ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಅಬ್ದುಲ್‌ ಜಬ್ಬಾರ್‌  (38) ತಂದೆ: ಅಬೂಬಕ್ಕರ್‌ ಎಂ.ಹೆಚ್‌ ವಾಸ: ಹಾಜಿ ಹಸನಬ್ಬ ಮಂಜಿಲ್‌, ಲೆಮಿನಾ ಕ್ರಾಸ್‌, ಸಂತೋಷ ಫ್ಯಾಕ್ಟರಿ ಬಳಿ, ನಿಟ್ಟೆ, ಕಾರ್ಕಳ ತಾಲೂಕು ಇವರು ದಿನಾಂಕ 03/05/2023 ರಂದು ಉಡುಪಿ ಪೋಕ್ಸೊ ನ್ಯಾಯಾಲಯದ ಸ್ಪೇಶಲ್‌ ಕೇಸ್‌ ಸಾಕ್ಷಿ ನುಡಿಯಲು ಬಂದಿದ್ದು, ಸಾಕ್ಷಿ ನುಡಿದು ಸಂಬಂಧಿಕರ ಮನೆಗೆ ಒಂದು ಆಟೋದಲ್ಲಿ ಹೋಗುತ್ತಿರುವಾಗ 16:30 ಗಂಟೆಗೆ ಉಡುಪಿ ತಾಲೂಕು ಗುಂಡಿಬೈಲು ರಸಿಕಾ ಬಾರ್‌ ಬಳಿ ಆಪಾದಿತರಾಧ 1) ಫಾರೂಕ್, 2) ಶಾರೂಕ್, 3) ಅನಿಲ್, 4) ಇಕ್ಬಾಲ್ ಸಾಣೂರ್, ಹಾಗೂ ಇತರರು ಸಮಾನ ಉದ್ದೇಶದಿಂದ ಒಂದು ಕ್ರೇಟಾ ಕಾರು, ಒಂದು ಸ್ವೀಫ್ಟ್‌ ಡಿಸೈರ್‌ ಕಾರು ಮತ್ತು ಒಂದು ಸ್ಕೂಟಿಯಲ್ಲಿ ಬಂದು ಅಡ್ಡಗಟ್ಟಿ ರಿಕ್ಷಾದ ಒಳಗೆ ಕುಳಿತುಕೊಂಡಲ್ಲೇ ಅಬ್ದುಲ್‌ ಜಬ್ಬಾರ್‌  ರವರ ಬಟ್ಟೆಯನ್ನು ಕಳಚಿ ಹಲ್ಲೆ ಮಾಡಿದ್ದು, ಆಟೋ ರಿಕ್ಷಾದಿಂದ ಹೊರಗೆ ಎಳೆದು ಪುನಃ ಹಲ್ಲೆ ಮಾಡಿ, ಅವರು ಬಂದಿದ್ದ ಸ್ವೀಫ್ಟ್‌ ಡಿಸೈರ್‌ ಕಾರಿನೊಳಗೆ ಬಲಾತ್ಕಾರವಾಗಿ ದೂಡಿ ಕಾರಿನೊಳಗೆ ಕೂರಿಸಿಕೊಂಡು ಯಾವುದೋ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಒಂದು ಮರಕ್ಕೆ ಕಟ್ಟಿ ಹಾಕಿ ಪುನಃ ಹಲ್ಲೆ ಮಾಡಿ, ಅನ್ನ-ನೀರು ನೀಡದೇ ಹಿಂಸೆ ನೀಡಿ, ದಿನಾಂಕ 04/05/2023 ರಂದು ಬೆಳಿಗ್ಗೆ 10:00 ಗಂಟೆಗೆ ಬಂಟಕಲ್‌ ಬಿ.ಸಿ ರೋಡ್‌ ಪಂಜಿಮಾರು ಬಳಿ ಕರೆದುಕೊಂಡು ಬಂದು ಪೊದೆಯೊಳಗೆ ದೂಡಿ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 64/2023 ಕಲಂ: 143, 147, 341, 323, 365, 342 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ಡಾ.ಚಂದ್ರ ಶೇಖರ ಮೊಗೇರ (42)  ಉಪನ್ಯಾಸಕರು ಬೈಂದೂರು ಪದವಿ ಪೂರ್ವ ಕಾಲೇಜು  ಹಾಗೂ ಎಫ್.ಎಸ್.ಟಿ -1, 118- ಬೈಂದೂರು ವಿಧಾನಸಭಾ ಕ್ಷೇತ್ರ ಇವರು ಉಪ್ಪುಂದ ನಂದನವನ ಪರಿಚಯ ಹೋಟೆಲ್ ಮತ್ತು ಅದರ ಸಭಾಭವನದಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆ ಅನುಮತಿಯಿಲ್ಲದೇ ನಡೆಯುತ್ತಿರುವ ಬಗ್ಗೆ ಮತ್ತು ಊಟ ಹಂಚಿಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಪ್ರಕಾರ ಪಿರ್ಯಾದುದಾರರು  ಎಫ್.ಎಸ್.ಟಿ -1 ಟೀಂ ಜೊತೆಯಲ್ಲಿ   ದಿನಾಂಕ  03/05/2023  ರಂದು  ರಾತ್ರಿ 9:10 ಗಂಟೆಗೆ  ಸದ್ರಿ  ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಚಯ ಹೋಟೆಲ್ ಗೆ ಹೊಂದಿಕೊಂಡ ಸಭಾಭವನದಲ್ಲಿ ಮೊದಲನೇ ಮಹಡಿ ಪ್ರವೇಶಿಸಿದಾಗ ಸಭೆ ನಡೆಯುತ್ತಿದ್ದು, ಸುಮಾರು 600 ಕುರ್ಚಿಯ ವ್ಯವಸ್ಥೆ ಇದ್ದು, ಜನರು ಆಸೀನರಾಗಿದ್ದು, ವೇದಿಕೆಯ ಮೇಲೆ ಡಾ. ಗೋವಿಂದ ಬಾಬು ಪೂಜಾರಿ, ಮಹೇಂದ್ರ ಪೂಜಾರಿ ಹಾಗೂ ಇತರ ಬಿ.ಜೆ.ಪಿ ಪದಾಧಿಕಾರಿಯವರಿದ್ದು, ಫಿರ್ಯಾದಿದಾರರು  ವಿಡಿಯೋ ಚಿತ್ರಿಕರಣ ಮಾಡುವ ಸಂದರ್ಭ ಗೋವಿಂದ ಬಾಬು ಪೂಜಾರಿಯವರು ವೇದಿಕೆಯ ಮೇಲೆ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದು, ಎಲ್ಲರೂ ಸೇರಿ ಈ ಬಾರಿ ಸಪೋರ್ಟ್ ಮಾಡೋಣ ಎಂಬುದಾಗಿ ಹೇಳಿದ್ದು, ನಂತರ ಕಾರ್ಯಕ್ರಮ ಇಲ್ಲಿಗೆ ಮಕ್ತಾಯವಾಗಿದ್ದು, ಸಭಾಭವನದ ಕೆಳಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಲ್ಲರೂ ಊಟ ಮಾಡುವಂತೆ ತಿಳಿಸಿರುತ್ತಾರೆ. ನಂತರ ಸಭಾಭವನದಲ್ಲಿ ಇದ್ದ ಜನರು ಕೆಳಗೆ ಇಳಿದು ಬಂದು, ಕೆಳಗೆ ವ್ಯವಸ್ಥೆ ಮಾಡಲಾದ ಊಟವನ್ನು ಸೇವಿಸಿರುತ್ತಾರೆ. ಸದ್ರಿ ಹೋಟೆಲ್ ನ ಮಾಲೀಕರ ಬಗ್ಗೆ ಹೋಟೆಲ್ ನಲ್ಲಿ ವಿಚಾರಿಸಿದಾಗ ಸದ್ರಿ ಪರಿಚಯ ಹೋಟೆಲ್ ಗೋವಿಂದ ಬಾಬು ಪೂಜಾರಿಯವರಿಗೆ ಸೇರಿದ್ದಾಗಿಯೂ, ಸದ್ರಿ ಸಭೆಯನ್ನು ಹಾಗೂ ಊಟದ ವ್ಯವಸ್ಥೆಯನ್ನು ಗೋವಿಂದ ಬಾಬು ಪೂಜಾರಿಯವರೇ ಮಾಡಿರುವುದಾಗಿ ಹಾಗೂ ಈ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಪಡೆದುಕೊಂಡಿರುವುದಿಲ್ಲ ಎಂದು ತಿಳಿದು ಬಂದಿರುತ್ತದೆ. ಬಿಜೆಪಿ ರಾಜ್ಯ ಹಿಂದೂಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿಯಾದ ಡಾ. ಗೋವಿಂದ ಬಾಬು ಪೂಜಾರಿಯವರು ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಪಡೆಯದೇ ತಮ್ಮ ಪರಿಚಯ ಹೋಟೆಲ್ ಸಭಾಭವನದಲ್ಲಿ ಬಿಜೆಪಿ ಪಕ್ಷದ ಪರವಾಗಿ ಸಭೆ ನಡೆಸಿ, ಸಭೆಯ ಬಳಿಕ ಸಭೆಯಲ್ಲಿ ಹಾಜರಾದವರಿಗೆ ಊಟದ ವ್ಯವಸ್ಥೆಯನ್ನು ಮಾಡಿ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 72/2023 ಕಲಂ: 171 (ಹೆಚ್)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 05-05-2023 11:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080