ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಡೆರಿಕ್‌ ಡಿಕೋಸ್ಟಾ (49), ತಂದೆ:ರಫೇಲ್‌ ಡಿಕೋಸ್ಟಾ, ವಾಸ: 7ನೇ ಅಡ್ಡ್ರಸ್ತೆ, ಕಸ್ತೂರ್‌ಬಾ ನಗರ, 76ನೇ ಬಡಗುಬೆಟ್ಟು ಗ್ರಾಮ,ಉಡುಪಿ ಜಿಲ್ಲೆ ಇವರ ತಿಂಡಿ-ತಯಾರಿಕಾ ಘಟಕದಲ್ಲಿ ಚಾಲಕನಾಗಿ ಕೆಲಸ  ಮಾಡಿಕೊಂಡಿದ್ದ ಜಗದೀಶ್‌(30) ಎಂಬುವವರು ಉಡುಪಿ  ತಾಲೂಕು  76ನೇ  ಬಡಗುಬೆಟ್ಟು ಗ್ರಾಮದ ಇಂದಿರಾ ನಗರ ಚರ್ಚ್‌ ಬಳಿಯ  ಶಿವ  ಪೂಜಾರಿ  ಎಂಬುವವರ  ಮಾಲಕತ್ವದ  ಬಾಡಿಗೆ  ಮನೆಯಲ್ಲಿ   ಒಬ್ಬನೇ  ವಾಸವಿದ್ದು, ಯಾವುದೋ ವೈಯಕ್ತಿಕ  ವಿಚಾರದಲ್ಲಿ ಮನನೊಂದು  ದಿನಾಂಕ 03/08/2021ರಂದು ರಾತ್ರಿ 9:00  ಗಂಟೆಯಿಂದ ಬೆಳಿಗ್ಗೆ 10:30 ಗಂಟೆಯ ಮಧ್ಯಾವಧಿಯಲ್ಲಿ ವಾಸವಿದ್ದ ರೂಮಿನ ಸೀಲಿಂಗ್‌ ಫ್ಯಾನಿಗೆ ಬೆಡ್‌ಷೀಟನ್ನು  ಕಟ್ಟಿ,  ಕುತ್ತಿಗೆಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 31/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 • ಬ್ರಹ್ಮಾವರ: ಪಿರ್ಯಾದಿದಾರರಾದ ಆದರ್ಶ ಶೆಟ್ಟಿ (32), ತಂದೆ: ಚಂದ್ರಶೇಖರ ಶೆಟ್ಟಿ, ವಾಸ: ವಿಘ್ನೇಶ್ವರ ನಿಲಯ, ಹಿರಿಯಡಕ ಅಂಚೆ, ಅಂಜಾರು ಗ್ರಾಮ, ಉಡುಪಿ ತಾಲೂಕು ಇವರು ಹಾರಾಡಿ ಗ್ರಾಮ ಪಂಚಾಯತ್‌ನ ಅಭಿವೃಧ್ಧಿ ಅಧಿಕಾರಿ ಯಾಗಿದ್ದು ಅವರು ದಿನಾಂಕ 04/08/2021 ರಂದು ಮಧ್ಯಾಹ್ನ 3:00 ಗಂಟೆಗೆ ಕಛೇರಿಯಲ್ಲಿರುವಾಗ ಹೊನ್ನಾಳ ಸುವರ್ಣ ನದಿ ಹೊಳೆಬದಿಯಲ್ಲಿ ಅಪರಿಚಿತ ಗಂಡಸಿನ ಶವ ಇರುವುದಾಗಿ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಬಂದು ನೋಡಿದಾಗ ಮೃತದೇಹವು ಸುಮಾರು 40-45 ವರ್ಷದ ಗಂಡಸಿನ ಶವವಾಗಿದ್ದು, ಶವದ ಮೈಮೇಲೆ ನೀಲಿ ಬಣ್ಣದ ತುಂಬು ತೋಳಿನ ಶರ್ಟ್‌ ಹೊರತು ಪಡಿಸಿ ಬೇರೆ ಯಾವುದೇ ಬಟ್ಟೆಗಳು ಇರುವುದಿಲ್ಲ, ಮೃತ ದೇಹದ ಕಣ್ಣು, ಬಾಯಿ ಇತರ ದೇಹದ ಭಾಗಗಳು ಕೊಳೆತು ಗುರುತುಹಿಡಿಯದ ಸ್ಥಿತಿಯಲ್ಲಿರುತ್ತದೆ. ಅಪರಿಚಿತ ವ್ಯಕ್ತಿಯು ಸುಮಾರು 4-5 ದಿನಗಳ ಹಿಂದೆ ಎಲ್ಲಿಯೋ ನೀರಿಗೆ ಬಿದ್ದು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 44/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ರಾಯಚೂರಿನ ರಾಮತ್ನಾಳ ಗ್ರಾಮದ ನಿವಾಸಿಯಾದ ಕೃಷ್ಣ ರೆಡ್ಡಿ (21) ಎಂಬುವವರು  ಆದಿ ಉಡುಪಿ ವಿರೂಪಾಕ್ಷ ಎಂಬುವರ ಬಾಳೆಕಾಯಿ ಮಂಡಿಯಲ್ಲಿ ಲೈನ್ ಸೇಲ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 02/08/2021 ರಂದು ಮಿನಿ ಟೆಂಪೋದಲ್ಲಿ ಲೈನ್ ಸೇಲ್ ಹೋಗಿದ್ದು ದಿನಾಂಕ 02/08/2021 ಸಂಜೆ ಪುತ್ತಿಗೆಯ ಬ್ರೀಡ್ಜ್ ನಲ್ಲಿ  ಟೆಂಪೋ ಕಂಡು ಬಂದಿರುತ್ತದೆ. ಆತನಿಗಾಗಿ ಹುಡುಕಾಡುತ್ತಿದ್ದು ದಿನಾಂಕ 04/08/2021  ರಂದು ಸಂಜೆ 06:00 ಗಂಟೆ ಸಮಯಕ್ಕೆ ಆತನ ಮೃತ ದೇಹ ಪೆರಂಪಳ್ಳಿ ಪಾಸ್ ಕುದ್ರು ಸ್ವರ್ಣ ನದಿಯಲ್ಲಿ ಕಂಡು ಬಂದಿರುತ್ತದೆ. ಆತನು ಯಾವುದೋ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಸ್ವರ್ಣ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 28/2021 ಕಲಂ: 174 ಸಿ. ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಸಮೀರ್ ಮನ್ನಾ (46), ತಂದೆ: ಮನ್ನಾ ಅಬೂಸೈದ್, ವಾಸ: ಮನ್ನಾ ಮಂಜಿಲ್ , ಗುಜ್ಜರಬೆಟ್ಟು, ಪಡುತೋನ್ಸೆ ಗ್ರಾಮ ಇವರು  15 ವರ್ಷಗಳ ಕಾಲ ಹೊರದೇಶದಲ್ಲಿದ್ದು  ಪ್ರಸ್ತುತ 2 ತಿಂಗಳಿಂದ ಗುಜ್ಜರಬೆಟ್ಟು  ಸ್ಮಶಾನದ ಹತ್ತಿರ  ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಅಣ್ಣ ಸೇರಿ Best Depertment  Store  ಎಂಬ ದಿನಸಿ ಅಂಗಡಿಯನ್ನು ನಡೆಸಿಕೊಂಡಿದ್ದು,  ದಿನಾಂಕ 03/08/2021 ರಂದು ಎಂದಿನಂತೆ  20:15 ಗಂಟೆಗೆ  ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಅಣ್ಣ ಅಂಗಡಿಯನ್ನು  ಮುಚ್ಚಿ ಮನೆಗೆ ಹೋಗಿದ್ದು, ದಿನಾಂಕ 04/08/2021 ರಂದು  ಬೆಳಿಗ್ಗೆ 07:00 ಗಂಟೆಗೆ  ಅಂಗಡಿ ತೆರೆಯಲು ಬಂದಾಗ ಅಂಗಡಿಗೆ ಹಾಕಿದ್ದ 2 ಬೀಗಗಳು ಇಲ್ಲದೆ ಇದ್ದು ಪರಿಶಿಲಿಸಿದಾಗ ಎರಡು ಕಡೆಯ ಅಂಗಡಿಯ ಶೆಟರಿಗೆ ಹಾನಿಯಾಗಿರುತ್ತದೆ ಅಂಗಡಿಯ ಒಳಗೆ ಹೋಗಿ ಪರಿಶಿಲೀಸಿದಾಗ  ಅಂಗಡಿಯಲ್ಲಿ ಇಟ್ಟಿದ್ದ  ನಗದು ರೂಪಾಯಿ 8000/-, 1 DELL ಕಂಪೆನಿಯ  ಲ್ಯಾಪ್ ಟಾಪ್- ಮೌಲ್ಯ 22000/-,  1  APPLE  AIRPOD  ಮೌಲ್ಯ  12,000/- ರೂಪಾಯಿ,  POWER BANK ಮೌಲ್ಯ -850/- ರೂಪಾಯಿ, SAMSUNG  COMPANY MOBILE PHONE -1 ಮೌಲ್ಯ  6000/- ರೂಪಾಯಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ , ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ  48,850/- ರೂಪಾಯಿ ಆಗಿರುತ್ತದೆ, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2021 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ರಮೇಶ್ (36), ತಂದೆ: ಮಂಜ, ವಾಸ: ಶ್ರೀ ಮಂಜುನಾಥ, ಐರೋಡಿ, ಅಲ್ಸೆಬೆಟ್ಟು, ಐರೋಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಹಾಗೂ 2ನೇ ಆರೋಪಿ ಪ್ರಶಾಂತ ಸ್ನೇಹಿತರಾಗಿದ್ದು ದಿನಾಂಕ 03/08/2021 ರಂದು ಸಂಜೆ ಮದ್ಯ ಸೇವನೆ ಮಾಡಲು ಪಿರ್ಯಾದಿದಾರರನ್ನು 2ನೇ ಆರೋಪಿ ಆಹ್ವಾನಿಸಿದ  ಮೇರೆಗೆ ಪಿರ್ಯಾದಿದಾರರು ಹಂದಾಡಿ ಗ್ರಾಮದ ಬ್ರಹ್ಮಾವರ ಗುಡ್ಡಿ ಬಾರ್‌ಗೆ ಹೋಗಿದ್ದು, ಹೋದಾಗ ಬಾರ್‌ನ ಕ್ಯಾಬೀನ್‌ನಲ್ಲಿ 2ನೇ ಆರೋಪಿ ಹಾಗೂ ಆತನ ಸ್ನೇಹಿತನಾದ 1ನೇ ಆರೋಪಿ  ಶ್ರೀನಿವಾಸ ಇದ್ದು, ಮೂವರು ಸೇರಿ ಬಾರ್‌ನಲ್ಲಿ ಕುಳಿತು ಮದ್ಯ ಸೇವಿಸಿರುತ್ತಾರೆ. ಬಳಿಕ 1 ಮತ್ತು 2ನೇ ಆರೋಪಿಯು ಕ್ಯಾಬಿನ್‌‌‌ನಿಂದ ಎದ್ದು ಹೊರಗೆ ಹೋಗಿರುತ್ತಾರೆ. ಆಗ ಪಿರ್ಯಾದಿದಾರರು ಕೂಡ ಬಾರ್‌ನಿಂದ ಹೊರಗೆ ಬಂದು ಬಾರ್‌ನ ಎದುರು ಪಾರ್ಕಿಂಗ್ ಸ್ಥಳಕ್ಕೆ ಬಂದಾಗ  ಆರೋಪಿಗಳು ಅಲ್ಲೇ ನಿಂತಿದ್ದು ಆಗ ಪಿರ್ಯಾದಿದಾರರು ಅವರ ಬಳಿ ಹೋದಾಗ ರಾತ್ರಿ 09:00 ಗಂಟೆಗೆ ಬಾರ್‌ನ ವೈಟರ್ ಕರೆದು ಬಿಲ್ಲು ಕೊಡಲಿಲ್ಲ ಎಂದು ತಿಳಿಸಿದರು. ಆಗ 2ನೇ ಆರೋಪಿಯು ಪಿರ್ಯಾದಿದಾರರಲ್ಲಿ ನೀನು ಬಿಲ್ಲು ಕೊಡಲಿಲ್ಲ ರಮೇಶ ಎಂದು ಕೇಳಿದಾಗ ಪಿರ್ಯಾದಿದಾರರು ಇಲ್ಲ ಎಂದು ಹೇಳಿದ್ದು, ಅದೇ ಸಮಯಕ್ಕೆ 1ನೇ ಆರೋಪಿಯು ಆತನ ಕೈಯಲ್ಲಿದ್ದ ಹೆಲ್ಮೇಟ್‌ನಿಂದ ಪಿರ್ಯಾದಿದಾರರ ಮೂಗಿನ ಮೇಲೆ 2-3 ಬಾರಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮೂಗಿನಲ್ಲಿ ರಕ್ತ ಸುರಿದಿರುವುದಾಗಿದೆ. ಪಿರ್ಯಾದಿದಾರರು ಬಾರ್‌ನಲ್ಲಿ ಬಿಲ್ಲು ಕೊಡಲಿಲ್ಲ ಎಂಬ ಕಾರಣಕ್ಕೆ  1ನೇ ಆರೋಪಿಯು ದ್ವೇಷಗೊಂಡು ಈ ಹಲ್ಲೆ ಮಾಡಿರುವುದಾಗಿದೆ. ಅಲ್ಲದೇ ಈ ಹಲ್ಲೆ ನಡೆಯುವ ವೇಳೆ 2ನೇ ಆರೋಪಿಯು ತಡೆಯದೇ ಪಿರ್ಯಾದಿದಾರರನ್ನ ಉದ್ಧೇಶಿಸಿ  ಅವಾಚ್ಯ ಶಬ್ದದಿಂದ ಬೈದಿದ್ದು, ಗಾಯಗೊಂಡ ಪಿರ್ಯಾದದಾರರು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 150/2021 ಕಲಂ: 324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಮಲ್ಪೆ: ಪಿರ್ಯಾದಿದಾರರಾದ ರಾಘವೇಂದ್ರ ನಾಯ್ಕ (40), ತಂದೆ: ವಾಸುದೇವ ನಾಯ್ಕ , ಲಕ್ಷ್ಮೀನಗರ  ಕೊಡವೂರು ಇವರು KA-20-Z-2304 ನೇ ಸಿಫ್ಟ್ ಕಾರನ್ನು 8 ತಿಂಗಳ ಹಿಂದೆ ಪುರುಷೋತ್ತಮ ರವರಿಗೆ 4,50,000/- ಲಕ್ಷ ರೂಪಾಯಿ ಕ್ರಯಕ್ಕೆ  ನೀಡಲು ತೀರ್ಮಾನಿಸಿ ಕರಾರು ಪತ್ರ ಮಾಡಿಕೊಂಡಿದ್ದು , ಆರೋಪಿಯು ಪಿರ್ಯಾದಿದಾರರಿಗೆ 1,50,000/- ರೂಪಾಯಿ ನಗದಾಗಿ ನೀಡಿರುತ್ತಾರೆ . ಕಾರಿನ ಮೇಲೆ ಶ್ರೀ ರಾಮ್ ಪೈನಾನ್ಸ್ ನಲ್ಲಿ 3 ಲಕ್ಷ ರೂಪಾಯಿ ಸಾಲ ಬಾಕಿ ಇದ್ದು , ಸಾಲವನ್ನು ಆರೋಪಿಯೆ ಕಟ್ಟುವುದಾಗಿ ಕರಾರು ಪತ್ರವನ್ನು ಮಾಡಿಕೊಂಡಿರುತ್ತಾರೆ . ಆರೋಪಿಯು ಪೈನಾನ್ಸ್ ನ ಸಾಲವನ್ನು ಕಟ್ಟದೆ ಇದ್ದು ಪಿರ್ಯಾದಿದಾರರಿಗೆ ಪೈನಾನ್ಸ್ ನವರು ಸಾಲವನ್ನು ಕಟ್ಟುವಂತೆ ಪೀಡಿಸುತ್ತಿದ್ದು, ಆರೋಪಿಯು ಪಿರ್ಯಾದಿದಾರರಿಂದ ಕಾರನ್ನು ಪಡೆದು ಸಾಲವನ್ನು ನಾನೇ ಕಟ್ಟುದಾಗಿ  ನಂಬಿಸಿ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2021 ಕಲಂ:406, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 05-08-2021 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ