ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿ ಬೊಗ್ಗು ಇವರು ಬೊಮ್ಮರಬೆಟ್ಟು ಗ್ರಾಮದ ಕುಕ್ಕುದಕಟ್ಟೆ, ಎಂಬಲ್ಲಿ ಸರ್ವೆ ನಂ 294-2ಎ2 ರಲ್ಲಿ 1 ಎಕ್ರೆ ದರ್ಖಾಸು  ಜಾಗವನ್ನು ಹೊಂದಿದ್ದು ದಿನಾಂಕ:  02/04/2022 ರಂದು ಸಮಯ ಸುಮಾರು 11:35 ಗಂಟೆಗೆ ಇಂದಿರ ಕೊಂಕಣಿ ಮತ್ತು ಅವರ ಮಗ ರವೀಂದ್ರ ಎಂಬವರು ಪಿರ್ಯಾದುದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಗಿಡಮರಗಳನ್ನು ಕಡಿದು ಹಾಕಿ ಸಾಗಿಸಿರುತ್ತಾರೆ. ಪಿರ್ಯಾದುದಾರರ ಅನುಮತಿ ಇಲ್ಲದೆ ಗಿಡಮರಗಳನ್ನು ಕಡಿದು ಸುಮಾರು 50 ಸಾವಿರ ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 18/2022 ಕಲಂ : 447, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ: 02.04.2022 ರಂದು ಪಿರ್ಯಾದಿದಾರರಾದ ಸುಧೀರ ಪೂಜಾರಿ ರವರು ತನ್ನ ಬಾಬ್ತು ಆಟೋರಿಕ್ಷಾವನ್ನು  ಮಧ್ಯಾಹ್ನ 2:30 ಗಂಟೆ ಸುಮಾರಿಗೆ ಆರೂರು ಗ್ರಾಮದ ಕುಂಜಾಲು ಮಕ್ಕಿತ್ತಾಯ  ಹೊಟೇಲ್ ಎದುರಿನಿಂದ ಕೊಕ್ಕರ್ಣೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಅವರ ಎದುರಿನಿಂದ ಅತೀ ವೇಗ ಹಾಗೂ  ಅಜಾಗರುಕತೆಯಿಂದ ಮಂಜುನಾಥ ರವರು ಸವಾರಿ ಮಾಡುತ್ತಿದ್ದ KA.20.EU.7051ನೇ ಬಜಾಜ್ ಪಲ್ಸರ್ ಮೋಟಾರ್ ಸೈಕಲ್‌ಗೆ ನಾಯಿಯೊಂದು ಅಡ್ಡ ಬಂದಿದ್ದು, ಆಗ ಒಮ್ಮೇಲೆ ಅವರು ಬ್ರೇಕ್ ಹಾಕಿದ ಪರಿಣಾಮ  ಹತೋಟಿ ತಪ್ಪಿ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ  ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಮಂಜುನಾಥ ರವರ ಬಲಬದಿಯ ಹಣೆಗೆ, ಮುಖದಲ್ಲಿ ಅಲ್ಲಲ್ಲಿ ತರಚಿದ ಗಾಯವಾಗಿದ್ದು, ತಲೆಗೆ ತೀವ್ರ ಒಳ ಜಖಂ ಆಗಿ ಅವರು ಮಾತನಾಡುತ್ತಿರಲಿಲ್ಲ.  ಅಲ್ಲದೇ ಮೋಟಾರ್‌ಸೈಕಲ್‌ನ ಬಲಭಾಗದ ಟ್ಯಾಂಕ್, ಫುಟ್‌ಗಾರ್ಡ್, ಸೈಲೆನ್ಸರ್ ಮತ್ತು ಮುಂಭಾಗದ ಇಂಡಿಕೇಟರ್  ಜಖಂ ಆಗಿರುತ್ತದೆ. ಗಾಯಗೊಂಡ ಮಂಜುನಾಥ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಪ್ರಣವ್  ಆಸ್ಪತ್ರೆಗೆ ದಾಖಲಿಸಿದ್ದು, ನಂತ್ರ ಅಲ್ಲಿಂದ  ದಿನಾಂಕ 03.04.2022 ರಂದು ಮಂಜುನಾಥ ರವರನ್ನು  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  58/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಉಡುಪಿ: ದಿನಾಂಕ 04/04/2022 ರಂದು ರಾತ್ರಿ ಸಮಯ ಸುಮಾರು 10:35 ಗಂಟೆಗೆ ಬನ್ನಂಜೆ ಕಡೆಯಿಂದ ಬ್ರಹ್ಮಗಿರಿ ಕಡೆಗೆ ಪಿರ್ಯಾದಿ ಸ್ಟ್ಯಾನಿ ಡಿ ಸೋಜ ಇವರ ಹೆಂಡತಿಯ ತಮ್ಮ ಸ್ಟೀವನ್ ಲಸ್ರಾದೋ ಎಂಬವರು ನಡೆದುಕೊಂಡು ಹೋಗುತ್ತಿದ್ದವರು, ಮೂಡನಿಡಂಬೂರು ಗ್ರಾಮದ ಕೀರ್ತಿ ಸಾಲಿಟೇರ ಅಪಾರ್ಟ್‌ಮೆಂಟ್ ಕಡೆ ಹೋಗುವ ರಸ್ತೆಯ ನೇರ ಎದುರು ಬನ್ನಂಜೆ- ಬ್ರಹ್ಮಗಿರಿ  ರಸ್ತೆಯಲ್ಲಿ ಬಿದ್ದಿದ್ದು ಅವರ ದೇಹದ ಮೇಲೆ ಬ್ರಹ್ಮಗಿರಿ ಜಂಖ್ಷನ್ ಕಡೆಯಿಂದ ಬನ್ನಂಜೆ ಕಡೆಗೆ ಹೋಗುತ್ತಿದ್ದ ಯಾವುದೋ ಗೂಡ್ಸ್ ಟೆಂಪೋದಂತೆ ಕಾಣುವ ವಾಹನವು ಸ್ವೀವನ್ ಲಸ್ರಾದೋ ರವರ ಎದೆಯ ಮೇಲೆ ಹರಿದು ಹೋಗಿ ಪ್ರಜ್ಞಾಹೀನ  ಸ್ಥಿತಿಯಲ್ಲಿದ್ದವರನ್ನು ಇತರರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಪಿರ್ಯಾದುದಾರರು ಒಂದು ಅಂಬುಲೆನ್ಸ್ ನಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿದ್ದು ಅವರನ್ನು ಪರೀಕ್ಷಿಸಿದ ವೈದ್ಯರು ಸ್ಟೀವನ್ ಲಸ್ರಾದೋ ರವರು ಈಗಾಘಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಹಾಗೂ ಅಫಘಾತಪಡಿಸಿದ ವಾಹನ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  32/2022 ಕಲಂ: 279, 304(A) ಐ.ಪಿ.ಸಿ ಮತ್ತು 134 (ಎ) & (ಬಿ) ಜೊತೆಗೆ 187  ಐಎಮ್‌ವಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿ ಶೇಷಿ ಇವಳ ತಮ್ಮ ಗೋವಿಂದ ದೇವಾಡಿಗ ಪ್ರಾಯ:48 ವರ್ಷ ರವರು ಹೆಂಡತಿ ಮನೆಯಾದ ಕಂಬಂದಕೋಣೆ ಗ್ರಾಮದ  ನಾಣನ ಮನೆ ಎಂಬಲ್ಲಿ ಹೆಂಡತಿ ಕಮಲಾಳೊಂದಿಗೆ  ವಾಸ ಮಾಡಿಕೊಂಡಿದ್ದು ಬೇಸಾಯ ಹಾಗೂ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಗೋವಿಂದ ದೇವಾಡಿಗ ರವರು ದಿನಾಂಕ 04/04/2022 ರಂದು ರಾತ್ರಿ 11:00 ಗಂಟೆಗೆ  ಹೆಂಡತಿ ಮನೆಯಲ್ಲಿ ಮನೆಯ ಉಪ್ಪರಿಗೆಗೆ  ಹೋಗಲು  ಮೆಟ್ಟಿಲುಗಳನ್ನು ಹತ್ತುವ ಸಮಯ ಆಕಸ್ಮಿಕವಾಗಿ  ಕಾಲು ಜಾರಿ ಕೆಳಗೆ ಬಿದ್ದು ತಲೆಗೆ ಪೆಟ್ಟಾದವರನ್ನು ಹೆಂಡತಿ ಕಮಲ ಹಾಗೂ ಬಾವ ರಾಘವೇಂದ್ರ ರವರು ಚಿಕಿತ್ಸೆ ಬಗ್ಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು  ಹೋದಲ್ಲಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ವೈದ್ಯರ  ಸಲಹೆ ಮೇರೆಗೆ  ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ  ಕರೆದುಕೊಂಡು  ಹೋಗುವಂತೆ ಸೂಚಿಸಿದ ಮೇರೆಗೆ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಾಗಿ  ಚಿಕಿತ್ಸೆಯಲ್ಲಿದ್ದ ಗೋವಿಂದ ದೇವಾಡಿಗ ರವರು ದಿನಾಂಕ  05-04-2022 ರಂದು ಬೆಳಿಗ್ಗೆ  05:10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಬೋಜು ಕೊಠಾರಿ (62) ರವರು ಹಳ್ನಾಡು ಗ್ರಾಮದ ಬಿಲ್ಲಾರ ಬೆಟ್ಟುವಿನಲ್ಲಿ ವಾಸವಾಗಿದ್ದು. ಸುಮಾರು 6-7 ವರ್ಷದಿಂದ  ಸೊಂಟ ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಿದರು ಸಹ ಸಂಪೂರ್ಣವಾಗಿ ಗುಣ ಮುಖರಾಗಿರುವುದಿಲ್ಲ.ಅಲ್ಲದೇ ಅವರ  ಹೆಂಡತಿಯ ಮರಣದ ನಂತರ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರುತ್ತಾರೆ. ದಿನಾಂಕ:04-04-2022 ರಂದು ಸಂಜೆ 06:00  ಗಂಟೆಯಿಂದ ರಾತ್ರಿ 08:00 ಗಂಟೆಯ ನಡುವೆ ಮೃತ ಭೋಜ ಕೊಠಾರಿಯವವರು ಅವರಿಗಿದ್ದ ಆರೋಗ್ಯ ಸಮಸ್ಯೆ ಹಾಗೂ ಅವರ ಮರಣದ ನಂತರ ಖಿನ್ನತೆಗೆ ಒಳಗಾಗಿದ್ದು ಅದೇ ಕಾರಣದಿಂದ ವಿಷ ಪದಾರ್ಥ ಸೇವಿಸಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ:04-04-2022 ರಂದು ಮಧ್ಯಾಹ್ನ 3.00 ಗಂಟೆಯಿಂದ ಸಂಜೆ 6.00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿ ಪ್ರಭಾಕರ.ಹೆಚ್ ಇವರ ತಂದೆ ಶುಕ್ರ ಪೂಜಾರಿ (65) ಯವರು ಕೂಲಿ ಕೆಲಸ ಮಾಡಿಕೊಂಡಿದ್ದ ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆಯ ಗೋಪಾಲಕೃಷ್ಣ ಸೋಮಯಾಜಿ ಎಂಬುವರ ಅಡಿಕೆ ಮತ್ತು ತೆಂಗಿನ ತೋಟದಲ್ಲಿರುವ ಪಂಪ್ ಅಳವಡಿಸಿರುವ ಬಾವಿಯಲ್ಲಿರುವ ಒಣಗಿದ ಮಡಲುಗಳನ್ನು ತೆಗೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಮನುಷ್ಯ ಕಾಣೆ

 • ಕಾರ್ಕಳ:,  ಫಿರ್ಯಾದಿ ಆರ್ ಗಣೇಶ ಪ್ರಭು ಇವರ ತಮ್ಮ  ನಾಗರಾಜ ಪ್ರಭು, ಪ್ರಾಯ 37 ವರ್ಷ ಎಂಬವರು ಅವಿವಾಹಿತರಾಗಿದ್ದು ತಮ್ಮದೇ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು ದಿನಾಂಕ  03-04-2022 ರಂದು ನಾಗರಾಜರವರು ತಂದೆಯ ಹತ್ತಿರ ಹಣ ಕೇಳಿದ್ದು ತಂದೆಯು ಹಣ ಕೊಟ್ಟಿರುವುದಿಲ್ಲ ದಿನಾಂಕ 04-04-2022 ರಂದು ಮಧ್ಯಾಹ್ನ 2-30 ಗಂಟೆಗೆ  ಮನೆಯಿಂದ ಹಣ ತೆಗೆದುಕೊಂಡು ಟಿ ವಿ ಎಸ್ ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ಹೇಳದೇ ಹೋಗಿದ್ದು  ತಂದೆಯ ಅಕ್ಕನ  ಮನೆಯಾದ ಕುಕ್ಕುಂದೂರು ಗ್ರಾಮದ ಜಯಂತಿನಗರ ಎಂಬಲ್ಲಿ ಮನೆಯಲ್ಲಿ ಮೋಟಾರ್ ಸೈಕಲ್ ಕೀ ಸಮೇತ ಇಟ್ಟು ಮೊಬೈಲ್ ಸ್ವಿಚ್ ಆಫ್‌  ಮಾಡಿ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  48/2022 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 05-04-2022 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080