ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 03/05/2022 ರಂದು ರಾತ್ರಿ  11:40  ಗಂಟೆಗೆ,  ಕುಂದಾಪುರ  ತಾಲೂಕಿನ ಕೊಟೇಶ್ವರ  ಗ್ರಾಮದ ಹಾಲಾಡಿ ಬೈಪಾಸ್‌ ಬಳಿಯ  ನಾಗಬನದ ಹತ್ತಿರ ರಸ್ತೆಯಲ್ಲಿ,  ಪಿರ್ಯಾದಿದಾರರಾದ ವಸಂತ ಕುಮಾರ್‌ ಕೆ.ಎನ್‌‌ (32), ತಂದೆ:  ನಂದಿಶಾ, ವಾಸ: ನಂಬ್ರ 6/84/4,  ಮೆರ್ಡಿ, ಬಸ್ರೂರು ಗ್ರಾಮ,  ಕುಂದಾಪುರ  ತಾಲೂಕು ಇವರು KA-18-Y-6308  HONDA  ACTIVA ಸ್ಕೂಟರ್‌‌ನ್ನು ಕೊಟೇಶ್ವರ  ಸನ್‌‌‌‌‌ರೈಸ್‌ ಫ್ಯಾಕ್ಟರಿ ಕಡೆಯಿಂದ  ಬಸ್ರೂರಿಗೆ (ಮನೆಗೆ)  ಸವಾರಿ ಮಾಡಿಕೊಂಡು  ಬಂದು, ನಾಗಬನದ ಹತ್ತಿರ ರಸ್ತೆಯಲ್ಲಿ  ಬಂದಾಗ ಕಾಗೇರಿ- ಕೋಣಿ ಮಾರ್ಗವಾಗಿ  ಹೋಗಲು ಸ್ಕೂಟರ್‌‌‌ನ್ನು ಇಂಡಿಕೇಟರ್‌ ಹಾಕಿ  ನಿಧಾನಿಸಿ ಬಲಬದಿಯಿಂದ  ಯೂ ಟರ್ನ್‌‌  ಮಾಡಿ ತಿರುಗಿಸುವ ಸಮಯ  ಆಪಾದಿತ  ನೊಂದಣಿ ನಂಬ್ರ ತಿಳಿಯದ  ಬೈಕ್‌ ‌ಸವಾರ  ಅದೇ  ದಿಕ್ಕಿನಲ್ಲಿ ಅಂದರೆ  ಹಾಲಾಡಿ  ಕಡೆಯಿಂದ ಕೊಟೇಶ್ವರ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ  ಸ್ಕೂಟರ್‌‌ಗೆ  ಹಿಂದಿನಿಂದ ಡಿಕ್ಕಿ ಹೊಡೆದ  ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಮೂಳೆ ಮುರಿತವಾದ  ಗಾಯವಾಗಿ ಕೊಟೇಶ್ವರ  ಎನ್‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಆಪಾದಿತನು  ಅಪಘಾತದ ಬಳಿಕ  ಬೈಕನ್ನು  ಅಪಘಾತ ಸ್ಥಳದಲ್ಲಿ  ನಿಲ್ಲಿಸದೇ  ಪರಾರಿಯಾಗಿರುತ್ತಾನೆ. ಈ ಬಗ್ಗೆ ಕುಂದಾಪುರ ಪೊಲೀಸ್ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2022  ಕಲಂ: 279, 338 ಐಪಿಸಿ  & 134 (A) & (B) R/W 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಇಮ್ರಾನ್ (29), ತಂದೆ: ಮಹಮ್ಮದ್, ವಾಸ: ಹಾರ್ಜಡ್ಡು, ಕುಕ್ಕುಂದೂರು ಅಂಚೆ, ಕಾರ್ಕಳ ತಾಲೂಕು ಇವರು ದಿನಾಂಕ 04/05/2022 ರಂದು ಕಾರ್ಕಳದಿಂದ ಜೋಡುರಸ್ತೆ ಕಡೆಗೆ  ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದಾಗ  ಬೆಳಿಗ್ಗೆ 06:00 ಗಂಟೆಗೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಂಕ್ಷನ್‌ನಲ್ಲಿ  ದೇವಸ್ಥಾನದ ಕಡೆಯಿಂದ ಮುಖ್ಯ ರಸ್ತೆ ಕಡೆಗೆ KA-20-X-8468 ನೇ ನೋಂದಣಿ ಸಂಖ್ಯೆಯ ಹೀರೋ ಹೊಂಡಾ ಮೋಟಾರ್ ಸೈಕಲ್ ನ್ನು ಅದರ ಸವಾರ ಶಶಿಕಾಂತ ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಜೋಡುರಸ್ತೆ  ಕಡೆಯಿಂದ  ಕಾರ್ಕಳ ಕಡೆಗೆ KA-20-EU-7019 ನೇ ನೋಂದಣಿ ಸಂಖ್ಯೆಯ ಟಿವಿಎಸ್ ಮೋಪೆಡ್ ನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ಮೊಯಿದೀನ್ (56) ರವರಿಗೆ  ಡಿಕ್ಕಿ ಹೊಡೆದ ಪರಿಣಾಮ ಮೊಪೇಡ್‌ನೊಂದಿಗೆ  ರಸ್ತೆಗೆ ಬಿದ್ದ ಮೊಯಿದೀನ್ ರವರಿಗೆ ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು ತಲೆಗೆ ರಕ್ತಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ  ಕಾರ್ಕಳ ಸಿಟಿ ಆಸ್ಟತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರ ಸಲಹೆಯಂತೆ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುತ್ತಾರೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2022  ಕಲಂ: 279, 338 ಐಪಿಸಿಯಂತೆ ಪ್ರಕರಣ 69/2022  ಕಲಂ: 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.            

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರರಾದ ರಾಘವೇಂದ್ರ ದೇವಾಡಿಗ (38), ತಂದೆ: ಸೂರ  ದೇವಾಡಿಗ, ವಾಸ: ಶ್ರೀದೇವಿ ನಿಲಯ, ಗುಡ್ಡಿಮನೆ, ಮೂಡು ತಾರಿಬೇರು, ಆಲೂರು ಗ್ರಾಮ, ಕುಂದಾಪುರ ತಾಲೂಕು ಇವರ  ತಂದೆ ಸೂರ ದೇವಾಡಿಗ(85) ರವರು  ದಿನಾಂಕ  04/05/2022 ರಂದು ಸೇನಾಪುರ ಗ್ರಾಮದ ಗುಡ್ಡೆಯಂಗಡಿ ಪೇಟೆಯಲ್ಲಿರುವ ಮಗಳು ಮತ್ತು ಅಳಿಯನ ಹೋಟೆಲ್ ಗೆ ಹೋಗಿ ಸ್ವಲ್ಪ ಹೊತ್ತು ಇದ್ದು ಮಾತನಾಡಿ ಮದ್ಯಾಹ್ನ 12:00 ಗಂಟೆಗೆ ಹೋಟೆಲ್ ನಿಂದ ಮನೆಗೆ ಹೋಗುವುದಾಗಿ ಹೇಳಿ ಹೊರಟಿರುತ್ತಾರೆ. ಪಿರ್ಯಾದಿದಾರರು ಮನೆಯಲ್ಲಿರುವಾಗ ಮದ್ಯಾಹ್ನ 03:15 ಗಂಟೆಗೆ ಉದಯ ಎಂಬುವವರು ಫೋನ್ ಮಾಡಿ ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗುಡ್ಡೆಯಂಗಡಿ ಬಳಿ ರೈಲ್ವೆ ಟ್ರಾಕ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೂರ ದೇವಾಡಿಗರವರಿಗೆ ಆಕಸ್ಮಿಕವಾಗಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವುದಾಗಿ ತಿಳಿಸಿದ್ದು  ಪಿರ್ಯಾದಿದಾರರು ಕೂಡಲೇ ಸ್ಥಳಕ್ಕೆ ಬಂದು ನೋಡಿದ್ದು ಸೂರ ದೇವಾಡಿಗರವರು   ತಲೆಗೆ, ಕೈ, ಕಾಲುಗಳಿಗೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ. ಸೂರ ದೇವಡಿಗರವರು ದಿನಾಂಕ  04/05/2022 ರಂದು ಮದ್ಯಾಹ್ನ 12:00 ಗಂಟೆಯಿಂದ 15:15 ಗಂಟೆಯ ಮಧ್ಯಾವಧಿಯಲ್ಲಿ ಗುಡ್ಡೆಯಂಗಡಿ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ರೈಲು ಡಿಕ್ಕಿ ಹೊಡೆದು ಗಂಭೀರ ಸ್ವರೂಪದ ಗಾಯಗೊಂಡು ಅದೇ ವೇದನೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಸುರೇಶ್ ಬೆಳ್ಳಿರಿ (38), ತಂದೆ: ಲಕ್ಷ್ಮಣ ಬೆಳ್ಳಿರಿ, ವಾಸ: ಕುಲ್ಮಿಂಚಿ,ಹುನಗುಮಂದ ತಾಲೂಕು, ಬಾಗಲಕೋಟೆ ಜಿಲ್ಲೆ ಹಾಲಿ ವಾಸ: ಕೃಷ್ಣ ಮಠದ ಬಾಡಿಗೆ ಕೊಠಡಿ, ರಾಜಾಂಗಣ ಉಡುಪಿ ತಾಲೂಕು ಇವರ ಅಣ್ಣ ಯಮುನಪ್ಪ (43) ರವರಿಗೆ ವಿಪರೀತ ಕುಡಿತದ ಚಟವಿದ್ದು, ಪ್ರತಿ ದಿನಾ ಕುಡಿದು ಮನೆಗೆ ಹೋಗುತ್ತಿದ್ದವರು ದಿನಾಂಕ  03/05/2022 ರಂದು ಉಡುಪಿ ಕರಾವಳಿ ಜಂಕ್ಷನ್ ಬಳಿ ಅಸ್ವಸ್ಥರಾಗಿ ಬಿದ್ದಿದ್ದವರನ್ನು ವಿಶು ಶೆಟ್ಟಿ ರವರು ಚಿಕಿತ್ಸೆಯ ಬಗ್ಗೆ ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ  04/05/2022 ರಂದು ಬೆಳಿಗ್ಗೆ 04:30 ಗಂಟೆಗೆ ಮೃತಪಟ್ಟಿದ್ದು,ಮೃತನು ವಿಪರೀತ ಕುಡಿತದ ಚಟದಿಂದಾಗಿ ಖಾಯಿಲೆಗೀಡಾಗಿ ಖಾಯಿಲೆಯಿಂದ  ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 27/2022 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಕುಂದಾಪುರ: ದಿನಾಂಕ 04/05/2022 ರಂದು  ಸದಾಶಿವ ಆರ್. ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಲೂಯಿಸ್ ಬಾರಿನ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿದಾಗ 3 ಜನ ಓಡಿಹೋಗಿದ್ದು  2  ಜನರನ್ನು ಸಿಬ್ಬಂದಿಗಳ  ಸಹಾಯದಿಂದ  ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿದಾಗ 1) ಸಂತೋಷ ದೇವಾಡಿಗ (36), ತಂದೆ: ಶಿವ ದೇವಾಡಿಗ, ವಾಸ: ಕೋಟೆಬಾಗಿಲು, ತಲ್ಲೂರು ಗ್ರಾಮ ಕುಂದಾಪುರ ತಾಲೂಕು, 2) ಬಾಬು ಶೆಟ್ಟಿ (46), ತಂದೆ : ರಾಮಣ್ಣ ಶೆಟ್ಟಿ,  ವಾಸ : ನೇರಳೆಕಟ್ಟೆ  ಬಾಂಡ್ಯ ಪೋಸ್ಟ್  ಕೊಡ್ಲಾಡಿ ಗ್ರಾಮ, ಕುಂದಾಪುರ ತಾಲೂಕು, 3) ಚಂದ್ರ ತಲ್ಲೂರು (55), ತಂದೆ : ಚಿಕ್ಕ, ವಾಸ : ಮೊಳಸಾಲ್ ಬೆಟ್ಟು ಉಪ್ಪಿನಕುದ್ರು  ಗ್ರಾಮ, ಕುಂದಾಪುರ ತಾಲೂಕು,  4) ದಿನೇಶ್ ಸಿಡಿ (38), ತಂದೆ : ಮಹಾಬಲ ಪೂಜಾರಿ, ವಾಸ : ಕಟ್ ಬೆಲ್ತೂರು ಹೆಮ್ಮಾಡಿ ಗ್ರಾಮ, ಕುಂದಾಪುರ ತಾಲೂಕು, 5) ಕೋಟಿ ಪೂಜಾರಿ (49), ತಂದೆ : ಕುಷ್ಠ ಪೂಜಾರಿ,ವಾಸ :ಜಾಡಿ  ದೇವಲ್ಕುಂದ ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದು, ಆರೋಪಿತರಿಂದ  ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 780/, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52 ಇವುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2022  ಕಲಂ: 87 KP ACT  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ರಾಜೀವಿ ಶೆಟ್ಟಿ (47), ಗಂಡ: ವಿಜಯ ಶೆಟ್ಟಿ, ವಾಸ: ಹೆರಿಂಜೆ ಮನೆ, ಕಣಾಮಜಲು, ಎರ್ಲಪ್ಪಾಡಿ ಗ್ರಾಮ, ಕಾರ್ಕಳ ತಾಲೂಕು ಇವ ದಿನಾಂಕ 04/05/2022 ರಂದು ಮನೆಯಿಂದ ದೇವಸ್ಥಾನಕ್ಕೆ ಹೋಗಿ ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ಕಣಾಮಜಲು ಬಳಿ ಅಪಾದಿತ ವಾಸು ಶೆಟ್ಟಿ ಇವರ ಮನೆಯ ಹಿಂಬದಿ ಕಾಲುದಾರಿಯಲ್ಲಿ ನಡೆದುಕೊಂಡು ವಾಪಾಸು ಮನೆಗೆ ಬರುತ್ತಿದ್ದಾಗ ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರ ನೆರೆಮನೆಯ ವಾಸಿ ವಾಸು ಶೆಟ್ಟಿ  ಕೈಯಲ್ಲಿ ರೀಪು ಹಿಡಿದುಕೊಂಡು ಬಂದು  ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ರೀಪಿನಿಂದ ತಲೆಗೆ ಹೊಡೆದ ಪರಿಣಾಮ ಪಿರ್ಯಾದಿದಾರರ  ತಲೆಯ ಎಡಬದಿ ರಕ್ತಗಾಯವಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2022  ಕಲಂ: 324, 354, 504, 506(2) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಬೈಂದೂರು: ಪಿರ್ಯಾದಿದಾರರಾದ ನವೀನ ಕಂದಾವರ (55). ತಂದೆ: ದಿ.ಕೆ .ಮಹಾಬಲ ಶೆಟ್ಟಿ. ವಾಸ; ಜನ್ನಾಡಿ ಮನೆ ,ಹಾರ್ದಳ್ಳಿ-ಮಂಡಳ್ಳಿ ಗ್ರಾಮ
  ಗ್ರಾಮ , ಕುಂದಾಪುರ ತಾಲೂಕು ಇವರು ಆರೋಪಿತ ಕಿದಿಜೆ ವಸಂತಿ ಹೆಗ್ಡೆ ರವರಿಗೆ ಸಂಬಂಧಿಸಿದ ಬ್ರಹ್ಮಾವರ ತಾಲೂಕು 52 ನೇ ಹೇರೂರು ಗ್ರಾಮದ ಸ. ನಂ 162-03 ರಲ್ಲಿ 5.03 ಎಕ್ರೆ ಹಾಗೂ ಸ.ನಂ 19-30 ರಲ್ಲಿ 0.65 ಎಕ್ರೆ , ಸ.ನಂ 19 ರಲ್ಲಿ 0.51 ಎಕ್ರೆ, 0.10 ಎಕ್ರೆ , 0.05 ಎಕ್ರೆ ( ಒಟ್ಟು 6.34 ಎಕ್ರೆ) ಜಾಗವನ್ನು ಖರೀದಿಸುವ ಬಗ್ಗೆ ರೀಯಲ್ ಎಸ್ಟೇಟ್ ಬ್ರೋಕರ್ ಆದ ಆರೋಪಿ ಕೆ ಹರಿಪ್ರಸಾದ ಶೆಟ್ಟಿ ಮುಖಾಂತರ ಕರಾರು ಪತ್ರ ಮಾಡಿಕೊಂಡಿದ್ದು,  ಕರಾರು ಪತ್ರಗಳು ಹಾಗೂ ಇತರ ಜಾಗದ ದಾಖಲೆಗಳು, ಪಿರ್ಯಾದಿದಾರರು ಕೆಲಸ ಮಾಡುತ್ತಿರುವ ಜಾಗದ ಎಸ್ಟಿಮೆಟ್ ಗಳು, ಬ್ಯಾಂಕ್ ನ ಚೆಕ್ ಪುಸ್ತಕಗಳು, ಸಹಿ ಮಾಡಿರುವ ಚೆಕ್ ಹಾಳೆಗಳು 2 ಹಳೆಯ ಮೊಬೈಲ್ ಪೋನ್ ಗಳನ್ನು ಕೆಂಪು ಬಣ್ಣದ ಹ್ಯಾಂಡ್ ಬ್ಯಾಗ್ ನಲ್ಲಿ ಹಾಕಿ ಪಿರ್ಯಾದಿದಾರರ ವಾಸವಿದ್ದ ಬೈಂದೂರು ತಾಲೂಕು ಶಿರೂರು ಗ್ರಾಮದ ನಡಹಿತ್ಲು ದೊಂಬೆ ರಸ್ತೆಯಲ್ಲಿರುವ ಕೆ ಹರಿಪ್ರಸಾದ ಶೆಟ್ಟಿ ರವರ ಗೆಸ್ಟ್ ಹೌಸ್ ರೂಂ ನಲ್ಲಿ ಇಟ್ಟು ಬೀಗ ಹಾಕಿರುತ್ತಾರೆ. ನಂತರ ಜಾಗದ ರಿಜಿಸ್ಟರ್ ವಿಚಾರದಲ್ಲಿ ಆರೋಪಿತರಾದ 1. ಕೆ ಹರಿಪ್ರಸಾದ ಶೆಟ್ಟಿ ,2. ಕಿದಿಜೆ ವಸಂತಿ ಶೆಟ್ಟಿ , 3. ತಾರನಾಥ ಶೆಟ್ಟಿ, 4. ರೇಖಾ ತಾರನಾಥ ಶೆಟ್ಟಿ, 5, ಅನೀಶ್ ಮ್ಯಾಥೀವ್ ಇವರು  ಜಾಗವನ್ನು ರಿಜಿಸ್ಟರ್ ಮಾಡಿಕೊಡಲು ತಕರಾರು ಮಾಡಿದ್ದು, ದಿನಾಂಕ 21/02/2022 ರಂದು ಬೆಳಿಗ್ಗೆ 9:00 ಗಂಟೆಗೆ ಪಿರ್ಯಾದಿದಾರರು ಗೆಸ್ಟ್ ಹೌಸ್ನ ರೂಂ ಬಳಿ ಹೋದಾಗ ಕೆಲಸದವರು ಮೈನ್ ಡೋರ್ ತೆರೆಯದೇ ಇದ್ದು ಕಿಟಕಿ ಮೂಲಕ ನೋಡಿದಾಗ ಪಿರ್ಯಾದಿದಾರರ ರೂಂ ತೆರೆದಿದ್ದು, ದಾಖಲೆ ಪತ್ರಗಳಿದ ಕೆಂಪು ಬಣ್ಣದ ಬ್ಯಾಗ್ ಇರದೇ ಇದ್ದು, ಆರೋಪಿತರು ಕರಾರು ಪತ್ರ ಮಾಡಿಕೊಂಡ ಕಿದಿಜೆ ವಸಂತಿ ಹೆಗ್ಡೆ ರವರ ಜಾಗವನ್ನು ನನಗೆ ರಿಜಿಸ್ಟರ್ ಮಾಡಿಕೊಡದೇ  ವಂಚನೆ ಮಾಡುವ ಉದ್ದೇಶದಿಂದ ಅನಿಶ್ ಮ್ಯಾಥ್ಯು ಮುಖಾಂತರ ದಿನಾಂಕ 10/01/2022 ರಿಂದ ದಿನಾಂಕ 21/02/2022 ರ ಮಧ್ಯಾವಧಿಯಲ್ಲಿ ಪಿರ್ಯಾದಿದಾರರು ವಾಸವಿದ್ದ ಗೆಸ್ಟ್ ಹೌಸ್ ರೂಂ ನ ಬಾಗಿಲ ಬೀಗವನ್ನು ಮುರಿದು ಒಳಗಡೆ ಇರಿಸಿದ್ದ  ದಾಖಲೆಗಳು, ಚೆಕ್ ಪುಸ್ತಕ ಹಾಗೂ ಚೆಕ್ ಹಾಳೆ. 2 ಮೊಬೈಲ್ ಗಳಿದ್ದ ಬ್ಯಾಗ್ ನ್ನು ಕಳವು ಮಾಡಿಸಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86 /2022 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 05-05-2022 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080