Feedback / Suggestions

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 04/04/2022 ರಂದು ಪಿರ್ಯಾದಿದಾರರಾದ ನಿತ್ಯಾನಂದ (29), ತಂದೆ ಸುಂದರ ಪೂಜಾರಿ, ವಾಸ ಮಿತ್ತಲಹೌಸ್, ಇರ್ವತ್ತೂರು ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ಟೆಂಪೋವನ್ನು ಚಲಾಯಿಸಿಕೊಂಡು ಸಾಣೂರುನಿಂದ ಮುರತ್ತಂಗಡಿ ಕಡೆಗೆ ಹೋಗುತ್ತಿರುವ ಸಮಯ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಮೋಟಾರ್ ಸೈಕಲ್ KA-03-EG-4282 ನೇದನ್ನು ಅದರ ಸವಾರ ಅವಿನಾಶ್ ವಿ (30) ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು 19:00 ಗಂಟೆಗೆ ಸಾಣೂರು ಗ್ರಾಮದ ಬೀಜೋತ್ಪಾದನಾ ಕೇಂದ್ರದ ಬಳಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ   KA-18-M-8296 ನಂಬ್ರದ ಜೆ.ಸಿ.ಬಿ. ಗೆ ಡಿಕ್ಕಿ ಹೊಡೆದ ಪರಿಣಾಮ ಜೆಸಿಬಿಯ ಅಡಿಯಲ್ಲಿ ಸಿಲುಕಿ ಗಂಭೀರ ಗಾಯಗೊಂಡ ಅವಿನಾಶ್ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಅಂಕಿತ ಎಂ ಶೆಣ್ಯೆ (31), ತಂದೆ: ಮೋಹನದಾಸ ಶೆಣ್ಯೆ, ವಾಸ: ಕೃಷ್ಣ ನಿವಾಸ, ತೆಳ್ಳಾರು ರಸ್ತೆ, ಕಾರ್ಕಳ ತಾಲೂಕು ಇವರು ದಿನಾಂಕ 04/04/2022 ಕಾರು ನಂಬ್ರ KA-20-ME-1333 ನೇಯದನ್ನು ಕುಂಟಲ್ಪಾಡಿ ಕಡೆಯಿಂದ ಆನೆಕೆರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಮದ್ಯಾಹ್ನ 1:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಶ್ರೀಕೃಷ್ಣ ದೇವಸ್ಥಾನ  ಜಂಕ್ಷನ್‌ ಬಳಿ ಆನೆಕೆರೆ ರಸ್ತೆಗೆ ತಲುಪುವಾಗ KA-19-EJ-3965 ನೇ ನಂಬ್ರದ ಮೋಟಾರ್‌ ಸೈಕಲ್‌ ಸವಾರನು ಬಂಗ್ಲೆಗುಡ್ಡೆ ಕಡೆಯಿಂದ ಪುಲ್ಕೇರಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಮೋಟಾರ್‌ ಸೈಕಲ್‌ನ ನಿಯಂತ್ರಣ ಸಾಧಿಸಲಾಗದೇ ಪಿರ್ಯಾದಿದಾರರ ಕಾರು ನಂಬ್ರ KA-20-ME-1333 ನೇಯದರ ಬಾನೆಟ್‌ನ ಎಡ ಭಾಗ ಮತ್ತು ಎಡಭಾಗದ  ಎರಡು ಬಾಗಿಲಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಜಖಂಗೊಂಡು  3,00,000/- ರೂಪಾಯಿ ನಷ್ಠ ಉಂಟಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ: 279, 427  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ಕಾಣೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಸಹನಾ ಬಾಯಿ (42), ಗಂಡ: ಸಾಧು ನಾಯ್ಕ, ವಾಸ: ಮಾತಾಶ್ರೀ ನಿಲಯ, ಕೆಳಕಂಪ,  ಕರ್ಜೆ ಅಂಚೆ, ಹೊಸೂರು ಗ್ರಾಮ, ಬ್ರಹ್ಮಾವರ  ತಾಲೂಕು ಇವರು ಗಂಡ ಮಕ್ಕಳು ಹಾಗೂ ಗಂಡನ ಮೊದಲನೆಯ ಹೆಂಡತಿಯ ಮಗಳಾದ ರೇವತಿ (28) ರವರೊಂದಿಗೆ ವಾಸವಾಗಿರುತ್ತಾರೆ. ರೇವತಿ ಯವರ ಗಂಡ ಟಿ.ಬಿ ಖಾಯಿಲೆಯಿಂದ ಮೃತ ಪಟ್ಟಿದ್ದು, ಗಂಡ ಮೃತಪಟ್ಟ ನಂತರ ಮಾನಸಿಕ ಅಸ್ವಸ್ಥರಾಗಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಂಪೂರ್ಣ ಗುಣಮುಖಳಾಗಿರುವುದಿಲ್ಲ. ದಿನಾಂಕ 27/03/2022 ರಂದು ರಾತ್ರಿ 12:00 ಗಂಟೆಯಿಂದ ದಿನಾಂಕ 28/03/2022 ರಂದು  ಬೆಳಿಗ್ಗೆ 06:30 ಗಂಟೆಯ ಮಧ್ಯಾವಧಿಯಲ್ಲಿ  ರೇವತಿ ಯವರು ಮನೆಯಲ್ಲಿ ಮಲಗಿದ್ದವರು ಮನೆ ಬಿಟ್ಟು ಹೋಗಿರುತ್ತಾರೆ. ಮನೆಯ ಸುತ್ತ ಮುತ್ತಾ, ನೆರೆ-ಕೆರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದಲ್ಲಿ  ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 05-04-2022 09:42 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080