ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶಾರದ (44), ಗಂಡ: ರಾಬರ್ಟ್ ಮೆಂಡೋನ್ಸಾ, ವಾಸ: ಅಡ್ವೆ, ನಂದಿಕೂರು ಗ್ರಾಮ, ಕಾಪು ತಾಲೂಕು ಇವರ ಅಣ್ಣ ಶಂಕರ ಸುವರ್ಣ (51) ಎಂಬುವವರು ಕಾರ್ಕಳ ಕಸಬಾ ಗ್ರಾಮದ ಭವಾನಿ ಮಿಲ್ ಹತ್ತಿರ ಹೆಂಡತಿ ಉಮಾ ಎಂಬುವವರೊಂದಿಗೆ ವಾಸವಾಗಿದ್ದು, ದಿನಾಂಕ 04/05/2022 ರಂದು ಸಂಜೆ 5:30 ಗಂಟೆಗೆ ಉಮಾ ರವರು ಪಿರ್ಯಾದಿದಾರರಿಗೆ ಕರೆ ಮಾಡಿ ಶಂಕರ ಸುವರ್ಣರವರು ಮಧ್ಯಪಾನ ಮಾಡಿ ಅದರೊಂದಿಗೆ ಯಾವುದೋ ವಿಷ ಪದಾರ್ಥ ತಿಂದಿರುವುದಾಗಿ ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರ ಸಲಹೆಯಂತೆ ರಾತ್ರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವ ವಿಷಯ ತಿಳಿಸಿದ್ದು, ಶಂಕರ ಸುವರ್ಣರವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 05/05/2022 ರಂದು ಬೆಳಗ್ಗೆ 05:30 ಗಂಟೆಗೆ ಮೃತಪಟ್ಟಿರುವುದಾಗಿದೆ.ಪಿರ್ಯಾದಿದಾರರ ಅಣ್ಣ ಶಂಕರ ಸುವರ್ಣ ತುಂಬಾ ವರ್ಷಗಳಿಂದ ಮಧ್ಯಪಾನ ಚಟವಿದ್ದು ಯಾವುದೋ ಕಾರಣದಿಂದ ಮನಸ್ಸಿಗೆ ಬೇಸರಗೊಂಡು ಮಧ್ಯಪಾನ ಮಾಡಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ  ನಿತ್ಯಾನಂದ ಶೇಟ್  (43), ವಾಸ: ಶ್ರೀ ದುರ್ಗಾ ಜ್ಯುವೆಲ್ಲರಿ, ನಾಡಗುಡ್ಡೆಯಂಗಡಿ, ನಾಡ ಗ್ರಾಮ, ಬೈಂದೂರು ತಾಲೂಕು ಇವರಿಗೆ ದಿನಾಂಕ 05/05/2022 ರಂದು ಮನೆಯಲ್ಲಿರುವಾಗ ಬೆಳಿಗ್ಗೆ 6:20 ಗಂಟೆಗೆ ಸೇನಾಪುರ ರೈಲ್ವೆ ಸ್ಟೇಷನ್ ರೈಲ್ವೇ ನೌಕರ ಪ್ರಭಾಕರ ಎಂಬುವವರು ಫೋನ್ ಕರೆ ಮಾಡಿ ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗುಡ್ಡೆಯಂಗಡಿ ಮಾರ್ಕೆಟ್ ಬಳಿ ರೈಲ್ವೆ ಹಳಿಯಲ್ಲಿ ಒಂದು ಗಂಡಸಿನ ಮೃತದೇಹ ರೈಲ್ ಗೆ ಡಿಕ್ಕಿ ಹೊಡೆದು ಬಿದ್ದಿರುವುದಾಗಿ ತಿಳಿಸಿದಂತೆ ಕೂಡಲೇ ಸ್ಥಳಕ್ಕೆ ಬಂದಿದ್ದು ನೋಡಲಾಗಿ ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವಾಗಿದ್ದು  ರೈಲು ಡಿಕ್ಕಿಹೊಡೆದ ಪರಿಣಾಮ  ಹೊಟ್ಟೆಯ ಭಾಗದಲ್ಲಿ ಎರಡು ತುಂಡಾಗಿ ಕುತ್ತಿಗೆಯ ಭಾಗ ಒಂದು ಕಡೆಯಲ್ಲಿ ಹೊಟ್ಟೆಯ ಕೆಳಭಾಗ ಇನ್ನೊಂದು ಕಡೆಯಲ್ಲಿ  ಬಿದ್ದಿರುತ್ತದೆ. ಮೃತ ಗಂಡಸು ಬಿಳಿ ಗೆರೆ ಕಪ್ಪು ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್, ಬೆಲ್ಟ್ ಧರಿಸಿರುತ್ತಾರೆ. ಅಪರಿಚಿತ ಗಂಡಸು ದಿನಾಂಕ 05/05/2022 ರಂದು ಬೆಳಿಗ್ಗೆ 6:00 ಗಂಟೆಯಿಂದ 6:20 ಗಂಟೆ ಮಧ್ಯಾವಧಿಯಲ್ಲಿ ಸೇನಾಪುರ ಮಾರ್ಕೆಟ್ ಸಮೀಪ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ . ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಬ್ರಹ್ಮಾನಂದ (48), ತಂದೆ: ನಾರಾಯಣ ಶೆಟ್ಟಿಗಾರ್‌ , ವಾಸ: ದೂಪದ ಕಟ್ಟೆ ,ಚೇರ್ಕಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ ನಾರಾಯಣ ಶೆಟ್ಟಿಗಾರ್‌ (92) ಇವರಿಗೆ 10 ವರ್ಷ ಗಳ ಹಿಂದೆ ಮಣಿಪಾಲ ಕೆ,ಎಂ ಸಿ ಆಸ್ಪತ್ರೆ ಯಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಕೊಡಿಸಿದ್ದು ಅಂದಿನಿಂದ ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದು 1 ತಿಂಗಳ ಹಿಂದೆ ಪಿರ್ಯಾದಿದಾರರ ತಂದೆಗೆ ಜ್ವರ ಹಾಗೂ ಉಬ್ಬಸ ಬಂದು ವಿಪರೀತ ತಲೆ ಸುತ್ತು ಎಂದು ಹೇಳುತ್ತಿದ್ದು ಈ ಬಗ್ಗೆ ಫೇತ್ರಿಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ದಿನಾಂಕ 04/05/2022 ಬೆಳ್ಳಿಗ್ಗೆ 6:30 ಗಂಟೆಗೆ ಪಿರ್ಯಾದಿದಾರರ ತಂದೆ ತನಗೆ ಉಬ್ಬಸ ಹಾಗೂ ತಲೆಸುತ್ತು ಬರುತ್ತಿದೆ ಎಂದು ಹೇಳಿರುತ್ತಾರೆ ಪಿರ್ಯಾದಿದಾರರು ಕೆಲಸ ಮುಗಿಸಿಕೊಂಡು ಸಂಜೆ 7:00 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲಿನ ಚಿಲಕ ಹಾಕಿದ್ದು ಚಿಲಕ ತೆಗೆದು ಒಳಗೆ ನೋಡಿದಾಗ ಪಿರ್ಯಾದಿದಾರರ ತಂದೆ ಒಳಗೆ ಇರದೇ ಇದ್ದು ಹೊರಗಡೆ ಬಂದು ಹುಡುಕಿದಾಗ ಮನೆಯ ಎದುರಿನ ಮಾವಿನ ಮರದ ಕೊಂಬೆಗೆ ನೈಲಾನ್‌ ರೊಪ್‌ ಬಿಗಿದು ಇನ್ನೋಂದು ತುದಿಯಿಂದ ಕುತ್ತಿಗೆಗೆ ಬಿಗಿದುಕೊಂಡು ನೇತ್ತಾಡುತ್ತಿರುವುದು ಕಂಡು ಬರುತ್ತದೆ ಈ ಬಗ್ಗೆ ಪಿರ್ಯಾದಿದಾರರ ನಾದಿನಿಯಲ್ಲಿ ವಿಚಾರಿಸಿದಾಗ ಮದ್ಯಾಹ್ನ 1:30 ಗಂಟೆಗೆ ಊಟವನ್ನು ನೀಡಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ತಂದೆ ನಾರಾಯಣ ಶೆಟ್ಟಿಗಾರ್‌ ರವರು ತನ್ನಗಿದ್ದ ಹೃದಯ ಸಂಬಂದಿ ಕಾಯಿಲೆ ಮತ್ತು ಉಬ್ಬಸ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 04/05/2022 ರಂದು ಮಧ್ಯಾಹ್ನ 1:30 ಗಂಟೆಯಿಂದ ಸಂಜೆ 7:00 ಗಂಟೆಯ ಮಧ್ಯಾವದಿಯಲ್ಲಿ ಮಾವಿನ ಮರದ  ಕೊಂಬೆಗೆ ನೈಲಾನ್‌ ರೋಪ್‌ ಬಿಗಿದು ಕುತ್ತಿಗೆಗೆ ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 22/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಪವನ್ ಪಿ.ಡಿ (28), ತಂದೆ; ದಯಾನಂದ ಪಿ.ಕೆ  ವಾಸ:  ಪೆರುಮುಂಡ ಮನೆ, ಪೆರಾಜೆ ಅಂಚೆ ಮತ್ತು ಗ್ರಾಮ ಮಡಿಕೇರಿ ತಾಲೂಕು , ಕೊಡಗು ಜಿಲ್ಲೆ ಇವರು  ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,  ಕಾರ್ಕಳ ತಾಲೂಕು ಕಸಬಾ ಗ್ರಾಮದ ಕಾಬೆಟ್ಟು ಎಂಬಲ್ಲಿ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್‌ ಲ್ಯಾಬ್‌‌ನ ಕಟ್ಟಡವನ್ನು ನಿರ್ಮಿಸಿದ್ದು, ಒಳಗಿನ ಸಾಮಾಗ್ರಿಗಳ ಅನುಷ್ಠಾನವು ಪ್ರಗತಿಯಲ್ಲಿರುತ್ತದೆ. ದಿನಾಂಕ  04/05/2022 ರಂದು  ಸಂಜೆ 4:00 ಗಂಟೆಯಿಂದ 6:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಿಡಿಗೇಡಿಗಳು ಸರಕಾರಿ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್‌ ಲ್ಯಾಬ್‌‌ನ ಕಟ್ಟಡದ 12 ಕಿಟಕಿ ಗಾಜುಗಳನ್ನು ಒಡೆದು  1 ಲಕ್ಷ ನಷ್ಟವನ್ನುಂಟು ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2022  ಕಲಂ: 427 ಐಪಿಸಿ ಮತ್ತು 2(A) PDLP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-05-2022 05:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080