ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ರಿಯಾಜ್ ಅಹಮ್ಮದ್ ಇವರು ದಿನಾಂಕ 05/09/2022 ರಂದು ಬೆಳಗ್ಗೆ ತರಕಾರಿ ವ್ಯಾಪಾರ ಮಾಡುವರೇ ಆದಿ ಉಡುಪಿಗೆ ಹೋಗುವರೇ ತನ್ನ ಬಾಬ್ತು ಕಾರು ನಂಬ್ರ KA20MA8134 ನೇ ಕಾರನ್ನು ತೆಗೆದು ಮನೆಯ ಎದುರುಗಡೆ ನಿಲ್ಲಿಸಿ ಮನೆಯ ಗೇಟು ಹಾಕುವರೇ ಹೋದಾಗ ಸಮಯ ಸುಮಾರು ಬೆಳಗ್ಗಿನ ಜಾವ 04:00 ಗಂಟೆಗೆ ಕರಾವಳಿ ಕಡೆಯಿಂದ ಉಡುಪಿ ಮಣಿಪಾಲ ಕಡೆಗೆ ರಾಹೆ 169A ನೇ ಸಾರ್ವಜನಿಕ ಕಾಂಕ್ರಿಟ್ ರಸ್ತೆಯಲ್ಲಿ KA19Z6674 ನೇ ಕಾರಿನ ಚಾಲಕ ಶಿವಪ್ರಸಾದ್‌ನು ಕಾರಿನಲ್ಲಿ ಮಣಿಕಂಠ, ಚರಣ್‌, ಪ್ರಶಾಂತ್ ಮತ್ತು ಶಾಲಿನಯವರನ್ನು ಕುಳ್ಳಿರಿಸಿಕೊಂಡು ತಾನು ಚಾಲಾಯಿಸುತ್ತಿದ್ದ ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದಿದಾರರ ಕಾರು ಸಂಪೂರ್ಣ ಜಖಂ ಆಗಿರುತ್ತದೆ. ಅಲ್ಲದೇ ಅಫಘಾತಪಡಿಸಿದ ಕಾರು ಕೂಡಾ ಜಖಂ ಆಗಿರುತ್ತದೆ. ಅಲ್ಲದೇ ಕಾರಿನ ಚಾಲಕ ಆರೋಪಿ ಶಿವಪ್ರಸಾದ್ ಈತನ ಎಡಕಾಲಿನ ತೊಡೆಯ ಬಳಿ ಮೂಳೆ ಮುರಿತದ ಜಖಂ ಆಗಿರುತ್ತದೆ. ಮಣಿಕಂಠ ಈತನ ಮೈಕೈಗೆ ಗುದ್ದಿದ ಜಖಂ ,  ಚರಣ್ ಈತನ ಮೈಕೈಗೆ ಗುದ್ದಿದ ಜಖಂ , ಪ್ರಶಾಂತ್ ಈತನ ಕಣ್ಣಿನ ಬಳಿ ರಕ್ತಗಾಯ ಆಗಿರುತ್ತದೆ. ಮತ್ತು ಶಾಲಿನಿ ಈಕೆಯ ಹಣೆಗೆ ಮುಖಕ್ಕೆ ತರಚಿದ ರಕ್ತಗಾಯ ಹಾಗೂ ಬಲಕಾಲಿನ ಪಾದದ ಬಳಿ ಜಖಂ ಆಗಿರುತ್ತದೆ. ಗಾಯಾಳು ಮಣಿಕಂಠ, ಚರಣ್, ಆರೋಪಿ ಶಿವಪ್ರಸಾದ್ ಮತ್ತು ಶಾಲಿನಿ ರವರು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಅಲ್ಲದೇ ಗಾಯಾಳು ಪ್ರಶಾಂತ್ ಈತನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವನ್‌ಲಾಕ್ ಸರಕಾರಿ ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ. ಈ ಅಪಘಾತಕ್ಕೆ KA19Z6674 ನೇ ಕಾರಿನ ಚಾಲಕ ಶಿವಪ್ರಸಾದ್ ರವರ ದುಡುಕುತನ ಮತ್ತು ನಿರ್ಲಕ್ಷ್ಯತನ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 65/2022 ಕಲಂ: 279, 337,338 ಐ,ಪಿ,ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ ‌

  • ಕಾರ್ಕಳ : ಕಾರ್ಕಳ ತಾಲೂಕು ನಿಟ್ಟೆಗ್ರಾಮದ ಕಲ್ಲಂಬಾಡಿ ಪದವು ಸಮೃದ್ದಿ ಮನೆಯಲ್ಲಿ  ವಾಸವಾಗಿರುವ ಪಿರ್ಯಾದಿ ಶ್ರೇಯಸ್ ಶೆಟ್ಟಿ ಇವರ ತಂದೆ ಪ್ರಭಾಕರ ಶೆಟ್ಟಿ (54) ಅವರು ಸುಮಾರು ಒಂದು ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು,ಈ ಬಗ್ಗೆ ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಕಾಯಿಲೆಯು ಗುಣಮುಖವಾಗಿಲ್ಲವೆಂದು ಮಾನಸಿಕವಾಗಿ ಜೀವನದಲ್ಲಿ ನೊಂದು ದಿನಾಂಕ 04/09/2022 ರ ರಾತ್ರಿ 10:30 ಗಂಟೆಯಿಂದ ಈ ದಿನ 05/09/2022 ರ ಬೆಳಿಗ್ಗೆ 06:30 ಗಂಟೆ ಸಮಯದಲ್ಲಿ ಮನೆಯ ಹೊರಗಿನ ಶೀಟ್ ಔಟ್ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ಠಾಣೆ ಯು.ಡಿ.ಆರ್ 27/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ದಿನಾಂಕ: 04-09-2022 ರಂದು ರಾತ್ರಿ ಸುಮಾರು 10:45 ಗಂಟೆಗೆ KA 02 MM 927 ಹನುಮನಿಧಿ ಎಂಬ ಪರ್ಸಿನ್ ಬೋಟಿನಲ್ಲಿ ಪಿರ್ಯಾದಿ ಅಶೋಕ ಮೈಂದನ್ ಇವರು ಪುರಂದರ ಹಾಗೂ ಇತರರೊಂದಿಗೆ ಮಲ್ಪೆ ಬಂದರಿನಲ್ಲಿ ಮೀನು ಖಾಲಿ ಮಾಡುತ್ತಿರುವ ಸಮಯ ಪುರಂದರರವರು ಆಕಸ್ಮಿಕವಾಗಿ ಬೋಟಿನಿಂದ ಧಕ್ಕೆಯ ನೀರಿಗೆ ಬಿದ್ದವರನ್ನು ನೀರಿನಿಂದ ಮೇಲಕ್ಕೆ ತಂದು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಪುರಂದರ ರವರು ಈಗಾಗಲೆ ಮೃತಪಟ್ಟಿರುವುದಾಗಿ ರಾತ್ರಿ 11:15 ಗಂಟೆಗೆ ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ಠಾಣೆ ಯು.ಡಿ.ಆರ್ 49/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 05-09-2022 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080