ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾದ ರೋನಾಲ್ಡ್‌‌‌ಡಿಸೋಜ(48), ತಂದೆ: ಸಂತಾನ್‌‌ಡಿಸೋಜ,ವಾಸ: ಪರಾರಿಹೌಸ್‌‌‌, ಕೊಳಲಗಿರಿ ಪೋಸ್ಟ್‌‌, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರೊಂದಿಗೆ ವಾಸವಾಗಿದ್ದ ಅವರ  ತಮ್ಮ ಆಲ್ವಿನ್‌ ‌ಡಿಸೋಜಾ(40) ರವರು ದಿನಾಂಕ 30/06/2021 ರಂದು ರಾತ್ರಿ 11:30 ಗಂಟೆಗೆ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಒದ್ದಾಡುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಜೀವನಜ್ಯೋತಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಿನಾಂಕ 01/07/2021 ರಂದು ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ದಿನಾಂಕ 05/07/2021 ರಂದು ಬೆಳಿಗ್ಗೆ 4:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಅಲ್ವಿನ್‌‌ಡಿಸೋಜಾರವರು ಸುಮಾರು 2 ವರ್ಷದ ಹಿಂದೆ ಹೆಂಡತಿಯಿಂದ ವಿಚ್ಛೆದನ ಪಡೆದಿರುತ್ತಾರೆ. ಹಾಗೂ ಕಳೆದ 2 ತಿಂಗಳಿನಿಂದ ಸರಿಯಾಗಿ ಕೆಲಸ ಇಲ್ಲದೇ ಇದ್ದು, ಯಾರೊಂದಿಗೂ ಮಾತನಾಡದೇ, ಸ್ನೇಹಿತರ ಗೆಳೆತನವಿಲ್ಲದೇ ಅಥವಾ ಬೇರೆ ಯಾವುದೋ ಕಾರಣದಿಂದ ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್  ಠಾಣೆ ಯುಡಿಆರ್ ಕ್ರಮಾಂಕ 36/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಗಣೇಶ (45), ತಂದೆ: ನಾರಾಯಣ, ವಾಸ: ಸೀತಾನಾರಾಯಣ ನಿಲಯ, ಜನತಾ ಕಾಲನಿ, ನಾಯಕ್ ವಾಡಿ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ತಮ್ಮ ಪ್ರಕಾಶರವರು (40) ರವರು ದಿನಗೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 01/07/2021ರಂದು 10:30 ಗಂಟೆಗೆ ಕುಂದಾಪುರ ತಾಲೂಕಿನ ಹಂಗಳೂರು ವೆಂಕಟಲಕ್ಷ್ಮಿ ಹಾಲ್  ಬಳಿ ಸಿಮೆಂಟ್ ಚೀಲ ಎತ್ತಿಕೊಂಡು ಹೋಗುತ್ತಿರುವಾಗ ರಸ್ತೆಯಲ್ಲಿದ್ದ ನೀರಿನ ಮೇಲೆ ಕಾಲಿಟ್ಟ ಪರಿಣಾಮ ಪ್ರಕಾಶರವರು ಸಿಮೆಂಟ್ ಚೀಲದೊಂದಿಗೆ ಜಾರಿ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಕಿತ್ಸೆಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 04/07/2021 ರಂದು  ಸ್ವಂತ ಊರಾದ ಗಂಗೊಳ್ಳಿಯಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಮನೆಗೆ ಕರೆದುಕೊಂಡು ಬಂದಿರುವುದಾಗಿದೆ. ದಿನಾಂಕ 04/07/2021 ರಾತ್ರಿ ಪ್ರಕಾಶರವರು ಔಷದಿ ಕುಡಿದು ಮಲಗಿದ್ದವರನ್ನು  ದಿನಾಂಕ 05/07/2021 ರಂದು ಬೆಳಗ್ಗೆ 06:00 ಗಂಟೆಗೆ ನೋಡಲಾಗಿ ಚಿಕಿತ್ಸೆ ಅಸೌಖ್ಯದಿಂದಿದ್ದು ಈ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣಗಳು

  • ಶಂಕರನಾರಾಯಣ: ಪಿರ್ಯಾದಿದಾರರಾದ ಶಿವರಾಮ ನಾಯ್ಕ (52), ತಂದೆ, ದಿ. ನಾರಾಯಣ ನಾಯ್ಕ, ವಾಸ: ಹಣೆಗೋಡು  ಬೆಂಳಂಜೆ  ಗ್ರಾಮ    ಹೆಬ್ರಿ ತಾಲೂಕು ಇವರಿಗೆ  ಕುಂದಾಪುರ   ತಾಲೂಕಿನ 74  ಉಳ್ಳೂರು ಗ್ರಾಮದ  ಕಾನಹೊಳೆ  ಎಂಬಲ್ಲಿ   ವಾರೀಸು  ಹಕ್ಕಿನ  ಸ್ಥಿರಾಸ್ತಿ  ಇದ್ದು,   ಸ್ಥಿರಾಸ್ತಿಯ  ಹಕ್ಕಿನ  ಬಗ್ಗೆ  ಮಾನ್ಯ ಸಿವಿಲ್  ನ್ಯಾಯಾಲಯದಲ್ಲಿ  ಓ.ಎಸ್,. ನಂಬ್ರ.41/2013 ರಂತೆ    ದಾವೆ  ಹೂಡಿರುತ್ತಾರೆ.   ಮಾನ್ಯ  ನ್ಯಾಯಾಲವು  ಸ್ವತ್ತಿನ  ಮೇಲೆ  1/4  ನೇ   ಅಂಶದ ಹಕ್ಕು ಇರುವುದಾಗಿ   ತೀರ್ಪು ನೀಡಿದ್ದು  ಇತ್ಯರ್ಥಕ್ಕೆ   ಬಾಕಿ  ಇರುತ್ತದೆ. ಈ ಜಾಗದ   ಕೆಲವು   ಭಾಗದಲ್ಲಿ ಪಿರ್ಯಾದಿದಾರರಿಗೆ  ಸೇರಿದ   ಸರ್ವೇ  ನಂಬ್ರ  153/ಪಿ2ಪಿ4  ರಲ್ಲಿ  72  ಸೆಂಟ್ಸು  ಜಾಗ ಇರುತ್ತದೆ.  ಈ  ಜಾಗದಲ್ಲಿ ಅಡಿಕೆ  ಹಾಗೂ ರಾಮಪತ್ರೆ ಹೂ  ಉತ್ಪತಿ  ಇರುತ್ತದೆ. ದಿನಾಂಕ 09/01/2020  ರಂದು  18:00 ಗಂಟೆಗೆ  ಆರೋಪಿ ಕೌಶಿಕ  ನಾಯ್ಕ  (23), ತಂದೆ: ಮಂಜುನಾಥ  ನಾಯ್ಕ, ವಾಸ: ಕನ್ನೇರಿ  ಮನೆ ಕೊಡ್ಲಾಡಿ ಗ್ರಾಮ  ಕುಂದಾಪುರ  ತಾಲೂಕು  ಇವರು ಜಾಗಕ್ಕೆ  ಅಕ್ರಮ ಪ್ರವೇಶ  ಮಾಡಿ  ತೋಟದಲ್ಲಿ  ಇರುವ  ಅಡಿಕೆ  ಹಾಗೂ  ರಾಮಪತ್ರೆಯನ್ನು ಕಳವು  ಮಾಡಿಕೊಂಡು  ಮೋಟಾರ್  ಸೈಕಲ್‌ನಲ್ಲಿ  ಸಾಗಾಟ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2021   ಕಲಂ:   379, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಅಣ್ಣಪ್ಪ ದೇವಾಡಿಗ (36), ತಂದೆ: ಮಂಜುನಾಥ ದೇವಾಡಿಗ, ವಾಸ: ಜನತಾ ಕಾಲನಿ, ಉಳ್ಳೂರು ಕಂದಾವರ, ಕುಂದಾಪುರ ತಾಲೂಕು ಇವರು ಕೋಟೇಶ್ವರ ಪೈ ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು ಅವರ KA-20-EH-0152 ಬೈಕನ್ನು ದಿನಾಂಕ 01/07/2021 ರಂದು 11:00 ಗಂಟೆಗೆ ಪೈ ಐಸ್ ಕ್ರೀಂ ಫ್ಯಾಕ್ಟರಿ ಬಳಿ ಪಾರ್ಕಿಂಗ್ ಮಾಡಿದ್ದು  ದಿನಾಂಕ 02/07/2021 ರಂದು 11:00 ವಾಪಾಸು ಬಂದು ನೋಡಲಾಗಿ ಪಿರ್ಯಾದಿದಾರರು ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇಲ್ಲದೇ ಇದ್ದು ಬೈಕನ್ನು ಯಾರೋ ಕಳ್ಳರು ದಿನಾಂಕ 01/07/2021 ರಂದು 11:00 ಗಂಟೆಯಿಂದ 02/07/2021 ರಂದು 11:00 ಗಂಟೆಯ  ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬೈಕಿನ ಮೌಲ್ಯ 30,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ರಶೀದಾ (27), ತಂದೆ: ಶಬ್ಬೀರ್, ವಾಸ: ಮಹಿಮೂನಾ ಮಂಜಿಲ್ , ಮಸೀದಿ ಹತ್ತಿರ ರೆಂಜಾಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಹಾಗೂ ಅವರ ಮನೆಯವರಿಗೂ ಮತ್ತು ರೆಂಜಾಳ ಮಸೀದಿಯ ಕಮಿಟಿಯವರಿಗೂ ವೈಯಕ್ತಿಕ ಕಾರಣದಿಂದ ತಕರಾರು ಇದ್ದು ಇದೇ ಕಾರಣದಿಂದ ದಿನಾಂಕ 04/07/2021 ರಂದು 16:30 ಗಂಟೆಗೆ  ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ರೆಂಜಾಳ ಮಸೀದಿ ಬಳಿಯ ರಸ್ತೆಯಲ್ಲಿ ಪಿರ್ಯಾದಿದಾರರ ತಂದೆ  ಇಬ್ರಾಹಿಂ ರವರಿಗೆ ಮಸೀದಿಯ ಅಧ್ಯಕ್ಷರಾದ ಮೈಯುದ್ದೀನ್ ಎಂಬುವವರು ಕೈಯಿಂದ ಹಲ್ಲೆ ಮಾಡುತ್ತಿರುವಾಗ ಪಿರ್ಯಾದಿದಾರರರು ನೋಡಿ ಬರಲು ತನ್ನ ಗಂಡ ಶಬ್ಬೀರ್ ರವರನ್ನು ಕಳುಹಿಸಿಕೊಟ್ಟಿದ್ದು, ಜೋರಾಗಿ ಬೊಬ್ಬೆ ಕೇಳಿದಾಗ ಪಿರ್ಯಾದಿದಾರರು ಹಾಗೂ ಅವರ ಮನೆಯವರು ಸ್ಥಳಕ್ಕೆ ಓಡಿ ಹೋಗಿದ್ದು ಆ ಸಮಯ ಮೈಯುದ್ದೀನ್ ರವರು ಶಬ್ಬೀರ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಆ ಸಮಯ ಮೈಯುದ್ದೀನ್, ಹಂಝಾ,ಇಕ್ಬಾಲ್, ಅಬೂಬಕರ್, ಇಕ್ಬಾಲ್, ಮುಕ್ರಿ ಹಂಜಾ, ಸಿರಾಜ್ ಸೇರಿ ಪಿರ್ಯಾದಿದಾರರ ತಂದೆ ಇಬ್ರಾಹಿಂ ಹಾಗೂ ಗಂಡ ಶಬ್ಬೀರ್ ರವರಿಗೆ ಕೈಯಿಂದ ಹಲ್ಲೆ ಮಾಡುತ್ತಿರುವಾಗ ಪಿರ್ಯಾದಿದಾರರು ತಪ್ಪಿಸಲು ಹೋದಾಗ ಆರೋಪಿತರುಗಳು ಪಿರ್ಯಾದಾರರಿಗೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2021 ಕಲಂ: 143,147, 323, 504, 354 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಮೊಹಿಯುದ್ದೀನ್ (31), ತಂದೆ: ಹುಸೇನ್, ವಾಸ: ಮಸೀದಿ ಹತ್ತಿರ, ರೆಂಜಾಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ರೆಂಜಾಳ ಮಸೀದಿಯ ಅಧ್ಯಕ್ಷರಾಗಿದ್ದು, ರೆಂಜಾಳ ಮಸೀದಿಯ ಕಮಿಟಿಯವರಿಗೂ ಹಾಗೂ ಆರೋಪಿತರಾದ 1.ಇಬ್ರಾಹಿಂ, 2.ಶಬ್ಬೀರ್ ಇವರಿಗೂ ವೈಯಕ್ತಿಕ ಕಾರಣದಿಂದ ತಕರಾರು ಇದ್ದು ಇದೇ ಕಾರಣದಿಂದ ದಿನಾಂಕ 04/07/2021 ರಂದು 12:00 ಗಂಟೆಗೆ ಆರೋಪಿ ಇಬ್ರಾಹಿಂ ಪಿರ್ಯಾದಿದಾರರ ಮನೆಗೆ ಹೋಗಿ ಗಲಾಟೆ ಮಾಡಿ ಮನೆಯಲ್ಲಿ ಇದ್ದ ಹೆಂಗಸರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಸಂಜೆ 04:30 ಗಂಟೆಗೆ ಪಿರ್ಯಾದಿದಾರರು ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ರೆಂಜಾಳ ಮಸೀದಿ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿತರುಗಳಾದ ಇಬ್ರಾಹಿಂ ಹಾಗೂ ಶಬ್ಬೀರ್ ರವರುಗಳು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2021 ಕಲಂ: 341,323,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-07-2021 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080