ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ :

  • ಕೋಟ : ಪಿರ್ಯಾದಿದಾರರು ಗುಂಡ್ಮಿ ಗ್ರಾಮದ ಸಾಸ್ತಾನದಲ್ಲಿ ಛಾಯಾನಂದ ಕ್ಲಿನಿಕ್ ನಡೆಸುತ್ತಿದ್ದು, ಈ ಬಗ್ಗೆ ಕಟ್ಟಡದ ಮಾಲಿಕರಾದ ರಾಘವೇಂದ್ರ ಪ್ರಭು ಮತ್ತು ರಾಜಶ್ರೀ ಪ್ರಭು ಎಂಬುವವರು ಪಿರ್ಯಾದಿದಾರರಿಗೆ ವೃತ್ತಿಯನ್ನು ನಡೆಸಿಕೊಂಡು ಹೋಗಲು ಬಿಡುತ್ತಿಲ್ಲ ಹಾಗೂ ಕಟ್ಟಡವನ್ನು ಖಾಲಿ ಮಾಡಲು ತಿಳಿಸಿರುತ್ತಾರೆ. ಈ ಕುರಿತು ಪಿರ್ಯಾದಿದಾರರು ನ್ಯಾಯಾಲಯದ ಮೊರೆ ಹೋಗಿರುತ್ತಾರೆ, ಹೀಗಿರುವಾಗ ದಿನಾಂಕ: 24-04-2023 ರಂದು ಬೆಳಿಗ್ಗೆ 10:45 ಗಂಟೆಗೆ ಪಿರ್ಯಾದಿದಾರರು ಹಾಗೂ ಅವರ ತಾಯಿ ಕ್ಲೀನಿಕ್ ಬಾಗಿಲನ್ನು ತೆರೆಯಲು ಹೋದಾಗ ಪಿರ್ಯಾದಿದಾರರ ಕ್ಲಿನಿಕ್ ಬಾಗಿಲು ಎದುರಿಗೆ ಸಿಮೆಂಟಿನ ಚೀಲವನ್ನು ತೆಗೆಯಲಿಕ್ಕೆ ಸಾದ್ಯವಾಗದ ರೀತಿಯಲ್ಲಿ ಇಟ್ಟಿದ್ದು, ಅದನ್ನು ಪಿರ್ಯಾದಿದಾರರು ಸರಿಸಿ ಕ್ಲಿನಿಕ್ ಬಾಗಿಲನ್ನು ತೆರೆದಾಗ ಆರೋಪಿತರಾದ ರಾಜಶ್ರೀ ಪ್ರಭು ಅವರು ಜಲ್ಲಿಯನ್ನು ಪಿರ್ಯದಿದಾರರ ಮೇಲೆ ಎಸೆದರು. ಪರಿಣಾಮ ಪಿರ್ಯಾದಿದಾರರಿಗೆ ಬಲಕಾಲಿನ ಹೆಬ್ಬೆರಳಿಗೆ ಗಾಯವಾಗಿದ್ದು ಹಣೆಯ ಮೇಲೆ ಪೆಟ್ಟಾಗಿರುತ್ತದೆ  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 80/2023 ಕಲಂ: 324 RW 34 IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ :

  • ಬ್ರಹ್ಮಾವರ : ಬ್ರಹ್ಮಾವರ ತಾಲೂಕು, ಹೇರೂರು ಗ್ರಾಮದ ಸ್ನೇಹಾಲಯ ವೃದ್ದಾಶ್ರಮ ಎಂಬಲ್ಲಿ ವಾಸವಾಗಿರುವ ಫಿರ್ಯಾದು ಚಾರ್ಲ್ ವೆಸ್ಲಿ ಅಂಬ್ಲರ್ .‌ (64), ತಂದೆ: ಸಿ ಎಸ್ ಅಂಬ್ಲರ್ , ವಾಸ: 6.52ಬಿ ಎಂ.ಎಂ.ಟೆಂಪಲ್ ರೋಡ್ 76 ಬಡಗುಬೆಟ್ಟು ಬೈಲೂರು ಉಡುಪಿ ಇವರ ಅಣ್ಣನಾದ ಇ ಎಸ್‌ ಅಂಬ್ಲರ್‌ @ ಎಲಿಯೇಜರ್ ಸತ್ಯಮಿತ್ರ ಅಂಬ್ಲರ್, ಪ್ರಾಯ: 75ವರ್ಷ ಎಂಬವವರಿಗೆ ನರ ಸಂಬಂದಿತ ಪಾರ್ಕಿಸನ್ ಕಾಯಿಲೆಯಿದ್ದು ಈ ಬಗ್ಗೆ ಉಡುಪಿಯ T M ಫೈ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ದಿನಾಂಕ 04.05.2023 ರಂದು ಅವರು ಸ್ನೇಹಾಲಯ ವೃದ್ದಾಶ್ರಮದಲ್ಲಿ ಇರುವಾಗ ಸಂಜೆ 19:45 ಗಂಟೆಗೆ ಅತಿಯಾಗಿ ಅಸ್ವಸ್ಥಗೊಂಡು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ನೇಹಾಲಯದ ಕಾರ್ಯದರ್ಶಿಯಾದ ಅನೀಶ್ ರವರು 20:30 ಗಂಟೆಗೆ ಕರೆದುಕೊಂಡು ಬಂದಿದ್ದು ಪರಿಕ್ಷೀಸಿದ ವೈದ್ಯರು ಎಲಿಯೇಜರ್ ಸತ್ಯಮಿತ್ರ ಅಂಬ್ಲರ್ ರವರು ದಾರಿಮದ್ಯೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಸ್ವಾಭಾವಿಕ ಮರಣ ಪ್ರಕರಣ ಸಂಖ್ಯೆ : 36/2023 ಕಲಂ. 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ :

  • ಕಾರ್ಕಳ  : ಫಿರ್ಯಾದು ಸಂಕೇತ್, ಪ್ರಾಯ: 19 ವರ್ಷ,  ತಂದೆ: ಕೇಶವ ಜಿ ಕೆ,  ವಾಸ: ಕೊಲ್ಲಂತಡ್ಕ ಹೌಸ್, ಕನಕಮಜಲು, ಅಂಚೆ ಮತ್ತು ಗ್ರಾಮ, ಸುಳ್ಯ ತಾಲೂಕು ಇವರು ಎನ್‌ಎಮ್ಎಎಮ್‌ಐಟಿ ಕಾಲೇಜು ನಿಟ್ಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ 04-05-2023 ರಂದು  ಕಾಲೇಜಿನಲ್ಲಿ ಅಥ್ಲೆಟಿಕ್ ಪ್ರಾಕ್ಟೀಸ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಯಾದ ಮೂಡಬಿದ್ರೆಗೆ ಹೊರಟಿದ್ದು ಪುಲ್ಕೇರಿ ಬೈಪಾಸ್ ಗಿಂತ ಸ್ವಲ್ಪ ಹಿಂದಕ್ಕೆ ತಲುಪುವಾಗ  ಫಿರ್ಯಾದುದಾರರ ಮುಂದಿನಿಂದ KL07 BV 5439 ಕವಾಸಕಿ ನಿಂಜಾ ಮೋಟಾರ್ ಸೈಕಲನ್ನು ಅದರ ಸವಾರ ಮಿಹಿರ್ ಮಹೇಶ್ ನಾಯಕ್ (21 ವರ್ಷ) ಎಂಬಾತನು ನಿಟ್ಟೆ ಕಡೆಯಿಂದ ಪುಲ್ಕೇರಿ  ಬೈಪಾಸ್  ಕಡೆಗೆ ಅತೀವೇಗ  ಮತ್ತು ಅಜಾಗರೂಕತೆಯಿಂದ  ಸವಾರಿ  ಮಾಡಿಕೊಂಡು ಹೋಗುತ್ತಾ ಕಾರ್ಕಳ ತಾಲೂಕು ಸಾಣೂರು ಗ್ರಾಮದ ವಿಶಾಲ್ ಗ್ಯಾರೇಜ್ ಹತ್ತಿರ ಸಂಜೆ 7 ಗಂಟೆಗೆ ಒಮ್ಮೆಲೇ ತನ್ನ ಎಡಬದಿಯಿಂದ ರಸ್ತೆಯ ಬಲಭಾಗಕ್ಕೆ ಚಲಾಯಿಸಿಕೊಂಡು ಹೋಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಸೈನ್ ಬೋರ್ಡ್ ನ ಕಂಭಕ್ಕೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್‌ನೊಂದಿಗೆ ಬಿದ್ದು ಮುಖಕ್ಕೆ, ಎದೆಗೆ ಮತ್ತು ದೇಹದ ಭಾಗಗಳಿಗೆ ರಕ್ತಗಾಯ ಹಾಗೂ ಗಂಭೀರ ಒಳಜಖಂ ಆಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 60/2023 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ : ಪಿರ್ಯಾದಿ ಮಹಮ್ಮದ್ ಮುಸ್ತಫಾ, ಪ್ರಾಯ: 63 ವರ್ಷ, ತಂದೆ: ದಿ. ಎಸ್ . ಅಬ್ದುಲ್ ಖಾದರ್, ವಾಸ: ಮಹಮ್ಮದ್ ಮುಸ್ತಫಾ ಮಂಜಿಲ್,  ಮೂಡು ಪಲಿಮಾರು, ಪಲಿಮಾರು ಗ್ರಾಮ, ಕಾಪು ತಾಲೂಕು, ಉಡುಪಿ ಇವರ ಬಾಬ್ತು KA-20-AA-6657ನೇ ನಂಬ್ರದ ರಿಕ್ಷಾದಲ್ಲಿ ಅಡ್ವೆ ರಿಕ್ಷಾ ನಿಲ್ದಾಣದಿಂದ ಬಾಡಿಗೆ ಮಾಡಿಕೊಂಡಿದ್ದು, ದಿನಾಂಕ: 04.05.2023 ರಂದು ಅವರ ರಿಕ್ಷಾದಲ್ಲಿ ಬಾಡಿಗೆಗೆಂದು ಪಡುಬಿದ್ರಿಗೆ ಹೋಗಿ ವಾಪಾಸ್ಸು ರಾಜ್ಯ ಹೆದ್ದಾರಿ-01 ರಲ್ಲಿ ಹೋಗುತ್ತಾ ಸಮಯ ಸುಮಾರು 17:00 ಗಂಟೆಯ ವೇಳೆಗೆ ಕಾಫು ತಾಲೂಕು ನಂದಿಕೂರು ಗ್ರಾಮದ ಅಡ್ವೆ ದ್ವಿಚಕ್ರ ವಾಹನದ ಗ್ಯಾರೇಜ್ ಬಳಿ ರಿಕ್ಷಾವನ್ನು ನಿಲ್ಲಿಸಿ ಆಟೋ ಸ್ಟ್ಯಾಂಡ್‌‌ಗೆ ಹೋಗಲು ಸೂಚನೆ ನೀಡಿ ರಿಕ್ಷಾವನ್ನು ಬಲಬದಿಗೆ ಚಲಾಯಿಸಿದಾಗ KA-18-B-7996ನೇ ನಂಬ್ರದ ಅನ್ನಪೂರ್ಣೇಶ್ವರಿ ಎಕ್ಸ್‌‌ಪ್ರೆಸ್ ಬಸ್ಸು ಚಾಲಕ ಮನೋಜ್ ಕುಮಾರ್ ಎಂಬಾತನು ತನ್ನ ಬಸ್ಸನ್ನು ರಾಜ್ಯ ಹೆದ್ದಾರಿ-01 ರಲ್ಲಿ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋ ರಿಕ್ಷಾಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಒಮ್ಮೆಲೇ ತಿರುಗಿ ಮಗುಚಿ ಬಿದ್ದಿದ್ದು, ಆಗ ಪಿರ್ಯಾದಿದಾರರು ರಸ್ತೆಗೆ ಬಿದ್ದಾಗ ರಿಕ್ಷಾವು ಅವರ ಮೈಮೇಲೆ ಬಿದ್ದು, ಅವರ ತಲೆಯ ಬಲಭಾಗಕ್ಕೆ, ಕೆನ್ನೆಗೆ, ಬಲ ಸೊಂಟಕ್ಕೆ ಗಾಯವಾಗಿರುತ್ತದೆ. ನಂತರ ಗಾಯಾಳುವಿಗೆ ಪಡುಬಿದ್ರಿಯ ಸಿದ್ದಿ ವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಪುನಃ ಪಡುಬಿದ್ರಿಯ ಸಿದ್ದಿ ವಿನಾಯಕ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 58/2023, ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 05-05-2023 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080