ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಮಲ್ಪೆ: ಪಿರ್ಯಾದಿ ವೆಂಕಪ್ಪ ಸುವರ್ಣ ಇವರು ದಿನಾಂಕ 04-06-2021 ರಂದು  ಬೆಳಿಗ್ಗೆ ಮೀನುಗಾರಿಕೆಯ ಬಗ್ಗೆ ತನ್ನ ಮನೆಯಾದ ಕಿದಿಯೂರು ಪಡುಕೆರೆಯಿಂದ ಹೊರಟು ಬೆಳಿಗ್ಗೆ  4:00 ಗಂಟೆಗೆ ಪಡುಕೆರೆಯ  ಶ್ರೀದೇವಿ ಭಜನಾ ಮಂದಿರದ ಬಳಿ ನಡೆದುಕೊಂಡು ಹೋಗುತ್ತಿರುವಾಗ  ಮಟ್ಟು ಪಡುಕೆರೆ ಕಡೆಯಿಂದ ಓರ್ವ ಮೋಟಾರು  ಸೈಕಲ್ ಸವಾರನು ತನ್ನ ಬೈಕನ್ನು ಅತೀವೇಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಅಲ್ಲದೆ  ಮೋಟಾರು ಸೈಕಲ್ ಸವಾರನು ಕೂಡ  ಬೈಕ್ ಸಮೇತ ರಸ್ತೆಗೆ ಬಿದ್ದು  ಆ ಸಮಯ ಮೀನುಗಾರಿಕೆಗೆ ಹೋಗುತ್ತಿದ್ದ ಆನಂದ ಹಾಗೂ ಅಶ್ವತ ರವರು ಬಂದು ಪಿರ್ಯಾದಿದಾರರನ್ನು ಉಪಚರಿಸಿದ್ದು  ಅಪಘಾತದಿಂದ ಪಿರ್ಯಾದಿದಾರರಿಗೆ ಎಡಗಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಜಖಂ  ಆಗಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ  ಉಡುಪಿ ಯ ಆದರ್ಶ ಆಸ್ಪತ್ರೆಗ ಕರೆದುಕೊಂಡು ಹೋಗಿದ್ದು ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕರೆತಂದಿದ್ದು ವೈದ್ಯರು ಚಿಕಿತ್ಸೆ ನೀಡಿ  ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಅಲ್ಲದೆ  ಅಪಘಾತ ನಡೆಸಿದ KA 20EN 6882 ನೇ ಮೋಟಾರು ಸೈಕಲ್ ಸವಾರನಿಗೂ ಕೂಡ ತಲೆಗೆ  ಮತ್ತು ಕಾಲುಗಳಿಗೆ ರಕ್ತ ಗಾಯವಾಗಿದ್ದು ಆತನನ್ನು ಚಿಕಿತ್ಸೆ ಯ ಬಗ್ಗೆ ಉಡುಪಿಯ ನ್ಯೂ ಸಿಟಿ ಆಸ್ಪತ್ರೆಗೆ  ದಾಖಲಾಗಿರುವುದು ತಿಳಿದಿದ್ದು ,ಈ ಅಪಘಾತಕ್ಕೆ  KA 20EN 6882 ನೇ ಮೋಟಾರು ಸೈಕಲ್ ನ ಸವಾರ ಶಶಿಧರ  ಎಂಬವರ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯ ಅತೀವೇಗದ ಚಾಲನೆಯೆ ಕಾರಣವಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74 /2021 ಕಲಂ  279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 25/05/2021 ರಿಂದ 07/06/2021 ರ ವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ  ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು,  ಈ ಬಗ್ಗೆ ಸಂತೋಷ ಬಿ.ಪಿ, ಪೊಲೀಸ್ ಉಪನಿರೀಕ್ಷಕರು, ಕೋಟ ಠಾಣೆ ಇವರು  ದಿನಾಂಕ 05/06/2021 ರಂದು 13.45 ಗಂಟೆಯ ಸಮಯಕ್ಕೆ ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ,ಅಚಲಾಡಿ ಗ್ರಾಮದ ಅಚಲಾಡಿ ಗಾಣಿಗರ ಬೆಟ್ಟು ಎಂಬಲ್ಲಿ ಮೂವರು  ವ್ಯಕ್ತಿಗಳು ಒಂದು ಮೋಟಾರ್ ಸೈಕಲಿನಲ್ಲಿ ಕುಳಿತುಕೊಂಡು ಬರುತ್ತಿರುವುದು ಕಂಡು ಬಂದಿದ್ದು ಸದ್ರಿ ಮೋಟಾರ್ ಸೈಕಲನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  KA20X9829 ನೇ ನಂಬ್ರದ ಮೋಟಾರ್ ಸೈಕಲ್  ಆಗಿದ್ದು,  ಅದರ  ಸವಾರನ ಹೆಸರು , ವಿಳಾಸ  ವಿಚಾರಿಸಲಾಗಿ ಸಿದ್ದಾರ್ಥ ಎಂದು  ತಿಳಿಸಿದ್ದು ಆತನ ಜೊತೆಯಲ್ಲಿ ಸಹ ಸವಾರರಾಗಿ ಬಂದವರು ಸೋಹನ್ ಹಾಗೂ ದರ್ಶನ್ ಎಂಬವರಾಗಿದ್ದು, ಸದ್ರಿಯವರಲ್ಲಿ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ  ಸಮರ್ಪಕ ಕಾರಣ ನೀಡದೆ ಇದ್ದು ಸದ್ರಿಯವರುಗಳು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು,. ಸದ್ರಿಯವರಿಗೆ ಈ ಬಗ್ಗೆ ನೋಟಿಸ್ ಜ್ಯಾರಿ ಮಾಡಿ, ಮೋಟಾರ್ ಸೈಕಲನ್ನು ಸ್ಥಳದಲ್ಲಿ ವಶಪಡಿಸಿಕೊಂಡಿದ್ದು ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2021 ಕಲಂ  269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
   

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ: ಪಿರ್ಯಾದಿ ಶ್ರೀನಿವಾಸ ಇವರು ಆಟೋ ಚಾಲಕ ಹಾಗೂ ಮಾಲಕರಾಗಿದ್ದು ದಿನಾಂಕ 17/05/2021 ರಂದು ಸಾಸ್ತಾನಕ್ಕೆ ಬಾಡಿಗೆಗೆ ಹೋಗಿ ವಾಪಾಸ್ಸು  ಕೋಟ  ರಾ.ಹೆ 66 ರಲ್ಲಿ ಬರುತ್ತಿರುವಾಗ  ಗುಂಡ್ಮಿ ಗ್ರಾಮದ ಸಾಸ್ತಾನ ಟೋಲ್ ಗೇಟ್ ಬಳಿಯಲ್ಲಿ  ನಾರಾಯಣ ಪೂಜಾರಿ ಪ್ರಾಯ 69 ವರ್ಷ ಎಂಬವರು ಅಸ್ವಸ್ಥರಾಗಿ ಇದ್ದವರನ್ನು 108 ಅಂಬುಲೆನ್ಸ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಜ್ಜರ ಕಾಡು ಎಂಬಲ್ಲಿಗೆ  ದಾಖಲಿಸಿದ್ದು,  ಸದ್ರಿಯವರು ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ 03/06/2021 ರಂದು ಮಧ್ಯಾಹ್ನ 2.15 ಗಂಟೆಗೆ  ಆಸ್ಪತ್ರೆಯಲ್ಲಿಯೇ (Natural Death) ಮೃತ ಪಟ್ಟಿರುತ್ತಾರೆ. ಈ ಮೃತ ವ್ಯಕ್ತಿಯ ಹೆಸರು ನಾರಾಯಣ ಪೂಜಾರಿ ಪ್ರಾಯ 69 ವರ್ಷ ತಂದೆ: ಮುದ್ದು ಪೂಜಾರಿ ಎಂದು ತಿಳಿದು ಬಂದಿದ್ದು,ವಿಳಾಸ ಹಾಗೂ ವಾರೀಸುದಾರರು  ಯಾರು ಎಂಬ ಬಗ್ಗೆ ಈ ವರೆಗೂ ತಿಳಿದು ಬಂದಿಲ್ಲ. ಮೃತರು ವಿಳಾಸ ಮತ್ತು ವಾರೀಸುದಾರರು ತಿಳಿಯದ ಅಪರಿಚಿತ ವ್ಯಕ್ತಿಯಾಗಿರುತ್ತಾರೆ. ಈ ಬಗ್ಗೆ ಕೋಟ ಠಾಣಾ ಯುಡಿಆರ್‌ ಕ್ರಮಾಂಕ 14/2021 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ : ಬ್ರಹ್ಮಾವರ ತಾಲೂಕು, ಪೆಜಮಂಗೂರು ಗ್ರಾಮದ ಸೂರಾಲುಜೆಡ್ಡು ಎಂಬಲ್ಲಿರುವ ನೇತ್ರಾವತಿ ನಿಲಯ ಎಂಬಲ್ಲಿ ಪಿರ್ಯಾದಿ ಬಾಬು ನಾಯ್ಕ, ಇವರು ತನ್ನ  ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ವಾಗಿರುವುದಾಗಿದೆ. ಪಿರ್ಯಾದಿದಾರರ ಮಗಳಾದ ವನಿತಾ ( ಪ್ರಾಯ: 23 ವರ್ಷ) ಎಂಬವಳು ಬಾಲ್ಯದಿಂದಲೇ TB ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ವೈಧ್ಯರಿಂದ ಚಿಕಿತ್ಸೆ ಕೊಡಿಸಿ, ಔಷಧ ಪಡೆದಿದ್ದರೂ ಕೂಡ  ವನಿತಾ ಸಂಪೂರ್ಣ  ಗುಣಮುಖಳಾಗಿರುವುದಿಲ್ಲ. ದಿನಾಂಕ: 05.06.2021 ರಂದು ಬೆಳಿಗ್ಗೆ 06:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ವನಿತಾಳನ್ನು  ಮಲಗಿದ ಕೋಣೆಗೆ ಹೋಗಿ ಎಬ್ಬಿಸಿದಾಗ ವನಿತಾ ಎಳದೇ ಇದ್ದು,  ನಂತರ ವನಿತಾಳನ್ನು ಕಾರಿನಲ್ಲಿ ಕುರಿಸಿಕೊಂಡು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈಧ್ಯಾಧಿಕಾರಿಯವರಲ್ಲಿ ಬೆಳಗ್ಗೆ 11:10 ಗಂಟೆಗೆ ತೋರಿಸಿದ್ದಲ್ಲಿ, ಪರೀಕ್ಷಿಸಿದ ವೈಧ್ಯರು ಅದಾಗಲೇ ದಾರಿ ಮದ್ಯೆ ವನಿತಾ ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಯುಡಿಆರ್‌ ಕ್ರಮಾಂಕ 32/2021 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 05-06-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080