ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರ ಉಮ್ಮರ್ ಫಾರೂಕ್, (31), ತಂದೆ: ಶಂಶುದ್ದೀನ್, ವಾಸ: ಮನೆ ನಂಬ್ರ 1-6-100, ಸರಕಾರಿ ಶಾಲೆಯ ಬಳಿ, ಕಂಚಿನಡ್ಕ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಇವರ ತಂದೆ ಶಂಶುದ್ದೀನ್ (68) ಎಂಬುವರು ಐಸ್‌‌ಕ್ರೀಂ ಲೈನ್ ಸೇಲ್  ಕೆಲಸ ಮಾಡಿಕೊಂಡಿದ್ದು, ದಿನಾಂಕ 05/07/2022 ರಂದು ತಮ್ಮ KA-20-EV-0306 ನೇ ನಂಬ್ರದ ಟಿವಿಎಸ್‌‌ಲೂನಾ ಮೋಟಾರ್ ಸೈಕಲ್ಲಿನಲ್ಲಿ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯಲ್ಲಿನ ವಾರದ ಸಂತೆಗೆಂದು ಬಂದು, ತರಕಾರಿ ತೆಗೆದುಕೊಂಡು ವಾಪಾಸ್ಸು ಮನೆಗೆ ಹೋಗುತ್ತಾ, ಸಮಯ ಸುಮಾರು 11:20 ಗಂಟೆಗೆ ಪಡುಬಿದ್ರಿ ಪೇಟೆಯ ಕಾರ್ಕಳ ಜಂಕ್ಷನ್‌‌ನಲ್ಲಿ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯನ್ನು ದಾಟಿ, ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯನ್ನು ದಾಟಲು ಎರಡು ಏಕಮುಖ ರಸ್ತೆಗಳ ನಡುವಿನ ಯೂಟರ್ನ್‌ಜಾಗದಲ್ಲಿ ನಿಂತಿರುವಾಗ GA-08-U-8332 ನೇ ನಂಬ್ರದ ಲಾರಿ ಚಾಲಕ ಜೀತೇಂದ್ರ ಎಂಬಾತನು ತನ್ನ ಲಾರಿಯನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬಲಬದಿಯ ಡಿವೈಡರ್ ದಂಡೆಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಮುಂದೆ ಚಲಿಸಿ ಉಮ್ಮರ್ ಫಾರೂಕ್ ರವರ ತಂದೆ ನಿಂತಿದ್ದ ಮೋಟಾರ್‌ ‌ಸೈಕಲ್ಲಿನ ಮೇಲೆ ಮಗುಚಿ ಬಿದ್ದ ಪರಿಣಾಮ, ಉಮ್ಮರ್ ಫಾರೂಕ್ ರವರ ತಂದೆ ಶಂಶುದ್ದೀನ್‌ರವರು ಲಾರಿಯ ಅಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೋಟಾರ್‌‌ಸೈಕಲ್ ಸಂಪೂರ್ಣ ಜಖಂಗೊಂಡಿರುತ್ತದೆ. ಮತ್ತು ಲಾರಿಯ ಚಾಲಕನಿಗೂ ಸಾಧಾರಣ ಸ್ವರೂಪದ ಗಾಯಗಳಾಗಿದ್ದು, ಮೃತದೇಹವನ್ನು ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 85/2022 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ವಿಶು ಶೆಟ್ಟಿ (50) ವರ್ಷ,ತಂದೆ: ಗುಂಡು ಶೆಟ್ಟಿ, ವಾಸ: ಅಂಬಲಪಾಡಿ ಗ್ರಾಮ,ಉಡುಪಿ ತಾಲೂಕು ಇವರು ದಿನಾಂಕ 05/07/2022 ರಂದು ಅಂಬಲಪಾಡಿ ಜಂಕ್ಷನ್ ಬಳಿ ಇರುವಾಗ ಸಮಯ ಸುಮಾರು ಬೆಳಿಗ್ಗೆ 08:20 ಗಂಟೆಗೆ KA-20 AA-4899 ನೇ ಬೊಲೆರೋ ವಾಹನದ ಚಾಲಕ ಹನುಮಂತರಾಯರ ಎಂಬಾತನು ತಾನು ಚಲಾಯಿಸುತ್ತಿದ್ದ ಬೊಲೇರೋ ವಾಹನವನ್ನು ಕರಾವಳಿ ಬೈಪಾಸ್ ಕಡೆಯಿಂದ ಸ್ವಾಗತಗೋಪುರದ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಂಬಲಪಾಡಿ ಗ್ರಾಮದ ಅಂಬಲಪಾಡಿ ಜಂಕ್ಷನ್ ನಲ್ಲಿ ಅಂಬಲಪಾಡಿ ಕಡೆಯಿಂದ ಸೈಂಟ್ ಸಿಸಿಲಿ ಶಾಲೆ ಕಡೆಗೆ ರಸ್ತೆ ದಾಟುತ್ತಿದ್ದ ಸೈಕಲ್ ಸವಾರ ಆದಿತ್ಯನಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಆದಿತ್ಯನು ಸೈಕಲ್ ನಿಂದ ರಸ್ತೆಗೆ ಎಸೆಯಲ್ಪಟ್ಟು, ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 53/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸುಜಾತ ರಾವ್‌, (40) ,ಗಂಡ:ಶಿವರಾಯ ರಾವ್‌, ವಾಸ: ಮಾನಸ ಶಾಲೆ ಬಳಿ,ಪಾಂಬೂರು, ಶಿವ ಗ್ರಾಮ, ಕಾಪು ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಗಂಡ ಹಾಗೂ ತಂದೆ ಲಕ್ಷ್ಮಣ್‌ ರಾವ್‌ (66) ಎಂಬವರೊಂದಿಗೆ ವಾಸಮಾಡಿಕೊಂಡಿದ್ದು, ದಿನಾಂಕ 04/07/2022 ರಂದು ಬೆಳಿಗ್ಗೆ 09:30 ಗಂಟೆಗೆ ಮನೆಯಿಂದ ಸುಜಾತ್‌ ರಾವ್‌ ರವರ ಗಂಡ ಹಾಗೂ ತಂದೆ ಲಕ್ಷ್ಮಣ್‌ ರಾವ್‌ ರವರು ಉಡುಪಿ ಬನ್ನಂಜೆಯ ಕೆನರಾ ಬ್ಯಾಂಕ್‌ ವ್ಯವಹಾರದ ಬಗ್ಗೆ ಬಸ್ಸಿನಲ್ಲಿ ಬಂದವರು ಉಡುಪಿಯ ಕೆಎಂ ಮಾರ್ಗದ ಬಳಿ ಬಸ್ಸಿನಿಂದ ಇಳಿದಿದ್ದು, ಶಿವರಾಯ ರಾವ್‌ರವರು ಲಕ್ಷ್ಮಣ ರಾವ್‌ರವರನ್ನು ಅಲ್ಲಿಯೇ ನಿಲ್ಲಲು ಹೇಳಿ ರಾಧಾ ಮೆಡಿಕಲ್‌ಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ವಾಪಾಸು 10:45 ಗಂಟೆ ಸಮಯಕ್ಕೆ ಹಿಂತಿರುಗಿ ಬಂದು ನೋಡಿದಾಗ ಲಕ್ಷ್ಮಣ ರಾವ್‌ರವರು ಅಲ್ಲಿರಲಿಲ್ಲ. ಈವರೆಗೂ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಲಕ್ಷ್ಮಣ ರಾವ್‌ರವರನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಸಿಗದೇ ಇದ್ದುದರಿಂದ ಠಾಣೆಗೆ ಬಂದು ದೂರನ್ನು ನೀಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 108/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದುದಾರರಾದ ಶ್ರೀಮತಿ ಪುಷ್ಪ (35) ಗಂಡ: ಸತೀಶ್ ಪೂಜಾರಿ, ವಾಸ: ಶಿವಂ. ನಡುಮನೆ, ಬೆಳ್ಮಣ್ ಅಂಚೆ,  ನಂದಳಿಕೆ ಗ್ರಾಮ, ಕಾರ್ಕಳ ರವರ ಅಣ್ಣ ಚಂದ್ರಶೇಖರ ಪೂಜಾರಿ, (44) ಇವರು ವಿಪರೀತ ಮದ್ಯವ್ಯಸನಿಯಾಗಿದ್ದು, ಇದರಿಂದ ನೊಂದ ಮೃತರ ಪತ್ನಿ ಶರ್ಮಿಳರವರು ತನ್ನ ಮಗುವಿನೊಂದಿಗೆ ತನ್ನ ತವರು ಮನೆಯಲ್ಲಿ ವಾಸವಾಗಿದ್ದು, ಚಂದ್ರಶೇಖರ ಪೂಜಾರಿ ಇವರು ಇತ್ತೇಚೆಗೆ ಕೆಲವು ಸಮಯದಿಂದ ಒಬ್ಬಂಟಿಯಾಗಿ ವಾಸವಿದ್ದವರು, ತನಗಿರುವ ಮದ್ಯಪಾನದ ಅಭ್ಯಾಸದಿಂದ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ  02/07/2022 ರಂದು ಮಧ್ಯಾಹ್ನ 12:00 ಗಂಟೆಯಿಂದ ದಿನಾಂಕ 05/07/202 ರಂದು ಬೆಳಗ್ಗೆ 8:30 ಗಂಟೆಯ ಮಧ್ಯೆ ತಮ್ಮ ವಾಸ್ತವ್ಯದ ಮನೆಯೊಳಗೆ ಮಲಗುವ ಕೋಣೆಯಲ್ಲಿರುವ ಮರದ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 22/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-07-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080