ಅಭಿಪ್ರಾಯ / ಸಲಹೆಗಳು

ಇಸ್ಪೀಟ್‌ ಜುಗಾರಿ ಪ್ರಕರಣ

  • ಮಲ್ಪೆ: ದಿನಾಂಕ 04/06/2021 ರಂದು ಸಕ್ತಿವೇಲು ಈ ಪಿಎಸ್ಐ ಮಲ್ಪೆ ಠಾಣೆ ರವರಿಗೆ 15:00 ಗಂಟೆಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಕೊಡವೂರು ಗ್ರಾಮದ ಲಕ್ಷ್ಮೀ ನಗರ ಗರಡೆ 5 ನೇ ಕ್ರಾಸ್ ನಲ್ಲಿರುವ ಸುಕೇಶ್ ಮೇಸ್ತ್ರಿ ಮನೆಯ ಹಿಂಬದಿ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಇಸ್ಟೀಟ್ ಜುಗಾರಿ ಹಿಂಬದಿ ಮರೆಯಲ್ಲಿ ಸ್ವಲ್ಪ ದೂರದಲ್ಲಿ  ಜೀಪನ್ನು ನಿಲ್ಲಿಸಿ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಸ್ವಲ್ಪ ಮುಂದೆ ಹೋಗಿ ಪರಿಶೀಲಿಸಿದ್ದು ಅಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಹಲವು ವ್ಯಕ್ತಿಗಳು ನಿಂತಿದ್ದು ಒಬ್ಬನು ಇಸ್ಪಿಟು ಎಲೆಗಳನ್ನು ಕೈಯಲ್ಲಿ ಹಿಡಿದು ಆಚೆ ಇಚೆ ಹಾಕುತ್ತಾ ಉಲಾಯಿ ಪಿದಾಯಿ ಎಂದು ಹೇಳುತ್ತಿದ್ದು ಮತ್ತು ನಿಂತಿದ್ದ ಜನರು ಉಲಾಯಿ ಪಿದಾಯಿ ಎಂದು ಹೇಳುತ್ತಾ ಜುಗಾರಿ ಆಟ ನಡೆಸುತ್ತಿರುವುದು ಕಂಡು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ 15:30 ಗಂಟೆಗೆ ದಾಳಿ ನಡೆಸಿದ್ದು ಇಸ್ಟೀಟು ಆಟ ಆಡುತ್ತಿದ್ದ ಹೆಸರು ವಿಳಾಸ ವಿಚಾರಿಸಲಾಗಿ 1) ಗೋವರ್ಧನ 2) ಪ್ರವೀಣ್ ಕುಮಾರ್ 3) ಅವಿರಾಜ್ 4) ಪ್ರವೀಣ್ 5) ಪ್ರವೀಣ್ 6) ಸಂಪತ್ 7) ಹರೀಶ್ 8) ದೀಪಕ್ 9) ಅನಿಲ್ 10) ರವಿ 11) ಭರತ್ ಎಂದು ತಿಳಿಸಿದ್ದು. ಆರೋಪಿತರಿಂದ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 2880 /-, 52 ಇಸ್ಟೀಟ್ ಎಲೆಗಳು ಹಾಗೂ ಹಳೆಯ ಪೇಪರನ್ನು ಸ್ಥಳದಲ್ಲಿಯೆ ಮಹಜರು ಮುಖಾಂತರ ಸ್ವಾಧೀನಪಡಿಸಿಕೊಂಡಿದ್ದು, ಅಲ್ಲದೆ  ಆರೋಪಿತರು ಕೊರೋನಾ ಮಾರಾಣಾಂತಿಕ ಕಾಯಿಲೆ  ಹರಡದಂತೆ ಮುಖಕ್ಕೆ ಮಾಸ್ಕ ಧರಿಸದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಕಾಯ್ದೆಯನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 73/2021 ಕಲಂ: 269 ಐಪಿಸಿ ಮತ್ತು 87 ಕೆಪಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24/05/2021 ರಿಂದ 07/06/2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ದಿನಾಂಕ 04/06/2021 ರಂದು ಸದಾಶಿವ ಆರ್ ಗವರೋಜಿ , ಪಿಎಸ್ಐ ಕುಂದಾಪುರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ಕುಂದಾಪುರ ಕಸಬಾ ಗ್ರಾಮದ ಪಾರಿಜಾತ ಸರ್ಕಲ್ ಬಳಿ ವಾಹನ ತಪಾಸಣೆ  ಕರ್ತವ್ಯದಲ್ಲಿರುವಾಗ 15:00 ಗಂಟೆಯಿಂದ 17.00 ಗಂಟೆಯ ಮದ್ಯಾವಧಿಯಲ್ಲಿ KA-47-H-3766 BAJAJ PULSOR MOTOR MCYCLE ಹಾಗೂ KA-20-ER-9352 HONDA DIO ಮೋಟಾರ್ ಸೈಕಲನ್ನು ಆಪಾದಿತರುಗಳು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ  ಅದರ ಸವಾರರು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. ಆಪಾದಿತರುಗಳು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 76/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 24/05/2021 ರಿಂದ ದಿನಾಂಕ 07/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಬಗ್ಗೆ ಗುರುನಾಥ ಬಿ. ಹಾದಿಮನಿ ಪಿ.ಎಸ್.ಐ. ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 04/06/2021 ರಂದು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ ಹೊಸೂರು ಗ್ರಾಮದ ಕರ್ಜೆ ಎಂಬಲ್ಲಿ ರೌಂಡ್ಸ್ ನಲ್ಲಿರುವಾಗ ಸಂಜೆ 6:45 ಗಂಟೆ ಸುಮಾರಿಗೆ ಅಲ್ಲಿನ ಬ್ರಹ್ಮಾವರ – ಹೆಬ್ರಿ ಮುಖ್ಯರಸ್ತೆಯಲ್ಲಿ ಬ್ರಹ್ಮಾವರ ಕಡೆಗೆ ಕೆಂಪು ಬಣ್ಣದ KA-20-MA-6559 ನೇ ನೋಂದಣಿ ನಂಬ್ರದ ಕೆಂಪು ಬಣ್ಣದ ಬಲೆನೋ ಕಾರನ್ನು ಆರೋಪಿಯು ಚಲಾಯಿಸಿಕೊಂಡು ಬರುತ್ತಿದ್ದು, ಇವರು ಹಾಗೂ ಸಿಬ್ಬಂದಿಯವರು ಅನಗತ್ಯವಾಗಿ ಕಾರಿನಲ್ಲಿ ತಿರುಗಾಡುತ್ತಿರುವ ಬಗ್ಗೆ ವಿಚಾರಿಸಲು ಕಾರನ್ನು ನಿಲ್ಲಿಸಲು ಸೂಚಿಸಿದಾಗ ಆರೋಪಿಯು ಸೂಚನೆಯನ್ನು ನಿರ್ಲಕ್ಷಿಸಿ ಬ್ರಹ್ಮಾವರ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ. ಆರೋಪಿಯು ಮುಖಕ್ಕೆ ಮಾಸ್ಕ ಹಾಕದೇ ಮಾನ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅಪಾಯಕಾರಿ ಕೋವಿಡ್‌-19 ಖಾಯಿಲೆಯ ಬಗ್ಗೆ ತಿಳಿದೂ ಸಹ, ಸಾಂಕ್ರಾಮಿಕ ರೋಗವು ಹರಡುವ ಬಗ್ಗೆ ಅರಿವು ಇದ್ದರೂ ಕೂಡಾ ನಿರ್ಲಕ್ಷತನದಿಂದ ಕಾರಿನಲ್ಲಿ ಪ್ರಯಾಣಿಸಿ ಸಾಂಕ್ರಾಮಿಕ ಕೊರೊನಾ ವೈರಾಣು ಕಾಯಿಲೆಯನ್ನು ಹರಡುವ ಸಾಧ್ಯತೆ ಕಂಡುಬಂದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 110/2021 ಕಲಂ: 269 ಐಪಿಸಿ & 119, 177 ಐಎಮ್‌ವಿ ಆ್ಯಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 05-06-2021 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080