ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 04/03/2022 ರಂದು ಅಬೂಬಕ್ಕರ್ ಸಿದ್ದಿಕ್ ಎಂಬಾತ ಸಂತೆಕಟ್ಟೆಯಿಂದ  KA-20-EC-7016 ನೇ ಮೋಟಾರ್ ಸೈಕಲ್ ನ್ನು ಸವಾರಿ ಮಾಡುತ್ತಾ ಸಮಯ ಸುಮಾರು ರಾತ್ರಿ 09:30 ಗಂಟೆಗೆ ಅಂಬಾಗಿಲು ಜಂಕ್ಷನ್ ಬಳಿ ಅಂಬಾಗಿಲು ಗುಂಡಿಬೈಲು ರಸ್ತೆ ತಲುಪುವಾಗ ಎದುರಿನಿಂದ ವಾಹನ ಗಳ ಸಂಚಾರದ ಏಕಮುಖ ರಸ್ತೆಯ ವಿರುದ್ದ ದಿಕ್ಕಿನಿಂದ ಗುಂಡಿಬೈಲು ಕಡೆಯಿಂದ ಅಂಬಾಗಿಲು ಕಡೆಗೆ ಗಣೇಶ ಎಂಬಾತ KA-20 W-1163 ನೇ ಮೊಟಾರ್ ಸೈಕಲ್ ನಲ್ಲಿ ತನ್ನ ಹೆಂಡತಿ ರೇಖಾ ಮತ್ತು ಮಗ ಉತ್ತಮರನ್ನು ಕುಳ್ಳಿರಿಸಿಕೊಂಡು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿ KA-20 EC-7016 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅಬೂಬಕ್ಕರ್ ಸಿದ್ದಿಕ್ ರವರು ತಲೆಗೆ ಗಂಭಿರ ಗಾಯವಾಗಿದ್ದು ಮಾತನಾಡದೆ ಇದ್ದು ಆದರ್ಶ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಹಾಗೂ ಈ ಅಪಘಾತದಲ್ಲಿ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಗಣೇಶ ಹಾಗು ಹಿಂಬದಿ ಸವಾರ ರಾದ ರೇಖಾ ಮತ್ತು ಉತ್ತಮ ರವರಿಗೂ ಗಾಯಗಳಾಗಿರುತ್ತದೆ. ದಿನಾಂಕ 05/03/2022 ರಂದು ಸಮಯ 1:30 ಗಂಟೆಗೆ ಸ್ವೀಕರಿಸಿ, ಠಾಣಾ ಅ.ಕ್ರ ನಂ.21/2022 ,  ಕಲಂ. 279, 337 338  ಐಪಿಸಿ ಮತ್ತು  ರೂಲ್‌ 218 ಜೋತೆಗೆ 177 ಐ ಎಂ ವಿ ಕಾಯಿದೆ ರಂತೆ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿದ್ದುದಾಗಿರುತ್ತದೆ. ಅಬೂಬಕ್ಕರ್ ಸಿದ್ದಿಕ್  (18) ರವರು ಉಡುಪಿ ಆದರ್ಶ  ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 05/03/2022 ರಂದು ಮುಂಜಾನೆ 02:25 ಗಂಟೆಗೆ ಮೃತಪಟ್ಟಿರುವುದಾಗಿ ದಿನಾಂಕ 05/03/2022 ರಂದು ಮುಂಜಾನೆ 04:00 ಗಂಟೆಗೆ ಉಡುಪಿ ಆಧರ್ಶ ಆಸ್ಪತ್ರೆಯಿಂದ ಬಂದ ಸೂಚನಾ ಪತ್ರವನ್ನು ಸ್ವೀಕರಿಸಿಕೊಂಡು, ರಿಯಾಝ್ (34)  ತಂದೆ: ಅಬ್ದುಲ್ ಖಾದರ್ , ವಾಸ: ಜನತಾ ಕಾಲೋನಿ  2 ನೇ ಕ್ರಾಸ್ ಕರಂಬಳ್ಳಿ   ಕುಂಜಿಬೆಟ್ಟು ಅಂಚೆ , ಶಿವಳ್ಳಿ ಗ್ರಾಮ ಉಡುಪಿ ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2022 ಕಲಂ. 279,  337 304(ಎ) ಐಪಿಸಿ  ಮತ್ತು ರೂಲ್ 218 ಜೊತೆಗೆ 177 ಐ ಎಂ ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಫುರ: ಪಿರ್ಯಾದಿದಾರರಾದ ಬಿ ಶಿವಮಲ್ಲು, (49) ತಂದೆ: ದಿ/ ಬಿ ಬಸವ, ವಾಸ: ದ್ವಿತೀಯ ದರ್ಜೆ ಸಹಾಯಕ, ತಾಲೂಕು ಕಛೇರಿ, ಬ್ರಹ್ಮಾವರ ಇವರು ಪರಿಶಿಷ್ಟ ಜಾತಿಗೆ ಸೇರಿದ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ನೌಕರನಾಗಿದ್ದು, ಸದ್ರಿಯವರಿಗೆ ತಲ್ಲೂರು ಗ್ರಾಮದ ಸರಕಾರಿ ನೌಕರರ ಬಡಾವಣೆಯ ಸರ್ವೇ ನಂ 162/2B5 ರಲ್ಲಿ 11 ನೆಯ ಮನೆ ನಿವೇಶನವು ಕುಂದಾಪುರದ ತಹಶೀಲ್ದಾರ್ ರವರ ಕಛೇರಿ ಹಕ್ಕು ಪತ್ರ ಆದೇಶ ಸಂಖ್ಯೆ: LND(2)HST/CR 162/1998-99 ದಿನಾಂಕ 16-03-2000 ರಂತೆ ಮಂಜೂರಾಗಿರುತ್ತದೆ. ಸದ್ರಿ ಜಾಗದ ಮಾರಾಟದ ಉದ್ದೇಶದಿಂದ ಸದ್ರಿ ಜಾಗದ ಋಣಬಾರ ಪತ್ರವನ್ನು ಪಡೆಯುವ ವೇಳೆ ಕುಂದಾಪುರ ಸಬ್ ರಿಜಿಸ್ಟ್ರಾರರು ಜಾಗವು ಮಾರಾಟವಾಗಿರುವ ವಿಷಯ ತಿಳಿಸಿರುವುದಾಗಿದೆ. ಬಿ ಶಿವಮಲ್ಲು ರವರು ಈ ಬಗ್ಗೆ ಕ್ರಯಪತ್ರದ ಧೃಢೀಕೃತ ನಕಲನ್ನು ಪಡೆಯಲಾಗಿ ಅದರೊಂದಿಗೆ ಲಗತ್ತಾದ ಬಿ ಶಿವಮಲ್ಲು ರವರ ಪೋರ್ಜರಿ ಸಹಿ ಇರುವ ಸಾಮಾನ್ಯ ಮುಖ್ತ್ಯಾರುನಾಮೆ ಇದ್ದಿರುತ್ತದೆ. ಸದ್ರಿ ನಕಲಿ ಮುಖ್ತ್ಯಾರುನಾಮೆಯನ್ನು ಆರೋಪಿ 1) ಪ್ರೇಮಾ ಲಕ್ಷ್ಮಣ ನಾಯಕ್, (54) ಗಂಡ: ನಾಗೆಶ್ ನಾಯಕ್, ವಾಸ: ದತ್ತಾತ್ರೇಯ ಹೌಸಿಂಗ್ ಕಾಂಪ್ಲೆಕ್ಸ್, ವೆಸ್ಟ್ ಬ್ಲಾಕ್ ರಸ್ತೆ, ಕುಂದಾಪುರ, 2) ಜೋನ್ ಮಿನೇಜಸ್, ಪ್ರಾಯ: 72 ವರ್ಷ, ತಂದೆ: ಇಮಾನ್ಯುವೆಲ್ ಮಿನೇಜಸ್, ತಲ್ಲೂರು ಗ್ರಾಮ ಇವರುಳು ಬಿ ಶಿವಮಲ್ಲು ರವರ ಹೆಸರಿನಲ್ಲಿರುವ ನಿವೇಶನದ  ಮಾರಾಟದ ಉದ್ದೇಶದಿಂದ ತಯಾರಿಸಿ ಇವರ ಇಚ್ಚೆಗೆ ವಿರುದ್ಧವಾಗಿ ಮತ್ತು ಅವರ ಸಮ್ಮತಿಯಿಲ್ಲದೇ  ನಕಲಿದಾಖಲೆ ಸೃಷ್ಟಿಸಿ ಬಿ ಶಿವಮಲ್ಲು ರವರ ಜಾಗ ಮಾರಾಟ ಮಾಡಿ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: 465, 468, 471, 420 r/w 34 IPC, U/S 3 (1) (f), Sc/St POA Act 1989ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ಪಿರ್ಯಾದಿದಾರರಾದ ಪ್ರಮೋದ ಚಂದ್ರ  ಶೆಟ್ಟಿ (52) ತಂದೆ, ದಿ, ಶಿವರಾಮ ಶೆಟ್ಟಿ ವಾಸ ಆಶಾ ನಿಲಯ ಇಡೂರು ಕುಂಜ್ಜಾಡಿ ಬೈಂದೂರು ಇವರು ದಿನಾಂಕ 24/12/2016 ರಂದು   ಕಮಕಮ್ಮ  ಶೆಡ್ತಿ ಗಂಡ  1) ಕೊರಗಯ್ಯ ಶೆಟ್ಟಿ, 2. ವನಜಾ   ಶೆಡ್ತಿ , 3. ಗುಲಾಬಿ  ಶೆಟ್ಟಿ, 4.ರಘುರಾಮ   ಶೆಟ್ಟಿ ನೇಯವರಿಗೆ  ಸೇರಿದ ಕುಂದಾಪುರ  ತಾಲೂಕಿನ ಆಜ್ರಿ  ಗ್ರಾಮದ   ಸ. ನಂ. 319 ರಲ್ಲಿ  (159/ಪಿ39) ರಲ್ಲಿ ಇರುವ  0.85 ಎಕ್ರೆ   ಸ್ಥಿರಾಸ್ಥಿ ಖರೀದಿ ಮಾಡಲು ಒಪ್ಪಿ ಜಾಗದ ಸಂಪೂರ್ಣ ಹಣ 13,00,000/- ರೂಪಾಯಿಯನ್ನು  ನೀಡಿ  1  ರಿಂದ  4 ನೇಯವರಿಗೆ ನೀಡಿರುತ್ತಾರೆ, ಈ ಸಮಯ ಕ್ರಯ ಪತ್ರ ಮಾಡಲು ದಾಖಲೆ ಪತ್ರದ ಅಗತ್ಯ ಇರುವ ಕಾರಣ   ಕ್ರಯ ಪತ್ರ ಮಾಡಿಕೊಂಡಿರುವುದಿಲ್ಲ. 2020 ರ ಅಕ್ಟೋಬರ್ ತಿಂಗಳಲ್ಲಿ ರಿಜಿಸ್ತೀ ಮಾಡಲು ಆರೋಪಿಯವರಲ್ಲಿ   ವಿಚಾರಿಸಿದಾಗ ಸಮಯವಕಾಶ ಕೇಳಿರುತ್ತಾರೆ. ಆ ಬಳಿಕ ಆರೋಪಿಗಳು ಸೇರಿ ಸಮಾನ ಉದ್ದೇಶದಿಂದ   ಸದ್ರಿ ಜಾಗವನ್ನು 5 ನೇ ಆರೋಪಿ ನಾಗರಾಜ್ ಈತನಿಗೆ ಮಾರಾಟ ಮಾಡಲು ಹೋದಾಗ   ಪ್ರಮೋದ ಚಂದ್ರ  ಶೆಟ್ಟಿ ಇವರಿಗೆ ವಿಷಯ ತಿಳಿದು ಮಾನ್ಯ ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ದಾವೆ  ಮಾಡಿರುತ್ತಾರೆ, ಆದರೂ ಸಹ ಆರೋಪಿಗಳು ಪ್ರಮೋದ ಚಂದ್ರ  ಶೆಟ್ಟಿ ರವರಿಗೆ ಮೋಸ ಮಾಡುವ ಉದ್ದೇಶದಿಂದ  ಸದ್ರಿಜಾಗವನ್ನು 5ನೇ  ಆರೋಪಿಯ ಹೆಸರಿಗೆ  ಶಂಕರನಾರಾಯಣ  ಸಬ್  ರಿಜಿಸ್ಟಾರ್  ಕಛೇರಿಯಲ್ಲಿ ಕ್ರಯ   ಪತ್ರ ಮಾಡಿಕೊಟ್ಟಿರುತ್ತಾರೆ, ಈ ಕ್ರಯ ಪತ್ರಕ್ಕೆ  ಆರೋಪಿ 6. ಸುಬ್ಬಯ್ಯ  ಪೂಜಾರಿ  (40) ತಂದೆ, ಅನಂತಯ್ಯ  ಪೂಜಾರಿ  ವಾಸ,ಕರಿ ಮನೆ  ಆಜ್ರಿ  ಗ್ರಾಮ ಕುಂದಪುರ  ತಾಲೂಕು, 7. ಶ್ರೀಮತಿ, ಮಲ್ಲಿಕಾ   ಶೆಡ್ತಿ  (35) ತಂದೆ, ಗುಲಾಬಿ ಶೆಟ್ಟಿ ವಾಸ, ಹೊಳಂದೂರು ಆಜ್ರಿ ಗ್ರಾಮ  ಕುಂದಾಪುರ ಇವರು ಸಾಕ್ಷಿ ಆಗಿರುತ್ತಾರೆ,   ದಿನಾಂಕ 12/07/2021 ರಂದು ಸುಮಾರು 13;45 ಗಂಟೆಗೆ ಪ್ರಮೋದ ಚಂದ್ರ  ಶೆಟ್ಟಿ ರವರು ಕರಾರು ಪತ್ರ ಮಾಡಿಕೊಂಡ ಜಾಗಕ್ಕೆ ಹೋದಾಗ 7 ನೇ ಆರೋಪಿ ಶ್ರೀಮತಿ ಮಲ್ಲಿಕಾ ಇವರು ಪ್ರಮೋದ ಚಂದ್ರ  ಶೆಟ್ಟಿ ಇವರಿಗೆ  ಕೊಲ್ಲುವುದಾಗಿ  ಜೀವ ಬೆದರಿಕೆ ಹಾಕಿರುತ್ತಾರೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ. 465, 468, 506, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾಧ ಶಂಕರ್‌ ಜಿ. ಕುಂದರ್‌ (58) ತಂದೆ: ದಿ. ಜಿ.ಬಿ ಸಾಲಿಯಾನ್‌ವಿಳಾಸ: ಗೋಪಾಂಬಾ ನಿವಾಸ, ಅಲೆವೂರು ರಸ್ತೆ, ಶಾಂತಿನಗರ, 80-ಬಡಗುಬೆಟ್ಟು ಗ್ರಾಮ, ಉಡುಪಿ ಇವರು ದಿನಾಂಕ 03/03/2022 ರಂದು ಸಂಜೆ ಅವರ ಸಂಬಂಧಿಯಾದ ಹರೀಶ್‌ ಎಂಬವರೊಂದಿಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸೂಪರ್‌ ಮಾರ್ಕೇಟ್‌ ಬಳಿ ಇರುವ ನಿಲ್‌ಕಮಾಲ್‌ ಎಂಬ ಬಾರ್‌ಗೆ ಹೋಗಿದ್ದು, ಬಾರ್‌ನ ಒಳಗಡೆ ಇರುವಾಗ 18:30 ಗಂಟೆಗೆ ಆರೋಪಿ ರೋಶನ್‌ ಹಾಗೂ ಇತರ ಇಬ್ಬರು ವ್ಯಕ್ತಿಗಳು ಸಮಾನ ಉದ್ದೇಶದಿಂದ ಒಟ್ಟಾಗಿ ಶಂಕರ್‌ ಜಿ. ಕುಂದರ್‌ ರವರ ಬಳಿ ಬಂದು, ಏರುಧ್ವನಿಯಲ್ಲಿ ಬೈದು, ಬಲಾತ್ಕಾರವಾಗಿ ಮೂವರು ಆರೋಪಿತರು ಸೇರಿ ಶಂಕರ್‌ ಜಿ. ಕುಂದರ್‌ ರವರನ್ನು ಹೊರಗೆ ಎಳೆದುಕೊಂಡು ಬಂದು, ರೋಶನ್‌ನು ಶಂಕರ್‌ ಜಿ. ಕುಂದರ್‌ ರವರ ಮುಖಕ್ಕೆ, ಕಿವಿಯ ಭಾಗಕ್ಕೆ ಮತ್ತು ಎದೆಗೆ ಬಲವಾಗಿ ಹಲ್ಲೆ ಮಾಡಿ ಇವರ ತುಟಿಗೆ ಗಾಯಗೊಳಿಸಿದ್ದಲ್ಲದೆ, ‘ಈಗ ಇಷ್ಟೇ ಮಾಡಿದ್ದೇವೆ, ಮುಂದೆ ನಿನ್ನನ್ನು ಕೊಲ್ಲುವುದಾಗಿ’ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2022, ಕಲಂ: 341, 323, 504, 506 Rw 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕೋಟ: ಪಿರ್ಯಾದಿದಾರರಾದ ಪ್ರಜ್ವಲ್‌ ‌‌‌‌‌‌‌(19) ತಂದೆ ನಾಗರಾಜ್‌‌‌‌ ವಾಸ  ಗುರುನರಸಿಂಹ ದೇವಸ್ಥಾನದ, ಹಿಂಬದಿ, ಸಾಲಿಗ್ರಾಮ,  ಬ್ರಹ್ಮಾವರ ಇವರು ಅವರ ಸ್ನೇಹಿತ ಅಯಾನ್‌‌‌ನ ತಮ್ಮ ರಿಯಾನ್‌‌ ‌‌‌‌ಎಂಬವನು  ಅವನ  ಮೊಬೈಲ್‌‌‌‌‌ ಇದರಲ್ಲಿ  ಹಿಜಾಬ್‌ ‌‌‌‌‌‌ಗಲಾಟೆಯ ಬಗ್ಗೆ,  ಹಿಂದೂ  ಕಾರ್ಯಕರ್ತರ ಬಗ್ಗೆ ಕೆಟ್ಟದಾಗಿ  ಅಭಿಪ್ರಾಯಗಳನ್ನು ವಾಟ್ಸಾಪ್‌‌‌‌‌‌‌ ಸ್ಟೇಟಸ್‌‌‌‌‌ನಲ್ಲಿ  ಹಾಕುತ್ತಿದ್ದನು. ಅದಕ್ಕೆ ಪ್ರಜ್ವಲ್‌ ರವರು  ರಿಯಾನ್‌‌‌‌‌‌ನಲ್ಲಿ ಹಾಗೆಲ್ಲಾ  ಹಾಕಬೇಡ,  ನಮಗ್ಯಾಕೆ  ಆ  ವಿಚಾರ ಅದು  ಕೋರ್ಟಿನಲ್ಲಿ  ಇತ್ಯರ್ಥವಾಗುತ್ತದೆ  ನೀನು  ಹಾಗೆಲ್ಲಾ  ವಾಟ್ಸಾಪ್‌ ‌‌‌‌‌‌‌ಸ್ಟೇಟಸ್‌ ‌‌‌‌‌‌‌‌ಹಾಕಬೇಡ ಎಂದು ಸುಮಾರು 15 ದಿನಗಳ  ಹಿಂದೆ ಸಾಲಿಗ್ರಾಮದಲ್ಲಿ  ರಿಯಾನ್‌ ‌‌‌‌ಸಿಕ್ಕಿರುವಾಗ ತಿಳಿಸಿರುತ್ತಾರೆ. ಅದಕ್ಕೆ ಅವನು ನಾನು ಇನ್ನೂ ಹಾಕುತ್ತೇನೆ ನೀನು ಏನು ಮಾಡುತ್ತಿ,  ಮಾಡು ಎಂದು ತಿಳಿಸಿದ್ದನು.  ದಿನಾಂಕ 02/03/2022  ರಂದು ಪ್ರಜ್ವಲ್‌ ರವರು ಮೋಟಾರು ಸೈಕಲ್‌‌‌‌‌ನಲ್ಲಿ ಹಿಂಬದಿ ನನ್ನ ಸ್ನೇಹಿತ ಸಂಜನ್‌‌‌‌‌ನನ್ನು  ಕರೆದುಕೊಂಡು  ಮನೆ  ಕಡೆಗೆ  ಬರುತ್ತಾ ದಿನಾಂಕ  03/03/2022  ರಂದು  ಮಧ್ಯ ರಾತ್ರಿ ಸಮಯ ಸುಮಾರು 00:45 ಗಂಟೆಗೆ  ಸಾಸ್ತಾನ ಟೋಲ್‌‌‌‌‌‌ನಲ್ಲಿದ್ದ  ರಿಯಾನ್‌‌ ‌‌‌‌‌‌ಪ್ರಜ್ವಲ್‌ ರವರಲ್ಲಿ ಏನೋ ಹೇಳುತ್ತಿದ್ದೀಯಲ್ಲ.  ಈಗ  ಬಂದಿದ್ದೇನೆ,  ಏನು  ಕಿತ್ತುಕೊಳ್ಳುತ್ತಿಯಾ  ಎಂದು  ಹೇಳಿದನು.  ಆತನ  ಜೊತೆಯಲ್ಲಿ ಮತ್ತಿಬ್ಬರು  ಇದ್ದರು. ನಂತರ  ಅವರು ಕುಂದಾಪುರ  ಕಡೆಗೆ ಕಾರಿನಲ್ಲಿ ಹೋಗಿದ್ದು,  ಸ್ವಲ್ಪ ಹೊತ್ತಿನಲ್ಲಿ ಪ್ರಜ್ವಲ್‌ ರವರು ಅವರ ಸ್ನೇಹಿತನ  ಜೊತೆಯಲ್ಲಿ ಬೈಕಿನಲ್ಲಿ ಬರುವಾಗ ಸಾಲಿಗ್ರಾಮ  ಬಸ್‌ ‌‌‌‌‌‌‌ಸ್ಟಾಪ್‌‌‌‌ನ ಬಳಿ ರಿಡ್ಜ್‌‌‌‌‌‌ಕಾರು  ಕೆಎ-20-ಎಂ.ಎ- 2867  ರಲ್ಲಿ  ರಿಯಾನ್‌‌ ‌‌‌‌‌ಮತ್ತು  ಆತನ  ಸ್ನೇಹಿತರಲ್ಲಿ ಒಬ್ಬಾತ ಅವರ ಕಾರನ್ನು  ಸಾಲಿಗ್ರಾಮ  ಬಸ್‌‌‌‌‌ಸ್ಟಾಂಡ್‌‌‌‌‌‌‌ಬಳಿ ರಸ್ತೆ  ಬದಿಯಲ್ಲಿ ನಿಲ್ಲಿಸಿ ಪ್ರಜ್ವಲ್‌ ರವರನ್ನು ಅಡ್ಡ  ಹಾಕಿ ಅದರಲ್ಲಿ  ಒಬ್ಬಾತನ  ಕೈಯಲ್ಲಿ ಕಬ್ಬಿಣದ ರಾಡ್‌ ‌‌‌‌‌ಹಿಡಿದುಕೊಂಡಿದ್ದು, ಇನ್ನೊಬ್ಬನು  ಕಾರಿನೊಳಗೆ  ಕುಳಿತುಕೊಂಡಿದ್ದವನು  ತಲವಾರನ್ನು  ನನಗೆ  ತೋರಿಸುತ್ತಾ  ಈ  ದಿನ  ನಿನ್ನನ್ನು  ಬಿಟ್ಟಿದ್ದೇನೆ,  ಮುಂದಕ್ಕೆ  ಇದೇ  ರೀತಿ  ನೀನು  ಹೇಳಿದರೆ ನಿನ್ನನ್ನು  ಕೊಂದು  ಹಾಕುತ್ತೇನೆ. ಎಂದು  ಜೀವ  ಬೆದರಿಕೆ  ಹಾಕಿರುತ್ತಾನೆ.  ನಂತರ ಪ್ರಜ್ವಲ್‌ ರವರು ಮನೆಗೆ ಹೋಗಿದ್ದು,  ನಂತರ ಮನೆಯವರಲ್ಲಿ  ಈ   ವಿಚಾರ  ತಿಳಿಸಿದಾಗ ಅವರು  ದೂರು  ನೀಡಲು  ತಿಳಿಸಿರುವುದರಿಂದ  ಅವರ  ಜೊತೆಯಲ್ಲಿ  ಕೋಟ  ಠಾಣೆಗೆ  ಬಂದು  ದೂರು  ನೀಡಲು  ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ: 341, 504, 506(2) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 05-03-2022 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080