ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ:  ದಿನಾಂಕ 04/04/2023 ರಂದು ಸಂಜೆ ಸಂಜೆ ಸುಮಾರು 6-10 ಗಂಟೆಗೆ, ಕುಂದಾಪುರ  ತಾಲೂಕಿನ, ಕೊಟೇಶ್ವರ ಗ್ರಾಮದ ಕಿನಾರಾ ಜಂಕ್ಷನ್‌ನಿಂದ ಸ್ವಲ್ಪ ಮುಂದೆ FLY OVER ಎನ್‌. ಹೆಚ್‌ 66 ರಸ್ತೆಯಲ್ಲಿ, ಯಶವಂತ ಪೂಜಾರಿ ಎಂಬವರು KA20MD-2252ನೇ  EECO ಮಾರುತಿ ಇಕ್ಕೊ ಕಾರನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗಿ ಅದೇ ದಿಕ್ಕಿನಲ್ಲಿ ಚಿದಾನಂದ ಎಂಬವರು ಸವಾರಿ ಮಾಡಿಕೊಂಡು  ಹೋಗುತ್ತಿದ್ದ KA20-ET-7602ನೇ   ಸ್ಕೂಟರ್‌ ಗೆ ಹಿಂದಿನಿಂದ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ, ಚಿದಾನಂದ ರವರ ತಲೆಗೆ, ಮುಖ, ಎದೆಗೆ, ಕೈಕಾಲುಗಳಿಗೆ ತರಚಿದ ರಕ್ತಗಾಯವಾಗಿ,  ಕೊಟೇಶ್ವರ ಎನ್‌. ಆರ್‌ ಆಚಾರ್ಯ   ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2023 ಕಲಂ 279, 337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ನವೀನ್‌ ಆಚಾರ್ಯ ಇವರು ದಿನಾಂಕ 04/04/2023 ರಂದು 19:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಉಡುಪಿ ಆಭರಣ ಜುವೆಲ್ಲರಿ ಶಾಪ್‌ ಬಳಿ ಆಪಾದಿತ ಸಂಪತ್‌ ಎಂಬಾತನು ಪಿರ್ಯಾದುದಾರರನ್ನು ಅಡ್ಡಗಟ್ಟಿ, ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023 ಕಲಂ: 341, 506 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ರೂಪ.ಎಂ ಇವರು ಉಡುಪಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾಗಿದ್ದು, ಶ್ರೀ ಕರುಣಾಕರ ಎಸ್‌ ಶೆಟ್ಟಿ ಎಂಬವರು 2022-23 ನೇ ಸಾಲಿಗೆ ಐರೋಡಿ ಗ್ರಾಮದಲ್ಲಿ ಹೊಂದಿರುವ ಸಿಎಲ್‌-2 ಸನ್ನದನ್ನು ವ್ಯವಹಾರಿಕ ಹಿತದೃಷ್ಟಿಯಿಂದ ಕೋಟೇಶ್ವರ ಗ್ರಾಮದ ಕಾಗೇರಿ ಎಂಬಲ್ಲಿಗೆ ಸ್ಥಳಾಂತರಿಸಲು ಅನುಮತಿ ಕೋರಿ ಪಿರ್ಯಾದುದಾರರ ಕಛೇರಿಗೆ ಅರ್ಜಿಯನ್ನು ಸಲ್ಲಿಸಿದ್ದು, ಕುಂದಾಪುರ ವಲಯ ಹಾಗೂ ಉಪವಿಭಾಗ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಸಿಎಲ್‌-2 ಸನ್ನದನ್ನು ಸ್ಥಳಾಂತರಿಸಲು ಆದೇಶಿಸಿ ಅನುಮತಿ ನೀಡಲಾಗಿರುತ್ತದೆ. 1ನೇ ಆಪಾದಿತ ರಮೇಶ್‌ ದೇವಾಡಿಗ ರವರು ಈ ಸನ್ನದು ಸ್ಥಳಾಂತರ ಆದೇಶವನ್ನು ಪ್ರಶ್ನಿಸಿ ಹಾಗೂ ಆಕ್ಷೇಪಣೆ ವ್ಯಕ್ತಪಡಿಸಿ ಮಾನ್ಯ ಅಬಕಾರಿ ಆಯುಕ್ತರು, ಬೆಂಗಳೂರುರವರಿಗೆ ಮೇಲ್ಮನವಿ ಸಂ: ಇಸಿಎಸ್‌/04/ಎಪಿಪಿ/2023 ರಂತೆ ಸಲ್ಲಿಸಿದ್ದು, ಸದರಿ ಮೇಲ್ಮನವಿ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಡೆಪ್ಯೂಟಿ ಕಮಿಷನರ್‌, ಅಬಕಾರಿ ಇಲಾಖೆ, ಉಡುಪಿ ಜಿಲ್ಲೆ ರವರಿಗೆ ಗ್ರಾಮಸ್ಥರು ಪರಿಸರ ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಗ್ರಾಮಸ್ಥರ ಪರವಾಗಿ 2ನೇ ಆಪಾದಿತ ಸ್ವಸ್ತಿಕ್‌ ಹೆಗ್ಡೆ ಈತನ ಹೆಸರಿನಲ್ಲಿರುವ ವೈನ್‌ ಶಾಪ್‌ ಹಾಗೂ ಬಾರ್‌ (ಮದ್ಯದ ಅಂಗಡಿ) ಲೈಸನ್ಸ್‌ ನೀಡುವ ಬಗ್ಗೆ ಆಕ್ಷೇಪಣೆ ಪತ್ರ ದಿನಾಂಕ: 26/09/2022 ಕ್ಕೆ ಪಿರ್ಯಾದುದಾರರ ನಕಲಿ ಸಹಿ ಮತ್ತು ಕಛೇರಿ ಸೀಲು ಹಾಕಿರುವ ಪತ್ರವನ್ನು ನೈಜ ಆಗಿರುವುದಾಗಿ ಮೇಲ್ಮನವಿ ಅರ್ಜಿಯ ವಿಚಾರಣೆಯ ವೇಳೆಯಲ್ಲಿ 1ನೇ ಆರೋಪಿಯು ಹಾಜರುಪಡಿಸಿರುವುದು ಕಂಡು ಬಂದಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 ಕಲಂ: 46̧5, 46̧8, 471 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ: 03.04.2023 ರಂದು ಉಡುಪಿ ತಾಲೂಕು, 80 ನೇ ಬಡಗುಬೆಟ್ಟು ಗ್ರಾಮದ ಸೈಲೆಂಟ್ ಮೆಡೋಸ್ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿ ಗಣೇಶ್‌ ಕುಮಾರ್ ದಹಮಿ ಈತನನ್ನು ಎಸ್.ಹೆಚ್. ಬಜಂತ್ರಿ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ವಶಕ್ಕೆ ಪಡೆದ್ದು, ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ಈ ದಿನ ದಿನಾಂಕ 05.04.2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿ ಗಣೇಶ್‌ ಕುಮಾರ್ ದಹಮಿ ಈತನು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟ ಮೇರೆಗೆ ಈ ಬಗ್ಗೆ ಸೆನ್ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2023 ಕಲಂ: 27(b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ. ‌
  • ಉಡುಪಿ: ದಿನಾಂಕ: 03.04.2023 ರಂದು ಉಡುಪಿ ತಾಲೂಕು, ಹೆರ್ಗಾ ಗ್ರಾಮದ ಪಂಚಾಜನ್ಯ ರೆಸಿಡೆನ್ಸಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿ ರಾಮ್ ಬಹುದ್ದೂರ್‌ ಸರ್ಕಿ ಯನ್ನು ಸಿಬ್ಬಂದಿಯವರು ಮಧ್ಯಾಹ್ನ 12:00 ಗಂಟೆ ವಶಕ್ಕೆ ಪಡೆದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ವರದಿಯೊಂದಿಗೆ ಠಾಣೆಗೆ ಕರೆತಂದು ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಕೇಶವ ಗೌಡ, ಸಹಾಯಕ ಪೊಲೀಸ್ ಉಪನಿರೀಕ್ಷಕರು ರವರ ಮುಂದೆ ಹಾಜರುಪಡಿಸಿದ್ದು, ಸದ್ರಿಯವರು ವರದಿಯನ್ನು ಸ್ವೀಕರಿಸಿ, ಮೇಲಾಧಿಕಾರಿಯವರ ಸೂಚನೆಯ ಮೇರೆಗೆ ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿರುತ್ತಾರೆ. ದಿನಾಂಕ 05.04.2023 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿ ರಾಮ್ ಬಹುದ್ದೂರ್‌ ಸರ್ಕಿ ಈತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈ ಬಗ್ಗೆ ಸೆನ್ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2023 ಕಲಂ: 27(b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ. ‌

 

ಇತ್ತೀಚಿನ ನವೀಕರಣ​ : 05-04-2023 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080