ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 04 /06/2022  ರಂದು  12:30 ಘಂಟೆಗೆ  ಪಿರ್ಯಾದಿದಾರರಾಧ ಪ್ರಸಾದ  ವಸಂತ  ನಾಯ್ಕ  (35) ತಂದೆ, ವಸಂತ ನಾಯ್ಜ   ವಾಸ, ಗುರು  ರಾಘವೇಂದ್ರ  ನಿಲಯ ಹಂದಿಗೋಣ  ಗ್ರಾಮ ಕುಮಟಾ   ತಾಲೂಕು ಇವರು  ಕೆಎ-20 ಎಬಿ -8918 ನೇ  ನಂಬ್ರದ  ಟಿಪ್ಪರ   ವಾಹನದಲ್ಲಿ  ಬೆಳ್ಬೆ   ಕಡೆಗೆ  ಹೋಗಲು   ಕುಂದಾಪುರ  ತಾಲೂಕಿನ   76 ಹಾಲಾಡಿ ಗ್ರಾಮದ   ಶಂಕರ ಭಟ್ಟರ  ಕೆರೆ  ಎಂಬಲ್ಲಿ ಹೋಗುತ್ತಿರುವಾಗ  ಆರೋಪಿಯು  ಕೆಎ-19 ಸಿ- 7661  ನೇ  ನಂಬ್ರದ  ಟಾಟಾ   ಗೂಡ್ಸವ ವಾಹನವನ್ನು ಅತೀ ವೇಗ   ಹಾಗೂ  ಅಜಾಗರೂಕತೆ ಯಿಂದ  ರಸ್ತೆಯ  ಬಲ ಬದಿಗೆ  ಚಲಾಯಿಸಿ ಟಿಪ್ಪರ  ಲಾರಿಗೆ  ಡಿಕ್ಕಿ  ಹೊಡೆದಿದ್ದು ಇದರ  ಪರಿಣಾಮ ಕೆಎ-19 ಸಿ- 7661  ನೇ  ನಂಬ್ರದ  ಟಾಟಾ  ಗೂಡ್ಸ ವಾಹನ ಚಾಲಕ  ಶೇಖರ  ಇವರಿಗೆ  ರಕ್ತಗಾಯುವಾಗಿರುತ್ತದೆ, ಹಾಗೂ  ಎರಡು  ವಾಹನ  ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ: 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 04 /06/2022  ರಂದು  14:30 ಘಂಟೆಗೆ ಫಿರ್ಯಾದಿದಾರರಾದ ಬಿ. ಸುಹಾಸ್  ಯಡಿಯಾಳ   ತಂದೆ, ರಾಮಕೃಷ್ಣ ಯಡಿಯಾಳ ವಾಸ, ಬರೆಗುಂಡಿ  ಹಳ್ಳಿಹೊಳೆ   ಗ್ರಾಮ ಬೈಂದೂರು  ಇವರು   ಕೆಎ-20 ಎಮ್‌ಎ-882 ನೇ ನಂಬ್ರದ  ಕಾರಿನಲ್ಲಿ ಬೈಂದೂರು  ತಾಲೂಕಿನ  ಹಳ್ಳಿಹೊಳೆ  ಗ್ರಾಮದ  ಬರೆಗುಂಡಿ  ಕ್ರಾಸ್ ಬಳಿ  ಸಿದ್ದಾಪುರ ಕಡೆಗೆ  ಬರುತ್ತಿರುವಾಗ ಆರೋಪಿಯು  ಕೆಎ-20 ಸಿ-2312 ನೇ ನಂಬ್ರದ ಪಿಕಪ್  ವಾಹನದಲ್ಲಿ  ನಿರ್ಲಕ್ಷತನದಿಂದ  ಕಬಿಣ್ಣದ  ಪೈಪ್ ಗಳನ್ನು  ಲೋಡ್  ಮಾಡಿಕೊಂಡು ಅತೀ ವೇಗ  ಹಾಗೂ    ಅಜಾಗರೂಕತೆಯಿಂದ  ಚಲಾಯಿಸಿ  ಒಮ್ಮಲೇ    ಬ್ರೇಕ್  ಹಾಕಿದ  ಪರಿಣಾಮ   ಪಿಕಪ್  ವಾಹನದಲ್ಲಿ ಇದ್ದ   ಕಬಿಣ್ಣದ  ಪೈಪಗಳು  ವಾಹನದಿಂದ  ಮುಂದೆ   ಬಂದು ಕಾರಿನ  ಮೇಲೆ   ಬಿದ್ದು  ಕಾರಿನ   ಎದುರುಗಡೆ   ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: 279 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಮನೋಹರ ಪೂಜಾರಿ (21) ತಂದೆ: ಮಹಾಬಲ ಪೂಜಾರಿ ವಾಸ: ತೆಂಕಮನೆ, ಯಡಕಂಠ , ಹೆರೂರು ಗ್ರಾಮ, ರಾಗಿಹಕ್ಲು ಪೋಸ್ಟ್ ,ಬೈಂದೂರು ತಾಲೂಕು. ಇವರು ದಿನಾಂಕ 03/06/2022 ರಂದು ಸಂಜೆ 7:00 ಗಂಟೆಗೆ   ತಂಗಿಯನ್ನು ಕರೆದುಕೊಂಡು ಬರಲು ಮೆಕೋಡಿನಿಂದ ನಾಗೂರಿಗೆ ಅವರ  KA-20 EN-0145 ನಂಬ್ರದ ಹೊಂಡಾ ಎಕ್ಟಿವಾ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಕಂಬದಕೋಣೆ  ಗ್ರಾಮದ ಹಳೆಗೇರಿ ಮಸೀದಿ ಬಳಿ ತಲುಪಿದಾಗ ಎದುರಿನಿಂದ KA-41 U-3158 ನೇ ಪಲ್ಸರ್ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಮನೋಹರ ಪೂಜಾರಿ ರವರ  ಹೊಂಡಾ ಎಕ್ಟಿವಾ ಸ್ಕೂಟರ್ ಗೆ ಮುಂಬಾಗಕ್ಕೆ ಡಿಕ್ಕಿ  ಹೊಡೆದ ಪರಿಣಾಮ ಮನೋಹರ ಪೂಜಾರಿ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು , ಪರಿಣಾಮ ಮನೋಹರ ಪೂಜಾರಿ ರವರ ಮುಖ, ದವಡೆ, ಹಲ್ಲುಗಳಿಗೆ ಒಳಪೆಟ್ಟು, ಎಡ ಮತ್ತುಬಲ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಇವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 107/2022 ಕಲಂ: 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ದಿನಾಂಕ 04/06/2022 ರಂದು ಪಿರ್ಯಾದಿದಾರರಾದ ನವೀನ್‌‌ ಕುಮಾರ್‌ ಎಲ್‌., (39) ತಂದೆ: ಲಕ್ಷ್ಮಣ ಎನ್‌‌., ವಾಸ: ಸಿದ್ದೇಶ್ವರ ನಗರ, ಹೊಳೆಹೊನ್ನೂರು ರಸ್ತೆ, ಶಿವಮೊಗ್ಗ ಇವರು KA-14 N-7724 ನೇ ಕಾರಿನಲ್ಲಿ ತಾಯಿ ಪದ್ಮ, ಪತ್ನಿ ಶೃತಿ ಮತ್ತು ಮಗಳು ಗ್ರೀಷ್ಮಾಳೊಂದಿಗೆ ಧಾರ್ಮಿಕ ಕ್ಷೇತ್ರ ದರ್ಶನ ಮಾಡಿ  ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ವಾಪಾಸು ಬರುತ್ತಿದ್ದು, 17:45 ಗಂಟೆಗೆ ಮರ್ಣೆ ಗ್ರಾಮದ ಕೈಕಂಬ ಜಂಕ್ಷನ್‌ ಬಳಿ ಎದುರುಗಡೆಯಿಂದ KA-19 N-2212 ನೇ ಕಾರನ್ನು ಅದರ ಚಾಲಕ ದೇವೇಂದ್ರ ನಾಯ್ಕ್‌ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಯದ್ವಾತದ್ವಾ ಚಲಾಯಿಸಿಕೊಂಡು ಬಂದು ನವೀನ್‌‌ ಕುಮಾರ್‌ ಎಲ್‌ ರವರು ಚಲಾಯಿಸಿಕೊಂ ಡು ಬರುತ್ತಿದ್ದ KA-14 N-7724  ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಶ್ರೀಮತಿ ಪದ್ಮ, ಶ್ರೀಮತಿ ಶೃತಿ ಹಾಗೂ ಕುಮಾರಿ ಗ್ರೀಷ್ಮಾರಿಗೆ ಸಾಧಾರಣ ಸ್ವರೂಪದ ಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2022 ಕಲಂ: 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾಧ ಸಂಗೀತಾ, (31) ಗಂಡ:ನಾಗರಾಜ, ವಾಸ: ರಕ್ತೇಶ್ವರಿ ದೇವಸ್ಥಾನ ಹತ್ತಿರ, ಬಾಪುತೋಟ, ಮಲ್ಪೆ,ಕೊಡವೂರು ಇವರು ಮಲ್ಪೆ ಯಲ್ಲಿ  ಮೀನು ಬಾಕ್ಸ್ ಹೊರುವ ಕೆಲಸ ಮಾಡಿಕೊಂಡಿದ್ದು, ಮದುವೆ ಆಗಿ ಇಬ್ಬರೂ ಮಕ್ಕಳು ಇರುತ್ತಾರೆ, ಇವರ ಗಂಡ ಸುಮಾರು 10 ವರ್ಷಗಳ ಹಿಂದೆ ಇವರನ್ನು ಬಿಟ್ಟು ಹೋಗಿ ಬೇರೆ ಮದುವೆ ಆಗಿರುತ್ತಾರೆ, ಇವರಿಗೆ 9 ವರ್ಷಗಳಿಂದ ಕೊಪ್ಪಳದ ಹಾಲಪ್ಪ ಎಂಬಾತನ ಪರಿಚಯವಿದ್ದು ಹಾಲಪ್ಪನು ಮಲ್ಪೆಗೆ ಮೀನು ಕೆಲಸಕ್ಕೆ ಬಂದಾಗ ಪ್ರತಿ ದಿನ ಇವರ ರೂಮಿಗೆ ಹೋಗುತ್ತಿದ್ದನು. ಹಾಲಪ್ಪನು ಪ್ರತಿದಿನ ಇವರ ರೂಮಿಗೆ ಕುಡಿದು ಬಂದು ಸಂಗೀತಾ ಇವರಿಗೆ ಕಿರುಕುಳ ನೀಡುತ್ತಿರುತ್ತಾನೆ , ದಿನಾಂಕ 27/05/2022 ರಂದು ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ  ಹಾಲಪ್ಪನು  ಸಂಗೀತಾ ಇವರ ರೂಮಿಗೆ  ಬಂದು ನಿನಗೆ ಬೇರೆಯವರ ಜೊತೆ ಸಂಬಂಧ ಇದೆ ಎಂದು ಹೇಳಿ ಸಂಗೀತಾ ಇವರಿಗೆ ಹೊಡೆದು  ರೂಮಿನಲ್ಲಿ ಕೂಡಿಹಾಕಿ ಕೈಯನ್ನು ಕಟ್ಟಿ  ಬಾಯಿಗೆ ಬಟ್ಟೆ ಇಟ್ಟು ಗ್ಯಾಸಿ ನಿಂದ  ಸೌಟನ್ನು ಬಿಸಿ ಮಾಡಿ  ಕೈ ಬೆರಳುಗಳಿಗೆ ಹಾಗೂ ಎರಡು  ಕಾಲುಗಳಿಗೆ ಬರೆ ಹಾಕಿ  ಸುಟ್ಟಿರುತ್ತಾನೆ, ಸಂಗೀತಾ ಇವರ  ತಾಯಿ ಮತ್ತು ನೆರೆಕೆರೆಯವರು ಇವರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಾಲಪ್ಪನು ಪಿರ್ಯಾದಿದಾರರಿಗೆ ತೊಂದರೆ ನೀಡಬಹುದು ಎಂದು ವೈದ್ಯಾಧಿಕಾರಿಯವರಲ್ಲಿ ಸಾಂಬಾರು ಚೆಲ್ಲಿ ಸುಟ್ಟು ಗಾಯವಾಗಿರುತ್ತದೆ  ಎಂದು ತಿಳಿಸಿ ಒಂದು ವಾರ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿ  ಮನೆಗೆ ಬಂದು ನೆರೆಕೆರೆಯವರಲ್ಲಿ ವಿಚಾರಿಸಿ  ಹಾಲಪ್ಪನು  ಇನ್ನು ಮುಂದೆ ಸಂಗೀತಾ ರವರಿಗೆ  ತೊಂದರೆ ನೀಡಬಹುದು ದಿನಾಂಕ 04/06/2022 ರಂದು ಠಾಣೆಗೆ ಬಂದು ಹಾಲಪ್ಪನ ವಿರುದ್ದ ದೂರು ನೀಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2022 ,ಕಲಂ: 342, 324,354,506 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 04/06/2022 ರಂದು ಮಧ್ಯಾಹ್ನ 12:30 ಗಂಟೆಗೆ ಪಿರ್ಯಾದಿದಾರರಾಧ ರಕ್ಷಿತ (28), ಗಂಡ: ಪ್ರವೀಣ ಪೂಜಾರಿ  ವಾಸ: ಜಾನಿಶ್ರೀ ನಿಲಯ,  ಪಂಚಾಯತ್ ಹತ್ತಿರ,  ರೆಂಜಾಳ ಗ್ರಾಮ , ಕಾರ್ಕಳ ತಾಲೂಕು ಇವರು ಅವರ ಸ್ಕೂಟಿಯಲ್ಲಿ ರೆಂಜಾಳದಿಂದ ಬೊರ್ಕಟ್ಟೆ ರಸ್ತೆಯಲ್ಲಿ ಸವಾರಿ ಮಾಡಿ ಬರುತ್ತಾ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಮಂಜುಗೋಳಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಬೊರ್ಕಟ್ಟೆ ಕಡೆಯಿಂದ KA-20-U-3343 ನೇ ಮೋಟಾರ್ ಸೈಕಲಿನಲ್ಲಿ ಸವಾರನು ಸಹಸವಾರನೊಂದಿಗೆ ರಕ್ಷಿತ ಇವರು ಸವಾರಿ ಮಾಡುತ್ತಿದ್ದ ಸ್ಕೂಟಿಯ ಎದುರು ಬಂದು ಮೋಟಾರ್ ಸೈಕಲನ್ನು ಅಡ್ಡ ಇಟ್ಟು ತಡೆದು ನಿಲ್ಲಿಸಿ ಮೋಟಾರ್ ಸೈಕಲಿನ ಹಿಂಬದಿ ಸವಾರನು ರಕ್ಷಿತ ಇವರ ಮೈಗೆ ಕೈ ಹಾಕಿ ಮಾನಹಾನಿ ಮಾಡಿ ಕೈಯನ್ನು ಎಳೆದಾಗ ಇವರು ಜೋರಾಗಿ ಬೊಬ್ಬೆ ಹಾಕಿದಾಗ ಮೋಟಾರ್ ಸೈಕಲ್ ಸವಾರನು ಸಹ ಸವಾರನೊಂದಿಗೆ ಮೋಟಾರ್ ಸೈಕಲಿನೊಂದಿಗೆ  ರೆಂಜಾಳ ಕಡೆ ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2022 ಕಲಂ: 341,354 ಜತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-06-2022 10:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080