ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 04/08/2021 ರಂದು ರಂದು ಸಂಜೆ ಸುಮಾರು 5:00 ಗಂಟೆಗೆ ಕುಂದಾಪುರ  ತಾಲೂಕಿನ, ಕೊಟೇಶ್ವರ ಗ್ರಾಮದ ಹಾಲಾಡಿ ಬೈಪಾಸ್‌ಬಳಿಯ NH66 ರಸ್ತೆಯ ಅಂಡರ್‌‌ಪಾಸ್‌‌ ನಲ್ಲಿ, ಆಪಾದಿತ ನವೀನ್‌‌ನಾಯ್ಕ ಎಂಬವರು KA-20-C-3677 ನೇ ಮಿನಿ ಟಿಪ್ಪರ್‌ ಲಾರಿಯನ್ನು ಕುಂಭಾಶಿ  ಕಡೆಯಿಂದ ಪಶ್ಚಿಮ ಬದಿಯ  NH66 ರಸ್ತೆ ಸರ್ವಿಸ್‌ ರಸ್ತೆ ಕಡೆಯಿಂದ  ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ವಾಹನವನ್ನು ಅಂಡರ್‌‌ಪಾಸ್‌‌ನ ಒಳಗೆ ತಿರುಗಿಸಿ, ಅಂಡರ್‌‌ಪಾಸ್‌‌ನ ಉತ್ತರ  ಅಂಚಿನಲ್ಲಿ ನಡೆದುಕೊಂಡು ಕೊಟೇಶ್ವರ ಪೇಟೆ ಕಡೆಗೆ ಬರುತ್ತಿದ್ದ ಶಂಕರ ದೇವಾಡಿಗರವರಿಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದಾಗ  ಶಂಕರ ದೇವಾಡಿಗರವರ ತಲೆಗೆ ಒಳಜಖಂ, ಮತ್ತು  ಕೈ ಕಾಲುಗಳಿಗೆ  ರಕ್ತಗಾಯವಾಗಿ, ಕೊಟೇಶ್ವರ ಎನ್‌. ಆರ್‌ಆಚಾರ್ಯ  ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂಸಿ   ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ, ಎಂಬುದಾಗಿ ಸ್ಟೀವನ್‌‌ ಡಿಕೋಸ್ಟಾ  (53) ತಂದೆ: ದಿ. ರಪಾಯಿಲ್‌‌‌ ಡಿಕೋಸ್ಟಾ ವಾಸ: ಕಾಮತ್‌ ಷೋರೂಮ್‌ ‌ಹಿಂಭಾಗ ಹಂಗಳೂರು ಗ್ರಾಮ   ಕುಂದಾಪುರ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ರಾಘವೇಂದ್ರ (38) ತಂದೆ:ಶೀನ ಪೂಜಾರಿ, ವಾಸ: ಶ್ರೀ ತುಳಸಿ ಕೃಪಾ, ಹಳೆ ಅಳಿವೆ, ಕೋಟೇಶ್ವರ ಗ್ರಾಮ, ಕುಂದಾಪುರ ಇವರು KA-03-MM-4068 ನೋಂದಣಿಯ ಶ್ರೀ ಗುರು ಸನ್ನಿಧಿ ಹೆಸರಿನ ಮೀನುಗಾರಿಕಾ ಬೋಟ್ ಹೊಂದಿದ್ದು ಸದ್ರಿ ಬೋಟನ್ನು ದಿನಾಂಕ 27/04/2021 ರಂದು ಕುಂದಾಪುರ ಕಸಬಾ ಗ್ರಾಮದ ಕೋಡಿ ಧಕ್ಕೆಯಲ್ಲಿ ಲಂಗರು ಹಾಕಿ ನಿಲ್ಲಿಸಿದ್ದು ದಿನಾಂಕ 13/07/2021 ರಂದು 09:00 ಗಂಟೆಗೆ ಬೋಟನ್ನು ಸ್ಟಾರ್ಟ್ ಮಾಡಿದಾಗ ಬೋಟ್ ಸ್ಟಾರ್ಟ್ ಆಗದೇ ಇದ್ದು ಡೀಸೆಲ್ ಟ್ಯಾಂಕನ್ನು ಪರಿಶೀಲಿಸಲಾಗಿ ಡೀಸೆಲ್ ಇಲ್ಲದೇ ಇದ್ದು, ಸದ್ರಿ ಬೋಟ್ ನಲ್ಲಿದ್ದ ಸುಮಾರು 28,500 ರೂಪಾಯಿ ಮೌಲ್ಯದ ಸುಮಾರು 300 ಲೀಟರ್  ಡೀಸೆಲ್ ಅನ್ನು ಯಾರೋ ಕಳ್ಳರು ದಿನಾಂಕ 27/04/2021 ರಂದು 10:00 ಗಂಟೆಯಿಂದ 13/07/2021 ರಂದು 09:00 ಗಂಟೆಯ ಮದ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಮಾರ್ಕೆಟ್ ರಸ್ತೆಯ ಕೆ.ಎಸ್ ಬಜಾರ್ ಅಂಗಡಿಯ ಬಳಿ ನೆಲದ ಮೇಲೆ ಸುಮಾರು 55-60 ವರ್ಷ ಪ್ರಾಯದ, ಅಪರಿಚಿತ ಗಂಡಸಿನ ಮೃತದೇಹ ಅಂಗಾತನೆ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸದ್ರಿ ಅಪರಿಚಿತ ವ್ಯಕ್ತಿಯು ಪಡುಬಿದ್ರಿ ಪರಿಸರದಲ್ಲಿ ಗುಜುರಿ ಹೆಕ್ಕುತ್ತ ಅಲ್ಲಲ್ಲಿ  ಅಂಗಡಿ ಬಳಿ ಮಲಗುತ್ತಿದ್ದು, ದಿನಾಂಕ 04/08/2021 ರಂದು ರಾತ್ರಿ 21:00 ಗಂಟೆಯಿಂದ ದಿನಾಂಕ 05/08/2021 ರಂದು ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಖಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣಗಳಿಂದ ಮೃತಪಟ್ಟಿರುತ್ತಾರೆ, ಎಂಬುದಾಗಿ ಪಂಚಾಕ್ಷರಿ ಸ್ವಾಮಿ (55) ಪಂಚಾಯತ್  ಅಭಿವೃದ್ದಿ ಅಧಿಕಾರಿ, 60 ನೇ  ಪಡುಬಿದ್ರಿ  ಗ್ರಾಮ ಪಂಚಾಯತ್,  ನಡ್ಸಾಲ್ ಗ್ರಾಮ, ಕಾಪು ಇವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 19/2021 ಕಲಂ: 174 ಸಿ.ಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-08-2021 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ