ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶ್ರೀಧರ ಜಿ (34) ತಂದೆ:ಈಶ್ವರ ಜಿ ವಾಸ: ಗುಡೆಮನೆ ಪಡುವರಿ ಗ್ರಾಮ, ಬೈಂದೂರು ಇವರು ದಿನಾಂಕ 03/08/2022 ರಂದು ಸಂಜೆ 4:15 ಗಂಟೆಗೆ ಅವರ KA-20 EP-4972 ನೇ ಮೋಟಾರು ಸೈಕಲ್ ನಲ್ಲಿ ಸ್ನೇಹಿತನಾದ ನಾಗೇಂದ್ರ ಜಿ ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಶಿರೂರು ಕಡೆಯಿಂದ ಬೈಂದೂರು ಕಡೆಗೆ  ಮೋಟಾರು ಸೈಕಲ್ ನ್ನು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಯಡ್ತರೆ ಗ್ರಾಮದ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿ ತಲುಪಿದಾಗ ಇವರ ಹಿಂದಿನಿಂದ KA-20 MD-9394 ನೇ ಕಾರು ಚಾಲಕನು ಆತನ ಕಾರನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀಧರ ಜಿ ರವರ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಶ್ರೀಧರ ಜಿ ರವರು ಹಾಗೂ ಸಹ ಸವಾರ ನಾಗೇಂದ್ರ ಜಿ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಶ್ರೀಧರ ಜಿ ರವರ ಮುಖಕ್ಕೆ ತೀವ್ರ ತರಹದ ಜಖಂ ಹಾಗೂ ಕೈ, ಕಾಲುಗಳಿಗೆ ತರಚಿದ ರಕ್ತಗಾಯವಾಗಿದ್ದು, ಸಹ ಸವಾರ ನಾಗೇಂದ್ರ ರವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಗಾಯಾಳುಗಳನ್ನು ಕಾರು ಚಾಲಕ ಹಾಗೂ ಸಾರ್ವಜನಿಕರು ಸೇರಿ ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆತಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷೀಸಿ ಸಹ ಸವಾರ ನಾಗೇಂದ್ರ ರವರಿಗೆ ಚಿಕಿತ್ಸೆ ನೀಡಿದ್ದು, ಶ್ರೀಧರ ಜಿ ರವರಿಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ  ಕುಂದಾಪುರ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ ಮೇರೆಗೆ ಶ್ರೀಧರ ಜಿ ರವರು ತಂದೆ ಈಶ್ವರ್ ರವರನ್ನು ಕರೆಯಿಸಿಕೊಂಡು  ಅವರೊಂದಿಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 152/2022 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 04/08/2022 ರಂದು ಪಿರ್ಯಾದಿದಾರರಾದ ಅಕ್ಷಯ (21) ತಂದೆ: ಬೂಪಾಲ ನಾಯ್ಕ ವಾಸ: ಗೌಡರಜಡ್ಡು ಸೋಮೇಶ್ವರ ಅಂಚೆ ನಾಡ್ಪಾಲು ಗ್ರಾಮ ಹೆಬ್ರಿ ಇವರು ತನ್ನ ಮೋಟಾರ್ ಸೈಕಲ್ ನಲ್ಲಿ ಸೋಮೆಶ್ವರ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದು. ಅವರು ಸಮಯ ಸುಮಾರು ಸಂಜೆ 5:00 ಗಂಟೆಗೆ ನಾಡ್ಪಾಲು ಗ್ರಾಮದ ಜಕ್ಕನಮಕ್ಕಿಯ ತಿರುವಿನ ಬಳಿ ತಲುಪಿದಾಗ ಅವರ ಮುಂದುಗಡೆಯಿಂದ ಅಂದರೆ ಹೆಬ್ರಿ ಕಡೆಗೆ ಹೋಗುತ್ತಿದ್ದ KA-20 MB-5300 ನೇ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಮುಂದುಗಡೆಯಿಂದ ಹೋಗುತ್ತಿದ್ದ ಒಂದು ವಾಹನವನ್ನು ಓವರ್ ಟೇಕ್ ಮಾಡಿ ರಸ್ತೆಯ ಬಲಬದಿಗೆ ಹೋಗಿ ಅವರ ಎದುರುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ಬರುತ್ತಿದ್ದ KA-66 M-0431 ನೇ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡು ಕಾರಿನ ಮುಂದಿನ ಭಾಗವು ಸಂಪೂರ್ಣ ಜಖಂ ಅಗಿರುವುದಲ್ಲದೇ ಎರಡು ಕಾರಿನಲ್ಲಿದ್ದ ಒಟ್ಟು 07 ಜನರಿಗೆ ಸಾದಾ ಮತ್ತು ಮೂಳೆ ಮುರಿತದ ಗಾಯವಾಗಿರುತ್ತದೆ  ಈ ಅಪಘಾತವು KA-20 MB-5300 ನೇ ಕಾರಿನ ಚಾಲಕ ನಾಗರಾಜ್ ಇವರ ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೆಯಿಂದ ಅಗಿರುವುದಾಗಿದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2022 ಕಲಂ: 279 ,337,338,  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹುಡುಗ ಕಾಣೆ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಶರ್ಮಿಳಾ (38) ಗಂಡ: ರವಿ ಕುಲಾಲ್ ವಾಸ: 3 ನೇ ಕ್ರಾಸ್ ಲಕ್ಷ್ಮೀನಗರ  ತೆಂಕನಿಡಿಯೂರು ಇವರ ಮಗ ಸೃಜನ್ (17) ರವರು ಪ್ರಸ್ತುತ ಉಡುಪಿಯ ವಿದ್ಯಾವೇತನ ಟ್ಯಟೋರಿಯಲ್ ಕಾಲೇಜಿನಲ್ಲಿ 12 ನೇ ತರಗತಿ ಓದುತ್ತಿದ್ದು, ದಿನಾಂಕ 04/08/2022 ರಂದು ಬೆಳಿಗ್ಗೆ 09:15 ಗಂಟೆಗೆ ಮನೆಯಿಂದ ಹೋದವನು ಈವರೆಗೆ ಮನೆಗೆ ಬಂದಿರುವುದಿಲ್ಲ, ಶರ್ಮಿಳಾ ರವರ ಮಗ ಈ ಹಿಂದೆ ಎರಡು  ಬಾರಿ ಮನೆ ಬಿಟ್ಟು ಹೋದವನು ಮರುದಿನ ವಾಪಸ್ಸು ಬಂದಿರುತ್ತಾನೆ. ಶರ್ಮಿಳಾ ರವರು ಮಗನನ್ನು ಹುಡುಕಾಡಿದರೂ  ಪತ್ತೆಯಾಗಿರುವುದಿಲ್ಲ. ಶರ್ಮಿಳಾ ರವರ ಮಗ  ಮನೆಯಿಂದ ಹೋಗುವಾಗ  ಕ್ರೀಮ್ ಕಲರ್  ಪ್ಯಾಂಟ್ ಮತ್ತು  ಕಾಪಿಬಣ್ಣದ  ಹೂ ಗಳಿರುವ  ಉದ್ದತೋಳಿನ ಶರ್ಟ್ ಧರಿಸಿರುವುದಾಗಿದೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63 /2022 ಕಲಂ: ಹುಡುಗ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಸುರೇಶ ಎಚ್.ಎಸ್ ಆಹಾರ ನಿರೀಕ್ಷಕರು, ಕುಂದಾಪುರ ಇವರು ಕುಂದಾಪುರದ ಆಹಾರ ನಿರೀಕ್ಷಕರಾಗಿ ಕುಂದಾಪುರ ತಾಲೂಕು ಕಛೇರಿಯಲ್ಲಿ  ಕರ್ತವ್ಯ ನಿರ್ವಹಿಸಿ ಕೊಂಡಿರುವಾಗ ದಿನಾಂಕ 04/08/2022 ರಂದು ಬೆಳಿಗ್ಗೆ 09:30 ಗಂಟೆಗೆ ತಲ್ಲೂರು ಗ್ರಾಮದ ಪಾರ್ತಿಕಟ್ಟೆ ರಸ್ತೆಲ್ಲಿಯರುವ ತಲ್ಲೂರು ನೇರಳಕಟ್ಟೆ ರಸ್ತೆಗೆ ತಾಗಿಕೊಂಡಿರುವ ಮುನಾಫ್ ಎಂಬುವವರ ಮನೆ ಬಳಿ ಸರಕಾರದ ಉಚಿತ ಅನ್ನ ಭಾಗ್ಯ ಯೋಜನೆಗೆ ಸಂಬಂದಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟಮಾಡಲು ದಾಸ್ತಾನು ಇರಿಸಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಿಂದ ನೀಡಿದ ಖಚಿತ ಮಾಹಿತಿಯ ಮೇರೆಗೆ ಸುರೇಶ ಎಚ್.ಎಸ್ ರವರು ಪಂಚರೊಂದಿಗೆ ಕುಂದಾಪುರ ಠಾಣಾ ಪಿ.ಎಸ್.ಐ ಸದಾಶಿವ ಗವರೋಜಿ ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಬೆಳಿಗ್ಗೆ 10:30 ಗಂಟೆಗೆ  ಸದ್ರಿ ಸ್ಥಳಕ್ಕೆ  ಹೋಗಿ ನೋಡಲಾಗಿ ಸದ್ರಿ ಮನೆಯ ಅಂಗಳದಲ್ಲಿ ಒಂದು ಆಟೋ ರಿಕ್ಷಾ ನಿಲ್ಲಿಸಿದ್ದು  ಅಲ್ಲೇ ಇದ್ದ ಆಪಾದಿತ ಅಬ್ದುಲ್ ಮುನಾಫ್ ನನ್ನು ವಿಚಾರಿಸಿ ವಶಕ್ಕೆ ಪಡೆದು ನಂತರ ಪಂಚರ ಸಮಕ್ಷಮ ಸುಮಾರು 80,000/- ಮೌಲ್ಯದ KA-20 C-8411 ನೇ ನೊಂದಣಿ ಸಂಖ್ಯೆಯ ಆಟೋ ರಿಕ್ಷಾ,  ಆಟೋ ರಿಕ್ಷಾದಲ್ಲಿದ್ದ ತಲಾ 50 ಕೆ.ಜಿ ತೂಕದ 2 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ, ರೂ 3000- ಮೌಲ್ಯದ ಇಲೆಕ್ಟ್ರಾನಿಕ್ ತೂಕದ ಯಂತ್ರ, ಅಲ್ಲೇ ಮನೆಯ ರೂಮಿನಲ್ಲಿದ್ದ ತಲಾ 50 ಕೆ.ಜಿ ತೂಕದ 39 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿದ್ದ ಅನ್ನ ಭಾಗ್ಯ ಯೋಜನೆಯ ಅಕ್ಕಿ, ಅಕ್ಕಿಯನ್ನು ತುಂಬಿಸಲು ಇಟ್ಟಿರುವ 30 ಖಾಲಿ ಗೋಣಿ ಚೀಲ ಅಂದಾಜು ಮೌಲ್ಯ 300/-, 10 ಬಿಳಿ ಬಣ್ಣದ ಖಾಲಿ ಪ್ಲಾಸ್ಟಿಕ್ ಚೀಲ ಅಂದಾಜು ಮೌಲ್ಯ 150/- ರೂಪಾಯಿ ಆಗಿದ್ದು, ರಿಕ್ಷಾದಲ್ಲಿರುವ ಮತ್ತು ಮನೆಯ ರೂಮಿನಲ್ಲಿರುವ 41 ಅಕ್ಕಿ ಚೀಲದಲದಲ್ಲಿರುವ 2050 ಕಿಲೋ ತೂಕದ ಅಕ್ಕಿಯ ಅಂದಾಜು ಮೌಲ್ಯ 45100/- ಆಗಿರುತ್ತದೆ. ಸದ್ರಿ ಎಲ್ಲ ಸ್ವತ್ತುಗಳನ್ನು ಪಂಚರ ಸಮಕ್ಷಮ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಆಪಾದಿತ ಅಬ್ದುಲ್ ಮುನಾಫ್ ಈತನು  ಸರಕಾರದಿಂದ ಜನರಿಗೆ ದೊರೆಯುವ ಉಚಿತ ಅನ್ನಭಾಗ್ಯದ ಅಕ್ಕಿಯನ್ನು ಯಾರಿಂದಲೋ ಪಡೆದು  ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ತಿಳಿದುಬಂದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2022 ಕಲಂ:3,6,7 ಅವಶ್ತಕ ವಸ್ತಗಳ ಅಧಿನಿಯಮ ಕಾಯ್ದೆ 1955 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-08-2022 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080