ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ಶ್ಯಾಮಲ (35), ಗಂಡ  ಮಹಾಲಿಂಗ  ಪೂಜಾರಿ, ವಾಸ; ಪಡುವಾಯನಮನೆ, ಕೊಡೇರಿ, ಕಿರಿಮಂಜೇಶ್ವರ ಗ್ರಾಮ, ಬೈಂದೂರು ತಾಲೂಕು ಇವರ ದೊಡ್ಡಮ್ಮನಿಗೆ ಕರೋನಾ ಕಾಯಿಲೆ ಪಾಸಿಟಿವ್ ಬಂದಿದ್ದು ಪಿರ್ಯಾದಿದಾರರು ಹಾಗೂ ಮನೆಯವರು ಪ್ರಾಥಮಿಕ ಸಂಪರ್ಕದ ಕಾರಣ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಇದ್ದು, ಪಿರ್ಯಾದಿದಾರರ ಮಗಳು ತನ್ವಿತಾ (12) ಇವಳಿಗೆ ಎಲ್ಲರೊಂದಿಗೆ ಹತ್ತಿರದ ಸಂಪರ್ಕ ಮಾಡದಂತೆ ಮತ್ತು ಮನೆಯಿಂದ ಹೊರಗಡೆಗೆ ಹೋಗದಂತೆ ಅಲ್ಲದೇ ಮನೆಯಲ್ಲಿರುವ ಚಿಕ್ಕ ಮಗುವನ್ನು ಎತ್ತಿಕೊಳ್ಳದಂತೆ ಪಿರ್ಯಾದಿದರರು ಬುದ್ದಿಮಾತು ಹೇಳಿದ್ದಕ್ಕೆ ಮನನೊಂದು ದಿನಾಂಕ 04/05/2021 ರಂದು ಬೆಳಿಗ್ಗೆ 11:30 ಗಂಟೆಯಿಂದ 12:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮಹಡಿಯಲ್ಲಿರುವ ಕೋಣೆಯ ಗೋಡೆಗೆ ಆಳವಡಿಸಿರುವ ಮರದ ಆಡ್ಡಗೆ ಚೂಡಿದಾರದ ವೇಲಿನಿಂದ ಕಟ್ಟಿ  ತನ್ವಿತಾ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಉಡುಪಿ: ದಿನಾಂಕ 04/05/2021 ರಂದು ಮಧ್ಯಾಹ್ನ 02:00 ಗಂಟೆಗೆ  ಉಡುಪಿ ನಗರ ಸಭೆ ಪೌರಾಯುಕ್ತರು ಸಾರ್ವಜನಿಕರು ಕೋವಿಡ್ ಮುಂಜಾಗ್ರತ ಕ್ರಮಗಳನ್ನು ಕೈಕೊಳ್ಳುತ್ತಿರುವ ಬಗ್ಗೆ ಪರಿಶೀಲನೆ ಮಾಡಲು ಉಡುಪಿ ನಗರದಲ್ಲಿ  ಸಂಚರಿಸಿಕೊಂಡಿರುವಾಗ ಉಡುಪಿ ಕ್ಲಾಕ್ ಟವರ್ ಬಳಿ KA-51-AD-5835 ಬಸ್ಸು ನಿಂತಿದ್ದು ಬಸ್ಸನ್ನು ಪರಿಶೀಲಿಸಲಾಗಿ ಅದರಲ್ಲಿ ಒಟ್ಟು 13 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು,  ಬಸ್ಸಿನ ಚಾಲಕ ಅಬ್ದುಲ್ ಬಶೀರ್ ಮಾನ್ಯ ಕರ್ನಾಟಕ ಸರ್ಕಾರವು ವಿಧಿಸಿದ ನಿಬಂಧನೆಗಳನ್ನು ಉಲ್ಲಂಘಿಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನರು ಪ್ರಯಾಣಿಸಲು ಅವಕಾಶ ಇಲ್ಲದಿದ್ದರೂ ಸಹ ಯಾವುದೇ ಪರವಾನಿಗೆ ಇಲ್ಲದೇ ಹಾಗೂ ಯಾವುದೇ ಸುರಕ್ಷಾ ಕ್ರಮಗಳನ್ನು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮಂಗಳೂರಿನಿಂದ ಮುಂಬಯಿ ಕಡೆಗೆ ಜನರನ್ನು ಕುಳ್ಳಿರಿಸಿಕೊಂಡು ಕೊರೊನಾ ವೈರಸ್‌ ಸಾಂಕ್ರಮಿಕ ಖಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆತಟ್ಟಲು ನಿರ್ಲಕ್ಷ ವಹಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ: 269 ಐಪಿಸಿ AND 5(1)(4) THE KARNATAKA EPIDEMIC DISEASES ACT-2020 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-05-2021 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080