ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 04/04/2021 ರಂದು ಬೆಳಿಗ್ಗೆ 11:30 ಗಂಟೆಗೆ ಕುಂದಾಪುರ  ತಾಲೂಕು ಕೊಟೇಶ್ವರ ಗ್ರಾಮದ, ಕೊಟೇಶ್ವರ- ಕೋಣಿ  ರಸ್ತೆಯ  ಮಾರ್ಕೋಡು  ಜಯವಂತ  ಕಾಮತ್‌ ರವರ  ಮನೆಯ  ಗೇಟ್‌‌ ಬಳಿ  ರಸ್ತೆಯಲ್ಲಿ ಆಪಾದಿತ ನಾರಾಯಣ ಎಂಬುವವರು KA-20-EQ-1264ನೇ Honda Active ಸ್ಕೂಟರ್‌ ನ್ನು  ಕೋಣಿ  ಕಡೆಯಿಂದ  ಕೊಟೇಶ್ವರ ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು, ಅದೇ ಅದೇ  ದಿಕ್ಕಿನಲ್ಲಿ ಸೈಕಲ್‌ ಸವಾರಿ ಮಾಡಿಕೊಂಡು  ಬರುತ್ತಿದ್ದ  ಜಯರಾಮ ರವರ ಸೈಕಲ್‌‌ ಗೆ  ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ  ಜಯರಾಮ ರವರು  ಸೈಕಲ್‌ ‌ಸಮೇತ  ರಸ್ತೆಯಲ್ಲಿ  ಬಿದ್ದು, ಅವರ ತಲೆಗೆ, ಮೂಗಿಗೆ, ಬಲ ಕಣ್ಣಿಗೆ, ಬಲಭುಜಕ್ಕೆ ಒಳಜಖಂ ಉಂಟಾದ ಗಾಯ  ಹಾಗೂ ಮೈ ಕೈಗೆ  ಗುದ್ದಿದ ನೋವು ಆಗಿ  ಕೊಟೇಶ್ವರ  ಎನ್. ಆರ್‌ ಆಚಾರ್ಯ  ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಬೀರಪ್ಪ (21), ತಂದೆ: ಚಂದ್ರಪ್ಪ, ವಾಸ: ಬಳವಣಿಕೆ, ರೋಣ ತಾಲೂಕು, ಗದಗ ಜಿಲ್ಲೆ ಇವರು ಉಡುಪಿ ಬೀಡಿನಗುಡ್ಡೆಯಲ್ಲಿ ಬಿಡಾರ ಮಾಡಿಕೊಂಡು ವಾಸವಾಗಿದ್ದು, ಅವರು 2ನೇ ಆರೋಪಿಯಾದ ನಿಟ್ಟೂರಿನ ಮಾಣಿಕ್ಯ ಎಂಬುವವರ ಜೊತೆ ಕಾಂಕ್ರೀಟ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 04/04/2021 ರಂದು ಕೋಟಾದಲ್ಲಿ ಕಾಂಕ್ರೀಟ್ ಹಾಕುವ ಕೆಲಸ ಇದ್ದು,  ಅಲ್ಲಿ ಕಾಂಕ್ರೀಟ್ ಕೆಲಸ ಮುಗಿದ ಮೇಲೆ 2ನೇ ಆರೋಪಿಯು KA-20-C-3501 ನೇ ನಂಬ್ರದ ಮಹೇಂದ್ರ ಗೂಡ್ಸ್ ಟೆಂಪೊದಲ್ಲಿ ಕಾಂಕ್ರೀಟ್ ಮಿಕ್ಸ್ ಮಾಡುವ ಯಂತ್ರವನ್ನು ಲೋಡ್‌ಮಾಡಿ ಅದೇ ಟೆಂಪೊದಲ್ಲಿ ಕೆಲಸದವರಾದ ಪಿರ್ಯಾದಿದಾರರು,  ಲಕ್ಷ್ಮೀ (30), ಗಂಡ: ಭೀಮಪ್ಪ ರಾಥೋಡ್, ದೇವಮ್ಮ, ಶಣ್ಮುಕಮ್ಮ, ಸುಮಿತ್ರ,  ಮಂಜುಳಾ,  ಅನ್ನಪೂರ್ಣ(3), , ಸದಾನಂದಾ (7),  ರತ್ನಾ,  ಲಕ್ಷ್ಮೀಬಾಯಿ, ಮಮ್ತಾಜ್,  ಕಾವೇರಿ,  ಮುತ್ತಪ್ಪ,  ನೀಲವ್ವ, ಮಲ್ಲವ್ವ,  ಮಾಂತೇಶ್,  ಶಿವಪ್ಪ,  ಯಲ್ಲವ್ವ  ನೀಲಮ್ಮ.  ಲಕ್ಷ್ಮೀ ಗಂಡ: ಬಸಪ್ಪ,  ಕಸ್ತೂರಿ,  ಹನುಮವ್ವ ರವರನ್ನು ಕುಳಿತುಕೊಳ್ಳುವಂತೆ ಹೇಳಿ, ಹತ್ತಿಸಿ ಕಳುಹಿಸಿದ್ದು,  1ನೇ ಆರೋಪಿ ಚಂದ್ರಶೇಖರರವರು ವಾಹನವನ್ನು ಚಲಾಯಿಸುತ್ತಿದ್ದು, ಕೆಲಸಗಾರರು ಕಾಂಕ್ರೀಟ್ ಮಿಕ್ಸಿಂಗ್ ಮೆಶಿನ್ ಇಟ್ಟ ಜಾಗದ ಎಡೆಯಲ್ಲಿ ಕುಳಿತುಕೊಂಡು ರಾ.ಹೆ 66 ರಲ್ಲಿ ಕೋಟಾ ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ಸಂಜೆ 7:40 ಗಂಟೆಗೆ ಬ್ರಹ್ಮಾವರದ ಹೊಟೆಲ್  ಮಾನಸ ಲಾಡ್ಜಿಂಗ್ ಬಳಿ ತಲುಪುವಾಗ 1ನೇ ಆರೋಪಿಯು ಟೆಂಪೊವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಆತನ ಹತೋಟಿ ತಪ್ಪಿ ರಸ್ತೆಯ ಬಲಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಟೆಂಪೋ ಪಲ್ಟಿಯಾಗಿ ಡಿವೈಡರ್ ಮೇಲೆ ಅಡ್ಡಲಾಗಿ  ಬಿದ್ದಿದ್ದು, ಟೆಂಪೋ ಪಲ್ಟಿಯಾಗುವಾಗ ಟೆಂಪೋದಲ್ಲಿದ್ದ ಕಾಂಕ್ರೀಟ್ ಮಿಕ್ಸರ್ ಯಂತ್ರದ ಅಡಿಯಲ್ಲಿ ಹಿಂದೆ  ಕುಳಿತುಕೊಂಡವರೆಲ್ಲಾ ಸಿಕ್ಕಿ ಹಾಕಿಕೊಂಡಿದ್ದು, ಈ ಅಪಘಾತದಿಂದ ಪಿರ್ಯಾದಿದಾರರ ಬಲ ಕಿಬ್ಬೊಟ್ಟೆಗೆ ರಕ್ತಗಾಯ , ಬಲ ತೊಡೆಗೂ  ಕೂಡ ರಕ್ತಗಾಯವಾಗಿದ್ದು, ಮೈ ಕೈ ಗೆ ಅಲ್ಲಲ್ಲಿ ಗುದ್ದಿದ ಒಳನೋವು ಆಗಿರುತ್ತದೆ , ವಾಹನದಲ್ಲಿದ್ದ ಲಕ್ಷ್ಮೀ (30),ಗಂಡ: ಭೀಮಪ್ಪ ರಾಥೋಡ್, ಆರೋಪಿ ಚಂದ್ರಶೇಖರ ಹಾಗೂ ಇನ್ನೂ ಕೆಲವರಿಗೆ ತೀವ್ರ ಗಾಯ ಹಾಗು ಕೆಲವರಿಗೆ ಸಾದಾ ಗಾಯವಾಗಿರುತ್ತದೆ. ಗಾಯಾಳುಗಳೆಲ್ಲಾ ಪ್ರಸ್ತುತ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿದ್ದು, ಅವರಲ್ಲಿ ತೀವ್ರವಾಗಿ ಗಾಯಗೊಂಡ ಲಕ್ಷ್ಮೀ (30),ಗಂಡ: ಭೀಮಪ್ಪ ರಾಥೋಡ್ ರವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 8;15 ಗಂಟೆಗೆ ಮೃತಪಟ್ಟಿರುವುದಾಗಿದೆ. ಆರೋಪಿಯನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಪಘಾತಕ್ಕೆ 3ನೇ ಆರೋಪಿಯಾದ KA-20-C-3501 ನೇ ನಂಬ್ರದ ಮಹೇಂದ್ರ ಗೂಡ್ಸ್ ಟೆಂಪೊ ವಾಹನದ ನೊಂದಣಿ ಮಾಲಕರು ಹಾಗೂ 2ನೇ ಆರೊಪಿಯಾದ ಗುತ್ತಿಗೆದರ ಮಾಣಿಕ್ಯ ರವರು ಕೆಲಸಗಾರರಿಗೆ ಪ್ರಯಾಣಿಸಲು ಬೇರೆ ವಾಹನದ ವ್ಯವಸ್ಥೆ ಮಾಡಿಸದೇ, ಸರಕು ಸಾಗಾಟ ಮಾಡುವ ವಾಹನದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಲೋಡ್ ಮಾಡಿ ಕೆಲಸಗಾರರನ್ನುತುಂಬಿಸಿ ಸಾಗಾಟ ಮಾಡಿ ನಿರ್ಲಕ್ಷ ವಹಿಸಿದ್ದು ಹಾಗೂ 3ನೇ ಆರೋಪಿಯ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಆದ್ದರಿಂದ  ಈ ಬಗ್ಗೆ  ಆರೋಪಿಗಳಾದ 1 ಚಂದ್ರಶೇಖರ, 2] ಗುತ್ತಿಗೆದಾರ ಮಾಣಿಕ್ಯ 3] KA-20-C-3501 ನೇ ವಾಹನದ ನೊಂದಣಿ ಮಾಲಕ ಇವರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021 ಕಲಂ: 279, 337, 338, 304(A) ಐಪಿಸಿ & ಕಲಂ: 66 ಜೊತೆಗೆ 192(A) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.    

ಕಾಣೆ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಪರಶುರಾಮ ಎಣ್ಣೆ (37), ತಂದೆ: ನಿಂಗಪ್ಪ, ವಾಸ: ಭೀಮನಗಡ, ಹುನಗುಂದ ತಾಲೂಕು, ಬಾಗಲಕೋಟೆ ಜಿಲ್ಲೆ. ಹಾಲಿ ವಿಳಾಸ: ಚಂದ್ರರವರ ಬಾಡಿಗೆ ಮನೆ, ಚಿತ್ರಾ ಕಲೆಕ್ಷನ್ ಬಳಿ, ಕಾಪು ಪಡು ಗ್ರಾಮ, ಕಾಪು ಇವರು ಚಾಲಕ ವೃತ್ತಿ ಮಾಡಿಕೊಂಡಿದ್ದು ಅವರ ಹೆಂಡತಿ ಅನ್ನಪೂರ್ಣ(32) ರವರು 2-3 ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ದು ಕೆಲಸಕ್ಕೆ ಹೋಗುವಾಗ ಮಗಳು ರೇಣುಕಾ(7) ರವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದು, ದಿನಾಂಕ 01/04/2021 ರಂದು ಪಿರ್ಯಾದಿದಾರರು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿ ಸಂಜೆ 6:00 ಗಂಟೆಗೆ ಮನೆಗೆ ಬಂದು ನೋಡಿದಾಗ ಹೆಂಡತಿ ಮತ್ತು ಮಗಳು ಮನೆಯಲ್ಲಿ ಇರದೇ ಇದ್ದು, ಪಿರ್ಯಾದಿದಾರರು ತನ್ನ ಹೆಂಡತಿ ಕೆಲಸ ಮಾಡುವ ಮನೆಯವರಲ್ಲಿ ವಿಚಾರಿಸಿದಲ್ಲಿ ಮದ್ಯಾಹ್ನ ಕೆಲಸ ಮುಗಿಸಿ ಮನೆಗೆ ಹೋಗಿರುವುದಾಗಿ ತಿಳಿಸಿದ್ದು ಬಳಿಕ ಪಿರ್ಯಾದಿದಾರರು ನೆರೆಕೆರೆಯವರಲ್ಲಿ ಹಾಗೂ ಸಂಬಂದಿಕರಲ್ಲಿ ವಿಚಾರಿಸಿದಲ್ಲಿ ಅವರ ಹೆಂಡತಿ ಮತ್ತು ಮಗಳು ಪತ್ತೆಯಾಗದೇ ಇದ್ದು ಈ ಹಿಂದೆ ಪಿರ್ಯಾದಿದಾರರ ಹೆಂಡತಿ ತನ್ನ ಮಗಳನ್ನು ಕರೆದುಕೊಂಡು ತನ್ನ ತಾಯಿ ಮನೆಗೆ ಹೋಗಿ 2-3 ದಿನ ಬಿಟ್ಟು ಬರುತ್ತಿದ್ದು ಆದರೇ ಈ ಬಾರಿ ಪಿರ್ಯಾದಿದಾರರ ಹೆಂಡತಿ ಮಗಳೊಂದಿಗೆ ತನ್ನ ತಾಯಿ ಮನೆಗೂ ಸಹ ಹೋಗದೇ ಕಾಣೆಯಾಗಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021 ಕಲಂ: ಹೆಂಗಸು  ಮತ್ತು ಮಗು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ದಿನಾಂಕ 04/04/2021 ರಂದು ಸಂತೋಷ ಕಾಯ್ಕಿಣಿ, ಪೊಲೀಸ್ ವೃತ್ತ ನಿರೀಕ್ಷಕರು, ಬೈಂದೂರು ವೃತ್ತ ಇವರಿಗೆ ದೊರೆತ  ಮಾಹಿತಿಯಂತೆ ಮುಂಜಾನೆ 1:45 ಗಂಟೆಗೆ ನಾವುಂದ ಕಡೆಯಿಂದ ಕುಂದಾಪುರ ಕಡೆಗೆ ಎರಡು ಗಂಡು ಹಸುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಕಳವು ಮಾಡಿಕೊಂಡು ಅವುಗಳ ಕಾಲು ಹಾಗೂ ಕುತ್ತಿಗೆಯನ್ನು ಕಟ್ಟಿ KA-20-P-4227 ನೇ ಕೆಂಪು ಬಣ್ಣದ ಝೆನ್ ಕಾರಿನಲ್ಲಿ ತುಂಬಿಸಿಕೊಂಡು ಹಿಂಸಾತ್ಮ ರೀತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ಕಾರನ್ನು ಬೆನ್ನಟ್ಟಿಕೊಂಡು ಹೋಗಿ ನಿಲ್ಲಿಸುವಂತೆ ಸೂಚನೆ ನೀಡಿದರೂ, ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು,  2:00 ಗಂಟೆಗೆ ಮೋವಾಡಿ ಕ್ರಾಸ್ ಸಮೀಪ ತಲುಪುವಾಗ ಆಪಾದಿರ ಕಾರು ನಿಂತ್ರಣ ತಪ್ಪಿ ರಸ್ತೆಯ ಮಧ್ಯದ ಡಿವೈಡರ್‌ ಗೆ ಢಿಕ್ಕಿ ಹೊಡೆದು ರಸ್ತೆಯ ಬದಿಯಲ್ಲಿ ಬಿದ್ದಿದ್ದು, ಈ ಸಮಯ ಆಪಾದಿತರಾದ ವಾಯೀದ್, ಸಿಯಾನ್ ಮತ್ತು ಕಾರು ಚಾಲಕ ಸದಾಪ್ ರವರು ಓಡಿ ಹೋಗಿದ್ದು, ಆಪಾದಿತ ಮುಜಾಫರ್ ಅಹಮ್ಮದ್ ಎಂಬಾತನನ್ನು ವಶಕ್ಕೆ ಪಡೆದು 2,000/- ರೂಪಾಯಿ ಮೌಲ್ಯದ ಎರಡು ಗಂಡು ಹಸುಗಳನ್ನು ಮತ್ತು ಒಂದು ಲಕ್ಷ ರೂ ಮೌಲ್ಯದ ಕಾರನ್ನು ಸ್ವಾಧಿನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ:379, KARNTAKA PREVENTION OF COW SLANGHTER & CATTLE PREVENTION ACT-1964 (U/s-8,9,11), PREVENTION OF CRUELTY TO ANIMALS ACT, 1960 (U/s-11(1 ) (D)), INDIAN MOTOR VEHICLES ACT, 1988 (U/s-66,192(A))  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-04-2021 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080