ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 •  ಕೋಟ: ಪಿರ್ಯಾದಿದಾರರಾದ ವಿಜಯ (30), ತಂದೆ: ಬಾಬುರಾಯ ಗಾಣಿಗ, ವಾಸ: ನೀರು ಜಡ್ಡು  ಹೆಗ್ಗುಂಜೆ ಗ್ರಾಮ  ಮಂದರ್ತಿ ಅಂಚೆ ಬ್ರಹ್ಮಾವರ ತಾಲೂಕು ಇವರು  ದಿನಾಂಕ  03/10/2022  ರಂದು ಸಂಜೆ ತನ್ನ ಬೈಕಿನಲ್ಲಿ ನೀರ್ ಜಡ್ಡಿವಿನಿಂದ ಜಾನುವಾರುಕಟ್ಟೆಗೆ  ಹೊರಟಿದ್ದು ಸಂಜೆ 07:00 ಗಂಟೆಗೆ  ಪಿರ್ಯಾದಿದಾರರ ಎದುರಿನಿಂದ KA-20-EV-0799 ಪಲ್ಸರ್ ಮೋಟಾರ್ ಸೈಕಲ್  ಸವಾರ ಸಹ ಸವಾರನನ್ನು ಕುಳ್ಳಿರಿಸಿಕೊಂಡು  ತನ್ನ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದಿದ್ದು  ಬೈಕ್ ಸವಾರನಿಗೆ ಬಲ ಬದಿ ಹಾಗೂ ಎಡ ಬದಿಯ ಕಾಲು ಗಂಟಿಗೆ ಒಳ ಜಖಂ ಗೊಂಡಿದ್ದು  ಬಲ ಕೈ ಮೊಣಗಂಟು  ರಕ್ತಗಾಯವಾಗಿರುತ್ತದೆ. ಸಹ ಸವಾರನಿಗೆ ತಲೆಗೆ ತೀವೃ ತರಹದ  ಗಾಯವಾಗಿದ್ದು ಮಾತನಾಡುತ್ತಿರಲಿಲ್ಲ.  ಬೈಕ್ ಸವಾರನ ಹೆಸರು ರಮೇಶ ಎಂಬುವುದಾಗಿಯೂ ಸಹ ಸವಾರ ಶಶಿಧರ ಎಂಬುದಾಗಿ ನಂತರ ತಿಳಿಯಿತು. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 164/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಮೊಹಮ್ಮದ್ ಸುಲ್ತಾನ್ (29), ತಂದೆ  ದಿ. ಆಸಿಫ್ ಇಕ್ಬಾಲ್ , ವಾಸ: ಮಹಾಲಿಂಗೇಶ್ವರ ದೇಔಸ್ಥಾನದ ಬಳಿ , ಮಿಯಾರು ಗ್ರಾಮ, ಕಾರ್ಕಳ ತಾಲೂಕು ಇವರು  ದಿನಾಂಕ 03/10/2022  ರಂದು ತನ್ನ ಸ್ಕೂಟಿ KA-20-EJ-7359 ರಲ್ಲಿ ಹೆಂಡತಿ ಶೇಕ್ ಶಗುಪ್ತ ಬಾನು ಮತ್ತು ಇಬ್ಬರು ಮಕ್ಕಳೊಂದಿಗೆ ದಾನಶಾಲೆ ಕಡೆಯಿಂದ ಅನಂತಶಯನ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಂಜೆ 7:30 ಗಂಟೆಗೆ ಕಾರ್ಕಳ ಕಸಬಾ ಗ್ರಾಮದ ಹನುಮಾನ್ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ ಮಗುವಿನ ಕ್ಯಾಪ್ ಹಾರಿ ಹೋಗಿದ್ದು ಕ್ಯಾಪ್ ಹೆಕ್ಕಲು ಸ್ಕೂಟಿಯನ್ನು ಎಡಬದಿಯಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದು, ಆ ಸಮಯ ದಾನಶಾಲೆ ಕಡೆಯಿಂದ ಅನಂತಶಯನ ಕಡೆಗೆ ಕಾರು KA-20-P-3895 ನೇದನ್ನು  ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಸ್ಕೂಟಿ ಸಮೇತ ಎಲ್ಲರೂ  ರಸ್ತೆಗೆ ಬಿದ್ದ ಪರಿಣಾಮ ಮಗಳು  ಸಿದ್ದಿಕಾ ಸುಲ್ತಾನ (5 ) ರವರಿಗೆ ತಲೆಯ ಎಡಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 130/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ  ವನಜ (50), ಗಂಡ:  ವಿನೋದ್ , ವಾಸ: ವಲಿಯ ಮುತ್ತೋಟ್ ಕೂಯಿಲಾಂಡಿ  ಉಳ್ಳೂರು  ತಾಲೂಕು  ಕುನ್ನಂತ್ತೂರು  ಅಂಚೆ  ಕೊಯಿಕೊಡ್ ( ಕ್ಯಾಲಿಕಟ್)  ಜಿಲ್ಲೆ ಕೇರಳ ರಾಜ್ಯ ಇವರು  ಗಂಡ  ವಿನೋದ್ (54)  ರವರೊಂದಿಗೆ  ನವರಾತ್ರಿ  ಹಿನ್ನಲೆಯಲ್ಲಿ  ದಿನಾಂಕ 13/10/2022 ರಂದು  ಕೇರಳ ರಜ್ಯ ದಿಂದ ಕೊಲ್ಲೂರಿಗೆ  ಬಂದು  ಕೊಲ್ಲೂರು ಗ್ರಾಮದ  ಶ್ವೇತಾ ವಸತಿ ಗೃಹ ಕೊಠಡಿ ಸಂಖ್ಯೆ  130 ರಲ್ಲಿ  ಉಳಿದುಕೊಂಡಿದ್ದು  ದಿನಾಂಕ  04/10/2022  ರಂದು ಬೆಳಿಗ್ಗೆ 11-00 ಗಂಟೆಗೆ  ಕೊಲ್ಲೂರು ಶ್ರೀ ಮೂಕಾಂಬಿಕಾ  ದೇವಸ್ಥಾನದ ಒಳಗಡೆ ಹೊರಂಗಣದಲ್ಲಿ  ರಥೋತ್ಸವದ ಕಾರಣ  ದೇವರ ಕಾರ್ಯಕ್ರಮ  ನಡೆಯುತ್ತಿದ್ದಾಗ  ಮದ್ಯಾಹ್ನ  1-30 ಗಂಟೆಗೆ  ವಿನೋದ್  ರವರು   ಅಸ್ವಸ್ಥಗೊಂಡು  ಕುಸಿದು  ಬಿದ್ದವರನ್ನು  ಅಂಬ್ಯುಲೆನ್ಸ್ ನಲ್ಲಿ  ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ  ಕರೆದುಕೊಂಡು ಬಂದಾಗ  ಅಲ್ಲಿನ  ವೈದ್ಯರು ಪರೀಕ್ಷಿಸಿ   ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದಾಗಿ ಸೂಚಿಸಿದಂತೆ  ಕುಂದಾಫುರ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು  ಬಂದಾಗ  ಮದ್ಯಾಹ್ನ  2:45 ಗಂಟೆಗೆ ವೈದ್ಯರು  ಪರೀಕ್ಷಿಸಿ ಚಿಕಿತ್ಸೆಗೆ  ಕರೆ ತರುವ ದಾರಿಯಲ್ಲಿ  ಮೃತ ಪಟ್ಟಿರುತ್ತಾರೆ ಎಂದು ದೃಡೀಕರಿಸಿರುತ್ತಾರೆ.  ಮೃತ ವಿನೋದ್ ರವರು ಹಲವು ವರ್ಷಗಳಿಂದ ರಕ್ತದೊತ್ತಡ  ಮತ್ತು  ಶುಗರ್ ಖಾಯಲೆಯಿಂದ ಬಳಲುತಿದ್ದವರು  ಮಾತ್ರೆಗಳನ್ನು  ಸರಿಯಾಗಿ  ಸೇವಿಸದೇ  ಅದೇ ಕಾರಣದ   ಅನಾರೋಗ್ಯದಿಂದ ಅಥವಾ ಹೃದಯ  ಸಂಬಂಧಿ ತೊಂದರಗಳಿಂದ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 13/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಕುಟ್ಟಿ (70), ತಂದೆ: ದಿ. ಗುರುವ ,ವಾಸ: ಮಂಜಲ್ತಾರ ದರ್ಖಾಸು ಮಾಳ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಮಗ ಸಂದೀಪ್ ಕೆಲಸ ಮಾಡುವ ಕಾರ್ಕಳ ತಾಲೂಕು ಬಜಗೊಳಿಯ ಲಕ್ಷ್ಮಿ ವೈನ್ಸ್ ಎಂಬಲ್ಲಿಗೆ ದಿನಾಂಕ  04/10/2022 ರಂದು 10:30 ಗಂಟೆಗೆ ಹೋಗಿದ್ದು ಅಲ್ಲಿ ಪಿರ್ಯಾದಿದಾರರ ಮಗ ಹಾಜರಿರುವುದಿಲ್ಲ, ಆದರೆ ಅಲ್ಲಿ ಶರಾಬು ಕುಡಿಯಲು ಪಿರ್ಯಾದಿದಾರರ ಅಳಿಯ ಆನಂದರವರು ಬಂದಿದ್ದು, ಪಿರ್ಯಾದಿದಾರರಿಗೂ ಹಾಗೂ ಅಳಿಯ ಆನಂದರವರಿಗೂ ನಡುವೆ ಈ ಮೊದಲೆ ಜಗಳವಾಗಿದ್ದು ದಿನಾಂಕ 04/10/2022 ರಂದು ಇಬ್ಬರ ನಡುವೆ ಮಾತಿಗೆ ಮಾತು  ಬೆಳೆದು ಜಗಳವಾಗಿ ಪಿರ್ಯಾದುದಾರರ ಅಳಿಯ ಆನಂದರವರು ಅಲ್ಲೆ ಇದ್ದ ಪ್ಲಾಸ್ಟಿಕ್ ಕುರ್ಚಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದ್ದಿದ್ದರಿಂದ ಪಿರ್ಯಾದಿದಾರರ ತಲೆಗೆ ರಕ್ತಗಾಯವಾಗಿರುತ್ತದೆ. ಆಗ ಅಲ್ಲೆ ಇದ್ದ ಲಕ್ಷ್ಮಿ ವೈನ್ಸ್ ನ ಮ್ಯಾನೆಜರ್ ಹಾಗೂ ಇತರರು ಜಗಳ ಬಿಡಿಸಿದ್ದು ನಂತರ ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 123/2022 ಕಲಂ : 324  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ವಿಜೇಶ್ ಆರ್ ಕೋಟ್ಯಾನ್ (28), ತಂದೆ: ರತ್ನಾಕರ ಸಿ ಕೋಟ್ಯಾನ್, ವಾಸ: ಹೇಮ ನಿವಾಸ, ನಡಿಪಟ್ಣ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಪಡುಬಿದ್ರಿ ಬೀಚ್ ನಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸೂಪರ್‌‌ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 03/10/2022 ರಂದು 19:00 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಬೀಚ್‌‌ ಸ್ಟೇಜ್ ಬಳಿ ನಿಂತಿರುವಾಗ, ಅವರ ಪರಿಚಯದ ನಡಿಪಟ್ಣದ 1.ಕಿರಣ್‌‌‌ರಾಜ್, 2.ಎರ್ಮಾಳಿನ ನೀತೇಶ್ ಮತ್ತು 3. ಸುಮನ್ ಎಂಬುವವರು 2 ಸ್ಕೂಟಿಗಳಲ್ಲಿ ಬಂದು, 1 ನೇ ಆಪಾದಿತ ಕಿರಣ್‌‌‌ರಾಜ್‌‌ನು ಪಿರ್ಯಾದಿದಾರರ ಬಳಿ ಬಂದು ಪಿರ್ಯಾದಿದಾರರು ಸುಕೇಶನ ಜೊತೆ ಕೆಲಸ ಮಾಡುವ ಬಗ್ಗೆ ಮಾತನಾಡುತ್ತಾ, ಪಿರ್ಯಾದಿದಾರರನ್ನು ನೆಲಕ್ಕೆ ದೂಡಿ ಬೀಳಿಸಿ ಪಿರ್ಯಾದಿದಾರರ ಭುಜ, ಹೊಟ್ಟೆ, ತೊಡೆಗೆ ಕಾಲಿನಿಂದ ತುಳಿದು, ನಂತರ ಅಲ್ಲಿಯೇ ಸಮೀಪದಲ್ಲಿದ್ದ ಒಂದು ತೆಂಗಿನ ಮಡಲಿನಿಂದ(ಕೊತ್ತಳಿಗೆ) ಪಿರ್ಯಾದಿದಾರರ ಬೆನ್ನು, ಕಾಲು, ಮೈಕೈಗೆ ಹೊಡೆದಿದ್ದು, ಈ ಸಮಯ ಬೀಚ್‌‌ ಲೈಫ್ ಗಾರ್ಡ್‌ ಕೆಲಸ ಮಾಡಿಕೊಂಡಿರುವ ಅಕ್ಷಯ ಕೋಟ್ಯಾನ್ ರವರು ಗಲಾಟೆ ಬಿಡಿಸಲು ಬಂದಾಗ 2 ಮತ್ತು 3 ನೇ ಆಪಾದಿತರು ಸೇರಿ ಅಕ್ಷಯ್ ಕೋಟ್ಯಾನ್ ನಿಗೆ ಬೈದಿದ್ದು, ಕಿರಣ್‌‌ರಾಜ್‌ನು ನಿಮ್ಮಿಬ್ಬರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ.  ಹಲ್ಲೆಯಿಂದಾದ ನೋವಿಗೆ ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದು,ಹೆಚ್ಚು ನೋವು ಕಾಣಿಸಿಕೊಂಡಿದ್ದರಿಂದ   ಪುನಃ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 123/2022 ಕಲಂ:  504, 506, 323, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 05-10-2022 10:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080