ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 05/03/2021 ರಂದು ಬೆಳಿಗ್ಗೆ 8:00 ಗಂಟೆಗೆ ಅಪರಿಚಿತ ಮೋಟಾರು ಸೈಕಲ್ ಸವಾರ ಶೀರುಬೀಡು ಜಂಕ್ಷನ್ನ ನಿಂದ ಮಣಿಪಾಲದ ಕಡೆಗೆ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಸವಾರಿ ಮಾಡಿ ಉಡುಪಿ ಸಿಟಿ ಬಸ್ಸ್ ನಿಲ್ದಾಣದ ಬಳಿ ದುಡುಕಿನಿಂದ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ರಸ್ತೆ ದಾಟಲು ನಿಂತಿದ್ದ ಸತ್ಯ ಎಂಬ ಗಂಡಸಿಗೆ ಡಿಕ್ಕಿ ಹೊಡೆದ ಪರಿಣಾಮ ಸತ್ಯ ಎಂಬವರು ರಸ್ತೆಗೆ ಎಸೆಯಲ್ಪಟ್ಟು ತಲೆ ಮತ್ತು ಕೈ ಗಳಿಗೆ ಗಾಯವಾಗಿದ್ದು ಮಾತನಾಡದೇ ಇದ್ದವರನ್ನು ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ತಂದು ಚಿಕಿತ್ಸೆಗೆ  ದಾಖಲಿಸಿದ್ದು ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರ ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಮೋಟಾರು  ಸೈಕಲ್ ಸಮೇತ ಪರಾರಿಯಾಗಿರುತ್ತಾನೆ, ಎಂಬುದಾಗಿ ವಿಶು  ಶೆಟ್ಟಿ (47) ತಂದೆ. ದಿ  ಗುಂಡು  ಶೆಟ್ಟಿ ವಾಸ ಅಂಬಲಪಾಡಿ ಬೈಪಾಸ ಬಳಿ ಅಂಬಲಪಾಡಿ ಗ್ರಾಮ ಮತ್ತು ಅಂಚೆ ಉಡುಪಿ ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021 ಕಲಂ: 279, 337ಐ ಪಿ ಸಿ & 134  (A) & (B) IMV ಕಾಯಿದೆ ಪ್ರಕರಣ ದಾಖಲಾಗಿರುತ್ತದೆ. 

ಹುಡುಗ ಕಾಣೆ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾಧ ನಾಗಪ್ಪ (46) ತಂದೆ ನರಸಿಂಹ ಶೇರೆಗಾರ ವಾಸ: ಮಾವಿನ ಕೊಪ್ಪ ಶಿವಮೊಗ್ಗ ರಸ್ತೆ, ಹೊಸ ನಗರ ತಾಲೂಕು, ಶಿವಮೊಗ್ಗ ಇವರ ಮಗ ವಿಘ್ನೇಶ್ವರ (20) ಈತನು ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಸಹನಾ ಹಾಲ್ ನಲ್ಲಿ ಲೈಂಟಿಂಗ್ಸ್ ಹಾಗೂ ಸೌಂಡ್ಸ್ ಕೆಲಸ ಮಾಡಿಕೊಂಡಿದ್ದು ಸಹನಾ ಹಾಲ್ ನ ರೂಂ ನಲ್ಲಿ ಉಳಿದುಕೊಂಡಿರುವುದಾಗಿದೆ. ದಿನಾಂಕ 01/03/2021 ರಂದು ಸಹನಾ ಹಾಲ್ ನ ಮಾಲೀಕ ರಾದ ಸುರೇಂದ್ರ ಶೆಟ್ಟಿಯವರು ನಾಗಪ್ಪ್ ರವರಿಗೆ  ಮಗ ವಿಘ್ನೇಶ್ವರನು ಮನೆಗೆ ಬಂದಿದ್ದಾನೆಯೇ ಎಂದು ಪೋನ್ ಮೂಲಕ ವಿಚಾರಿಸಿದ್ದು, ಇವರ ಮಗ ವಿಘ್ನೇಶ್ವರ ಈತನು ಮಾಲೀಕರಿಗೂ ಹೇಳದೇ ನಾಗಪ್ಪ ರವರಿಗೂ ಹೇಳದೇ ಕೊಟೇಶ್ವರ ಗ್ರಾಮದ ಸಹನಾ ಹಾಲ್ ನಿಂದ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: ಹುಡುಗ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಮಲ್ಪೆ: ದಿನಾಂಕ 04/03/2021 ರಂದು ಸುಧಾಕರ .ಬಿಎ.ಎಸ್.ಐ ಮಲ್ಪೆ ಠಾಣೆ ರವರು ಠಾಣಾ ಪ್ರಭಾರ ಕರ್ತವ್ಯದಲ್ಲಿ ಇರುವಾಗ ಸಂಜೆ 16:00 ಗಂಟೆ ಸಮಯಕ್ಕೆ ಬಾತ್ಮೀದಾರರು ಠಾಣೆಗೆ ಕರೆ ಮಾಡಿ ಕೊಡವೂರು ಗ್ರಾಮದ ಮಲ್ಪೆ ಬಂದರಿನ ಬಾಪು ತೋಟ ದಕ್ಕೆಯ ಬಳಿ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಮಾಹಿತಿ ನೀಡಿದ್ದು.ಸದ್ರಿ ಮಾಹಿತಿಯನ್ನು ಪೊಲೀಸ್ ಉಪನಿರೀಕ್ಷಕರು ರವರಿಗೆ ಪೋನ್ ಮುಖಾಂತರ ತಿಳಿಸಿ ಅವರ ಸೂಚನೆಯಂತೆ ಇಸ್ಪೀಟು ಜುಗಾರಿ ಆಟ ಆಡುತ್ತರುವಲ್ಲಿಗೆ ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಸಿಬ್ಬಂದಿ  ಹಾಗೂ ಪಂಚರೊಂದಿಗೆ  ಸದ್ರಿ  ಸ್ಥಳಕ್ಕೆ ಹೋಗಿ 18:00 ಗಂಟೆಗೆ ಇಸ್ಪಿಟು ಜುಗಾರಿ ಆಟ ಆಡುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದು ಜಗಾರಿ ಆಟ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಅವರಲ್ಲಿ 4 ಜನರರಾದ 1) ಅಶೋಕ (33) ತಂದೆ: ಗೋವಿಂದಪ್ಪ ದಾಸರ ವಾಸ: ಹೀರೆವಡ್ಡರಕಲ್ಲು  ಯಲಬುರ್ಗ  ತಾಲೂಕು ಕೊಪ್ಪಳ ಜಿಲ್ಲೆ, 2) ಬಸಪ್ಪ (22) ತಂದೆ: ಹನುಮಪ್ಪ ಹುಳ್ಳಿ ವಾಸ: ಮುದ್ದಾಬಳ್ಳಿ ಯಲಬುರ್ಗ ತಾಲೂಕು ಕೊಪ್ಪಳ ಜಿಲ್ಲೆ, 3) ನಾಗರಾಜ (26)ತಂದೆ: ರಾಮಣ್ಣ ಮಡಿವಾಳರ್  ವಾಸ: ಹಿರೇವಡ್ಡರಕಲ್ಲು ಯಲಬುರ್ಗ ತಾಲೂಕು ಕೊಪ್ಪಳ ಜಿಲ್ಲೆ, 4) ಸಂದೀಪ್ ಬಂಗೇರಾ (35)ತಂದೆ: ಶಿವ ಬಂಗೇರಾ ವಾಸ: ಭಾಗೀರಥಿ ಮನೆ ನಾಗಬನದ ಹತ್ತಿರ ಬೈಲಕೆರೆ ತೆಂಕನಿಡಿಯೂರು ರವರನ್ನು ವಶಕ್ಕೆ ಪಡೆದು ಅವರು ಜುಗಾರಿ ಆಟಕ್ಕೆ  ಬಳಸಿದ್ದ ಒಟ್ಟು ನಗದು ರೂಪಾಯಿ  2,300, ಇಸ್ಪೀಟ್ ಎಲೆ-52, ಮತ್ತು ಹಳೆ ದಿನ ಪತ್ರಿಕೆಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ  87 ಕೆ.ಪಿ.ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ರಾಕೇಶ್, (37) ತಂದೆ: ಸುಂದರ ಕೋಟ್ಯಾನ್, ವಾಸ:ಪರಿಬೆಟ್ಟು ಮನೆ ಮಾಳ, ಮಲ್ಲಾರ್ ಅಂಚೆ, ಮಾಳ  ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರ ತಮ್ಮ ಮಿತ್ರಾಜ್, (35)ಇವರು ಕಾರ್ಕಳ ತಾಲೂಕು ಮಾಳ ಗ್ರಾಮದ ಮಲ್ಲಾರ್ ಪರಿಬೆಟ್ಟು ಎಂಬಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು, ಅವನು ವಿಪರೀತ ಮದ್ಯಪಾನ ಮಾಡುವ ಅಬ್ಯಾಸ ಹೊಂದಿದ್ದು, ಸುಮಾರು ಒಂದು ವರ್ಷದಿಂದ ಮಾನಸಿಕ ರೋಗಕ್ಕೆ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆರು ತಿಂಗಳ ಹಿಂದೆ ಪತ್ನಿ ನಾಗರತ್ನ ತವರು ಮನೆಗೆ ಹೋಗಿದ್ದು ಈಗ 15 ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ ಮಿತ್ರಾಜ್ ಮಾನಸಿಕ ಖಾಯಿಲೆ ಮತ್ತು ವಿಪರೀತ ಕುಡಿತದ ಚಟದಿಂದ ಮನನೊಂದು ಮನೆಯಲ್ಲಿ ದಿನಾಂಕ 27/02/2021 ರಂದು ಮದ್ಯಾಹ್ನ 14:30 ಗಂಟೆಗೆ ಮನೆಯಲ್ಲಿ ಮೈಗೆ ಸೀಮೆಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದು ವಿಷಯ ತಿಳಿದ ರಾಕೇಶ್‌ ರವರು ಕೂಡಲೇ 108 ವಾಹನದಲ್ಲಿ ವೆನ್ಲಾಕ್ ಆಸ್ಪತ್ರೆಗೆ ನಂತರ ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 04/3/2021 ರಂದು ಸಂಜೆ 04:48 ಗಂಟೆಗೆ ಮೃತಪಟ್ಟಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಲಕ್ಷ್ಮಿ (55) ಗಂಡ: ಸುಬ್ರಹ್ಮಣ್ ವಾಸ: 7-53ಡಿ6 ಲಕ್ಷ್ಮಿ ನಿವಾಸ, ರಾಜೀವ ನಗರ  ನಿಟ್ಟೂರು ಉಡುಪಿ ಇವರು ದಿನಾಂಕ 05/03/2021 ರಂದು ಮನೆಯಲ್ಲಿರುವ ಸಮಯ ಸುಮಾರು 11:00 ಗಂಟೆಗೆ ಒರ್ವ ಸುಮಾರು 30 ವರ್ಷದ ಅಪರಿಚಿತ ಹೆಂಗಸು ಮನೆಗೆ ಬಂದು ಜೋತಿಷ್ಯ   ಹೇಳುವುದಾಗಿ ನಂಬಿಸಿ ನಿಮ್ಮ ಮನೆಯಲ್ಲಿ ಯಾರೊ ಮಾಟ ಮಂತ್ರ ಮಾಡಿದ್ದಾರೆ ಕಣ್ಣು ದೃಷ್ಟಿ ಆಗಿದೆ ಲಕ್ಷ್ಮಿ ಪೂಜೆ ಮಾಡಿಸುತ್ತೇನೆ. ಎಂದು ಹೇಳಿ ಪೂಜೆಯ ಸಲುವಾಗಿ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ತನ್ನಿ ಎಂಬುದಾಗಿ ತಿಳಿಸಿ ಅದರಂತೆ ಲಕ್ಷ್ಮಿ ರವರು ಎಲ್ಲಾ ಚಿನ್ನಾಭರಣಗಳನ್ನು  ಮತ್ತು 15,000 ರೂಪಾಯಿ ಹಣವನ್ನು ಬಾಕ್ಸ್‌ನಲ್ಲಿ ಹಾಕಿ ಕೊಟ್ಟಿದ್ದು ಅಪರಿಚಿತ ಹೆಂಗಸು ಪೂಜೆ ಮುಗಿಸಿ ಬಾಕ್ಸ್ ವಾಪಾಸು ಕೊಟ್ಟು ಹೋದ ನಂತರ ಲಕ್ಷ್ಮಿ ಇವರು ಬಾಕ್ಸ್ ತೆಗೆದು ನೋಡಲಾಗಿ ಚಿನ್ನಾಭರಣಗಳು ಮತ್ತು ನಗದು ಹಣ ಇರುವುದಿಲ್ಲ ಅಪರಿಚಿತ ಹೆಂಗಸು ಲಕ್ಷ್ಮಿ ರವರನ್ನು ನಂಬಿಸಿ  ಹಣ ಮತ್ತು ಅಭರಣಗಳನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದು ಚಿನ್ನಾಭರಣದ ಅಂದಾಜು ಮೌಲ್ಯ 7 ಲಕ್ಷ 36 ಸಾವಿರ,  ಹಾಗೂ 15.000/- ನಗದು ಹಣ ಆಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: 420, 406 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-03-2021 09:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080