ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಅಕ್ಷತಾ ಕಾಮತ್ ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ತನ್ನ ಸಹೋದ್ಯೋಗಿಗಳಾದ  ಪಲ್ಲವಿ, ರೇಶ್ಮಾರವರೊಂದಿಗೆ ದಿನಾಂಕ:03-02-2022 ರಂದು ಎಂ.ಜಿ.ಎಮ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ ಕಡಿಯಾಳಿ ದೇವಸ್ಥಾನಕ್ಕೆ ಹೋಗಿ ಬರುವರೇ ಮೂರು ಜನ ಕಡಿಯಾಳಿ ಬಸ್ ನಿಲ್ದಾಣದಿಂದ ಬಸ್ ನಿಂದ ಇಳಿದು ನಂತರ ಅಲ್ಲಿಂದ ಮಣಿಪಾಲದಿಂದ  ಕಲ್ಸಂಕದ ಕಡೆಗೆ ವಾಹನಗಳು ಹಾದು ಹೋಗುವ ರಾ.ಹೆ 169(A) ನ್ನು ದಾಟಿ ರಸ್ತೆಯ ವಿಭಾಜಕದ ಅಂಚಿನ ಬಳಿ ತುಲುಪುವಾಗ ಸಮಯ ಸುಮಾರು ಸಂಜೆ 4-25 ಗಂಟೆಗೆ ಮಣಿಪಾಲ ಕಡೆಯಿಂದ  ಕಲ್ಸಂಕದ ಕಡೆಗೆ KA05MX0706 ನೇ ಕಾರಿನ ಚಾಲಕ ಸಂದೀಪ್ ಶೆಟ್ಟಿ ಎಂಬಾತನು ತನ್ನ ಕಾರನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ತೀರಾ  ಬಲ ಬದಿಗೆ ಚಲಾಯಿಸಿಕೊಂಡು ಬಂದು ಒಮ್ಮೆಲೇ ಡಿಕ್ಕಿ ಹೊಡೆದ ಪರಿಣಾಮ ಮೂರು ಜನರು ರಸ್ತೆಗೆ ಬಿದ್ದು,  ಮುರು ಜನರಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 12/2022 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ಸಂದೀಪ ಇವರು ಸಂತೆಕಟ್ಟೆಯಲ್ಲಿ ಪ್ರೀತಮ್‌ ವೈನ್ಸ್‌ ಅಂಗಡಿ ನಡೆಸಿಕೊಂಡಿದ್ದು,ದಿನಾಂಕ 04/02/2022 ರಂದು 22:30 ಗಂಟೆಯಿಂದ ದಿನಾಂಕ 05/02/2022 ರಂದು ಬೆಳಗಿನ ಜಾವ 03:30 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಪುತ್ತೂರು ಗ್ರಾಮದ ಸಂತೆಕಟ್ಟೆಯಲ್ಲಿರುವ ಪ್ರೀತಮ್‌ ವೈನ್ಸ್‌ ಅಂಗಡಿಯ ಎದುರು ಅಳವಡಿಸಿದ ಸಿಸಿ ಕ್ಯಾಮರವನ್ನು ಹಾಳು ಮಾಡಿ, ಅಂಗಡಿಯಲ್ಲಿ ಕಳವು ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2022, ಕಲಂ: 379, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿ ಸತೀಶ್ ಶೆಟ್ಟಿ  ಇವರು ಇಲಾಖಾ ವಾಹನದ ಚಾಲಕನಾಗಿದ್ದು ದಿನಾಂಕ: 04/02/2022 ರಂದು ರಾತ್ರಿ  ಪಿರ್ಯಾದಿದಾರರು, ಠಾಣಾ ಎ.ಎಸ್.ಐ ನಾಗೇಶ್ ನಾಯಕ್‌,  ಪ್ರೋ ಪಿಎಸ್.ಐ  ಸುಷ್ಮಾ ರವರ ಜೊತೆಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ದಿನಚರಿ ಚಾರ್ಜ್ ನಲ್ಲಿದ್ದ ಹೆಚ್.ಸಿ  ಸುರೇಶ್ ರವರು  ವಿದ್ಯಾರತ್ನ ನಗರದಲ್ಲಿನ ಬ್ಯಾರಲ್‌ಬಾರ್ & ರೆಸ್ಟೋರೆಂಟ್‌‌ ಬಳಿ  ಒಬ್ಬ ವ್ಯಕ್ತಿ  ಗಲಾಟೆ ಮಾಡುತ್ತಿದ್ದ ಬಗ್ಗೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು, ಠಾಣಾ ಎ.ಎಸ್.ಐ ನಾಗೇಶ್ ನಾಯಕ್‌, ಪ್ರೋ ಪಿ.ಎಸ್.ಐ ಸುಷ್ಮಾರವರು ಇಲಾಖಾ ವಾಹನದಲ್ಲಿ ರಾತ್ರಿ ಸುಮಾರು 10:30 ಗಂಟೆ ಸಮಯ ಸದರಿ ಸ್ಥಳಕ್ಕೆ ಹೋದಾಗ ಬ್ಯಾರಲ್‌ಬಾರ್ & ರೆಸ್ಟೋರೆಂಟ್‌ ‌ಹೊರಗಡೆ ರಂಜನ್ ಕುಮಾರ್‌ ಎಂಬಾತನು ಬಾರ್ & ರೆಸ್ಟೋರೆಂಟ್‌ನ ಸಿದ್ದಾರ್ಥ್, ಅಭಿಷೇಕ್‌, ಮತ್ತು ಇತರರ ಜೊತೆಗೆ ವಿನಾ ಕಾರಣ ಜಗಳ ಮಾಡುತ್ತಿದ್ದು ಏರು ಧ್ವನಿಯಲ್ಲಿ ಅವರಿಗೆ ಬೈಯುತ್ತಿದ್ದನು, ಆಗ ಆತನಲ್ಲಿ ಕಾರಣ ಕೇಳಲು ಹೋದಾಗ ಆತನು  ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರನ್ನು , ಠಾಣಾ ಎ.ಎಸ್.ಐ ನಾಗೇಶ್ ನಾಯಕ್‌,  ಪ್ರೋ ಪಿಎಸ್.ಐ  ಸುಷ್ಮಾರವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು  ನಿಮ್ಮನ್ನು ಇಲ್ಲಿಗೆ ಯಾರು  ಕರೆಸಿದ್ದು? ಎಂದು  ಹೇಳಿ ಪಿರ್ಯಾದಿದಾರರ  ಶರ್ಟ್ ಹಿಡಿದು ಎಳೆದು ಕೈಯಿಂದ   ದೂಡಿ ಕರ್ತವ್ಯವವನ್ನು ನಿರ್ವಹಿಸದಂತೆ ಹಲ್ಲೆ ಮಾಡಿ ಹೆದರಿಸಿ KA 20 W 5741 ಸೈಕಲ್‌ನಲ್ಲಿ ಪರಾರಿಯಾಗಿರುತ್ತಾನೆ. ಸದರಿ ಆರೋಪಿತನು ಸಮವಸ್ತ್ರದಲ್ಲಿ ಇಲಾಖಾ ವಾಹನದಲ್ಲಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ  ಸಮಯದಲ್ಲಿ ಹೆದರಿಸುವ ಉದ್ದೇಶದಿಂದ  ಹಲ್ಲೆ ಮಾಡಿರುತ್ತಾನೆ. . ಈ ಬಗ್ಗೆ ಮಣಿಪಾಲ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 16/2022  ಕಲಂ: 353 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ಪಿರ್ಯಾದಿ ನಿಕಿತ ಇವರರು  ದಿನಾಂಕ 03/02./2022 ರಂದು ಉಡುಪಿ ಕೆ.ಎಸ್‌ಆರ್‌ಟಿಸಿ ಬಸ್ಸಿನಲ್ಲಿ  ರಾತ್ರಿ 10:30 ಗಂಟೆಗೆ ಬಸ್ಸಿಗೆ ಕಾಯುತ್ತಿದ್ದಾಗ  ರಾತ್ರಿ ಸುಮಾರು11:30 ಗಂಟೆ ಸಮಯಕ್ಕೆ ಒಬ್ಬ ಅಪರಿಚಿತ ಗಂಡಸು ಪಿರ್ಯಾದಿದಾರರೊಂದಿಗೆ ಅವಾಚ್ಯವಾಗಿ ವರ್ತಿಸಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 12/2022 ಕಲಂ:354 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ಫಿರ್ಯಾದಿ  ಅನಿತಾ ಇವರು  ದಿನಾಂಕ  15/05/2017 ರಂದು ಬೈಂದೂರು ತಾಲೂಕು ಪಡುವರಿ ಗ್ರಾಮದ  ರಾಮ ಎಂಬವರ ಮಗನಾದ ಮಹೇಶ್ ಎಂಬವರನ್ನು ಕೊಲ್ಲೂರಿನ  ಕೆ.ವಿಶ್ವಮೂರ್ತಿ ಉಡುಪರ ಸಭಾ ಭವನದಲ್ಲಿ  ಗುರುಹಿರಿಯರ ಸಮಕ್ಷಮದಲ್ಲಿ  ಮದುವೆಯಾಗಿದ್ದು, ಮದುವೆಯ ನಂತರ ಪಡುವರಿ ಗ್ರಾಮದ ಗಂಡನ ಮನೆಯಲ್ಲಿ  ವಾಸ ಮಾಡಿಕೊಂಡಿದ್ದು  ಮದುವೆಯಾದ 3 ತಿಂಗಳು ಆರೋಪಿಯು ಪಿರ್ಯಾದುದಾರರನ್ನು  ಚೆನ್ನಾಗಿ ನೋಡಿಕೊಂಡಿದ್ದು  ನಂತರದ ದಿನಗಳಲ್ಲಿ  ಚಿನ್ನವನ್ನು ಕೊಡುವಂತೆ ಕೇಳಿದಾಗ  ಪಿರ್ಯಾದುದಾರರು ಕೊಡದೇ ಇದ್ದು,ಪಿರ್ಯಾದುದಾರರು ಆರೋಪಿಯ ಉಪಟಳದಿಂದ ಚಿನ್ನದ ಓಲೆಯನ್ನು ನೀಡಿದ್ದು ವಾಪಾಸ್ಸು ಕೊಡುವಂತೆ ಕೇಳಿದಾಗ ಆರೋಪಿಯು ಪಿರ್ಯಾದುದಾರರನ್ನು ಉದ್ದೇಶೀಸಿ ನಿನಗೆ ಚಿನ್ನ ಯಾಕೆ ಎಂಬುದಾಗಿ  ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಊಟ ತಿಂಡಿ ಹಾಗೂ ಖರ್ಚಿಗೆ ಹಣ ಕೊಡದೇ ಬಟ್ಟೆ ಬರೆಗಳನ್ನು ನೀಡದೇ  ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ನೀನು ಮನೆ ಬಿಟ್ಟು ಹೋಗು ಇಲ್ಲವಾದರೆ ನಿನ್ನನ್ನು ಕೊಂದು ಹಾಕುತ್ತೇನೆ  ಎಂಬುದಾಗಿ  ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 39/2022 ಕಲಂ. 498(A), 323, 504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ: 04/02/2022 ರಂದು  ಸದಾಶಿವ ಆರ್ ಗವರೋಜಿ, ಪಿಎಸ್ ಐ, ಕುಂದಾಪುರ ಪೊಲೀಸ್ ಠಾಣೆ.  ಠಾಣಾ ಸಿಬ್ಬಂದಿಯವರೊಂದಿಗೆ  ಕುಂದಾಫುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಕುಂದಾಫುರ ಜ್ಯೂನಿಯರ್ ಕಾಲೇಜಿನ ಸಮೀಪ ರಸ್ತೆಯಲ್ಲಿ ಒಂದು ಕೋಮಿನ ವಿದ್ಯಾರ್ಥಿಗಳು ತಲೆಗೆ ಹಿಜಾಬ್  ಧರಿಸಿ ಶಾಲೆ ಪ್ರವೇಶಿಸುವ  ವಿಚಾರದಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಹಿನ್ನಲೆಯಲ್ಲಿ ಕಾನೂನು ಸುವ್ಯಸ್ಥೆಯ ಬಗ್ಗೆ ಬಂದೋಬಸ್ತು  ಕರ್ತವ್ಯದಲ್ಲಿದ್ದ ಸಮಯ ಸುಮಾರು 15.30 ಗಂಟೆ ಸಮಯಕ್ಕೆ  ಹಿಜಾಬ್ ಧರಿಸುವ ಬಗ್ಗೆ ಪ್ರತಿಭಟಿಸುತ್ತಿರುವ ಒಂದು ಕೋಮಿನ ವಿದ್ಯಾರ್ಥಿಗಳ ಪರವಾಗಿ 5-6 ವ್ಯಕ್ತಿಗಳು ಮಾರಕಾಯುಧಗಳೊಂದಿಗೆ ಅಕ್ರಮವಾಗಿ ಕೂಟ ಸೇರಿಕೊಂಡು ಹಠಾತ್ ಪ್ರಚೋದನೆಯಿಂದ ಚೂರಿಯನ್ನು ಬೀಸುತ್ತಾ ಇತರ ಸಾರ್ವಜನಿಕರ ಜೀವಕ್ಕೆ ಅಪಾಯ ಮಾಡುವಂತೆ ವರ್ತಿಸಿ ಅಪರಾಧಿಕ ಮಾನವ ಹತ್ಯೆ ಮಾಡುವ  ಪ್ರಯತ್ನ ಕಂಡು ಬಂದಿದ್ದು ಸದ್ರಿ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಹೋದಾಗ ಅವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು,  ಅವರ ಪೈಕಿ ಇಬ್ಬರು ವ್ಯಕ್ತಿಗಳನ್ನು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದು ಅವರ ಹೆಸರು ವಿಳಾಸ  ವಿಚಾರಿಸಲಾಗಿ  1. ಹಾಜಿ ಅಬ್ದುಲ್ ಮಜೀದ್ ಪ್ರಾಯ 32 ವರ್ಷ ತಂದೆ ದಿವಂಗತ ಹಾಜಿ ಅಲಿ ಸಾಬ್ ವಾಸ: ಹಾಜಿ ಕಂಪೌಂಡ್, ಜೆಎಮ್‌‌ ರೋಡ್,ಗಂಗೊಳ್ಳಿ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ,  2. ರಜಬ್ ಪ್ರಾಯ 41 ವರ್ಷ ತಂದೆ ಹಮೀದ್ ಸಾಹೇಬ್ ವಾಸ: ಹೌಸ್ ನಂಬ್ರ 94-1-119 ಅರಫ್ ಮಂಜಿಲ್ ಜಾಮೀಯ ಮೊಹಲ್ಲಾ, ಗಂಗೊಳ್ಳಿ,  ಕುಂದಾಪುರ ತಾಲೂಕು,  ಉಡುಪಿ  ಜಿಲ್ಲೆ,ಎಂದು ತಿಳಿಸಿದ್ದು  ಓಡಿ ಹೋದವರ ಬಗ್ಗೆ  ಕೇಳಲಾಗಿ    ಖಲೀಲ್, ರಿಜ್ವಾನ್ ಹಾಗೂ ಇಫ್ತೀಕರ್  ಎಂಬುದಾಗಿ ತಿಳಿಸಿರುತ್ತಾರೆ. ಆಪಾದಿತ ಹಾಜಿ ಅಬ್ದುಲ್ ಮಜೀದ್ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 07 ಪ್ರಕರಣಗಳು ದಾಖಲಾಗಿದ್ದು ಅಲ್ಲದೇ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುತ್ತಾನೆ. ಆಪಾದಿತ ರಜಬ್ ಈತನ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತದೆ.    ಆರೋಪಿತರು ಮತೀಯವಾಗಿ ಕೋಮು ಸಂಘರ್ಷ ಉಂಟುಮಾಡುವ ಪ್ರವೃತ್ತಿಯವರಾಗಿದ್ದು ಮಾರಕಾಯುಧಗಳೊಂದಿಗೆ ಅಕ್ರಮ ಕೂಟ ಸೇರಿ ಹಠಾತ್ ಪ್ರಚೋದನೆಯಿಂದ ಮಾರಕಾಯುಧಗಳನ್ನು ಬೀಸಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟು ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 14/2022 ಕಲಂ: ಕಲಂ 120(b), 143, 147, 148, 308 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ:  ದಿನಾಂಕ 03.02.2022  ರಂದು 16;00  ಘಂಟೆಗೆ  ಹೆಬ್ರಿ ತಾಲೂಕಿನ  ಬೆಳ್ವೆ ಗ್ರಾಮದ  ಗುಮ್ಮಲ ಎಂಬಲ್ಲಿ ಫಿರ್ಯಾದಿ ಶ್ರೀಮತಿ  ರತ್ನ ಇವರ  ಮಗನನ್ನು  ಆರೋಪಿ  ಪ್ರದೀಪ್  ರಿಕ್ಷನ್  ದೊಣ್ಣೆಯನ್ನು   ಹಿಡಿದುಕೊಂಡು  ಓಡಿಸಿಕೊಂಡು  ಬಂದಿದ್ದು, ಈ ಬಗ್ಗೆ ಫಿರ್ಯಾದುದಾರರು ವಿಚಾರಿಸಿದಕ್ಕೆ  ಆರೋಪಿಯು    ಕೋಪಗೊಂಡು   2 ನೇ   ಆರೋಪಿ ಅಮುಲ್  ಮೇರಿ ಯ  ಕುಮ್ಮಕಿನಿಂದ   ಮರದ  ದೊಣ್ಣೆಯಿಂದ   ಹಲ್ಲೆ  ಮಾಡಿ ಅವಾಚ್ಯ  ಶಬ್ದದಿಂದ   ಬೈದು ಜೀವ ಬೆದರಿಕೆ  ಹಾಕಿರುತ್ತಾನೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2022 ಕಲಂ: 324, 354,504,109, 506 R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ : ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ಅಂಬಡೆಕಲ್ಲು ನಿವಾಸಿ ಕಿಟ್ಟು ಇವರ ಪತ್ನಿ ಶ್ರೀಮತಿ ಗಂಗಾ, ಪ್ರಾಯ 68 ವರ್ಷ, ಇವರು ನಿಟ್ಟೆ ಲೆಮಿನಾದಲ್ಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಮನೆಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದವರು ದಿನಾಂಕ 02/02/2022 ರಂದು ಬೆಳಗ್ಗೆ 9:00 ಗಂಟೆಗೆ ತಮ್ಮ ಮನೆಯ ಹಾಲ್‌ನಲ್ಲಿ ಪೈಂಟ್ ಮಾಡಲು, ಹಾಲ್‌ನಲ್ಲಿ ಅಲ್ಯುಮೀನಿಯಂ ಏಣಿಯನ್ನು ಇಟ್ಟು, ಪೈಂಟ್ ಮಾಡಲು ಅಲ್ಯುಮೀನಿಯಂ ಏಣಿಯನ್ನು ಹತ್ತುವಾಗ ಅಕಸ್ಮಿಕವಾಗಿ ಏಣಿ ಜಾರಿದ ಪರಿಣಾಮ ಏಣಿಯಿಂದ ನೆಲಕ್ಕೆ ಬಿದ್ದು ಹೊಟ್ಟೆಯಲ್ಲಿ ಒಳನೋವು ಆಗಿದ್ದು, ಮೊದಲು ಕಾರ್ಕಳದ ಸಿಟಿ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಕೊಡಿಸಿ, ನಂತರ ಅದೇ ದಿನ ಕಾರ್ಕಳದ ನಿಟ್ಟೆ ಗಾಜ್ರಿಯ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಕೊಡಿಸಿ, ಮನೆಗೆ ಕರೆದುಕೊಂಡು ಹೋಗಿದ್ದು,  ದಿನಾಂಕ 04/02/2022 ರಂದು ನೋವು ಉಲ್ಬಣಗೊಂಡಿದ್ದರಿಂದ ಮಣಿಪಾಲ ಕೆಂ.ಎಂ.ಸಿ. ಆಸ್ಪತ್ರೆಗೆ ದಾಖಲಿಲಿ, ಅಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದವರು, ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 05/02/2022 ರಂದು ಬೆಳಗ್ಗೆ 9:00 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಚಾಂತಾರು ಗ್ರಾಮದ, ರಥಬೀದಿ, ದೇವಾಡಿಗರ ಬೆಟ್ಟು ಎಂಬಲ್ಲಿ  ವಾಸವಾಗಿರುವ ಉದಯ (ಪ್ರಾಯ: 38 ವರ್ಷ) ಎಂಬವರು ಫೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಸುಮಾರು 15 ವರ್ಷಗಳಿಂದ ಮನಸ್ಸಿನ ಸ್ಥಿಮಿತವನ್ನು ಕಳೆದುಕೊಂಡಿರುತ್ತಾರೆ. ಈ ಬಗ್ಗೆ 2020ನೇ ಇಸವಿಯಿಂದ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಉದಯ ರವರು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 04.02.2022 ರಂದು ರಾತ್ರಿ 8:45 ಗಂಟೆಯಿಂದ ದಿನಾಂಕ: 05.02.2022 ರಂದು ಬೆಳಿಗ್ಗೆ 08:30 ಗಂಟೆಯ ಮದ್ಯಾವಧಿಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಹಮೀದ್  (53) ರವರು ವಿಪರೀತ ಸಾರಾಯಿ ಕುಡಿಯುವ ಅಭ್ಯಾಸ ಉಳ್ಳವರಾಗಿದ್ದು  ಸುಮಾರು 01 ವರ್ಷದಿಂದ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಒಬ್ಬಂಟಿಯಾಗಿ ಕೆರ್ವಾಶೆಯಲ್ಲಿ ಸುತ್ತ-ಮುತ್ತ ತಿರುಗಾಡುತ್ತಿದ್ದು ಆರು ತಿಂಗಳಿನಿಂದ ಮನೆಗೆ ಬಾರದೇ ಕೆರ್ವಾಶೆ ಪೇಟೆಯಲ್ಲಿಯೇ ವಿಪರೀತ ಸಾರಾಯಿ ಕುಡಿದು ಅಲ್ಲಿಯೇ ಪಕ್ಕದಲ್ಲಿದ್ದ  ಹಳೆಯ ಶೇಂದಿ ಅಂಗಡಿಯ ವರಾಂಡದಲ್ಲಿ ಮಲಗುತ್ತಿದ್ದರು.  ಎಂದಿನಂತೆ ದಿನಾಂಕ 04-02-2022 ರಂದು ಸಂಜೆ 19:00 ಗಂಟೆಗೆ ವಿಪರೀತ ಸಾರಾಯಿ ಕುಡಿದು ಹಳೆ ಸೇಂದಿ ಅಂಗಡಿಯ ವರಾಂಡದಲ್ಲಿ ಮಲಗಿದವರು ಆಯಾಸಗೊಂಡು ದಿನಾಂಕ 05-02-2022 ರಂದು ಬೆಳಿಗ್ಗೆ 08:00 ಗಂಟೆಯ ಮಧ್ಯದ ಅವಧಿಯಲ್ಲಿ ಮೃತ ಪಟ್ಟಿದ್ದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 05-02-2022 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080