ಅಭಿಪ್ರಾಯ / ಸಲಹೆಗಳು

ಅಪರಾಧ ಪ್ರಕರಣ:

  • ಮಲ್ಪೆ:  ಪಿರ್ಯಾದಿ ಸದಾನಂದ ಪ್ರಾಯ:45ವರ್ಷ, ತಂದೆ: ಕರಿಯ ಪೂಜಾರಿ, ವಾಸ: ಗರಡಿಮಜಲು, ತೆಂಕನಿಡಿಯೂರು ಉಡುಪಿ ಇವರು ದಿನಾಂಕ:03-09-2021 ರಂದು 10:30 ಗಂಟೆ ಸಮಯಕ್ಕೆ ಪಿರ್ಯಾದಿಯ ತಂಗಿ ಮನೆಯಿಂದ ಗರಡಿ ಮಜಲು ಮುಖ್ಯ ರಸ್ತೆಯಲ್ಲಿ ಇರುವ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಹೋಗಲು  ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ  ಸುಂದರಿ ಮನೆಯ ಎದುರು ರಸ್ತೆಯಲ್ಲಿ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕನು  ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ  ಪಿರ್ಯಾದಿಯ ಎಡ ಸೊಂಟದ ಬಳಿ, ಎಡಕಾಲು ಹಾಗೂ ಎಡಬದಿಯ ದೇಹವು ಒಳಜಖಂಗೊಂಡು ತೀವ್ರ ನೋವಾಗಿದ್ದು  ಪಿರ್ಯಾದಿದಾರರು ಬೊಬ್ಬೆ ಹೊಡೆಯುವುದನ್ನು ನೋಡಿದ ಸುಂದರಿ ಹಾಗೂ ಅವರ ಮನೆಯವರು ಅವರನ್ನು ಉಪಚರಿಸಿ ಪಿರ್ಯಾದಿಯ ತಂಗಿ  ಲಕ್ಷ್ಮೀ ಎಂಬವರಿಗೆ  ಪೋನ್ ಕರೆ ಮಾಡಿ ವಿಚಾರ ತಿಳಿಸಿದಂತೆ ಪಿರ್ಯಾದಿದಾರರ ತಂಗಿ ಅಪಘಾತ ಸ್ಥಳಕ್ಕೆ ಬಂದು  ಪಿರ್ಯಾದಿದಾರರನ್ನು ಉಪಚರಿಸಿ  ಚಿಕಿತ್ಸೆಯ ಬಗ್ಗೆ ಒಂದು ಆಟೋ ರಿಕ್ಷಾದಲ್ಲಿ ಉಡುಪಿಯ ಟಿಎಮ್‌ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದುಅಲ್ಲಿ ಚಿಕಿತ್ಸೆ ಕೊಡಿಸಿ  ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆಎಂಸಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. . ಪಿರ್ಯಾದಿಗೆ ಡಿಕ್ಕಿ ಹೊಡೆದ ಮಿನಿ ಟಿಪ್ಪರ್ ಲಾರಿ ನಂಬ್ರ  KA-20-AA-0689  ಆಗಿದ್ದು ಸದ್ರಿ  ಲಾರಿ ಚಾಲಕನ ಹೆಸರು  ಬಸವರಾಜ್ ಎಂದು ಪಿರ್ಯಾದಿದಾರರಿಗೆ ತಿಳಿದಿರುತ್ತದೆ. ಈ ಅಪಘಾತಕ್ಕೆ ಮಿನಿ ಟಿಪ್ಪರ್ ಲಾರಿ  KA-20-AA-0689  ನಂಬ್ರದ  ಲಾರಿ ಚಾಲಕ  ಬಸವರಾಜ್ ಅವರ  ನಿರ್ಲಕ್ಷತನ ಹಾಗೂ ಅಜಾಗರೂಕತೆ ಯೇ ಕಾರಣವಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 101/2021  ಕಲಂ 279, 338 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ ಪ್ರಕರಣಗಳು

  • ಶಂಕರ ನಾರಾಯಣ:   ಆರೋಪಿ ಕುಶಲ    ಶೆಟ್ಟಿ ಆರ್ಡಿ ಅಲ್ಬಾಡಿ  ಗ್ರಾಮ  ಹೆಬ್ರಿ ತಾಲೂಕು ಇವನು  ಹೆಬ್ರಿ ತಾಲೂಕಿನ  ಅಲ್ಬಾಡಿ ಗ್ರಾಮದ   ಆರ್ಡಿ  ಎಂಬಲ್ಲಿ  ಅವರ   ವಾಸದ  ಮನೆಯಲ್ಲಿ  ಆತನ ಹೊಂದಿರುವ   ಏರ್‌ ಗನ್‌‌ ನ್ನು  ಮನೆಯ  ಒಳಗಡೆಯ  ಜಗಲಿಯ ಮೇಲೆ  ನಿರ್ಲಕ್ಷತನದಿಂದ    ಇರಿಸಿದ್ದನ್ನು  ದಿನಾಂಕ   02.09.2021  ರಂದು   ಸುಮಾರು  15;00   ಗಂಟೆಗೆ   ಫಿರ್ಯಾದುದಾರರ  ಮಗಳು ಸುಮಾರು  6 -1/2  ವರ್ಷ ಪ್ರಾಯದ   ಪ್ರಸುತ್ತಿ   ಇವಳು  ಅದನ್ನು ತೆಗೆದು  ಬದಿಗೆ  ಇಡಲು  ಹೋದಾಗ  ಆಕಸ್ಮಾತ  ಆಗಿ  ಸದ್ರಿ ಏರಗನ್‌ನ   ಪೆಲೆಟ್  ಸಿಡಿದು  ಅಲ್ಲಿಯೇ   ಇದ್ದ    ಪ್ರಶು  ಪ್ರಾಯ  4 ವರ್ಷ  ಇವನ     ಹೊಟ್ಟೆಯ  ಬಳಿ   ತಾಗಿ  ರಕ್ತಗಾಯವುಂಟಾಗಿರುತ್ತದೆ. ಈ ಬಗ್ಗೆ ಪ್ರಜತ್  ಕುಮಾರ್   ಶೆಟ್ಟಿ    ಪ್ರಾಯ 45 ವರ್ಷ  ತಂದೆ,  ಶಂಭು  ಶೆಟ್ಟ  ವಾಸ  ಹಾಲು   ಡೈರಿಯ  ಬಳಿ ಆರ್ಡಿ  ಅಂಚೆ  ಇವರು ದೂರು ನೀಡಿದ್ದು ಶಂಕರ ನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 86/2021  ಕಲಂ: 336, , 337 ಐ.ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ  ನಿಶ್ಮಿತ್  ಆರ್ ಪೂಜಾರಿ (14)   ತಂದೆ ರಮೇಶ ಪೂಜಾರಿ ವಾಸ. ವಿನಯ ನಗರ  ಬೆಳಪು ಅಂಚೆ  ಮತ್ತು  ಗ್ರಾಮ  ಕಾಪು ತಾಲೂಕು  ಎಂಬವರು  ದಿನಾಂಕ   04.09.2021 ರಂದು ಸಂಜೆ 15.00 ಗಂಟೆ ಸಮಯಕ್ಕೆ ಏಣಗುಡ್ಡೆ ಗ್ರಾಮದ ಅಗ್ರಹಾರ  ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿರುವ ಚಂದ್ರಯ್ಯ ಶೇರಿಗಾರರ ಮನೆಯ ಸಮೀಪ  ಬರುತ್ತಾ  ಮೂತ್ರ ಬಂದಿದೆ ಎಂದು  ಅಲ್ಲಿಯೇ ಪೊದೆಯ ಸಮೀಪ ಮೂತ್ರ  ವಿಸರ್ಜನೆ  ಮಾಡಿ ಬರುತ್ತಿರುವಾಗ   ಸಂತೋಷ , ಮಿಲನ್ , ಮಿಥುನ್   ಮತ್ತು ಹೆಸರು ಗೊತ್ತಿಲ್ಲದ  ಇನ್ನೊಬ್ಬ  ಅವರ ಬಳಿ ಬಂದು ಏಕಾಏಕಿ ಪಿರ್ಯಾದಿದಾರರ ಟೀ ಶರ್ಟನ ಕೊಲರ್  ಹಿಡಿದು  ಅವಾಚ್ಯ ಶಬ್ದದಿಂದ ತುಳುವಿನಲ್ಲಿ ಬೈದು ಕೈಯಿಂದ  ಅವರ  ಬೆನ್ನಿಗೆ  ಹೊಡೆದು ತಲೆ ಕೂದಲನ್ನು ಹಿಡಿದು ಮರಕ್ಕೆ  ಬಡಿದಿರುತ್ತಾರೆ.  ಆ ಸಮಯ ಪಿರ್ಯಾದಿದಾರರು ಕೆಳಗೆ ಬಿದ್ದಿದ್ದು ಕೂಡಲೇ  ನಾಲ್ಕು ಜನರು  ಪಿರ್ಯಾದಿದಾರರ ಕೈ ಕಾಲುಗಳಿಗೆ  ತಮ್ಮ ಕಾಲಿನಿಂದ ತುಳಿದು  ನಂತರ ಅವರುಗಳು ಪಿರ್ಯಾದಿದಾರರನ್ನು ಅವರ ದೊಡ್ಡಮ್ಮನ ಮನೆಗೆ ಕರೆದುಕೊಂಡು  ಹೋಗುವಾಗ ಪಿರ್ಯಾದಿದಾರರ ದೊಡ್ಡಮ್ಮನ ಮಗ  ನವರೇಶ  ಎಂಬವರು ಸಿಕ್ಕಿ ಪಿರ್ಯಾದಿದಾರರನ್ನು ಬೆಳಪುವಿನ ಅವರ ತಾಯಿ ಮನೆಗೆ ಕರೆದುಕೊಂಡು ಹೋಗಿ ನಂತರ  ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 146/2021 ಕಲಂ 75 ಜೆ ಜೆ ಕಾಯಿದೆ ಮತ್ತು 323, 504 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ವರದಕ್ಷಿಣೆ ಕಿರುಕುಳ  ಪ್ರಕರಣಗಳು

  • ಉಡುಪಿ: ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದು ಸಂಖ್ಯೆ 595/2021 ರ ಸಾರಾಂಶವೆನೆಂದರೆ ಫಿರ್ಯಾದಿದಾರರಾದ  ದೀಕ್ಷಾ ಇವರ ವಿವಾಹವು ದಿನಾಂಕ: 15/05/2015 ರಂದು ಆಪಾದಿತ ರಾಕೇಶ್‌ ನೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನೇರವೇರಿದ್ದು, ಮದುವೆಯ ನಂತರ 1ವರ್ಷಗಳ ಕಾಲ ಪಿರ್ಯಾದಿದಾರರು ಆಪಾದಿತನ ಜೊತೆ ಅವನ ತಂದೆ ತಾಯಿಯ ಮನೆಯಾದ ಬಡಾ ಎರ್ಮಾಳು ಎಂಬಲ್ಲಿ ವಾಸವಾಗಿದ್ದು, ಆ ಸಮಯದಲ್ಲಿ ಆಪಾದಿತ ಕ್ಷುಲ್ಲಕ ಕಾರಣಕ್ಕೆ ಪಿರ್ಯಾದಿದಾರರಿಗೆ ಹೊಡೆದು ಬಡಿಯುವ ಪ್ರವೃತ್ತಿಯನ್ನು ಹೊಂದಿದ್ದನು. ನಂತರ ಪಿರ್ಯದಿದಾರರು ಆಪಾದಿತನೊಂದಿಗೆ ಮಲ್ಪೆ ವಡಬಾಂಡೇಶ್ವರ ಬಳಿ ಬಾಡಿಗೆ ಮನೆಯಲ್ಲಿ ಸುಮಾರು 6 ವರ್ಷಗಳ ಕಾಲ ವಾಸವಾಗಿದ್ದು ಸದ್ರಿ ಸಮಯದಲ್ಲಿಯೂ ಸಹ ಆಪಾದಿತ ಆಗಾಗ ಕಾರಣವಿಲ್ಲದೇ ಜಗಳ ಮಾಡುತ್ತಿದ್ದು  ಅವಾಚ್ಯ ಶಬ್ದಗಳಿಂದ ಬೈದು,ನಿಂದಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಆಪಾದಿತನಿಗೆ ಸಂತಾನೋತ್ಪತ್ತಿ ಶಕ್ತಿ ಇಲ್ಲಎಂದು ವೈಧ್ಯರು ತಿಳಿಸಿದರೂ ಕೂಡಾ ಈ ವಿಚಾರವನ್ನು ಪಿರ್ಯಾಧಿದಾರರಿಗೆ ತಿಳಿಸದೇ ಇದ್ದು, ಹಾಗೂ ಪಿರ್ಯಾಧಿದಾರರನ್ನು  ಕೊಂದು ಬಿಸಾಡುತ್ತೇನೆ ಎಂದು ತುಳು ಭಾಷೆಯಲ್ಲಿ ಜೀವಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ಹೆದರಿ ಅದೇ ದಿನ ತನ್ನ ತಾಯಿಮನೆಗೆ ಹೋಗಿದ್ದು, ದಿನಾಂಕ: 23/07/2021 ರಂದು ಬೆಳಿಗ್ಗೆ ಸುಮಾರು 09:00 ಗಂಟೆಗೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಬಳಿ ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ನೀನು ನನ್ನ ಬಾಡಿಗೆ ಮನೆಗೆ ಬರದಿದ್ದಲ್ಲಿ ನಿನ್ನನ್ನುಜೀವಸಹಿತ ಬಿಡುವುದಿಲ್ಲಎಂದು ಬೆದರಿಕೆ ಹಾಕಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 38/2021 ಕಲಂ:420, 498(ಎ),  504,506, ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 05-09-2021 08:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080