ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾಪು: ಪಿರ್ಯಾದಿದಾರರಾದ ಯೋಗೀಶ್ ಪೂಜಾರಿ ಪ್ರಾಯ : 44 ವರ್ಷ , ತಂದೆ : ದೇವರಾಜ್ ಪೂಜಾರಿ , ವಾಸ : ಭಟ್ಟತೋಟ ಕೈಪುಂಜಾಲು ಊಳಿಯಾರಗೋಳಿ ಗ್ರಾಮ ಕಾಪು ತಾಲೂಕು ಉಡುಪಿ ಇವರು ದಿನಾಂಕ 05/11/2021 ರಂದು ಬೆಳಗ್ಗೆ ವಾಕಿಂಗ್ ಹೋಗುತ್ತಿರುವಾಗ ಬೆಳಗ್ಗೆ 07.30 ಗಂಟೆ ಸುಮಾರಿಗೆ ಓರ್ವ ವ್ಯಕ್ತಿಯೂ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಮಂಗಳೂರು ರಸ್ತೆಯ ಕೊತ್ತಲಕಟ್ಟೆ ಡೈವರ್ಷನ್ ಬಳಿ ರಸ್ತೆ ದಾಟಲು ಮಂಗಳೂರು ಉಡುಪಿ ರಸ್ತೆಯನ್ನು ದಾಟಿ ಉಡುಪಿ ಮಂಗಳೂರು ರಸ್ತೆಯನ್ನು ದಾಟಲು ಉಡುಪಿ ಮಂಗಳೂರು ರಸ್ತೆಯ ಪಶ್ಚಿಮ ಬದಿಯ ಅಂಚಿನಲ್ಲಿ ನಿಂತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಓರ್ವ ಅಂಬುಲೆನ್ಸ್ ಚಾಲಕ ತನ್ನ ಅಂಬುಲೆನ್ಸ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಕೊತ್ತಲಕಟ್ಟೆ ಡೈವರ್ಷನ್ ಬಳಿ ಉಡುಪಿ ಮಂಗಳೂರು ರಸ್ತೆಯ ಪಶ್ಚಿಮ ಬದಿಯ ಅಂಚಿನಲ್ಲಿ ನಿಂತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮ ಆ ವ್ಯಕ್ತಿ ರಸ್ತೆಗೆ ಬಿದ್ದಾಗ ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ಆ ವ್ಯಕ್ತಿಯನ್ನು ಉಪಚರಿಸಿ ನೋಡಲಾಗಿ ಪಿರ್ಯಾದಿದಾರರ ಪರಿಚಯದ ಊಳಿಯಾರಗೋಳಿ ಕೇಳತೋಟ ನಿವಾಸಿ ಗೋವಿಂದ ಪೂಜಾರಿಯಾಗಿದ್ದು ಅವರ ತಲೆಗೆ ರಕ್ತಗಾಯವಾಗಿದ್ದು, ಮಾತನಾಡುತ್ತಿರಲಿಲ್ಲ ಕೂಡಲೇ ಪಿರ್ಯಾದಿದಾರರು ಅಲ್ಲಿ ಸೇರಿದ ಜನರ ಸಹಾಯದಿಂದ ಒಂದು ವಾಹನದಲ್ಲಿ ಗೋವಿಂದ ಪೂಜಾರಿಯವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಗೋವಿಂದ ಪೂಜಾರಿಯವರನ್ನು ಪರೀಕ್ಷಿಸಿ ಅವರು ಈಗಾಗಲೇ ಮೃತ ಪಟ್ಟಿರುವುದಾಗಿ 08.23 ಗಂಟೆಗೆ ತಿಳಿಸಿರುತ್ತಾರೆ. ಅಪಘಾತ ಮಾಡಿದ ಅಂಬುಲೆನ್ಸ್ ನಂಬರ ನೋಡಿದ್ದು GA-09-U-0056 ಆಗಿರುತ್ತದೆ. ಅದರ ಚಾಲಕನ ಹೆಸರು ಮಣಿ ಶಿವಮೊಗ್ಗ ಎಂಬುದಾಗಿ ತಿಳಿದು ಬಂದಿದ್ದು ಈ ಅಪಘಾತದಲ್ಲಿ ಅಂಬುಲೆನ್ಸ್ ಎದುರಿನ ಗ್ಲಾಸ್ ಸಂಪೂರ್ಣ ಪುಡಿಯಾಗಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆತನು ತನ್ನ ಅಂಬುಲೆನ್ಸ್‌‌ ನಲ್ಲಿದ್ದ ರೋಗಿಯೊಂದಿಗೆ ಇನ್ನೊಂದು ಅಂಬುಲೆನ್ಸ್ ನಲ್ಲಿ ಮಂಗಳೂರು ಕಡೆಗೆ ಹೋಗಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 167/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಪುಟ್ಟಯ್ಯ ನಾಯ್ಕ ಪ್ರಾಯ: 60 ವರ್ಷ, ತಂದೆ: ಡಿ. ಬೆಳ್ಳ ನಾಯ್ಕ ವಾಸ: ಬಿಲ್ಲಾಡಿ ಅಂಗಡಿಮಕ್ಕಿ, ಬಿಲ್ಲಾಡಿ ಗ್ರಾಮ, ಜಾನುವಾರುಕಟ್ಟೆ ಪೋಸ್ಟ್, ಬ್ರಹ್ಮಾವರ ತಾಲೂಕು ಇವರು ದಿನಾಂಕ 05/11/2021 ರಂದು ಬೆಳಿಗ್ಗೆ ಮುಳ್ಳಿಕಟ್ಟೆ ಕಡೆಯಿಂದ ಹಕ್ಲಾಡಿ ಕಡೆಗೆ ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 8:15 ಗಂಟೆಗೆ ಕುಂದಪುರ ತಾಲೂಕು ಹಕ್ಲಾಡಿ ಗ್ರಾಮದ ಬಂಟ್ವಾಡಿಯ ಬ್ರಹ್ಮಲಿಂಗೇಶ್ವರ ಹೂವಿನ ಅಂಗಡಿ ಬಳಿ ತಲುಪುವಾಗ ಸುಧೀರ್ ಪೂಜಾರಿ ಹಕ್ಲಾಡಿ ಎಂಬುವವರು ಅವರ ಅತ್ತೆ ಸೀತಾ, ಹೆಂಡತಿ ಹೇಮಾ ಹಾಗೂ ಅಕ್ಕನ ಮಗಳು ತನ್ವಿಯವರನ್ನು ತನ್ನ ಕಾರು ನಂಬ್ರ KA-25-M-4553 ನೇದರಲ್ಲಿ ಕುಳ್ಳಿರಿಸಿಕೊಂಡು ಹಕ್ಲಾಡಿ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಬಂದು ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಯ ಬದಿಯಲ್ಲಿ ಬಿದ್ದಿದ್ದು ಡಿಕ್ಕಿ ಹೊಡೆದ ಕಾರು ರಸ್ತೆ ಬದಿಯ ಚರಂಡಿಗೆ ಬಿದ್ದಿರುತ್ತದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಲೆಯ ಭಾಗ, ಮೂಗಿನ ಭಾಗ ರಕ್ತಗಾಯವಾಗಿದ್ದು, ಕೈಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಹಾಗೂ ಕಾರಿನಲ್ಲಿದ್ದ ಸೀತಾ, ಹೇಮಾ ಹಾಗೂ ತನ್ವಿರವರು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಮಲ್ಪೆ : ಪಿರ್ಯಾದಿದಾರರಾದ ನಯನ (29),ಗಂಡ: ಅಶೋಕ ಅಮೀನ್,ವಾಸ: ಬಂಗೇರ ನಿಲಯ , ವಢಬಾಂಡೇಶ್ವರ ಬೀಚ್ ಮಲ್ಪೆ ಕೊಡವೂರು ಗ್ರಾಮ ಇವರ ಅಕ್ಕ ನವಿತಾ ಸುಮಾರು 10 ವರ್ಷಗಳ ಹಿಂದೆ ಸತೀಶ ಎಂಬುವವನನ್ನು ಮದುವೆ ಆಗಿದ್ದು ,ಸಾಂಸಾರಿಕ ಭಿನ್ನಾಭಿಪ್ರಾಯದಿಂದ ಪಿರ್ಯಾದಿದಾರರ ಅಕ್ಕ ತಾಯಿ ಮನೆ ಯಲ್ಲಿ ಇದ್ದು ಅಕ್ಕನ ಗಂಡ ಸತೀಶನು ಯಾವಾಗಲೂ ಶರಾಬು ಕುಡಿದು ಬಂದು ಅಕ್ಕನಿಗೆ ತೊಂದರೆ ನೀಡುತ್ತಿದ್ದು , ದಿನಾಂಕ 04/11/2021 ರಂದು ರಾತ್ರಿ 11:30 ಗಂಟೆ ಸಮಯಕ್ಕೆ ಸತೀಶನು ಶರಾಬು ಕುಡಿದು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಅಕ್ಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿದ್ದು,ಆ ಸಮಯ ತಡೆಯಲು ಬಂದ ಪಿರ್ಯಾದಿದಾರರಿಗೆ ಆರೋಪಿತನು ಹೊಡೆದಿದ್ದು , ಅಲ್ಲದೆ ಪಿರ್ಯಾದಿದಾರರ ತಾಯಿಯನ್ನು ದೂಡಿದ್ದು , ಮನೆಯ ಬಾಗಿಲಿಗೆ ಕಲ್ಲಿನಿಂದ ಹೊಡೆದು ಗೋಡೆಯ ಟೈಲ್ಸ್ ಜಖಂ ಮಾಡಿದ್ದು ಅಲ್ಲದೆ ಪಿರ್ಯಾದಿದಾರರ ಅಕ್ಕನಿಗೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 121/2021 ಕಲಂ :448,504,323,506,427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 05-11-2021 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080