ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರ ಸಂಜೀವ ಶೆಟ್ಟಿ (48), ತಂದೆ:ದಿ.ಶೀನಪ್ಪ ಹೆಗ್ಡೆ, ವಾಸ:ಹಾಡಿಮನೆ ರಾಗಿ ಹಕ್ಲು, ಯರುಕೋಣೆ , ಹೇರೂರು ಗ್ರಾಮ ಬೈಂದೂರು  ತಾಲೂಕು ಇವರು ದಿನಾಂಕ 04/02/2022 ರಂದು ಬೆಳಿಗ್ಗೆ 7:45 ಗಂಟೆಗೆ ಕೆಲಸಗಾರರನ್ನು ಕರೆದುಕೊಂಡು ಬರಲು ಹೊಸಕೋಟೆಗೆ ಹೋಗಲು ಅವರ KA-25-ED-2915 ನೇ ಮೋಟಾರು  ಸೈಕಲ್ ನಲ್ಲಿ  ಕಂಬದಕೋಣೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ಪಶ್ಚಿಮ ಬದಿಯ ರಸ್ತೆಯಲ್ಲಿ ಹೋಗುತ್ತಾ  ಕೆರ್ಗಾಲ್ ಗ್ರಾಮದ ನಾಯ್ಕನಕಟ್ಟೆ ಜಂಕ್ಷನ್  ತಲುಪಿ ಹೊಸಕೋಟೆಗೆ ಹೋಗಲು ಮೋಟಾರು ಸೈಕಲ್ ನ  ಬಲಬದಿಯ ಇಂಡಿಕೇಟರ್ ಹಾಕಿ ತಿರುಗಿಸುವ  ಸಮಯ  ಕಂಬದಕೋಣೆ ಕಡೆಯಿಂದ KA-19-Z-8407 ನೇ  ಬೊಲೇರೋ ಕಾರನ್ನುಅದರ  ಚಾಲಕನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ  ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು ಬಲ ಕೈ ಭುಜಕ್ಕೆ ಒಳ ನೋವು ಹಾಗೂ ಬಲ ಕಾಲಿನ ತೊಡೆಗೆ ತರಚಿದ ಗಾಯ ಆದವರನ್ನು  ಬೊಲೇರೋ ವಾಹನ ಚಾಲಕ ಹಾಗೂ ಸ್ಥಳೀಯರು ಬೈಂದೂರು ಅಂಜಲಿ ಆಸ್ಪತ್ರೆಗೆ  ಕರೆ ತಂದು ಪ್ರಥಮ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ   ಕುಂದಾಪುರ ಚಿನ್ಮಯಿ  ಆಸ್ಪತ್ರೆಗೆ ಕರೆ ತಂದು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 04/02/2022 ರಂದು ಮಧ್ಯಾಹ್ನ 4:00 ಗಂಟೆಗೆ ಪಿರ್ಯಾದಿದಾರರಾದ ಜ್ಯೋತಿ (39), ಗಂಡ: ಗೋವಿಂದ ನಾಯ್ಕ,ವಾಸ: ನಡೂರು ಕಮ್ಟಿ ಜೆಡ್ಡು, ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಹೆಗ್ಗುಂಜೆ ಗ್ರಾಮದ, ನಡುಜೆಡ್ಡು ಕ್ರಾಸ್ ಹತ್ತಿರ ಅಂಗಡಿಗೆ ಹೋಗುವಾಗ ಮಂದಾರ್ತಿ ಕಡೆಯಿಂದ KA-20-ER-2593 TVS XL 100 ನೇ ದ್ವಿ ಚಕ್ರ ವಾಹನದಲ್ಲಿ ರಮೇಶ್ ನಾಯ್ಕ ನಿಧಾನವಾಗಿ ಸವಾರಿ ಮಾಡಿಕೊಂಡು ನಡು ಜೆಡ್ಡು ಕ್ರಾಸ್‌ನಲ್ಲಿ ಸಾಯಿಬ್ರಕಟ್ಟೆ ರಸ್ತೆ ಕಡೆಗೆ ತಿರುಗಿಸುತ್ತಿರುವಾಗ ಅದೇ ಸಮಯ ಹಿಂದಿನಿಂದ  ಮಂದಾರ್ತಿ ಕಡೆಯಿಂದ  ಅಪರಿಚಿತ ಆರೋಪಿಯು ತನ್ನ ಹಳದಿ ಬಣ್ಣದ ಮಿನಿ ಬಸ್ಸ್ ನ್ನು ಅತಿವೇಗ ಹಾಗೂ ಅಜಾಕರೂತಕತೆಯಿಂದ ಯಾವುದೇ ಸೂಚನೆ ನೀಡದೇ ರಭಸವಾಗಿ ನಡುಜೆಡ್ಡು ಕ್ರಾಸ್ ನಿಂದ  ಸಾಹೇಬ್ರಕಟ್ಟೆ ಕಡೆಗೆ ಹೋಗುವ ರಸ್ತೆ ಕಡೆಗೆ  ತಿರುಗಿಸಿ  ರಮೇಶ್ ನಾಯ್ಕ ರವರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು,  ಡಿಕ್ಕಿ ಹೊಡೆದ ರಭಸಕ್ಕೆ  ರಮೇಶ್ ನಾಯ್ಕ ರವರು ರಸ್ತೆಗೆ ಬಿದ್ದು ಅವರ ಎಡಗೈ ಮೇಲಿನಿಂದ ತಲೆಯ ಮೇಲೆ  ಆರೋಪಿಯ ವಾಹನ ಹತ್ತಿ  ಸ್ಪಲ್ಪ ದೂರ ಹೋಗಿ ನಿಲ್ಲಿಸಿ , ಅದೇ ರಭಸದಲ್ಲಿ  ಸಾಹೇಬ್ರಕಟ್ಟೆ ಕಡೆಗೆ ವಾಹನವನ್ನು ಆರೋಪಿಯು ಚಲಾಯಿಸಿಕೊಂಡು ಹೋಗಿರುತ್ತಾನೆ.  ಈ ಅಪಘಾತದಿಂದ ರಮೇಶ್ ನಾಯ್ಕ ರವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ರಕ್ತ ಬಂದಿರುತ್ತದೆ ಅವರು ಮಾತನಾಡುತ್ತಿರಲಿಲ್ಲ. ಕೂಡಲೇ ಅವರನ್ನು  ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ವಾಹನದಲ್ಲಿ  ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ  ರಮೇಶ್ ನಾಯ್ಕ ರವರು ಚಿಕಿತ್ಸೆಗೆ ಬರುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿರುವುದಾಗಿ  ಸಂಜೆ 5:15 ಗಂಟೆಗೆ  ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022 ಕಲಂ: 279, 304(A) IPC & 134 (A & B) R/W 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 03/02/2022  ರಂದು  ಆರೋಪಿ KA-20-AA- 4242  ನೇ ನಂಬ್ರದ ಪಿಕಪ್  ವಾಹನವನ್ನು  ಕುಂದಾಪುರ  ತಾಲೂಕಿನ  ಕುಳ್ಳುಂಜೆ  ಗ್ರಾಮದ ಮಾವಿನಕೊಡ್ಲು  ಎಂಬಲ್ಲಿ   ಹಾಲಾಡಿ   ಕಡೆಗೆ ಅತೀ ವೇಗ   ಹಾಗೂ  ಅಜಾಗರೂಕತೆಯಿಂದ ಚಲಾಯಿಸಿದ  ಪರಿಣಾಮ  ಪಿಕಪ್  ವಾಹನ  ಆತನ  ನಿಯಂತ್ರಣ  ತಪ್ಪಿ  ರಸ್ತೆಯ   ಮೇಲೆ ಮಗುಚಿ   ಬಿದ್ದ  ಪರಿಣಾಮ  ಪಿಕಪ್  ಚಾಲಕ  ರಾಘವೇಂಧ್ರ  ನಾಯ್ಕ  ಇವರಿಗೆ   ರಕ್ತಗಾಯವಾಗಿದ್ದು, ಚಿಕಿತ್ಸೆಯ  ಬಗ್ಗೆ   ಕೊಟೇಶ್ವರ  ಡಾ, ಎನ್,.ಆರ್  ಆಚಾರ್ಯ  ಆಸ್ಪತ್ರಯಲ್ಲಿ  ದಾಖಲಾಗಿರುತ್ತಾರೆ, ಹಾಗೂ  ವಾಹನ   ಜಖಂಗೊಂಡಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022  ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಚಂದ್ರಶೇಖರ  ರೆಡ್ಡಿ (27),  ತಂದೆ:  ನಿಂಗನಗೌಡ ,ವಾಸ:  ರಾಮಣ್ಣ  ನವರ  ಬಾಡಿಗೆ  ಮನೆ  ಮದ್ವನಗರ ಕೊಡವೂರು  ಅಂಚೆ  ಮತ್ತು  ಕೊಡವೂರು  ಗ್ರಾಮ  ಉಡುಪಿ ಇವರು ದಿನಾಂಕ 02/02/2022 ರಂದು   ಸಂಜೆ  6ಳ00 ಗಂಟೆಗೆ  ಪುತ್ತೂರು  ಗ್ರಾಮದ  ಕೊಡಂಕೂರು  9  ನೇ  ಕ್ರಾಸ್  ಬಳಿ   ನಿಂತಿರುವಾಗ   ಅಲ್ಲೇ  ರಸ್ತೆ  ಬದಿಯಲ್ಲಿ  ನಿಲ್ಲಿಸಿದ್ದ  KA- 20-AB- 2968 ನೇ  ಏಸ್  ಟೆಂಫೋ ಚಾಲಕ   ಶರಣ  ಬಸವ  ಎಂಬಾತ  ತನ್ನ  ಟೆಂಪೋವನ್ನು   ಯಾವುದೇ  ಸೂಚನೇ  ನೀಡದೇ  ಓಮ್ಮೇಲೆ  ದುಡುಕುತನ  ಮತ್ತು  ನಿರ್ಲಕ್ಷ್ಯತನದಿಂದ  ರಸ್ತೆಗೆ   ಚಲಾಯಿಸಿ   ರಸ್ತೆ  ಬದಿಯಲ್ಲಿ  ನಿಂತಿದ್ದ   ಪಿರ್ಯಾದಿದಾರರಿಗೆ ಡಿಕ್ಕಿ  ಹೊಡೆದ  ಪರೀಣಾಮ    ರಸ್ತೆಗೆ  ಬಿದ್ದು  ಎಡಕೈಯ ಮೂಳೆ ಮುರಿತ  ಉಂಟಾಗಿ  ಗಾಂದಿ  ಅಸ್ಪತ್ರೆಯಲ್ಲಿ  ಒಳರೋಗಿಯಾಗಿ   ಚಿಕಿತ್ಸೆ  ಪಡೆಯುತ್ತಿರುವುದಾಗಿದೆ . ಆಸ್ಪತ್ರೆಯ  ಖರ್ಚುವೆಚ್ಚವನ್ನು   ಆಪಾದಿತ  ನೀಡುವುದಾಗಿ  ತಿಳಿಸಿದ್ದು  ಈಗ  ನೀಡದೇ  ಇರುವುದರಿಂದ ದೂರು ನೀಡಲು  ವಿಳಂಬವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ನಿಶಾಂತ್ (26),  ತಂದೆ: ರಘು,  ವಾಸ: ಚಿತ್ರಪಾಡಿ  ಮಾರಿಗುಡಿ ಬಳಿ ಚಿತ್ರಪಾಡಿ ಗ್ರಾಮ  ಬ್ರಹ್ಮಾವರ  ತಾಲೂಕು  ಇವರು ದಿನಾಂಕ 03/02/2022 ರಂದು ಸಂಜೆ 20:45 ಗಂಟೆಗೆ ಐರೋಡಿ ಗ್ರಾಮದ ಸಾಸ್ತಾನದ ಬಸ್ಸ್ ನಿಲ್ದಾಣದಲ್ಲಿ ಇರುವಾಗ ಉಡುಪಿ ಕಡೆಯಿಂದ ಕುಂದಾಪುರ  ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಮೋಟಾರು ಸೈಕಲ್ ಸವಾರನು ಚಲಾಯಿಸಿಕೊಂಡು ಬರುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ವಿರುದ್ದ ದಿಕ್ಕಿನಲ್ಲಿ ಓರ್ವ ಸ್ಕೂಟರ್ ಸವಾರನು  ಚಲಾಯಿಸಿಕೊಂಡು  ಸಾಸ್ತಾನದ  ಲಕ್ಷ್ಮಿ ಹಾರ್ಡವೇರ್‌ ಬಳಿ  ಮೋಟಾರು  ಸೈಕಲಿಗೆ ಡಿಕ್ಕಿಹೊಡೆದ ಪರಿಣಾಮ ಮೋಟಾರ್ ಸೈಕಲ್‌ ಸವಾರರು ರಸ್ತೆಗ ಬಿದ್ದು ರಕ್ತಗಾಯವಾಗಿದ್ದು ಈ ಬಗ್ಗೆ  ಕೂಡಲೇ ಪಿರ್ಯಾದಿದಾರರು ಹಾಗೂ ಸುನೀಲ್‌ ಎಂಬುವವರು  ಉಪಚರಿಸಿ  ಚಿಕಿತ್ಸೆಯ ಬಗ್ಗೆ  ಆಸ್ಪತ್ರೆಗೆ ಒಂದು ವಾಹನದಲ್ಲಿ ಕಳುಹಿಸಿದ್ದು  ಅಪಘಾತಗೊಂಡ  ಮೋಟಾರು  ಸೈಕಲ್‌ ಸವಾರರು ಪಿರ್ಯಾದಿದಾರರಸ್ನೇಹಿತ ಪ್ರೇಮಕಾಂತ ರವರಾಗಿದ್ದು  ಮೋಟಾರು  ಸೈಕಲ್  ನಂಬ್ರ KA-20-ET-9650 ಆಗಿದ್ದು  ಮೋಟಾರು ಸೈಕಲಿಗೆ ಉಡುಪಿ-ಕುಂದಾಪುರ ರಾಷ್ಟ್ಟ್ರೀಯ ಹೆದ್ದಾರಿ 66 ಏಕಮುಖ ರಸ್ತೆಯ ವಿರುಧ್ದ  ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದ ಸ್ಕೂಟಿಯ  ನಂಬ್ರ ನೋಡಲಾಗಿ KA-20-ES-3161 ಅಗಿದ್ದು  ಅದರ ಸವಾರನ ಹೆಸರು  ವಿನೋದ್‌ ಎಂದು ತಿಳಿದು ಬಂದಿರುತ್ತದೆ.  ಅಪಘಾತದಿಂದ  ಪ್ರೇಮಕಾಂತ ರವರಿಗೆ  ಭುಜದ ಮೂಳೆ ಮುರಿತ ಗಾಯವಾಗಿದ್ದು  ಹಾಗೂ ಢಿಕ್ಕಿ ಗೊಳಿಸಿದ ಸ್ಕೂಟಿಯ  ಸವಾರ ವಿನೋದ್‌ ರವರಿಗೆ ಸಾದಾ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸಯ್ಯದ್  ಶಾದರ್ (31), ತಂದೆ: ದಿ.ಇಮ್ತಿಯಾಜ್, ವಾಸ: ಸರ್ಪನ ಕಟ್ಟೆ, ತಿಲಕ ನಗರ ಹಡಿನ್ ಗ್ರಾಮ , ಭಟ್ಕಳ ತಾಲೂಕು. ಉ.ಕ ಜಿಲ್ಲೆ ಇವರು ದಿನಾಂಕ 03/02/2022 ರಂದು  ಮಧ್ಯಾಹ್ನ ಅವರ ಓಮಿನಿ ಕಾರಿನಲ್ಲಿ  ಬಿಜೂರಿನಲ್ಲಿ ಹೊಗುತ್ತಿರುವಾಗ ಮಜೀದ್ ಎಂಬುವವರು ಪಿರ್ಯಾದಿದಾರರ ಕಾರನ್ನು ತಡೆದು ನಿಲ್ಲಿಸಿ ನಮ್ಮ ಏರಿಯಾದಲ್ಲಿ  ಗುಜರಿ ವ್ಯಾಪಾರ ಮಾಡಲಿಕ್ಕೆ ಇಲ್ಲ ನೀವು ಅಕ್ಕಿ ವ್ಯಾಪಾರ ಮಾಡುತ್ತೀರಿ ಮುಂದಕ್ಕೆ ನಮ್ಮ ಊರಿಗೆ ಬರಲಿಕ್ಕೆ ಇಲ್ಲ  ಎಂದು ಏರು ದ್ವನಿಯಲ್ಲಿ ಮಾತನಾಡಿದ್ದು, ಅದೇ ದಿನ ರಾತ್ರಿ  ಪಿರ್ಯಾದಿದಾರರಿಗೆ ಆರೋಪಿತ ಮಜೀದನು ಪೋನ್ ಮಾಡಿ ನಮ್ಮ ಏರಿಯಾಕ್ಕೆ  ವ್ಯಾಪಾರ ಮಾಡಲು  ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆ. ದಿನಾಂಕ 04/02/2022 ರಂದು ಬೆಳಿಗ್ಗೆ  08:15 ಗಂಟೆಗೆ ಆರೋಪಿ ಮಜೀದನು ಪಿರ್ಯಾದಿದಾರರಿಗೆ  ಬೈದ ವಿಚಾರದಲ್ಲಿ ಮಾತನಾಡಲು ಪಿರ್ಯಾದಿದಾರರು ತನ್ನ ಅಣ್ಣ ವೈಜುರಾಮನ್ ಹಾಗೂ ಇತರರೊಂದಿಗೆ  ಆರೋಪಿತ ಮಜೀದನ ಮನೆಗೆ ಹೋಗಿ ಆರೋಪಿ ಮಜೀದ್ ನ  ತಂದೆ ತಾಯಿಯವರಲ್ಲಿ  ಮಾತನಾಡುತ್ತಿರುವ ಸಮಯ ಆರೋಪಿ ಮಜೀದ್ ನು ಏಕಾಏಕಿಯಾಗಿ  ಮನೆಯೊಳಗಿಂದ ಬಂದು ಪಿರ್ಯಾದಿದಾರರನ್ನು ದೂಡಿ ಹಾಕಿ ಕೈಯಿಂದ ಹೊಡೆದಿದ್ದು, ಪಿರ್ಯಾದಿರರನ್ನು ಉದ್ದೇಶಿಸಿ ಆರೋಪಿತೆ ಜಮೀಲಾ  ಅವಾಚ್ಯ ಶಬ್ದದಿಂದ ಬೈದಿದ್ದು ಅದೇ ಸಮಯಕ್ಕೆ ಬಂದ ಆರೋಪಿ ಮಹಮ್ಮದ್  ಪಿರ್ಯಾದಿದಾರರಿಗೆ  ಏನು ನೀವು ಇಲ್ಲಿಗೆ ಬಂದು ನಮ್ಮ  ಮನೆಯವರಿಗೆ ಹೊಡೆಯುತ್ತೀರಾ ಎಂಬುದಾಗಿ ಬೈದು ರಾಡ್ ನಿಂದ ಹೊಡೆಯಲು ಬೀಸಿದ್ದು ಪಿರ್ಯಾದಿದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿಯೂ ರಾಡ್ ತಲೆಗೆ ತಾಗಿ ಪಿರ್ಯಾದಿದಾರರಿಗೆ ತಲೆಗೆ ರಕ್ತಗಾಯವಾಗಿದ್ದು,  ಸ್ಥಳದಲ್ಲಿ  ಜನ ಸೇರುವುದನ್ನು ಕಂಡು  ಆರೋಪಿತರು ಇವತ್ತು ಬಚಾವಾದಿರಿ ಮುಂದಕ್ಕೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ: 341, 323, 324, 504, 506 r/w 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 05-02-2022 10:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080