ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ :  ದಿನಾಂಕ 04/10/2021 ರಂದು ರಾತ್ರಿ 11:15 ಗಂಟೆಗೆ ಪಿರ್ಯಾದಿದಾರರಾದ ಇಮ್ತಿಯಾಜ್ (34), ತಂದೆ: ಬಾಷಾ ಸಾಹೇಬ್, ವಾಸ: ಮನೆ ನಂಭ್ರ 1-190, ಹೊನ್ನಾಳ, ಹಾರಾಡಿ ಗ್ರಾಮ, ಬ್ರಹ್ಮಾವರ ಇವರ ಬಾವ ನಾಗೂರು ಅಬ್ದುಲ್ ಹಮೀದ್ ಎಂಬುವವರು ಮಲ್ಪೆ ಕಡೆಯಿಂದ ಸಂತೆಕಟ್ಟೆ ಕಡೆಗೆ ಮಲ್ಪೆ ಆಶೀರ್ವಾದ ಜಂಕ್ಷನ್ ರಸ್ತೆಯಲ್ಲಿ ತನ್ನ ಸ್ಕೂಟರ್ ನಂಬ್ರ KA-20-EL-7224 ನೇದರಲ್ಲಿ ಬರುತ್ತಿರುವಾಗ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಬಳಿ ಎದುರಿನಿಂದ ಸಂತೆಕಟ್ಟೆ ಆಶೀರ್ವಾದ ಜಂಕ್ಷನ್ ಕಡೆಯಿಂದ KA-19-AC-1729  ಟೆಂಪೋ ಚಾಲಕ ಶಿವಪ್ರಸಾದ್ ತನ್ನ ಟೆಂಪೊವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ನಾಗೂರು ಅಬ್ದುಲ್ ಹಮೀದ್ ವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಬಲಕೈಗೆ ಮೂಳೆಮುರಿತ ಉಂಟಾಗಿದ್ದು, ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮನುಷ್ಯ ಕಾಣೆ

  • ಮಲ್ಪೆ: ಪಿರ್ಯಾದಿ ನಿತೇಶ ಶೆಟ್ಟಿ ತಂದೆ: ದಿ/ ನಾಗರಾಜ ಶೆಟ್ಟಿ ವಾಸ: ಮೂಡುಬೆಟ್ಟು ಕೊಡವೂರು ಗ್ರಾಮ ಇವರ  ಅಣ್ಣ  ನವೀನ್  ಶೆಟ್ಟಿ ,ಪ್ರಾಯ: 36 ವರ್ಷ ಇವರು  ಈ ಹಿಂದೆ  ಮಣಿಪಾಲ  ಪ್ರೆಸ್ ನಲ್ಲಿ ಕೆಲಸದಲ್ಲಿದ್ದು ,ಶರಾಬು ಕುಡಿಯುವ ಚಟವಿದ್ದು ,ಪ್ರಸ್ತುತ ಕೆಲಸವಿಲ್ಲದೆ  ಮನೆಯಲ್ಲಿಯೆ  ಇದ್ದರು .  ಆತನ ಕೈಯಲ್ಲಿ ಹಣವಿದ್ದಾಗ  ಹೊರಗೆ ಹೋಗಿ ಶರಾಬು ಕುಡಿದು ಮನೆಗೆ ಬರುತ್ತಿದ್ದನು,  ದಿನಾಂಕ : 16-09-2021 ರಂದು  12 :00 ಗಂಟೆಗೆ ಮನೆಯಿಂದ ಹೊರಗೆ ಹೋದವನು ಮನೆಗೆ ಬಂದಿರುವುದಿಲ್ಲ, ಆತನ ಕೈಯಲ್ಲಿ  ಮೊಬೈಲ್ ಪೋನ್ ಇಲ್ಲದೆ ಇದ್ದು ,ಆತನನ್ನುಸಂಬಂಧಿಕರು, ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಈ ಬಗ್ಗೆ ಪಿರ್ಯಾದಿ ದಾರರು ನೀಡಿದ ದೂರಿನಂತೆ  ಮಲ್ಪೆ ಠಾಣಾ ಅಪರಾಧ ಕ್ರಮಾಂಕ 112 /2021  ಕಲಂ ಮನುಷ್ಯಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 05-10-2021 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ