ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ:

  • ಹೆಬ್ರಿ: ಪಿರ್ಯಾದಿ ಮಂಜುನಾಥ ನಾಯ್ಕ ಪ್ರಾಯ 27 ವರ್ಷ ತಂದೆ: ಶ್ರೀನಿವಾಸ ನಾಯ್ಕ ವಾಸ:ಗದ್ದಿಗೆಮನೆ ಮಾರ್ಮಕ್ಕಿ ಬ್ಯಾಣ ಶಿವಪುರ  ಗ್ರಾಮ ಹೆಬ್ರಿ ಇವರು ಶಿಪಪುರದ ಗ್ರಾಮದ ಬ್ಯಾಣ ಎಂಬಲ್ಲಿರುವ ಗದ್ದಿಗೆಅಮ್ಮನವರ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದು. ನಿನ್ನೆ ದಿನ ದಿನಾಂಕ; 04/08/2022 ರಂದು ರಾತ್ರಿ 8-30 ಗಂಟೆಯಿಂದ ಈ ದಿನ ದಿನಾಂಕ; 05/08/2022 ರ ಬೆಳಿಗ್ಗೆ 06-30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಶಿವಪುರ ಗ್ರಾಮದ ಬ್ಯಾಣ ಎಂಬಲ್ಲಿರುವ ಗದ್ದಿಗೆ ಅಮ್ಮನವರ ದೇವಸ್ಥಾನದ ಎದುರಿನ ಬಾಗಿಲಿಗೆ ಹಾಕಿರುವ ಬೀಗವನ್ನು ಯಾವುದೋ ಅಯುಧದಿಂದ ಮುರಿದು ಒಳ ಹೋಗಿ ದೇವಿಯ ಮೂರ್ತಿಗೆ ಹಾಕಿರುವ ಸುಮಾರು ಒಂದೂವರೆ ಪವನಿನ ಚಿನ್ನದ ಕರಿಮಣಿ ಮತ್ತು ಸುಮಾರು ಒಂದೂವರೆ ಪವನ್ ನ 03 ಚಿನ್ನದ ಸಣ್ಣ ಸರ, ಹಾಗೂ ಸಣ್ಣ ಚಿನ್ನದ ತಾಳಿ ಇರುವ ಬೆಳ್ಳಿಯ ಸರ ಹಾಗೂ ಎರಡು ಕಾಣಿಗೆ ಡಬ್ಬಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು. ಕಳವಿನ ಮೌಲ್ಯ ಸುಮಾರು 60,000/-ರೂ ಅಗಬಹುದಾಗಿದೆ, ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ /2020 US 457,380 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ :ಪಿರ್ಯಾದಿ ದೊರೆಸ್ವಾಮಿ, ಪ್ರಾಯ: 63 ವರ್ಷ, ತಂದೆ: ರಾಜು, ವಾಸ: ಕಾರೋಲ್ ಗುಡ್ಡೆ, 3 ನೇ ಅಡ್ಡರಸ್ತೆ, ಜೋಡುಕಟ್ಟೆ, ಮಿಯಾರು ಗ್ರಾಮ, ಎಂಬಲ್ಲಿ ವಾಸವಾಗಿರುತ್ತಾರೆ. ಇವರ ಮಗ ಡಿ ಮಣಿಕಂಠ ರವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು, ಲಿವರ್ ಸಮಸ್ಯೆ ಇರುತ್ತದೆ. ದಿನಾಂಕ: 05.08.2022 ರಂದು ಬೆಳಗ್ಗೆ 07:00 ಗಂಟೆಗೆ ಪಿರ್ಯಾದಾರರೊಂದಿಗೆ ಮಾತನಾಡಿ ನಂತರ ಮನೆಯ ಟೆರಾಸ್ ಗೆ ಹೋಗಿದ್ದು, ಪಿರ್ಯಾದಿದಾರರು ಸಮಯ 09:30 ಗಂಟೆಗೆ ಮಹಡಿಗೆ ಹೋಗಿ ನೋಡಿದಾಗ  ಡಿ ಮಣಿಕಂಠ ರವರು ಅಡಿಕೆ ಮರದಿಂದ ಹಾಕಿದ್ದ ಚಪ್ಪರಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣುಬಿಗಿದುಕೊಂಡಿದ್ದವರನ್ನು ಹಗ್ಗವನ್ನು ತುಂಡರಿಸಿ ಕಾರ್ಕಳ ಸರ್ಕಾರಿ ಆಸ್ಪತ್ರಗೆ ಸುಮಾರು 09:45 ಗಂಟೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಡಿ ಮಣಿಕಂಠ, ಪ್ರಾಯ: 41 ವರ್ಷರವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು, ಲಿವರ್ ಸಮಸ್ಯೆಯಿಂದ ಬಳಲುತಿದ್ದು ಇದೇ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 05.08.2022 ರಂದು ಬೆಳಗ್ಗೆ 07:00 ಗಂಟೆಯಿಂದ 09:45 ಗಂಟೆಯ ಮದ್ಯಾವಧಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ  ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ನಂ. 35/2022 ಕಲಂ 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ಫಿರ್ಯಾದಿ ವಿಜಯ ಪ್ರಾಯ: 23 ವರ್ಷ ತಂದೆ: ವಿಶ್ವನಾಥ ಪೂಜಾರಿ ವಾಸ: ಕೋಠಾರಿಮನೆ, ಬೆಟ್ಟಿನಹಿತ್ಲು, ಕಾಸನಾಡಿ, ಉಪ್ಪುಂದ ಗ್ರಾಮ,  ಇವರ ತಂದೆ ವಿಶ್ವನಾಥ ಪೂಜಾರಿ ಪ್ರಾಯ: 55 ವರ್ಷ ರವರು ವಿಪರೀತ ಮದ್ಯಪಾನ ಮಾಡುವ ಸ್ವಭಾವದವರಾಗಿದ್ದು,  3 ದಿನಗಳಿಂದ ಹೊಟ್ಟೆ ನೋವು ಹಾಗೂ ಸುಸ್ತು ಆಗುತ್ತದೆ ಎಂದು ಹೇಳುತ್ತಿದ್ದವರನ್ನು  ದಿನಾಂಕ 04-08-2022 ರಂದು ಉಪ್ಪುಂದದ ವೈದ್ಯಾಧಿಕಾರಿಯವರಾದ  ಎಸ್ ಎಸ್ ಉಡುಪ ರವರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಪಿರ್ಯಾಧಿದಾರರ ತಂದೆಯವರು ರಾತ್ರಿ ಹೊಟ್ಟೆ ನೋವು ಕಡಿಮೆ ಆಗಿದೆ ಎಂದು ಹೇಳಿ ಊಟ ಮಾಡಿ ಮಲಗಿಕೊಂಡವರು ಈ ದಿನ ದಿನಾಂಕ; 05-08-2022 ರಂದು ಬೆಳಗಿನಜಾವ 03:55 ಗಂಟೆಗೆ ವಿಪರೀತ ರಕ್ತ ವಾಂತಿ ಮಾಡುತ್ತಿದ್ದವರನ್ನು ಉಪಚರಿಸಿ 108 ನೇ ಅಂಬುಲೆನ್ಸ ವಾಹನದಲ್ಲಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಬೆಳಗ್ಗೆ 04:30 ಗಂಟೆಗೆ  ಮೃತಪಟ್ಟಿರುವದಾಗಿ ತಿಳಿಸಿರುತ್ತಾರೆ.  ಈ  ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಯುಡಿಆರ್ ನಂ 38/2022 ಕಲಂ 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತ್ತೀಚಿನ ನವೀಕರಣ​ : 05-08-2022 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080