ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಸುಧಾಕರ ಶೆಟ್ಟಿ (50), ತಂದೆ: ದಿ. ತೇಜಪ್ಪ ಶೆಟ್ಟಿ, ವಾಸ: ಗುಬ್ಯಾಡಿ ಅಂಪಾರು ಗ್ರಾಮ ಕುಂದಾಪುರ ತಾಲೂಕು ಇವರ ತಮ್ಮ ಪ್ರಭಾಕರ ಶಟ್ಟಿ (43) ರವರು ಬೆಂಗಳೂರಿನಲ್ಲಿ ಹೊಟೇಲ್ ಕೆಲಸ ಮಾಡಿಕೊಂಡು ಇದ್ದು ಗಣೇಶ ಚೌತಿ ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಹೋಗಿ ಬಂದಿದ್ದು ಮನೆಯಲ್ಲಿ ಯಾರೊಂದಿಗೂ ಮಾತನಾಡದೇ ಮೌನವಾಗಿದ್ದು ದಿನಾಂಕ 04/09/2022 ರಂದು ಬೆಳಿಗ್ಗೆ 11:00 ಗಂಟೆಗೆ ಕುಂದಾಪುರ ತಾಲೂಕು ಅಂಪಾರು ಗ್ರಾಮದ ಗುಬ್ಯಾಡಿ ಎಂಬಲ್ಲಿ ಮನೆಯ ಸಮೀಪದ ಸರಕಾರಿ ಬಾವಿಗೆ  ಹಾರಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾರೆ. ಮೃತರು ತನಗೆ ಇದ್ದು ಕಿಡ್ನಿ ಲಿವರ್ ಅನಾರೋಗ್ಯದಿಂದದಾಗಿ ಅತಿಯಾದ ಮದ್ಯ ಸೇವನೆಯಿಂದ ಮಾನಸಿಕ ಮನನೊಂದು ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯ ಸಮೀಪ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 30/2022  ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಫಿರ್ಯಾದಿದಾರರಾದ ಮಂಜುನಾಥ್ (24), ತಂದೆ: ದಿ ಅಚ್ಚುತ ಎಮ್,  ವಾಸ: ಸಮುದಾಯ ಅಸ್ಪತ್ರೆಯ ಹತ್ತಿರ ಮನೆ ಯಡ್ತರೆ ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ಅಚ್ಚುತ ಎಮ್  (59) ರವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ನಲ್ಲಿ ಜವಾನ (ಅಟೆಂಡರ್) ಆಗಿ  ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಬಲಗಣ್ಣು ಭಾಗಶಃ  ದೃಷ್ಟಿ ಇಲ್ಲದೇ ಇದ್ದು ಎಡಗಣ್ಣಲ್ಲಿ ಸ್ವಲ್ಪ ಮಟ್ಟಿಗೆ ದೃಷ್ಟಿ ಇದ್ದು  ದಿನಾಂಕ 04/09/2022  ರಂದು  ಬೆಳಿಗ್ಗೆ 11:00 ಗಂಟೆಯಿಂದ ಸಂಜೆ 18:30  ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಪಕ್ಕದ ಜಾಗದ  ಗುಡೆಮನೆ ನಾಗಪ್ಪ ಶೇರುಗಾರರ ಇವರ ಜಾಗದಲ್ಲಿ ಬಿದ್ದಿದ ತೆಂಗಿನಕಾಯಿಯನ್ನು ಹೆಕ್ಕಲು ಹೋಗಿ  ಆ ಜಾಗದಲ್ಲಿನ  ಪಾಳು ಬಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 50/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಚಂದ್ರಶೇಖರ (49), ತಂದೆ: ದಿ. ನಾತು, ವಾಸ: ಮನೆ ನಂಬ್ರ: 5-38, ಸೀಗೆಕಂಪೌಂಡ್‌, ಬಬ್ಬು ಸ್ವಾಮಿ ದೇವಸ್ಥಾನದ ಬಳಿ, ಸಂತೆಕಟ್ಟೆ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 04/09/2022 ರಂದು 17:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಬಬ್ಬು ಸ್ವಾಮಿ ದೇವಸ್ಥಾನದ ಬಳಿ ಸೀಗೆ ಕಂಪೌಂಡ್‌ ಎಂಬಲ್ಲಿ ಮನೆ ನಂಬ್ರ 5-38 ನೇ ತಮ್ಮ ವಾಸ್ತವ್ಯದ ಮನೆಯಲ್ಲಿ ಇರುವಾಗ ಆಪಾದಿತರಾದ ಪ್ರಸಾದ್‌ ಮತ್ತು ದಿನೇಶ್‌  ಬಂದಿದ್ದು, ಅವರಿಬ್ಬರಲ್ಲಿ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುವ ವಿಚಾರವಾಗಿ ಕೇಳಿದ್ದು, ಅದಕ್ಕೆ ಇಬ್ಬರೂ ಸೇರಿ  ಅವಾಚ್ಯ ಶಬ್ದಗಳಿಂದ ಬೈದು, ದಿನೇಶನು ಪಿರ್ಯಾದಿದಾರರ ಬಲಭುಜಕ್ಕೆ ಹಾಗೂ ಎದೆಗೆ ಗುದ್ದಿ ನೆಲಕ್ಕೆ ಬೀಳಿಸಿದ್ದು, ಪ್ರಸಾದನು ಅಲ್ಲಿಯೇ ಅಂಗಳದಲ್ಲಿದ್ದ ಮರದ ಸೊಂಟೆಯಿಂದ ಪಿರ್ಯಾದಿದಾರರ ಎರಡೂ ಕಾಲುಗಳಿಗೆ ಬಲವಾಗಿ ಹಲ್ಲೆ ಮಾಡಿ, ಎರಡೂ ಕಾಲುಗಳಿಗೆ ಮೂಳೆ ಮುರಿತದ ಗಾಯಗೊಳಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 138/2022 ಕಲಂ:  323, 326, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 05-09-2022 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080