ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ದಿನಾಂಕ 04/07/2022 ರಂದು ಪಿರ್ಯಾದಿದಾರರಾದ ದಿನೇಶ (27), ತಂದೆ: ಶ್ರೀಧರ, ವಾಸ: ಕಳ್ಳಿಗುಡ್ಡೆ  ಗೋಳಿ ಕಟ್ಟೆ  ವಕ್ವಾಡಿ ಗ್ರಾಮ ಇವರ ಅಜ್ಜ ಹಾಗೂ ಅಜ್ಜಿ ಲಕ್ಷ್ಮಿ (66) ರವರು ಹಲ್ತೂರಿನಲ್ಲಿರುವ ಗದ್ದೆಯಲ್ಲಿ ಬೆಳಿಗ್ಗೆ 11:00 ಗಂಟೆಗೆ ಕೃಷಿ ಕೆಲಸ ಮಾಡಲು ಗದ್ದೆಗೆಂದು ಹೋದವರು ಗದ್ದೆಯ ಪಕ್ಕದಲ್ಲಿರುವ ಹೊಂಡದಲ್ಲಿ  ಆಕಸ್ಮಿಕವಾಗಿ ಕಾಲು ಜ್ಯಾರಿ ನೀರಿಗೆ ಬಿದ್ದು ಮುಳುಗಿದವರನ್ನು ಮದ್ಯಾಹ್ನ 14:00  ಗಂಟೆಗೆ ನೋಡಿ ಮೇಲಕ್ಕೆತ್ತಿ ನೋಡಿದಾಗ ಲಕ್ಷ್ಮಿ ರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

  • ಉಡುಪಿ : ಪಿರ್ಯಾದಿದಾರರಾದ ಸತ್ಯನಾರಾಯಣ ಹೆಗಡೆ (67), ತಂದೆ: ದಿ. ಗಣಪತಿ ಹೆಗಡೆ, ವಾಸ: ಮನೆ ನಂಬ್ರ: 5-89B2, ಸಾಯಿಬಾಬಾ 10ನೇ ಕ್ರಾಸ್‌, ಕೊಡಂಕೂರು ಪುತ್ತೂರು ಗ್ರಾಮ, ಉಡುಪಿ ತಾಲೂಕು ಉಡುಪಿ ತಾಲೂಕು ಇವರು ಸ್ವಂತ ಊರಾದ ಶಿರಸಿಗೆ ಹೋದ ಸಮಯದಲ್ಲಿ ದಿನಾಂಕ 17/06/2022 ರಂದು ಬೆಳಿಗ್ಗೆ 06:30 ಗಂಟೆಯಿಂದ ದಿನಾಂಕ 30/06/2022 ರಂದು ಬೆಳಿಗ್ಗೆ 11:00 ಗಂಟೆ ನಡುವೆ ಯಾರೋ ಕಳ್ಳರು ಮನೆಯ ಹಿಂಬದಿಯ ಬಾಗಿಲು ಮುರಿದು, ಮೇಲ್ಛಾವಣಿಯ ಹೆಂಚು ತೆಗೆದು ಒಳಪ್ರವೇಶಿಸಿ, ಬೆಡ್‌ ರೂಮಿನ ಕಪಾಟಿನಲ್ಲಿಟ್ಟಿದ್ದ 4 ಗ್ರಾಂ ಚಿನ್ನದ ನಾಣ್ಯ-1, ವಾಚ್‌-2, ಬೆಳ್ಳಿ ಪದಕ-1, ಲಕ್ಷ್ಮಿ ಬೆಳ್ಳಿ ಪದಕ-1, ರುದ್ರಾಕ್ಷಿ ಬೆಳ್ಳಿ ಸರ-1 ಹಾಗೂ ರೂಪಾಯಿ 10,000/- ನಗದನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಮೌಲ್ಯ ರೂಪಾಯಿ. 39,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2022 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ಶಾರದ (31), ಗಂಡ: ರಾಘವೇಂದ್ರ ಆಚಾರಿ, ವಾಸ: ಆಚಾರಿ ಕೇರಿ, ಮಾವಳ್ಳಿ  II , ಮುರ್ಡೆಶ್ವರ ಭಟ್ಕಳ ತಾಲೂಕು, ಉ. ಕ ಜಿಲ್ಲೆ ಇವರು ದಿನಾಂಕ 15/04/2012 ರಂದು ಆರೋಪಿ ರಾಘವೇಂದ್ರ ಆಚಾರಿಯವರನ್ನು ಭಟ್ಕಳ ತಾಲೂಕಿನ ಮುರ್ಡೆಶ್ವರ ದೇವಸ್ಥಾನದ ಆರ್ ಎನ್ ಶೆಟ್ಟಿ ಮಿನಿ ಸಭಾ ಭವನದಲ್ಲಿ ಮದುವೆಯಾಗಿರುತ್ತಾರೆ. ಮದುವೆಯ ಪೂರ್ವದಲ್ಲಿ ಆರೋಪಿತನು 5 ಲಕ್ಷ ನಗದು ಹಾಗೂ 20 ಪವನ್  ಚಿನ್ನಕ್ಕೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದು  ಬಳಿಕ ಫೀರ್ಯಾದಿದಾರರ ತಂದೆ ಕೃಷ್ಣ ಆಚಾರಿ ಯವರು ಹೇರೂರು ಗ್ರಾಮದಲ್ಲಿರುವ ಕೆಳಹೇರೂರು ಆರೋಪಿತನ ಮನೆಯಲ್ಲಿ ಆರೋಪಿತನಿಗೆ 12 ಪವನ್ ಚಿನ್ನ  ಹಾಗೂ 2 ಲಕ್ಷ ನಗದನ್ನು ನೀಡಿರುತ್ತಾರೆ. ಪಿರ್ಯಾದಿದಾರರು ಮದುವೆಯ ನಂತರ ಆರೋಪಿತನ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದು, ಆ ಸಮಯ  ಆರೋಪಿಯು ಪಿರ್ಯಾದಿದಾರರಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು, ನಂತರ ಪಿರ್ಯಾದಿದಾರರನ್ನು ಆರೋಪಿಯು ಬೆಂಗಳೂರಿನ ಜೆ.ಪಿ ನಗರದಲ್ಲಿನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯೂ ಹೆಚ್ಚಿನ ವರದಕ್ಷಿಣೆ ತರುವಂತೆ ದೈಹಿಕ ಮಾನಸಿಕ ಹಿಂಸೆ ನೀಡುತ್ತಿದ್ದು, ಅಲ್ಲಿಂದ ಊರಿಗೆ ಬಂದು ಗಂಡನ ಮನೆಯಲ್ಲಿ ಇರುವಾಗ ಅಲ್ಲಿಯೂ ಹೆಚ್ಚಿನ ವರದಕ್ಷಿಣೆ ತರುವಂತೆ ಹಿಂಸೆ ಮಾಡುತ್ತಿದ್ದರಿಂದ ಪಿರ್ಯಾದಿದಾರರ ತಂದೆ ಒಂದು ಬಾರಿ 30,000/- ರೂಪಾಯಿ ಹಾಗೂ ಇನ್ನೊಂದು ಬಾರಿ 25,000/- ರೂಪಾಯಿಯನ್ನು ಆರೋಪಿತನ ಮನೆಯಲ್ಲಿ ಹೆಚ್ಚಿನ ವರದಕ್ಷಿಣೆ ರೂಪದಲ್ಲಿ ಕೊಟ್ಟಿರುತ್ತಾರೆ. ನಂತರ ಪಿರ್ಯಾದಿದಾರರನ್ನು ಬೆಂಗಳೂರಿನ ತಾತಗುಣಿಗೆ ಕರೆದುಕೊಂಡು ಹೋಗಿ ಬಾಡಿಗೆ ಮನೆ ಮಾಡಿದ್ದು  ನಂತರ ಅಲ್ಲಿಂದ ಬೆಂಗಳೂರಿನ ಬೆಂಗಳೂರಿನ ವಾಜರಹಳ್ಳಿ ಬಾಲಾಜೀ ಲೇ ಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವಾಗ ಆರೋಪಿತನು ಪಿರ್ಯಾದಿದಾರರನ್ನು ಹಾಗೂ ಮಕ್ಕಳನ್ನು ಬಿಟ್ಟು ಹೇಳದೇ ಕೇಳದೇ ಹೋಗಿದ್ದು, ನಂತರ ಪಿರ್ಯಾದಿದಾರರು ಬೇರೆ ದಾರಿ ಕಾಣದೇ ಊರಿಗೆ ಬಂದು ತಮ್ಮ ಮನೆಯಲ್ಲಿ ವಾಸವಾಗಿದ್ದರು. 2021ರ ಜೂನ್ ತಿಂಗಳಲ್ಲಿ ಪಿರ್ಯಾದಿದಾರರನ್ನು ಹಾಗೂ ಮಕ್ಕಳನ್ನು ಬೆಂಗಳೂರಿನ ತಲಘಟ್ಟಪುರ ದಲ್ಲಿನ ಪಿರ್ಯಾದಿದಾರರ ತಮ್ಮ ನಾಗರಾಜ ಆಚಾರಿ ರವರ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯೂ ಬೇರೆ ಮನೆ ಮಾಡುವ ಬಗ್ಗೆ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಪಿರ್ಯಾದಿದಾರರಿಗೆ ದೈಹಿಕ ಮಾನಸಿಕ ಹಿಂಸೆ ನೀಡಿದ್ದು, ಪಿರ್ಯಾದಿದಾರರ ತಾಯಿ ಕಲ್ಯಾಣಿ ಆಚಾರಿ ರವರು ರೂಪಾಯಿ 60 ಸಾವಿರವನ್ನು ಆರೋಪಿತನಿಗೆ ನೀಡಿರುತ್ತಾರೆ. ಆರೋಪಿತನು ಪಿರ್ಯಾದಿದಾರರನ್ನು ಅನುಮಾನದಿಂದ ನೋಡುತ್ತಿದ್ದು, ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 133/2022 ಕಲಂ: 498(A), 323, 504, 506 ಐಪಿಸಿ  ಮತ್ತು ಕಲಂ: 3,4,6 DP Ac ರಂತೆ ಪ್ರಕರಣ ದಾಖಲಾಗಿರುತ್ದದೆ.

ಇತ್ತೀಚಿನ ನವೀಕರಣ​ : 05-07-2022 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080