ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿ ಶಿವಣ್ಣ ದೇವಾಡಿಗ ಇವರ ಹೆಂಡತಿ ಗೀತಾರವರು ಕೆದಿಂಜೆ ಕ್ಯಾಶ್ಯೂ ಪ್ಯಾಕ್ಟರಿಯಲ್ಲಿ  ಕೆಲಸ ಮಾಡಿಕೊಂಡಿದ್ದು  ದಿನಾಂಕ 04/03/2023 ರಂದು 17:30 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗುವರೇ ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ಬಿ.ಎಸ್‌.ಕೆ ಪ್ಯಾಕ್ಟರಿಯ ಬಳಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿರುವಾಗ ನಿಟ್ಟೆ ಕಡೆಯಿಂದ ಕೆದಿಂಜೆ ಕಡೆಗೆ KA 20-AA-4047 ನೇ ವಾಹನದ ಚಾಲಕ ಪ್ರಕಾಶ ಎಂಬಾತನು ತನ್ನ ಬಾಬ್ತು ಲಾರಿಯನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೀತಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು, ಅವರ ತಲೆಗೆ ಮತ್ತು ದೇಹದ ಇತರೆ ಭಾಗಗಳಿಗೆ ಗುದ್ದಿದ್ದ ನೋವು ಮತ್ತು ರಕ್ತ ಗಾಯವಾಗಿದ್ದು,  ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2023 ಕಲಂ 279, 337, 338 ಐಪಿಸಿರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಕಾಪು: ದಿನಾಂಕ 04.03.2023 ರಂದು ಪಿರ್ಯಾದಿ ರೂಪ  ಇವರ ಗಂಡ ಮಹೇಶ(42) ರವರು ತನ್ನ ಬಾಬ್ತು ಕೆ.ಎ. 20 ಇ.ಎ.8774 ನೇ ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ರಾ ಹೆ 66 ರ ಉಡುಪಿ ಮಂಗಳೂರು ರಸ್ತೆಯಲ್ಲಿ ಅದಮಾರು ಕಡೆಗೆ ಸವಾರಿ ಮಾಡಿಕೊಂಡು ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 9.25 ಗಂಟೆಗೆ ಊಳಿಯಾರಗೋಳಿ ಗ್ರಾಮದ ಪೊಲಿಪು ಜಂಕ್ಷನ್‌ ಬಳಿ ತಲುಪುತ್ತಿದ್ದಂತೆ, ಶೀತಲ ಶೆಟ್ಟಿರವರು ತನ್ನ ಬಾಬ್ತು ಎಮ್.ಹೆಚ್. 43 ಎ.ಜೆ. 5649 ನೇ ಕಾರನ್ನು ಕಾಪು ಪೇಟೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಹೇಶ ರವರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಮಹೇಶ ರವರು ಮೋಟಾರ್ ಸೈಕಲ್‌‌ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಮೂಳೆ ಮುರಿತವಾಗಿದ್ದು, ಅಲ್ಲಿನ ಸ್ಥಳೀಯರು ಉಪಚರಿಸಿ ರಸ್ತೆಯ ಬದಿಯಲ್ಲಿ ಕುಳ್ಳರಿಸಿರುತ್ತಾರೆ. ಮಹೇಶರವರು ಕೂಡಲೇ ಪಿರ್ಯಾದಿದಾರರಿಗೆ ಅಪಘಾತವಾದ ಬಗ್ಗೆ ಫೋನ್ ಕರೆ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು ತನ್ನ ಸಂಬಂಧಿ ಮನೋಜ್  ರವರ ಕಾರಿನಲ್ಲಿ ಸ್ಥಳಕ್ಕೆ ಬಂದು ಪಿರ್ಯಾದಿದಾರರು ತನ್ನ ಗಂಡ ಮಹೇಶ ರವರು ನೋಡಿ ಮನೋಜ್ ರವರ ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2023 ಕಲಂ 279, 338 ಐಪಿಸಿರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

ಇತರ ಪ್ರಕರಣ

  • ಕಾಪು: ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ    636/2023ರ ಸಾರಾಂಶವೇನೆಂದರೆ ಪಿಯಾ೯ದಿ ಗಣೇಶ್‌ ಕುಮಾರ್‌ ಇವರು  ಕಟ್ಟಡ ನಿಮಾ೯ಣ ವಸ್ತುಗಳನ್ನು ಸರಬರಾಜು ಮಾಡುವ ವ್ಯವಹಾರ ಮಾಡಿಕೊಂಡಿದ್ದು,  ತನ್ನ ವ್ಯವಹಾರದ  ಬಗ್ಗೆ ಆರೋಪಿ ಸುರೇಶ ನಾಯಕ್‌  ಯಿಂದ ನವೆಂಬರ್‌ 2021 ರಲ್ಲಿ 2 ಲಕ್ಷ ಹಣವನ್ನು, ಪೆಬ್ರವರಿ 2022 ರಿಂದ ಪ್ರತಿ ತಿಂಗಳು ಕಂತಿನಂತೆ ಹಣ ಹಿಂದಿರುಗಿಸುವುದಕ್ಕೆ ಆರೋಪಿ ಒಪ್ಪಿಕೊಂಡಂತೆ  ಸಾಲವಾಗಿ ಪಡೆದುಕೊಂಡಿರುತ್ತಾರೆ. ಈ ಸಮಯ ಆರೋಪಿ 10,000/- ಹಣವನ್ನು ಬಡ್ಡಿಯಾಗಿ ಮುರಿದುಕೊಂಡು ಪಿಯಾ೯ದಿದಾರರಿಗೆ 1,90,000/- ಹಣವನ್ನು ನೆಪ್ಟ್‌ ಮೂಲಕ ನೀಡಿರುತ್ತಾರೆ. ಪಿಯಾ೯ದಿದಾರರು ಸದ್ರಿ ಸಾಲಕ್ಕೆ  ಆಧಾರವಾಗಿ 005801 ಮತ್ತು 005802 ನಂಬ್ರದ ಎರಡು ಖಾಲಿ ಚೆಕ್‌ಗಳನ್ನು ಹಾಗೂ 2 ಖಾಲಿ ಈ ಸ್ಟ್ಯಾಂಪ್‌ ಪೇಪರ್‌ಗಳನ್ನು ಆರೋಪಿಗೆ ನೀಡಿರುತ್ತಾರೆ.  ಬಳಿಕ ಪಿಯಾ೯ದಿದಾರು ಆರೋಪಿಗೆ ರೂಪಾಯಿ 95,000/-ವನ್ನುಬ್ಯಾಂಕ್‌ ಟ್ರಾನ್ಸ್‌ಪರ್‌ ಮೂಲಕ  ಹಾಗೂ 95,000/-ಹಣವನ್ನು 2022 ನೇ ಪೆಬ್ರವರಿ ತಿಂಗಳಿನಿಂದ 2022 ನೇ ಅಕ್ಟೋಬರ್‌ ತಿಂಗಳವರೆಗೆ ಕಂತಿನಲ್ಲಿ ಪಾವತಿಸಿರುತ್ತಾರೆ. ಆದರೆ ಬಳಿಕ ಆರೋಪಿತನು ಖಾಲಿ ಚೆಕ್‌ ಹಾಗೂ ಈ ಸ್ಟ್ಯಾಂಪ್‌ ನ್ನು ಪಿಯಾ೯ದಿದಾರರಿಗೆ ಹಿಂದಿರುಗಿಸದೇ ಪಿಯಾ೯ದಿದಾರರು ಸಾಲಕ್ಕೆ ಆಧಾರವಾಗಿ ನೀಡಿದ ಚೆಕ್‌ ನಂಬ್ರ 005801ನ್ನು ದುಭ೯ಳಕೆ ಮಾಡಿಕೊಂಡು ಅಕ್ರಮ ಲಾಭಗಳಿಸುವ ಉದ್ದೇಶದಿಂದ  ಚೆಕ್‌ನಲ್ಲಿ 4,00,000/- ಹಣವನ್ನು ನಮೂದಿಸಿ ಬ್ಯಾಂಕಿಗೆ ಕ್ಲಿಯರೆನ್ಸ್‌ ಗಾಗಿ ನೀಡಿರುತ್ತಾರೆ.  ಈ ಬಗ್ಗೆ ಪಿಯಾ೯ದಿದಾರರು ಆರೋಪಿಗೆ ಖಾಲಿ ಚೆಕ್‌ಗಳನ್ನು ಹಾಗೂ ಈ-ಸ್ಟ್ಯಾಂಪ್‌ ಪೇಪರ್‌ಗಳನ್ನು ಹಿಂದಿರುಗಿಸುವಂತೆ  ಲಾಯರ್‌ ನೋಟೀಸ್‌ ನೀಡಿರುತ್ತಾರೆ. ಆದರೂ ಕೂಡ ಆರೋಪಿತನು ಚೆಕ್‌ ಹಾಗೂ ಈ ಸ್ಟ್ಯಾಂಪ್‌ ಪೇಪರ್‌ಗಳನ್ನು ಪಿಯಾ೯ದಿದಾರಿಗೆ ಹಿಂದಿರುಗಿಸಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023 ಕಲಂ 420,403, ಜೊತೆಗೆ 34  ಐಪಿಸಿರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಹಿರಿಯಡ್ಕ: ಅನಿಲ್ ಬಿ ಎಂ ಪಿಎಸ್‌ಐ  ಹಿರಿಯಡ್ಕ ಪೊಲೀಸ್ ಠಾಣೆ ಇವರು ದಿನಾಂಕ: 04/03/2023 ರಂದು ಸಿಬ್ಬಂದಿಯರೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದವ ಸಮಯ ದಿನಾಂಕ: 05/03/2023 ರಂದು ಬೆಳಗಗಿನ ಜಾವ 1:00 ಗಂಟೆ ಸಮಯಕ್ಕೆ  ಬೆಳ್ಳಂಪಳ್ಳಿ ಗ್ರಾಮದ ಕ್ವಾಲಿಟಿ ವೈನ್ ಶಾಪ್‌ನ  ಹಿಂಭಾಗದಲ್ಲಿ ಕೆಲವು ಯುವಕರು ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿಟ್ಟು  ಅಂದರ್‌ ಬಾಹರ್‌ ‌ಇಸ್ಪೀಟ್‌ ಜುಗಾರಿ ಆಟ ಆಡುತ್ತಿರುವ ಬಗ್ಗೆ  ಖಚಿತವಾದ ಬಾತ್ಮಿಯನ್ನು ನೀಡಿದ ಮೇರೆಗೆ  1:30 ಗಂಟೆ ಸಮಯಕ್ಕೆ ಇಲಾಖಾ ವಾಹನದಲ್ಲಿ ಕ್ವಾಲಿಟಿ ವೈನ್ ಶಾಪ್ ನ ಸ್ವಲ್ಪ ದೂರದಲ್ಲಿ  ವಾಹನ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸುಮಾರು  5 ರಿಂದ 6 ವ್ಯಕ್ತಿಗಳು ಕ್ವಾಲಿಟಿ ವೈನ್ ಶಾಪ್ ಹಿಂಬಾಗದಲ್ಲಿ ಗುಂಪುಗೂಡಿ ಕುಳಿತಿದ್ದು ಅದರಲ್ಲಿ ಒಬ್ಬ ಇಸ್ಪೀಟ್ ಎಲೆಯನ್ನು ನೆಲದ ಮೇಲೆ ಹಾಸಲಾಗಿದ್ದ ಪೇಪರ್   ಮೇಲೆ ಹಾಕಿರುತ್ತಾನೆ ..ಆಗ ಓರ್ವ ನನ್ನದು ಅಂದರ್ 500 ರೂಪಾಯಿ ಎಂದು ಹಾಗೂ ಇನ್ನೋರ್ವ ನನ್ನದು ಬಾಹರ್ 500 ರೂಪಾಯಿ ಎಂದು ಕೂಗಿ ಸದ್ರಿ ಹಣವನ್ನು ಪೇಪರ್ ಮೇಲೆ ಹಾಕಿರುತ್ತಾರೆ. ಸದ್ರಿಯವರು  ಹಣವನ್ನು ಪಣವನ್ನಾಗಿ ಇಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದು ಖಚಿತವಾಗಿದ್ದರಿಂದ ಸದ್ರಿ ಸ್ಥಳಕ್ಕೆ ಹೋಗಿ ಅವರನ್ನು  ಸುತ್ತುವರೆದಾಗ ಎಲ್ಲರೂ ಓಡಲು ಯತ್ನಿಸಿದ್ದು  ಅವರಲ್ಲಿ ಇಬ್ಬರನ್ನು ಹಿಡಿದುಕೊಂಡಿರುತ್ತೇವೆ . 3-4 ಜನ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ . ವಶಕ್ಕೆ ಪಡೆಯಲಾದ ಇಬ್ಬರನ್ನು ವಿಚಾರಿಸಲಾಗಿ ಓರ್ವ ನೆಲ್ಸನ್  ಹಾಗೂ  ನವೀನ್ ಎಂದು ತಿಳಿಸಿರುತ್ತಾರೆ. ಆರೋಪಿ ನೆಲ್ಸನ್ ನ ಅಂಗ ಜಪ್ತಿ ಮಾಡಲಾಗಿ ಆತನ ಅಂಗಿ ಕಿಸೆಯಲ್ಲಿ 3,200/-  ರೂಪಾಯಿ ಹಾಗೂ ನವೀನ್ ಮೆಂಡನ್ ನ ಅಂಗ ಜಪ್ತಿ ಮಾಡಲಾಗಿ ಆತನ ಬಳಿ 3000- ರೂಪಾಯಿ ಇದ್ದು ಸದ್ರಿ ಹಣವನ್ನು ಹಾಗೂ ಆರೋಪಿಗಳು ನೆಲಕ್ಕೆ ಹಾಕಿದ್ದ 1000/- ರೂಪಾಯಿ ಒಟ್ಟು 7200/- ರೂ  ಹಣ  ಹಾಗೂ  ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ಓಡಿ ಹೋದವರ ಬಾಬ್ತು ಮೋಟಾರು ಸೈಕಲ್  ನಂಬ್ರ 1. KA20ET8433   2. KA20EV7268  3. KA20EV8203 ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023    ಕಲಂ: 87 ಕೆ.ಪಿ. ಕಾಯ್ದೆ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಉಡುಪಿ: ಪಿರ್ಯಾದಿ ಸುಧಾಕರ ಕಾಂಚನ್ ಇವರು ಹೆಚ್.ಡಿ.ಎಫ್.ಸಿ ಬ್ಯಾಂಕ್, ಕುಂದಾಪುರ ಶಾಖೆಯಲ್ಲಿ ಖಾತೆ ಹೊಂದಿದ್ದು, ದಿನಾಂಕ 04.03.2023 ರಂದು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ಪಾನ್‌ಕಾರ್ಡ್‌ ಅಪ್ಡೇಟ್  ಮಾಡಲು ಸಂದೇಶ ಕಳುಹಿಸಿದ್ದು  ಸದ್ರಿ ಸಂದೇಶದಲ್ಲಿರುವ ಲಿಂಕ್‌ನ್ನು ಬ್ಯಾಂಕ್‌ನಿಂದ ಕಳುಹಿಸಿರುವುದಾಗಿದೆ ಎಂದು ಪಿರ್ಯಾದಿದಾರರು ನಂಬಿ ಸದ್ರಿ ಲಿಂಕ್‌ನಲ್ಲಿ ವಿವರವನ್ನು ಅಪೌಡೇಟ್‌ ಮಾಡಿದಲ್ಲಿ ಮೇಲಿನ ಖಾತೆಯಿಂದ ರೂ.1,00,000/- ಹಣ ಆನ್ ಲೈನ್ ಮುಖೇನ ವರ್ಗಾವಣೆಗೊಂಡಿರುತ್ತದೆ.    ಯಾರೋ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ  ಪಿರ್ಯಾದುದಾರರನ್ನು ವಂಚಿಸಿ  ಮೋಸದಿಂದ ಹಣ ವರ್ಗಾವಣೆ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023  ಕಲಂ 66(C), 66(D), ಐ.ಟಿ. ಆಕ್ಟ್  ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 05-03-2023 05:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080