ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಶೈಲೇಶ ಶೆಟ್ಟಿ (38),  ತಂದೆ : ದಿ. ಜಯರಾಮ ಶೆಟ್ಟಿ, ವಾಸ : ಕೊಡಮಜಲು ಮನೆ, ಬಳಕುಂಜೆ ಅಂಚೆ,  ಮಂಗಳೂರು ದ.ಕ. ಜಿಲ್ಲೆ ಇವರು ನವಯುಗ ಟೋಲ್‌‌ವೇ ಪ್ರೈವೇಟ್ ಲಿಮಿಟೆಡ್‌ ಕಂಪನಿಯಲ್ಲಿ ಸೇಫ್ಟಿ ಆಫಿಸರ್‌ ಆಗಿದ್ದು,  ದಿನಾಂಕ 04/10/2022 ರಂದು ಅವರ ಕಂಪನಿಯ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ರಾತ್ರಿ 11:15 ಗಂಟೆಗೆ ಪಾಂಗಾಳ ಜಂಕ್ಷನ್ ತಲುಪುತ್ತಿದ್ದಂತೆ, ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಕಡೆಯಿಂದ ಬದ್ರುದ್ದೀನ್ ಎಂಬುವವರು ತನ್ನ KA-20-AA-6477 ನೇ ಅಶೋಕ್ ಲೇಲ್ಯಾಂಡ್‌ಲಾರಿಯನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಾಂಗಾಳ ಜಂಕ್ಷನ್‌ನ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ನವಯುಗ ಕಂಪನಿಯವರು ಡಿವೈಡರ್‌ಗೆ ಅಳವಡಿಸಿದ Solar Blinker, Metal Beam crash barrier, Red Reflector ಜಖಂ ಗೊಂಡಿದ್ದು, ಅದರಿಂದ ನವಯುಗ ಕಂಪನಿಯವರಿಗೆ 1,21,591/- ರೂಪಾಯಿ ನಷ್ಟ ಉಂಟಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 110/2022 ಕಲಂ: 279, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬೈಂದೂರು: ಪಿರ್ಯಾದಿದಾರರಾದ ಸಂಜೀವ ಮರಾಠಿ (41), ತಂದೆ: ನಾರಾಯಣ ಮರಾಠಿ, ವಾಸ: ಹುಲ್ಕುಡಿಕೆ , ಜತ್ನಾಡಿ ಯಳಜಿತ್ ಗ್ರಾಮ ಬೈಂದೂರು ತಾಲೂಕು ಇವರ ಅಕ್ಕ ಗಿರಿಜ @ ವಸಂತಿ ರವರಿಗೆ ಜ್ವರವಿದ್ದ ಕಾರಣ ನಾಗೂರು ಕಾರಂತ ಕ್ಲೀನಿಕ್ ಗೆ ಹೋಗಲು ಅವರ ಗಂಡ ದೇವಪ್ಪ ರವರ KA-20-EJ-6466 ನೇ ಸ್ಕೂಟಿಯಲ್ಲಿ ಹೊರಟಿದ್ದು, ಪಿರ್ಯಾದಿದಾರರು ಅವರೊಂದಿಗೆ ಅವರ ಮೋಟಾರು ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಮದ್ಯಾಹ್ನ 1:18 ಗಂಟೆಗೆ ನಾಗೂರು  ಮಸೀದಿ ಬಳಿ ತಲುಪಿದಾಗ KA-21-N- 2284 ನೇ ಕಾರು ಚಾಲಕ ರವೀಂದ್ರ ದೇವಾಡಿಗ ಕಾರನ್ನು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ದೇವಪ್ಪ ರವರು ಚಲಾಯಿಸಿಕೊಂಡಿದ್ದ ಮೋಟಾರು ಸೈಕಲ್ ಗೆ ಕಾರಿನ ಎಡಭಾಗ ಗುದ್ದಿದ ಪರಿಣಾಮ ಮೋಟಾರು ಸೈಕಲ್ ದೇವಪ್ಪ ರವರ ನಿಯಂತ್ರಣ ತಪ್ಪಿ ಮೋಟಾರು ಸೈಕಲ್  ಸಮೇತ ದೇವಪ್ಪ ಹಾಗೂ ಅವರ ಹೆಂಡತಿ ಗಿರಿಜಾ ರವರು ರಸ್ತೆಗೆ ಬಿದ್ದ ಪರಿಣಾಮ ಗಿರಿಜಾ @ ವಸಂತಿ ರವರಿಗೆ ತಲೆಗೆ ಹಾಗೂ ಬೆನ್ನು ಮೂಳೆಗೆ ಒಳ ಜಖಂ ಉಂಟಾಗಿದ್ದು, ದೇವಪ್ಪ ರವರಿಗೆ ಬಲಬುಜಕ್ಕೆ, ಹಣೆಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು ಪಿರ್ಯಾದಿದಾರರು ಒಂದು ವಾಹನದಲ್ಲಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆಯನ್ನು  ಕೊಡಿಸಿ ನಂತರ  ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಜಿಲ್ಲಾ  ಆಸ್ಪತ್ರೆ ಉಡುಪಿಗೆ ಕರೆದುಕೊಂಡು ಹೋಗಿ ಗಾಯಾಳುಗಳನ್ನು ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 199/2022 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಸಮೀವುಲ್ಲಾ ಶಶೀಫ್  ಎ.ಆರ್ (62), ತಂದೆ: ಅಬ್ದುಲ್ ರೆಹಮನ್  ಶರೀಫ್, ವಾಸ:29/29 2ನೇ ಸ್ಟೇಜ್ ರಾಜೀವ್  ನಗರ  ಮೈಸೂರು ಇವರು ತಮ್ಮ ಮನೆಯವರೊಂದಿಗೆ ಮತ್ತು ಸಂಬಂಧಿಕರೊಂದಿಗೆ ಪ್ರವಾಸ ಹೊರಟು ಕಾಸರಗೋಡು ಮಂಗಳೂರು ತೆರಳಿ  ದಿನಾಂಕ 04/10/2022 ರಂದು ಸಂಜೆ 04 :00 ಗಂಟೆಗೆ ಮಲ್ಪೆ ಬೀಚಿಗೆ ಬಂದು ಸಂಜೆ  04:15  ಗಂಟೆಗೆ ಕುಟುಂಬದವರೆಲ್ಲರೂ ಸಮುದ್ರದ ನೀರಿನಲ್ಲಿ ಆಟ ಆಡುತ್ತಿರುವಾಗ ಪಿರ್ಯಾದಿದಾರರ ಮಗ ಅಬ್ರಾರ್ ಅಹಮ್ಮದ್ ಶರೀಫ್ (28) ರವರು ಸಮುದ್ರದ  ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೊಗಿದ್ದು  ಅವರನ್ನು ರಕ್ಷಿಸಲು ಹೋದಾಗ ಪಿರ್ಯಾದಿದಾರರ ಮಗ ನೀರಿನಲ್ಲಿ  ಮುಳುಗಿ ಕಾಣೆಯಾಗಿದ್ದು, ಸಂಜೆ 04:50 ರ ಸಮಯಕ್ಕೆ ಅಲೆಗಳೊಂದಿಗೆ ದಡಕ್ಕೆ ಬಂದವರನ್ನು ಉಪಚರಿಸಿ ಸ್ಥಳಿಯರ ಸಹಾಯದಿಂದ  ಅಬ್ರಾರ್ ಅಹಮ್ಮದ್ ಶರೀಫ್ (28) ರವರನ್ನು ಒಂದು ಆಬ್ಯುಲೆನ್ಸ್ ನಲ್ಲಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಅಲ್ಲಿ ಪರೀಕ್ಷಿಸಿದ ವೈದ್ಯರು ಅಬ್ರಾರ್ ಅಹಮ್ಮದ್ ಶರೀಫ್ ರವರು ಈಗಾಗಲೆ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 54/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ. ಸರೋಜಾ  ನಾಯ್ಕ (36), ಗಂಡ: ಗಣೇಶ  ನಾಯ್ಕ, ವಾಸ: ಸ್ಕಂದ ಕೃಪಾ  ಕೊಳ್ಳಾಲಿ  ಯಡಮೊಗ್ಗೆ  ಗ್ರಾಮ ಕುಂದಾಪುರ  ತಾಲೂಕು ಇವರ ಮನೆಯವರಿಗೂ ಆರೋಪಿಗಳಾದ 1.ರಾಘವೇಂದ್ರ    ಶೆಟ್ಟಿ  , 2.ಶ್ರೀಮತಿ. ಕಲಾವತಿ  ಯಡಮೊಗ್ಗೆ ಗ್ರಾಮ ಕುಂದಾಪುರ  ತಾಲೂಕು ಇವರಿಗೂ ಕುಂದಾಪುರ ತಾಲೂಕಿನ ಯಡಮೊಗ್ಗೆ  ಗ್ರಾಮದ ಕೊಳಾಳ್ಳಿ ಎಂಬಲ್ಲಿ ಜಾಗದ  ತಕರಾರು ಇದ್ದು ಇದೇ  ವಿಷಯದಲ್ಲಿ  ಆರೋಪಿಗಳು  ದಿನಾಂಕ 04/10/2022 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರು ಅವರ  ವಾಸದ ಮನೆಯ ಬಳಿ ರಾಶಿ ಹಾಕಿ ಇಟ್ಟಿದ  ಕೋಳಿ  ಗೊಬ್ಬರವನ್ನು  ಮುಚ್ಚುತ್ತಿರುವಾಗ  ಆರೋಪಿಗಳು ಜಾಗಕ್ಕೆ  ಅಕ್ರಮ ಪ್ರವೇಶ  ಮಾಡಿ ಅದರಲ್ಲಿ ಆರೋಪಿತೆ ಶ್ರೀಮತಿ ಕಲಾವತಿ ಇವರು  ಕೈಹಿಡಿದು  ಎಳೆದಿರುತ್ತಾರೆ, ಈ  ಸಮಯ ಅರೋಪಿ ರಾಘವೇಂದ್ರ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿ ಹಲ್ಲೆ ಮಾಡಿರುತ್ತಾರೆ. ಆರೋಪಿಗಳು ಹಲ್ಲೆ ಮಾಡಿದ  ಪರಿಣಾಮ ಅವರ  ಎರಡು   ಕೈಗಳಿಗೆ ಗೀರಿದ ಗಾಯವಾಗಿದ್ದು,  ಸೊಂಟಕ್ಕೆ  ಗುದ್ದಿದ   ನೋವು   ಆಗಿರುತ್ತದೆ. ಚಿಕಿತ್ಸೆಯ  ಬಗ್ಗೆ  ಕುಂದಾಪುರ ನ್ಯೂ ಮೆಡಿಕಲ್  ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 105/2022 ಕಲಂ: 447 504 506 ,323 354(b)  ಜೊತೆಗೆ 34 ಐಪಿಸಿ,  ಕಲಂ.3(1)(r),(S),(w-1) 3(2)(v-a)SC AND THE ST (PREVENTION OF ATTROCITIES) ACT, 1989 ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 05-10-2022 05:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080