ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

 • ಶಂಕರನಾರಾಯಣ: ಪಿರ್ಯಾದಿದಾರರಾದ ನಾಗರಾಜ ನಾಯ್ಕ (32) ತಂದೆ ಜಿಲ್ಲಾ ನಾಯ್ಕ ವಾಸ, ನಾಗರಾಜ ನಿಲಯ ಹೊನ್ಕಲ್ ಬೆಳ್ವೆ ಗ್ರಾಮ  ಹೆಬ್ರಿ ಇವರ ತಮ್ಮ ಈಶ್ವರ ನಾಯ್ಕ (30) ಇವರು  ಸುಮಾರು  ಸಮಯದಿಂದ ಒಬ್ಬಳನ್ನು ಪ್ರೀತಿ ಮಾಡುತ್ತಿದ್ದನ್ನು, ಈಗ ಅವರೊಳಗೆ ಮನಸ್ತಾಪ ಆಗಿರುತ್ತದೆ,  ಅದರಂತೆ  ದಿನಾಂಕ 03/07/2021 ರಂದು ಈಶ್ವರ ನಾಯ್ಕ ಇವರು ಸಮಾರು 14:30 ಗಂಟೆಗೆ ಅವರ ವಾಸದ  ಮನೆಯಾದ ಹೆಬ್ರಿ ತಾಲೂಕಿನ ಅಲ್ಬಾಡಿ ಗ್ರಾಮದ ಹೊನ್ಕಲ್ ಎಂಬಲ್ಲಿ ಅವರ ಮನೆಯಿಂದ ಅಲ್ಬಾಡಿ  ಆಟೋರಿಕ್ಷಾ ನಿಲ್ದಾಣಕ್ಕೆ ಹೋಗುತ್ತೇನೆ, ಎಂದು ಹೇಳಿ ಹೋದವರು ಸಂಜೆ ಆದರು ಮನೆಗೆ ಬಾರದೇ ಇದ್ದಾಗ ಎಲ್ಲಾ ಕಡೆ ಹುಡುಕಾಡಿದ್ದು, ಎಲ್ಲಿಯೂ ಸಹ ಸಿಕ್ಕಿರುವುದಿಲ್ಲ ದಿನಾಂಕ 04/07/2021 ರಂದು ಬೆಳಿಗ್ಗೆ ಸುಮಾರು 11;00 ಘಂಟೆಗೆ ಹುಡುಕುತ್ತಾ ಹೋದಾಗ ಈಶ್ವರ ನಾಯ್ಕ ಇವನು ಹೆಬ್ರಿ ತಾಲೂಕಿನ ಅಲ್ಬಾಡಿ ಗ್ರಾಮದ  ಚೆಣ್ಮಕಿ ರಾಮಣ್ಣ ಶೆಟ್ಟಿ ಎಂಬುವರಿಗೆ ಸೇರಿದ ಹಾಡಿಯಲ್ಲಿ ಆಟೋರಿಕ್ಷಾ ದೊಳಗೆ ಯಾವುದೋ ವಿಷ  ಪದಾರ್ಥ  ಸೇವಿಸಿ ಅಲ್ಲಿಯೇ ಆಟೋರಿಕ್ಷಾದ ಹಿಂದಿನ ಸೀಟಿನ ಕೆಳಗಡೆ ಕವುಚಿ ಬಿದ್ದು ಮೃತಪಟ್ಟಿರುತ್ತಾರೆ, ಅವನು  ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವನೆ ಮಾಡಿ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 25/2021 ಕಲಂ: 174(C) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾಧ ಕುಮಾರಿ ಸೀಮಾ (25) ತಂದೆ: ವಾಲ್ಟರ್‌ಅಮ್ಮಣ್ಣ ವಾಸ: ಜೇಸ್‌ವೀಲ್‌, ಕಿನ್ನಿಮೂಲ್ಕಿ, 76-ಬಡಗುಬೆಟ್ಟು ಗ್ರಾಮ, ಉಡುಪಿ ಇವರ ತಂದೆ ವಾಲ್ಟರ್‌ ಅಮ್ಮಣ್ಣ (70) ರವರು ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬೈಲೂರು ಎಂ.ಎಂ ಶಾಲೆಯ ಬಳಿ ಇರುವ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 04/07/2021 ರಂದು ಮಧ್ಯಾಹ್ನ 12:30 ಗಂಟೆಯಿಂದ 17:00 ಗಂಟೆ ನಡುವಿನ ಸಮಯದಲ್ಲಿ ಮನೆಯ ಬೆಡ್‌ರೂಮಿನ ಪಕ್ಕಾಸಿಗೆ ಲುಂಗಿ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತರು ವಿಪರೀತ ಕುಡಿತದ ಚಟ ಹೊಂದಿದ್ದು ಜೊತೆಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 28/2021 ಕಲಂ: 174(C) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಕಾಪು: ದಿನಾಂಕ 04/07/2021 ರಂದು ರಾಘವೇಂದ್ರ ಸಿ. ಪಿಎಸ್‌ಐ ಕಾಪು ಠಾಣೆ ರವರಿಗೆ ಉಡುಪಿ ತಾಲೂಕು ಉದ್ಯಾವರ ಗ್ರಾಮದ ಸಂಪಿಗೆನಗರ ಬಬ್ಬರ್ಯ ಜಡ್ಡು ಎಂಬಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಹುಂಜಗಳ ಕಾಲುಗಳಿಗೆ ಹರಿತವಾದ ಕೋಳಿ ಬಾಳನ್ನು ಕಟ್ಟಿ ಒಂದಕ್ಕೊಂದು ತಿವಿದು ಕೊಳ್ಳುವಂತೆ ಮಾಡಿ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕವನ್ನು ನಡೆಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ನ್ಯಾಯಾಲಯದ ಅನುಮತಿ ಪಡೆದು  ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ ಮತ್ತು ಸಿಬ್ಬಂದಿಯವರೊಂದಿಗೆ ಇಲಾಖಾ ಠಾಣಾ ಹೊಯ್ಸಳ ವಾಹನದಲ್ಲಿ ಠಾಣೆಯಿಂದ ಹೊರಟು ಉದ್ಯಾವರದಲ್ಲಿ ಪಂಚರನ್ನು ಬರಮಾಡಿಕೊಂಡು ದಾಳಿಯ ವಿಚಾರ ತಿಳಿಸಿ ಪಂಚರೊಂದಿಗೆ ಮಾಹಿತಿ ಬಂದ ಸ್ಥಳದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಇಲಾಖಾ ವಾಹನವನ್ನು ಮರೆಯಲ್ಲಿ ನಿಲ್ಲಿಸಿ, ನೋಡಲಾಗಿ ಅಲ್ಲಿನ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಬೆಳಕಿನ ವ್ಯವಸ್ಥೆ ಮಾಡಿಕೊಂಡು ರಾಜ್ಯ ಸರಕಾರದ ಕೋವಿಡ್-19 ನಿಯಮವನ್ನು ಉಲ್ಲಂಘಿಸಿ ಕೋಳಿ ಹುಂಜಗಳ ಮೇಲೆ ಹಣವನ್ನು ಪಣವಾಗಿ ಒಡ್ಡುತ್ತಿದ್ದರು. ಅಲ್ಲದೇ ಕೋಳಿಗಳ ಕಾಲುಗಳಿಗೆ ಹರಿತವಾದ ಬಾಳ್‌ನ್ನು ಕಟ್ಟಿ ಒಂದು ಕೋಳಿಯನ್ನು ಇನ್ನೊಂದು ಕೋಳಿಯ ಮೇಲೆ ಬಿಟ್ಟು ಅವುಗಳು ಪರಸ್ಪರ ಕಾದಾಡಿ ಒಂದು ಇನ್ನೊಂದನ್ನು ತಿವಿದು ಗಾಯ ಮಾಡುತ್ತಿದ್ದವು. ಅಲ್ಲಿ ಸೇರಿದವರು ಕೋಳಿ ಅಂಕವೆಂಬ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು  ಸಮಯ ಸುಮಾರು 20:00 ಗಂಟೆಗೆ ದಾಳಿ ನಡೆಸಿ  ಅಲ್ಲಿ  ಸೇರಿದ 07 ಜನರನ್ನು ಹಿಡಿದು ಹೆಸರು, ವಿಳಾಸ ವಿಚಾರಿಸಲಾಗಿ  01) ರವಿ ಕುಮಾರ, 02) ಪ್ರಮೋದ, 03) ಪುಷ್ಪರಾಜ, 04) ಪ್ರದೀಪ,  05) ಗಣೇಶ, 6) ಅರವಿಂದ,  7) ಧನರಾಜ ಸುವರ್ಣ, ಎಂದು ತಿಳಿಸಿದ್ದು. ಅವರ ಬಳಿ ಓಡಿ ಹೋದವರ  ಬಗ್ಗೆ ವಿಚಾರಿಸಿದಲ್ಲಿ ಸಂದೀಪ್ ಎಂದು ತಿಳಿಸಿದ್ದು ಇತರರ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾಗಿ  ತಿಳಿಸಿದ್ದು ಹಾಗೂ ನಾವು ಹಣವನ್ನು ಕೋಳಿ ಹುಂಜಗಳ  ಮೇಲೆ ಪಣವಾಗಿ ಕಟ್ಟಿ ಕೋಳಿಗಳ ಕಾಲುಗಳಿಗೆ ಹರಿತವಾದ ಕೋಳಿ ಬಾಳ್‌ನ್ನು ಕಟ್ಟಿ ಕೋಳಿ ಅಂಕ ಎಂಬ ಜುಗಾರಿ ಆಟ ಆಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದು, ಸ್ಥಳವನ್ನು ಪರಿಶೀಲಿಸಿದಲ್ಲಿ ಒಟ್ಟು ಅಂದಾಜು 4700/- ರೂ ಮೌಲ್ಯದ 7 ಹುಂಜ, ಕೋಳಿ ಬಾಳ್‌-05 ಬೆಲೆ ಬಾಳುವುದಿಲ್ಲ. ಸದ್ರಿ ಸೊತ್ತುಗಳನ್ನು  ಹಾಗೂ ಜೂಜಾಟಕ್ಕೆ ಬಳಸಿದ 9870/- ನಗದನ್ನು ಮುಂದಿನ ಕ್ರಮದ ಬಗ್ಗೆ ಪಂಚರ ಸಮಕ್ಷಮ ವಶಕ್ಕೆ ಪಡೆಯಲಾಯಿತು. ಅಲ್ಲದೇ 07 ಜನ ಆರೋಪಿಗಳು, ಸೊತ್ತುಗಳೊಂದಿಗೆ 21.15 ಗಂಟೆಗೆ ಠಾಣೆಗೆ ಬಂದು ಆರೋಪಿಗಳು ರಾಜ್ಯ ಸರಕಾರದ ಕೋವಿಡ್-19 ನಿಯಮವನ್ನು ಉಲ್ಲಂಘಿಸಿ ಕೋಳಿ ಅಂಕದಲ್ಲಿ ಭಾಗಿಯಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 110/2021 ಕಲಂ: 269 IPC & 87, 93 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬೈಂದೂರು: ದಿನಾಂಕ 04/07/2021 ರಂದು ಸಂಜೆ ಸುಮಾರು 04:00 ಗಂಟೆಗೆ ಪಿರ್ಯಾದಿದಾರರಾಧ ರಾಜು ಖಾರ್ವಿ (47) ತಂದೆ; ರಾಮ ಖಾರ್ವಿ, ವಾಸ; ದುಪ್ಪನಮನೆ, ಫಿಶರಿಸ್ ಕಾಲೋನಿ, ಉಪ್ಪುಂದ ಗ್ರಾಮ, ಬೈಂದೂರು ಇವರ ತಮ್ಮಂದಿರಾದ ಪರಮೇಶ್ವರ,  ಕೃಷ್ಣ, ವೀರಭದ್ರ ಮತ್ತು ಅವರ ಹೆಂಡತಿಯರಾದ ಮಮತ  ಪದ್ಮಾವತಿ ಎಂಬುವವರು ಇವರ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಇವರನ್ನು ಉದ್ದೇಶಿಸಿ ಬೋಳಿ ಮಗನೇ ಹೊರೆಗೆ ಬಾ ಎಂದು ಹೇಳಿದ್ದು, ರಾಜು ಖಾರ್ವಿ ರವರು ಹೊರಗೆ ಬಂದಾಗ ಪರಮೇಶ್ವರನು ಅವನ ಕೈಯಲ್ಲಿದ್ದ ಕೋಲಿನಿಂದ ರಾಜು ಖಾರ್ವಿ ರವರ ಕುತ್ತಿಗೆ ಹಾಗೂ ಬೆನ್ನಿಗೆ ಹೊಡೆದಿದ್ದಲ್ಲದೆ ಕೃಷ್ಣ, ವೀರಭದ್ರ ರವರು ಕೈಯಿಂದ ಹೊಡೆದಿದ್ದು ಅಲ್ಲದೆ ಮಮತ ಹಾಗೂ ಪದ್ಮಾವತಿರವರು ಅವಾಚ್ಯ ಶಬ್ದದಿಂದ ಬೈದು ನಂತರ ರಾಜು ಖಾರ್ವಿ ರವರು ಜೋರಾಗಿ ಬೊಬ್ಬೆ ಹೊಡೆದಿದ್ದು ಅಲ್ಲೆ ಹತ್ತಿರದಲ್ಲಿದ್ದ ಜಗನ್ನಾಥರವರು ಓಡಿ ಬಂದಾಗ ರಾಜು ಖಾರ್ವಿ ರವರನ್ನು ಉದ್ದೇಶಿಸಿ ಇನ್ನೂ ಬಿಡುವುದಿಲ್ಲವೆಂದು ಹೇಳಿ ಹೋಗಿರುತ್ತಾರೆ, ಈ ಬಗ್ಗೆ ರಾಜು ಖಾರ್ವಿ ರವರು ಅಂಜಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 114/2021 ಕಲಂ: 447.324.323.504. ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾಧ ರಘುರಾಮ (39) ತಂದೆ:ದೇವ ವಾಸ: ಹೆರಿಕೆರೆ ಸಳ್ವಾಡಿ  ಕಾಳಾವರ ಗ್ರಾಮ    ಕುಂದಾಪುರ ಇವರು ಬೇಳೂರಿನಿಂದ ಕೊಯ್ಯಿ ಕೂರುವಿಗೆ ಬರುವಾಗ ದಿನಾಂಕ 03/07/2021 ರಂದು 12:45 ಗಂಟೆಯ ಸಮಯಕ್ಕೆ ಮಣೂರು ಗ್ರಾಮದ ಕ್ಯೋಕೂರು ಎಂಬಲ್ಲಿ KA-19-AB-2014 ನೇ ಟಿಪ್ಪರ್ ಚಾಲಕ ಹೈಟೆಂಶನ್ ವಯರ್ ಹಾದೂ ಹೋಗಿರುವುದನ್ನು ಗಮನಿಸಿಯೂ ನಿರ್ಲಕ್ಷತನದಿಂದ ಟಿಪ್ಪರ್ ನ ಹಿಂಬದಿಗೆ ಚಲಾಯಿಸಿ ಹಿಂಬದಿ ಟ್ರೇ ಯನ್ನು ಎತ್ತಿಕೊಂಡು ಟಿಪ್ಪರನ್ನು ತೊಳೆಯುವ ಉದ್ದೇಶದಿಂದ ರಸ್ತೆಯ ತಗ್ಗು ಸ್ಥಳದಲ್ಲಿರುವ ನೀರಿರುವ ಜಾಗಕ್ಕೆ ಹಿಮ್ಮುಖವಾಗಿ  ಚಲಿಸಿ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಕಾರಣ ಟಿಪ್ಪರ್ ನ ಕಂಡೆಕ್ಟರ್ ಸೀಟಿನಲ್ಲಿ ಕುಳಿತಿದ್ದ ಗುರುಪ್ರಸಾದ ಎಂಬವರಿಗೆ ವಿದ್ಯುತ್ ಶಾಖ್ ಆಗಿ ಅವರ ಕೈ ಕಾಲು ಮತ್ತು ಬೆನ್ನಿಗೆ ಸುಟ್ಟ ಗಾಯವಾಗಿದ್ದು ಲಾರಿಯ ಎದುರಿನ ಎರಡೂ ಚಕ್ರಗಳು ಬೆಂಕಿ ಹತ್ತಿಕೊಂಡು ಸುಟ್ಟು ಹೋಗಿರುವುದಾಗಿದೆ. ಈ ಬಗ್ಗೆ ಗಾಯಗೊಂಡ ಗುರು ಪ್ರಸಾದ ರವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು, ರಘುರಾಮ ರವರು ಚಿಕಿತ್ಸೆಯಲ್ಲಿದ್ದ ಗುರು ಪ್ರಸಾದನ ಆರೈಕೆಯಲ್ಲಿದ್ದದರಿಂದ ದೂರು ನೀಡಲು ವಿಳಂಭವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 133/2021 ಕಲಂ: 279,285.338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-07-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080