಹನವನ್ನು ನಿಲ್ಲಿಸದೇ ಕುಂದಾಪುರ ಕಡೆಗೆ ಹೋಗಿರುತ್ತಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 102/2021 ಕಲಂ: 279, 337 338 ಐಪಿಸಿ & 134(ಎ)(ಬಿ) ಐ.ಎಮ್.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ  ಮರಣ ಪ್ರಕರಣ 

  • ಬೈಂದೂರು : ಪಿರ್ಯಾದಿದಾರರಾದ ಅಣ್ಣಪ್ಪ ಗಾಣಿಗ (36),ತಂದೆ; ರಾಮ ಗಾಣಿಗ,ವಾಸ: ಶ್ರೀ ಮಂಜುನಾಥ ನಿಲಯ, ಆಲಂದೂರು, ಯಡ್ತರೆ ಗ್ರಾಮ, ಬೈಂದೂರು ತಾಲೂಕು ಇವರ ತಂದೆ ರಾಮ ಗಾಣಿಗ (78)ರವರು ಕೈಸಾಲ ಮತ್ತು ಬ್ಯಾಂಕಿನಲ್ಲಿ ಸಾಲವನ್ನು ಮಾಡಿದ್ದು ಅದನ್ನು ಮರುಪಾವತಿಸಲು ಆಗದೇ ತುಂಬಾ ಬೇಸರ ಮತ್ತು ಚಿಂತೆಯಿಂದ ಇರುತ್ತಿದ್ದರು. ದಿನಾಂಕ 04/11/2021 ರಂದು ಪಿರ್ಯಾದಿದಾರರು ಅವರ ಅಣ್ಣನ ಅಂಗಡಿ ಪೂಜೆಗೆಂದು ಬೆಳ್ಕೆಗೆ ಹೋಗಿ ಪೂಜೆ ಮುಗಿಸಿ ವಾಪಾಸ್ಸು ಮನೆಗೆ ಬಂದಾಗ ಪಿರ್ಯಾದಿದಾರರ ತಂದೆಯವರು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೋದವರು ವಾಪಾಸ್ಸು ಬಂದಿಲ್ಲವಾಗಿ ಪಿರ್ಯಾದಿದಾರರ ತಾಯಿಯವರು ತಿಳಿಸಿದ್ದು, ನಂತರ ಅವರ ತಂದೆಯನ್ನು ಸುತ್ತ ಮುತ್ತ ಹುಡುಕುತ್ತಾ ಹೋದಾಗ ಮಧ್ಯಾಹ್ನ 01.00 ಗಂಟೆ ಸಮಯಕ್ಕೆ ಜಗನ್ನಾಥ್ ಶೆಟ್ಟರವರ ಮನೆಯ ಅಂಗಳದಲ್ಲಿ ಅವರ ತಂದೆಯವರು ಹಾಕಿಕೊಂಡಿದ್ದ ಚಪ್ಪಲಿಯನ್ನು ನೋಡಿ ಮನೆಯ ಬಾವಿಯಲ್ಲಿ ನೋಡಿದಾಗ ಬಾವಿಯಲ್ಲಿ ರಾಮ ಗಾಣಿಗರವರ ಮೃತ ದೇಹ ಕಂಡು ಬಂದಿರುತ್ತದೆ. ಫಿರ್ಯಾದಿದಾರರ ತಂದೆಯವರು ಕೈಸಾಲ ಮತ್ತು ಬ್ಯಾಂಕಿನಲ್ಲಿ ಸಾಲ ಮಾಡಿ ಮರುಪಾವತಿಸಲು ಆಗದೇ ಇದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ; 04/11/2021 ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯ ಮಧ್ಯಾವಧಿಯಲ್ಲಿ ಜಗನ್ನಾಥ ಶೆಟ್ಟಿರವರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 45/2021 ಕಲಂ: 174 ಸಿ.ಅರ್.‌ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 05-11-2021 08:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080