ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 04/04/2023 ರಂದು ರಾತ್ರಿ 8:30 ಗಂಟೆಗೆ  ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ನೆಹರೂ ಮೈದಾನದ ಬಳಿ  NH 66 ರಸ್ತೆಯಲ್ಲಿ,  ಆಪಾದಿತ ಅವಿನಾಶ್ ಪೂಜಾರಿ KA-20-EU-1126ನೇ  ಬೈಕಿನಲ್ಲಿ  ಸಂದೀಪ ಪೂಜಾರಿಯವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು,  NH 66 ರಸ್ತೆ ದಾಟುತ್ತಿದ್ದ ಹೊನ್ನೂರು ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆದು ಬಿದ್ದು, ಅವರ ತಲೆಗೆ, ಹೊಟ್ಟೆಗೆ ಗಂಭೀರ ರಕ್ತಗಾಯ ಹಾಗೂ ಒಳಪೆಟ್ಟಾಗಿ ಪ್ರಜ್ಞೆ  ಕಳೆದುಕೊಂಡವರನ್ನು ಪಿರ್ಯಾದಿದಾರರು ಹಾಗೂ ಇತರರು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಅಪಘಾತದಿಂದ  ಅವಿನಾಶ್ ಪೂಜಾರಿ ಹಾಗೂ ಸಂದೀಪ ಪೂಜಾರಿಯವರು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2023  ಕಲಂ: 279, 337, 304 (A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಹೆಬ್ರಿ: ಪಿರ್ಯಾದಿದಾರರಾದ ಶಬರೀಶ (33), ತಂದೆ: ಬ್ರಹ್ಮಚಾರಿ, ವಾಸ: ಕನ್ನರ್ಪಾಡಿ ಉಡುಪಿ ಇವರು ದಿನಾಂಕ 01/04/2023 ರಂದು KA-20-EV-4375 ನೇ ಮೋಟಾರ್‌ ಸೈಕಲ್‌ ನಲ್ಲಿ ಸಹ ಸವಾರರಾಗಿ ಶೀತಲ್‌ ರವರನ್ನು ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿರುವಾಗ ಅವರು ಮಧ್ಯಾಹ್ನ 12:45 ಗಂಟೆಗೆ ಹೆಬ್ರಿ ಗ್ರಾಮದ ಹೆಬ್ರಿ ಕೆಳಪೇಟೆ ಎಂಬಲ್ಲಿ ತಲುಪುವಾಗ ಅವರ ಎದುರುಗಡೆಯಿಂದ ಉಡುಪಿ ಕಡೆಯಿಂದ ಹೆಬ್ರಿ ಕಡೆಗೆ KA-15-EF-7218 ನೇ ಮೋಟಾರ್‌ ಸೈಕಲ್‌ ನ್ನುಅದರ ಸವಾರ ಸಾಗರ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕೈ ಗೆ ತೀವ್ರ ಸ್ವರೂಪದ ನೋವಾಗಿರುತ್ತದೆ. ಸಹ ಸವಾರರಾದ ಶೀತಲ್‌ ರವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ (52), ಗಂಡ: ಗಣೇಶ್ ನಾಯಕ್, ವಾಸ: ಕುಪ್ಪೊಟ್ಟು, ಮಲ್ಲಾರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಮಗ ಶಿವಪ್ರಸಾದ್ (33) ಎಂಬುವವರು ಪಡುಬಿದ್ರಿಯಲ್ಲಿ ರವಿ ಎಂಬುವವರು ನಡೆಸುತ್ತಿರುವ ಕೇಬಲ್ ಉದ್ಯಮದಲ್ಲಿ ಕೇಬಲ್ ಟೆಕ್ನೀಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ಕೇಬಲ್ ಕೆಲಸದ ಬಗ್ಗೆ ಹೋಗಿ ಬರಲು ಶಿವಪ್ರಸಾದನಿಗೆ ರವಿ ಅವರು ಕಳೆದ ತಿಂಗಳು ಹೊಸ ಎಲೆಕ್ಟ್ರಿಕ್ ಸ್ಕೂಟರನ್ನು ಕೊಟ್ಟಿದ್ದು, ಅದರಲ್ಲಿಯೇ ಹೋಗಿ ಬರುತ್ತಿದ್ದು ದಿನಾಂಕ 03/04/2023 ರಂದು ಬೆಳಿಗ್ಗೆ ಶಿವಪ್ರಸಾದ್ ಕೆಲಸಕ್ಕೆಂದು ಬಂದವನು ಕೆಲಸ ಮುಗಿಸಿ ದಿನಾಂಕ 04/04/2023 ರಂದು ಅವನ ಬಳಿ ಇದ್ದ ಎಲೆಕ್ಟ್ರಿಕ್ ಸ್ಕೂಟರ್‌‌‌ನಲ್ಲಿ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಮನೆಗೆ ವಾಪಾಸ್ಸು ಹೋಗುತ್ತಾ ತಾನು ಚಲಾಯಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರನ್ನು ಹೆಜಮಾಡಿಯಿಂದ ಕಾಪು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಾತ್ರಿ  02:30 ಗಂಟೆಯ ವೇಳೆಗೆ ಕಾಪು ತಾಲೂಕು ಹೆಜಮಾಡಿ ಗ್ರಾಮದ ರಾಯಲ್ ಪೆಟಲ್ ನರ್ಸರಿ ಬಳಿ ರಸ್ತೆಯ ಬದಿಗೆ ಇರುವ ಕಿರು ಸೇತುವೆಯ ಕೆಳ ದಂಡೆಗೆ ಡಿಕ್ಕಿ ಹೊಡೆದು, ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ, ಶಿವಪ್ರಸಾದನ ತಲೆಯ ಹಿಂಭಾಗಕ್ಕೆ ಗಂಭೀರ ಗಾಯ ಹಾಗೂ ಬೆನ್ನಿಗೆ ಗಾಯವಾಗಿರುತ್ತದೆ. ನಂತರ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ನಲ್ಲಿ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಅಬ್ದುಲ್ ಕರೀಮ್  (66), ತಂದೆ; ಅಬ್ದುಲ್ ರಜಾಕ್, ವಾಸ; 1-435, ಶಬಾನ ಮಂಜಿಲ್ ಕರಿಯಕಲ್‌ ಸಾಣೂರು ಗ್ರಾಮ,ಕಾರ್ಕಳ ತಾಲೂಕು    ಇವರು ದಿನಾಂಕ  02/04/2023 ರಂದು ಅನಾರೋಗ್ಯದ ನಿಮಿತ್ತ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಪತಿಯನ್ನು ಕರೆದುಕೊಂಡು ಸಂಜೆ 5:00 ಗಂಟೆಗೆ ಮನೆಗೆ ಬೀಗ ಹಾಕಿ ಹೋಗಿದ್ದು,  ದಿನಾಂಕ 04/04/2023 ರಂದು ಬೆಳಗ್ಗೆ 10:00 ಗಂಟೆಗೆ ಆಸ್ಪತ್ರೆಯಿಂದ ಮರಳಿ ಮನೆಗೆ ಬಂದಾಗ ಮನೆಯ ಮುಂದಿನ ಬಾಗಿಲು ತೆರೆದಿದ್ದು ಮನೆಯೊಳಗೆ ಹೋಗಿ ನೋಡಿದಾಗ ಎರಡು ಕೋಣೆಯಲ್ಲಿ ಎರಡು ಕಪಾಟುಗಳನ್ನು ಯಾವುದೋ ಆಯುಧದಿಂದ ಮೀಟಿ ತೆರೆದಿದ್ದು ಕಪಾಟಿನಲ್ಲಿದ್ದ 1 ವಾಚ್‌ ಕಳುವಾಗಿದ್ದು, ಕಪಾಟಿನಲ್ಲಿದ್ದ ಸೊತ್ತುಗಳು ಚೆಲ್ಲಾಪಿಲ್ಲಿ ಬಿದ್ದಿರುವುದು ಕಂಡು ಬಂದಿರುತ್ತದೆ.    ದಿನಾಂಕ  02/04/2023 ರಂದು ಸಂಜೆ 5:00 ಗಂಟೆಯಿಂದ ದಿನಾಂಕ 04/04/2023 ರಂದು ಬೆಳಿಗ್ಗೆ 10:00 ಗಂಟೆಯ ಮಧ್ಯೆ ಯಾರೋ ಕಳ್ಳರು ಕಾರ್ಕಳ ತಾಲೂಕಿನ ಸಾಣೂರು  ಗ್ರಾಮದ ಪಿರ್ಯಾದಿದಾರರ  ವಾಸ್ತವ್ಯದ ಮನೆಯ ಮುಂದಿನ ಬಾಗಿಲಿನ ಬೀಗವನ್ನು ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿ ಕೋಣೆಯಲ್ಲಿದ್ದ 2 ಕಪಾಟುಗಳನ್ನು ಯಾವುದೋ ಆಯುಧದಿಂದ ತೆರೆದು ಕಪಾಟಿನಲ್ಲಿರಿಸಿದ್ದ ಪಿರ್ಯಾದಿದಾರರ 1 ವಾಚನ್ನು  ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ವಾಚ್‌ನ ಅಂದಾಜು ಮೌಲ್ಯ ರೂಪಾಯಿ 10,000/- ರೂಪಾಯಿ ಆಗಿರುತ್ತದೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  43/2023 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ದಿನಾಂಕ 04/4/2023 ರಂದು ಗುರುನಾಥ ಬಿ ಹಾದಿಮನಿ, ಪೊಲೀಸ್‌ ಉಪನಿರೀಕ್ಷಕರು, ಮಲ್ಪೆ ಪೊಲೀಸ್‌ ಠಾಣೆ ಇವರು  ರೌಂಡ್ಸ್  ಕರ್ತವ್ಯದಲ್ಲಿ ಇರುವಾಗ  ಸಂತೆಕಟ್ಟೆ ಏಕ್ತಾ ಅಪಾರ್ಟ್ ಮೆಂಟ್ ಬಳಿ  ಸಂತೆಕಟ್ಟೆ ಕಡೆಯಿಂದ KA-20-P-6382 ನೇ ಬಿಳಿ ಬಣ್ಣದ ಮಾರುತಿ ಓಮಿನಿ ಕಾರು ವೇಗವಾಗಿ ನೇಜಾರು ಕಡೆಗೆ ಹೋಗುತ್ತಿದ್ದು ಓಮಿನಿ ಕಾರನ್ನು ಇಲಾಖಾ ವಾಹನದಲ್ಲಿ ಬೆನ್ನಟ್ಟಿ ಹೋದಾಗ ನೇಜಾರು ಚೆಕ್ ಪೋಸ್ಟ್ ಕರ್ತವ್ಯದಲ್ಲಿ ಇದ್ದ ಸುಧಾ ಪ್ರಭು,  ಪೊಲೀಸ್‌ ಉಪನಿರೀಕ್ಷಕರು(ತನಿಖೆ) ಹಾಗೂ  ಠಾಣಾ ಸಿಬ್ಬಂದಿಯವರು  ನೇಜಾರು ಚೆಕ್ ಪೋಸ್ಟ್ ನಲ್ಲಿ ಸದ್ರಿ ವಾಹನವನ್ನು ತಡೆದು ನಿಲ್ಲಿಸಿದ್ದು  KA-20-P-6382 ನೇ ಮಾರುತಿ ಓಮಿನಿ ಕಾರನ್ನು ತಪಾಸಣೆ ನಡೆಸಿದಾಗ ಕಾರಿನ ಹಿಂಬದಿ ಸೀಟಿನ ಬಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಲಾಸ್ಟಿಕ್ ತೊಟ್ಟೆಗಳ ಪ್ಯಾಕೇಟ್ ಗಳಿದ್ದು ಓಮಿನಿ ಚಾಲಕ ಅಪ್ರೂದ್ಧೀನ್ ರವರಲ್ಲಿ ದಾಖಲಾತಿ ನೀಡುವಂತೆ ಕೇಳಿದಾಗ ತನ್ನ ಬಳಿ ಯಾವುದೇ ದಾಖಲಾತಿ ಇರುವುದಿಲ್ಲವಾಗಿ ತಿಳಿಸಿದ್ದು.  KA-20-P-6382 ನೇ ಮಾರುತಿ ಓಮಿನಿ ಕಾರಿನಲ್ಲಿ ಇದ್ದ ಸೊತ್ತುಗಳನ್ನು ಪರಿಶೀಲಿಸಲಾಗಿ ಒಟ್ಟು 11 ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಿದ್ದು , ಚೀಲಗಳಲ್ಲಿ ಇದ್ದ ಪ್ಲಾಸ್ಟಿಕ್ ತೊಟ್ಟೆಗಳ ಪ್ಯಾಕೇಟನ್ನು ಪರಿಶೀಲಿಸಲಾಗಿ 1)  Wiltone  50 Microns  Pickup Bags ಗಳು ಒಟ್ಟು 23 ಇದ್ದು ಪ್ರತಿಪ್ಲಾಸ್ಟಿಕ್ ಪ್ಯಾಕೇಟಿನ ಮೌಲ್ಯ ರೂಪಾಯಿ 250/- ಆಗಿದ್ದು ಒಟ್ಟು  5,750 ರೂಪಾಯಿ ಆಗಿರುತ್ತದೆ,  2) RYU Company Plastic Bags- 9 ಇದ್ದು ಪ್ರತಿ ಪ್ಲಾಸ್ಟಿಕ್ ಪ್ಯಾಕೇಟಿನ ಮೌಲ್ಯ 250 ರೂಪಾಯಿ ಆಗಿದ್ದು ಒಟ್ಟು ಮೌಲ್ಯ ರೂಪಾಯಿ 2250 ಆಗಿರುತ್ತದೆ. 3) Master Company Strong & Handy Carry Bag Packet ಗಳು ಒಟ್ಟು 20 ಇದ್ದು ಪ್ರತಿ ಪ್ಯಾಕೇಟಿನ ಮೌಲ್ಯ ರೂಪಾಯಿ 270  ಆಗಿದ್ದು  ಒಟ್ಟು 5400 ರೂಪಾಯಿ ಆಗಿರುತ್ತದೆ. 4) Camel Multi Purpose Bags  ಒಟ್ಟು 11  ಪ್ಯಾಕೇಟ್ ಗಳಿದ್ದು ಪ್ರತಿ ಪ್ಯಾಕೇಟಿನ ಮೌಲ್ಯ ರೂಪಾಯಿ 195  ಇದ್ದು ಒಟ್ಟು 2112 ರೂಪಾಯಿ ಆಗಿರುತ್ತದೆ. 5) 9 X 9 Size Plain Bags ನ 29 ಪ್ಯಾಕೇಟ್  ಇದ್ದು ಪ್ರತಿ ಪ್ಯಾಕೇಟಿನ ಮೌಲ್ಯ ರೂಪಾಯಿ 200 ಆಗಿದ್ದು ಒಟ್ಟು 5,800 ರೂಪಾಯಿ ಆಗಿರುತ್ತದೆ. 6) Real Diamond pick Up Bags  ಒಟ್ಟು 8 ಪ್ಯಾಕೇಟ್ ಇದ್ದು ಪ್ರತಿ ಪ್ಯಾಕೇಟಿನ ಮೌಲ್ಯ ರೂಪಾಯಿ 50 ಒಟ್ಟು 400 ರೂಪಾಯಿ ಆಗಿರುತ್ತದೆ. 7) Modern L.D Grocery Bags ನ  2 ಪ್ಯಾಕೇಟ್ ಇದ್ದು ಪ್ರತಿ ಪ್ಯಾಕೇಟಿನ ಮೌಲ್ಯ ರೂಪಾಯಿ 252 ಆಗಿದ್ದು ಒಟ್ಟು ಮೌಲ್ಯ 500 ರೂಪಾಯಿ ಆಗಿರುತ್ತದೆ. 8) Dolphin  Polythene Clear Bags ನ 1 ಪ್ಯಾಕೇಟ್ ಇದ್ದು ಅದರ ಮೌಲ್ಯ ರೂಪಾಯಿ 230 ಆಗಿದ್ದು. ಎಲ್ಲಾ  ಸೊತ್ತುಗಳ ಒಟ್ಟು ಮೌಲ್ಯ 22,452/- ಆಗಿರುತ್ತದೆ. ಚುನಾವಣೆಯ ಸಮಯವಾದುದರಿಂದ ಮೇಲಾಧಿಕಾರಿಯವರ ಆದೇಶದಂತೆ   ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಇದ್ದ ಪ್ಲಾಸ್ಟಿಕ್ ತೊಟ್ಟೆಗಳ ಪ್ಯಾಕೇಟನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2023 ಕಲಂ: 98 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 05-04-2023 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080