ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಲ್ಪೆ: ಪಿರ್ಯಾಧಿ ಸುಮಲತಾ ಇವರ ಗಂಡ ಅಶೋಕ ಎಲ್ ತಿಂಗಳಾಯ ರವರು ದಿನಾಂಕ 01-02-2023 ರಂದು ಇವರ ಅಜ್ಜನ ಮನೆಯಾದ ಬಡಾನಿಡಿಯೂರು ಪಾವಂಜಿಗುಡ್ಡೆಯಲ್ಲಿ ದೇವರ ಕೆಲಸವಿರುವುದರಿಂದ ಪಿರ್ಯಾಧಿದಾರರ ಗಂಡನ ಬಾಬ್ತು ಕೆಎ20 ಇಡಿ3317 ನೇ ಮೋಟಾರ್ ಸೈಕಲ್ ನಲ್ಲಿ ಬೆಳಿಗ್ಗೆ 11:00 ಗಂಟೆಗೆ ಮನೆಯಿಂದ ಹೊರಟು ಮಲ್ಪೆಗೆ ಬಂದು ಮಲ್ಪೆಯಿಂದ ಬಡಾನಿಡಿಯೂರಿಗೆ ಬೈಲಕರೆ ರಸ್ತೆಯಲ್ಲಿ ಮದ್ಯಾಹ್ನ 12:00 ಗಂಟೆ ಸಮಯಕ್ಕೆ ಬೈಲಕೆರೆ ನಾಲ್ಕು ರಸ್ತೆ ಕೂಡುವ ಜಂಕ್ಷನ್ ನಲ್ಲಿ ಗರಡಿಮಜಲು ಕಡೆಯಿಂದ ಬರುವ ರಸ್ತೆಯಿಂದ ಕೆಎ19 ಇಕ್ಯೂ1403ನೇ ಸ್ಕೂಟರ್ ಚಾಲಕಿ ತನ್ನ ಸ್ಕೂಟರ್ ನ್ನು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಯಾವುದೇ ಸೂಚನೆಗಳನ್ನು ಪಾಲಿಸದೇ ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಸ್ಕೂಟರ್ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಗಂಡನ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರ ಗಂಡನ ಮೊಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿದಾರರ ಗಂಡನ ಬಲಕಾಲಿನ ಕೋಲುಕಾಲಿಗೆ ಮೂಳೆ ಮುರಿತ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 13/2023 : ಕಲಂ 279,  338  ಐಪಿಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ

 • ಮಣಿಪಾಲ: ದಿನಾಂಕ: 01.02.2023 ರಂದು 00:45 ಗಂಟೆಗೆ ಠಾಣಾ ಎ.ಎಸ್.ಐ ಶೈಲೇಶ ಕುಮಾರ ಹಾಗೂ ಸಿಬ್ಬಂದಿ ಆನಂದಯ್ಯ ಮತ್ತು ಉಮೇಶ ಯಾದವ ಇವರುಗಳು ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ Prathamesh B Pai ಎಂಬಾತನನ್ನು  ಉಡುಪಿ ತಾಲೂಕು ಮಣಿಪಾಲ ಸರಳಬೆಟ್ಟು ಹೈಪಾಯಿಂಟ್ ಅಪಾರ್ಟಮೆಂಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾವನ್ನು ಸೇವನೆ ಮಾಡಿರುವ ಅನುಮಾನದ ಮೇರೆಗೆ ಈತನಿಗೆ  ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದು ದಿನಾಂಕ: 01.022023 ರಂದು ಠಾಣೆಗೆ ಬಂದ ಆತನನ್ನು ವಿಚಾರಣೆ ನಡೆಸಿ ಅದೇ ದಿನ ದಿನಾಂಕ: 01.02.2023 ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿದ್ದು ಆರೋಪಿ Prathamesh B Pai ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 20/2023, ಕಲಂ: 27(b) NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಮಣಿಪಾಲ ದಿನಾಂಕ: 01.02.2023 ರಂದು 00:45 ಗಂಟೆಗೆ ಠಾಣಾ ಎ.ಎಸ್.ಐ ಶೈಲೇಶ ಕುಮಾರ ಹಾಗೂ ಸಿಬ್ಬಂದಿ ಆನಂದಯ್ಯ ಮತ್ತು ಉಮೇಶ ಯಾದವ ಇವರುಗಳು ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ Mohammad Qais ಎಂಬಾತನನ್ನು  ಉಡುಪಿ ತಾಲೂಕು ಮಣಿಪಾಲ ಸರಳಬೆಟ್ಟು ಹೈಪಾಯಿಂಟ್ ಅಪಾರ್ಟಮೆಂಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾವನ್ನು ಸೇವನೆ ಮಾಡಿರುವ ಅನುಮಾನದ ಮೇರೆಗೆ ಈತನಿಗೆ  ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದು ದಿನಾಂಕ: 01.022023 ರಂದು ಠಾಣೆಗೆ ಬಂದ ಆತನನ್ನು ವಿಚಾರಣೆ ನಡೆಸಿ ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿದ್ದು ಆರೋಪಿ Mohammad Qais ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 21/2023, ಕಲಂ: 27(b) NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕುಂದಾಪುರ: ದಿನಾಂಕ: 03-02-2023 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಪಿ.ಎಸ್‌.ಐ ರವರು ಸಿಬ್ಬಂದಿಯವರ ಜೊತೆ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಕುಂದಾಪುರ ತಾಲೂಕು ಜಪ್ತಿ  ಗ್ರಾಮದ  ಬಸ್‌ ನಿಲ್ದಾಣ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವನು ನಿಷೇದಿತ ಮಾಧಕ ದ್ರವ್ಯ ಗಾಂಜಾ  ಸೇವಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ 17:00 ಗಂಟೆಗೆ ಸ್ಥಳಕ್ಕೆ ಹೋಗಿ ಆರೋಪಿತ ಗಿರೀಶ್ ಮೊಗವೀರ ಈತನನ್ನು ವಿಚಾರಿಸಿ ಬಳಿಕ ಆರೋಪಿಯನ್ನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪಡಿಸುವ ಸಲುವಾಗಿ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿವರ ಮುಂದೆ ಹಾಜರುಪಡಿಸಿದಲ್ಲಿ ವೈದ್ಯಾಧಿಕಾರಿ ವರು  ಆರೋಪಿತನನ್ನು   ಪರೀಕ್ಷಿಸಿ   ನಿಷೇದಿತ ಮಾದಕ ದ್ರವ್ಯ ಗಾಂಜಾ ಸೇವನೆ   ಮಾಡಿದ್ದಾಗಿ ನೀಡಿದ ದೃಢಪತ್ರ   ನೀಡಿದ್ದು ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 07/2023, ಕಲಂ: 27(b) NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ:  ದಿನಾಂಕ: 04/02/2023 ರಂದು ಪಿರ್ಯಾದಿ ಮಮತಾ ಉದಯ ಭಂಡಾರಿ ಇವರ ಗಂಡ ಉದಯ ಭಂಡಾರಿ (42) ಎಂಬುವರು ಬೆಳಿಗ್ಗೆ 08:40 ಗಂಟೆಯಿಂದ ಸಂಜೆ: 06:10 ಗಂಟೆಯ ಮದ್ಯಾವದಿಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಮಾಳಿಗೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುವುದಾಗಿದೆ. ಈ  ಬಗ್ಗೆ ಮಣಿಪಾಲ ಠಾಣೆ ಯುಡಿಆರ್ ನಂ. 04/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 05-02-2023 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080