ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ; ಪಿರ್ಯಾದಿದಾರರಾದ ದೀಪಕ್ ಎಂ. ಎಂ (31) ತಂದೆ: ಮನ್ಮಥ ಎ. ಎಸ್ ವಾಸ: ಅಪ್ಪಂಗಾಯ ಮನೆ, ಅಜ್ಜಾವರ ಗ್ರಾಮ ಮತ್ತು ಅಂಚೆ, ಸುಳ್ಯ ತಾಲೂಕು ರವರು ತನ್ನ ಕಾರು ನಂಬ್ರ KA-21 N-9691 ನೇದರಲ್ಲಿ ಸಂಸಾರ ಸಮೇತವಾಗಿ ಹೊನ್ನಾವರಕ್ಕೆ ಹೋಗಿದ್ದು ದಿನಾಂಕ 04/06/2022 ರಂದು ಹೊನ್ನಾವರದಿಂದ ವಾಪಾಸು ಸುಳ್ಯಕ್ಕೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಅರಾಟೆ ತಲುಪುವಾಗ ರಾತ್ರಿ ಸಮಯ ಸುಮಾರು 9:30 ಗಂಟೆಗೆ ಕುಂದಾಪುರ ಕಡೆಯಿಂದ ತ್ರಾಸಿ ಕಡೆಗೆ ಅನ್ವೇಶ್ ಎಂಬವರು KA-20 EN-0461 ನೇ ಬೈಕ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸವಾರಿ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದು ಕಾರಿನ ಎಡಬದಿಯ ಬಂಪರ್ ನ ಭಾಗ ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿದ್ದವರಿಗೆ ಯಾವುದೇ ಗಾಯನೋವು ಆಗಿರುವುದಿಲ್ಲ. ಬೈಕ್ ಸವಾರ ಅನ್ವೇಶ್ ರವರಿಗೆ ಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಹೋಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2022 ಕಲಂ: 279, 337 ಐಪಿಸಿ ಮತ್ತು 208,177 ಐಎಂವಿ ಆಕ್ಟ್‌ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸಂದೇಶ್ (38) ತಂದೆ: ಕುಟ್ಟಿ ಸಾಲಿಯಾನ್, ವಾಸ: ಗೋವಿಂದೂರು, ಕಾಂತರಗೋಳಿ ಪೋಸ್ಟ್, ಎರ್ಲಪ್ಪಾಡಿ ಗ್ರಾಮ, ಕಾರ್ಕಳ ಇವರ ತಂದೆ ಕುಟ್ಟಿ ಸಾಲಿಯಾನ್ (72) ಎಂಬವರು ಬೈಲೂರು ಸಾಲಿಯಾನ್ ಹೇರ್ ಕಟ್ಟಿಂಗ್ ಸೆಲೂನ್ ಎಂಬ ಅಂಗಡಿ ನಡೆಸಿಕೊಂಡಿದ್ದು ಕಾರ್ಕಳ ತಾಲೂಕು ನೀರೆ ಗ್ರಾಮದಲ್ಲಿ  ತನ್ನ ಮಗಳೊಂದಿಗೆ ವಾಸವಾಗಿರುತ್ತಾರೆ. ಅವರು  ಅಸ್ತಮಾ ಮತ್ತು ಶುಗರ್  ಕಾಯಿಲೆಯಿಂದ ಬಳಲುತ್ತಿದ್ದು ಅದೇ ಕಾರಣದಿಂದ ಖಿನ್ನತೆಯಿಂದ ಇದ್ದರು ಅನಾರೋಗ್ಯದ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ 04/06/2022 ರಂದು ಅಂಗಡಿಯಿಂದ ಆರೋಗ್ಯ ಸರಿ ಇಲ್ಲವೆಂದು ಹೇಳಿ ಮಧ್ಯಾಹ್ನ ಮನೆಗೆ ಹೋಗಿದ್ದು ಸಂಜೆ 7:೦೦ ಗಂಟೆಗೆ ವಾಪಾಸು ಅಂಗಡಿಗೆ ಬಂದು ವೈದ್ಯರಲ್ಲಿಗೆ ಹೋಗಬೇಕೆಂದು ಹಣ ಪಡೆದುಕೊಂಡು ಹೋಗಿದ್ದು ಮನೆಗೆ ವಾಪಾಸು ಹೋಗದ ಕಾರಣ  ಹುಡುಕಾಡಿದ್ದು ರಾತ್ರಿ 9:45 ಗಂಟೆಗೆ ಬೈಲೂರಿನಲ್ಲಿರುವ ಸೆಲೂನ್‌ನ ಹಿಂಭಾಗ ಬಾವಿಯ ನೀರು ಸೇದುವ ಪೈಪಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು  ಮೃತದೇಹವನ್ನು ಕಾರ್ಕಳ ಸರಕಾರಿ  ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು  ಕುಟ್ಟಿ ಸಾಲಿಯಾನ್ ರವರು ಅನಾರೋಗ್ಯದ ಕಾರಣದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಯು.ಡಿ.ಆರ್ ಕ್ರಮಾಂಕ 25/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಸುದರ್ಶನ ಶೆಟ್ಟಿ (49) ತಂದೆ:ಸದಾಶಿವ ಶೆಟ್ಟಿ ವಾಸ: ಚಾರ ಸಣ್ಣಮನೆ ಚಾರ ಗ್ರಾಮ ಹೆಬ್ರಿ ಇವರ ತಂದೆ ಸದಾಶಿವ ಶೆಟ್ಟಿ (81) ರವರು ಪ್ರಾಯಸ್ಥರಾಗಿದ್ದು ಸುಮಾರು ಮೂರು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಈ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆ ಹಾಗೂ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಸಿದರೂ ಗುಣಮುಖವಾಗಿರುವುದಿಲ್ಲ. ಆದರ್ಶ ಆಸ್ಪತ್ರೆಯ ವೈದ್ಯರು ಕ್ಯಾನ್ಸರ್ ಕಾಯಿಲೆಯ ಬಗ್ಗೆ ದಿನಾಂಕ 06/06/2022 ರಂದು ಸರ್ಜರಿ ಮಾಡುವುದಾಗಿ ತಿಳಿಸಿರುತ್ತಾರೆ. ಸದಾಶಿವ ಶೆಟ್ಟಿ ರವರು ಸರ್ಜರಿಯ ಬಗ್ಗೆ ಹೆದರಿ ದಿನಾಂಕ 05/06/2022 ರಂದು  ಮುಂಜಾನೆ 01:30 ಗಂಟೆಗೆ ಚಾರ ಗ್ರಾಮದ ಚಾರ ಸಣ್ಣಮನೆ ಎಂಬಲ್ಲಿರುವ ಮನೆಯ ಹೊರಗಡೆ ಯಾವುದೋ ಕೀಟ ನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥಗೊಂಡವರನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ 03:30 ಗಂಟೆಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂದೇಹವಿರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಯು.ಡಿ.ಆರ್ ಕ್ರಮಾಂಕ 21/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಪಿರ್ಯಾದಿದಾರರಾದ ಅಂಬಿಕಾ ರಾಣಿ ಕೆ (31) ತಂದೆ: ದಿ ಪಿ ವಿಶ್ವ ನಾಥ ಕಾರಂತ ವಾಸ: ಪ್ಲಾಟ್ ನಂಬ್ರ 502 ಸುವರ್ಣ ರೆಸಿಡೆನ್ಸಿ ಚಿತ್ರಪಾಡಿ ಗ್ರಾಮ ಬ್ರಹ್ಮಾವರ ಇವರು  ಮತ್ತು ಆರೋಪಿಗಳು ಚಿತ್ರಪಾಡಿ ಗ್ರಾಮದ ಸುವರ್ಣ ರೆಸಿಡೆನ್ಸಿಯ ಅಪಾರ್ಟಮೆಂಟಿನ ವಾಸಿಗಳಾಗಿದ್ದು ದಿನಾಂಕ 18/04/2022 ರಂದು ರಾತ್ರಿ 10:00 ಗಂಟೆಗೆ ಸದ್ರಿ ಅಪಾರ್ಟಮೆಂಟಿನಲ್ಲಿ ನಡೆದ  ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಂಬಿಕಾ ರಾಣಿ ಕೆ ರವರಿಗೂ ಮತ್ತು ಆರೋಪಿಗಳಿಗೂ  ಮಾತಿನ ಚಕಮಕಿ ನಡೆದು ಈ ಸಂದರ್ಭದಲ್ಲಿ ಆರೋಪಿಗಳಾದ 1. ವೆಂಕಟೇಶ ಪ್ರಸಾದ 2. ಶ್ರೀಮತಿ ಜಯಶ್ರಿ ವೆಂಕಟೇಶ್ ಪ್ರಸಾದ,  3. ಶ್ರೀಮತಿ ಮೇಘನಾ ಶೆಟ್ಟಿ 4. ಅಶ್ವಥ ಶೆಟ್ಟಿ, 5. ಶ್ರೀಮತಿ ಅಕ್ಷಯ, 6. ಶ್ರೀಮತಿ ಆಶಾ, 7. ಅಕ್ಷಯ ಇವರುಗಳು ಅಂಬಿಕಾ ರಾಣಿ ಕೆ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬಾ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂಬುವುದಾಗಿ  ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 81/2022 ಕಲಂ: 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-06-2022 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080