ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಮಲ್ಪೆ : ಪಿರ್ಯಾದಿದಾರರಾದ ಶ್ರೀಧರ್ ಪೂಜಾರಿ (58), ತಂದೆ: ದಿ.ಸೂರಪ್ಪ ಕೋಟ್ಯಾನ್, ವಾಸ: ಪಾವಂಜೆಗುಡ್ಡೆ, ಬಡನಿಡಿಯೂರು ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ:05/09/2021 ರಂದು ಎಂದಿನಂತೆ ಬೆಳಿಗ್ಗೆ 03:00 ಗಂಟೆಗೆ ಮನೆಯಿಂದ ಸೈಕಲಿನಲ್ಲಿ ಮೀನುಗಾರಿಕೆ ಕೆಲಸದ ಬಗ್ಗೆ ಮಲ್ಪೆ ಬಾಪುತೋಟಕ್ಕೆ ತೆರಳಿ ಬಾಪುತೋಟದ ರಸ್ತೆಯ ಬದಿಯಲ್ಲಿ ಸೈಕಲನ್ನು ನಿಲ್ಲಿಸಿ ಬೋಟಿಗೆ ಹೋಗಲು ಮಲ್ಪೆ ಬಾಪುತೋಟ 2ನೇ ಟಿ ಧಕ್ಕೆಯ ಎದುರು ಮಲ್ಪೆ ಪಡುಕೆರೆ ರಸ್ತೆಯ ಬದಿಯಲ್ಲಿ ನಿಂತಿರುವಾಗ ಬೆಳಿಗ್ಗೆ 04:00 ಗಂಟೆ ಸಮಯಕ್ಕೆ ಪಡುಕೆರೆ ಕಡೆಯಿಂದ KA-20-EK-5478 ನಂಬ್ರದ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲ್ ಅನ್ನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಬಲಕಾಲಿನ ಮೊಣಗಂಟಿಗೆ ಒಳ ಜಖಂ ಮತ್ತು ಬಲಬದಿಯ ಕಣ್ಣಿನ ಹತ್ತಿರ ಹಾಗೂ ತಲೆಯ ಎಡಗಡೆಗೆ ರಕ್ತಗಾಯವಾಗಿರುತ್ತದೆ ,ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನು ಕೂಡ ರಸ್ತೆಗೆ ಬಿದ್ದು ಆತನಿಗೂ ಮುಖಕ್ಕೆ ರಕ್ತಗಾಯವಾಗಿರುತ್ತದೆ, ಪಿರ್ಯಾದಿದಾರರನ್ನು ಅಲ್ಲಿ ಸೇರಿದವರು ಉಪಚರಿಸಿ ಒಂದು ವಾಹನದಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2021 ಕಲಂ: 279,337 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ 

  • ಪಡುಬಿದ್ರಿ: ಪಿರ್ಯಾದಿದಾರರಾದ ಅಭಿಷೇಕ್, ಪ್ರಾಯ: 26 ವರ್ಷ, ತಂದೆ: ಕರುಣಾಕರ, ವಾಸ: ರಾಘವೇಂದ್ರ ಮಠದ ಬಳಿ, ಕಂಚಿನಡ್ಕ, ಪಡುಬಿದ್ರಿ ಅಂಚೆ ನಡ್ಸಾಲು ಗ್ರಾಮ, ಕಾಪು ತಾಲೂಕು. ಉಡುಪಿ ಜಿಲ್ಲ ಇವರು.ದಿನಾಂಕ: 04/09/2021 ರಂದು ರಾತ್ರಿ ಸಮಯ 21:10 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಕಂಚಿನಡ್ಕ ಮಿಂಚಿನ ಬಾವಿ ಎಂಬಲ್ಲಿ ಶಶಿಕಲಾ ಎಂಬುವವರ ಅಂಗಡಿ ಸಮೀಪ ತಾನು ಹೋಗುತ್ತಿದ್ದ ಸ್ಕೂಟಿಯನ್ನು ನಿಲ್ಲಿಸಿ ಫೋನ್ ನಲ್ಲಿ ಮಾತಾನಾಡುತ್ತಿರುವಾಗ ಅದೇ ದಾರಿಯಲ್ಲಿ ಸ್ಕೂಟಿಯಲ್ಲಿ ಬಂದ ಹರೀಶ್ ರವರ ಮಗ 1 ನೇ ಆರೋಪಿ ಪೃಥ್ವಿ ಸ್ಕೂಟಿಯನ್ನು ನಿಲ್ಲಿಸಿ, ಪಿರ್ಯಾದುದಾರರನ್ನುದ್ದೇಶಿಸಿ ತುಳುವಿನಲ್ಲಿ ಏನೂ ನೀನು ದೊಡ್ಡ ಜನವಾ, ಮೊನ್ನೆ ಭಾರೀ ಮಾತಾನಾಡಿದ್ದೀ ಎಂದು ಕೇಳಿದಾಗ ಪಿರ್ಯಾದಿದಾರರು ನಾನೇನೂ ತಪ್ಪು ಮಾಡಿಲ್ಲ ನೀವೇ ಬೈದು ದೂರು ಕೊಟ್ಟಿದ್ದೀರಿ ಎಂದು ಹೇಳಿದಾಗ ಆರೋಪಿಯು, ನಿನಗೆ ಹೇಗೆ ಬುದ್ದಿ ಕಲಿಸಬೇಕು ಎಂದು ನನಗೆ ಗೊತ್ತಿದೆ. ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿ ಯಾರಿಗೋ ಕರೆ ಮಾಡಿದಾಗ 21:20 ಗಂಟೆಗೆ ಅಲ್ಲಿಗೆ ಬಂದ ಹರೀಶರವರ ತಮ್ಮಂದಿರಾದ ಗಣೇಶ, ರಮೇಶ, ಹರೀಶರವರ ಸಂಬಂಧಿ ಜಿತೇಶ, ರಮೇಶನ ಮಗ, ಮತ್ತು ಇನ್ನೊಬ್ಬರು ಪಿರ್ಯಾದಿದಾರರ ಬಳಿ ಬಂದಿದ್ದು 1 ನೇ ಆರೋಪಿಯು ಅವರ ಜೊತೆ ಸೇರಿ ಪಿರ್ಯಾದಿದಾರರನ್ನುದ್ದೇಶಿಸಿ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿ ಆರೋಪಿ ಗಣೇಶ ಮತ್ತು ರಮೇಶರವರು ಅವರ ಕೈಯಲ್ಲಿದ್ದ ರಾಡ್ ನಿಂದ ಪಿರ್ಯಾದಿದಾರರಿಗೆ ಹೊಡೆಯಲು ಬಂದಾಗ ಪಿರ್ಯಾದಿದಾರರು ತಪ್ಪಿಸಲು ಪ್ರಯತ್ನಿಸಿದಾಗ ಆರೋಪಿ ಪೃಥ್ವಿ, ರಮೇಶನ ಮಗ ಮತ್ತು ಇನ್ನೊಬ್ಬ ಯುವಕ ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆರೋಪಿಗಳಾದ ಗಣೇಶ, ರಮೇಶ, ಜಿತೇಶರವರು ಅವರ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ತಲೆಗೆ ಬಲಕೈಗೆ, ಎಡಕೈಗೆ, ತೋಳಿಗೆ, ಬೆನ್ನಿಗೆ, ಎರಡೂ ಕಾಲಿಗೆ, ಹೊಡೆದ ಪರಿಣಾಮ, ಪಿರ್ಯಾದಿದಾರರ ತಲೆಗೆ, ಎರಡೂ ಕಾಲಿಗೆ, ಎಡಕೈಗೆ, ರಕ್ತ ಗಾಯವಾಗಿದ್ದು, ಬಲಕಾಲಿಗೆ ಮೂಳೆ ಮುರಿತದ ತೀವ್ರ ಗಾಯವಾಗಿರುತ್ತದೆ. ಅಲ್ಲಿಗೆ ಜನ ಬರುತ್ತಿರುವುದನ್ನು ನೋಡಿ ಆರೋಪಿ ಗಳು ಅಲ್ಲಿಂದ ಓಡಿ ಹೋಗಿದ್ದಾಗಿದೆ. ಗಾಯಗೊಂಡ ಪಿರ್ಯಾದಿದಾರರು ಉಡುಪಿ ಜಿಲ್ಲಾ ಆಸ್ಫತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡಯುತ್ತಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2021 ಕಲಂ: 143, 147, 148, 504, 506, 326, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 04/09/2021 ರಂದು ರಾತ್ರಿ 20:45 ಗಂಟೆಗೆ ಕಾಪು ತಾಲೂಕು, ನಡ್ಸಾಲು ಗ್ರಾಮದ, ಕಂಚಿನಡ್ಕ ರಾಘವೇಂದ್ರ ಮಠದ ಬಳಿ, ಪಿರ್ಯಾದಿದಾರರಾದ ಹರೀಶ್ ಪ್ರಾಯ: 52 ವರ್ಷ,ತಂದೆ: ದಿ ಪರದೇಶಿ ವಾಸ: ಪೃಥ್ವಿ ಪ್ರತಿಭಾ ನಿವಾಸ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಮಗ ಪೃಥಿ ನೆಡೆದುಕೊಂಡು ಹೋಗುವಾಗ, ಆರೋಪಿ ಗಳಾದ ಅಭಿಷೇಕ್, ಪ್ರಶಾಂತ್ (ಪಚ್ಚು), ಸುದೀಪ್, ಸುಶಾಂತ್, ಎಂಬವರು ಪಿರ್ಯಾದಿದಾರರ ಮಗ ಪೃಥ್ವಿಯನ್ನು ತಡೆದು ನಿಲ್ಲಿಸಿ, ಆವಾಚ್ಯ ಶಬ್ದಗಳಿಂದ ಬೈದು, ಆರೋಪಿ ಅಭಿಷೇಕ್ ಎಂಬುವನು ರಾಡ್ ನಿಂದ ಪೃಥ್ವಿಯ ಕೈ, ಕಾಲು, ಬೆನ್ನಿಗೆ ಹೊಡೆದು, ಆರೋಪಿಗಳೆಲ್ಲರೂ ಸೇರಿ ಪಿರ್ಯಾದಿದಾರರ ಮಗನನ್ನು ಕೊಲ್ಲದೇ ಬೀಡುವುದಿಲ್ಲವೆಂದು ಹೇಳಿ, ಕೊಲೆ ಬೆದರಿಕೆ ಹಾಕಿರುವುದಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪಿರ್ಯಾದಿದಾರರು ಗಾಯ ಗೊಂಡ ಪೃಥ್ವಿರವರನ್ನು ಚಿಕಿತ್ಸೆ ಬಗ್ಗೆ ಆಸ್ವತ್ರೆಗೆ ಕರೆದು ಕೊಂಡು ಹೋದ ಬಳಿಕ ಆರೋಪಿಗಳೆಲ್ಲರೂ ಪಿರ್ಯಾದಿದಾರರ ಮನೆ ಬಳಿ ಪಿರ್ಯಾದಿದಾರರ ತಾಯಿ ಸೀಗೆರವರು ವಾಸ ಮಾಡುವ ಮನೆಗೆ ಬಂದು ಬಾಗಿಲನ್ನು ಮುರಿದು, ಮೆಲ್ಚಾವಣಿಯ ಸೀಟ್ ನ್ನು ಹೊಡೆದು ಹಾಕಿರುತ್ತಾರೆ, ಅಲ್ಲದೇ ಪಿರ್ಯಾದಿದರರ ತಾಯಿಗೆ ಸೋಡಾ ಬಾಟಲ್ ನ್ನು ಬಿಸಾಡಿರುತ್ತಾರೆ, ಅದು ಪಿರ್ಯಾದಿದಾರರ ತಾಯಿಗೆ ತಾಗಿರುವುದಿಲ್ಲ, ಅಲ್ಲದೇ ಅಂಗಳದಲ್ಲಿ ಇದ್ದ ಸೌಂಡ್ ಸಿಸ್ಟಮನ್ನು ಹೊಡೆದು ಹಾಕಿ, ಕಬ್ಬಿಣದ ರಾಡ್‌ ನಿಂದ ಬಾಗಿಲಿಗೆ ಹೊಡೆದು, ಹೊಡೆದ ಕಬ್ಬಿಣದ ರಾಡನ್ನು ತೆಗೆದು ಕೊಂಡು ಹೋಗಿರುತ್ತಾರೆ, ಪಿರ್ಯಾದಿದಾರರು ಗಾಯಗೊಂಡ ಪೃಥ್ವಿರವರನ್ನು ಚಿಕಿತ್ಸೆಯ ಬಗ್ಗೆ ಮೂಲ್ಕಿ ಸಮುದಾಯ ಆಸ್ವತ್ರೆಗೆ, ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿ ರಾತ್ರಿ ಮನೆಗೆ ಬಂದು, ನಂತರ ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ವತ್ರೆ ಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 87/2021. ಕಲಂ:341,504,324,506,448,427,ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 05-09-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080