ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾರ್ಕಳ: ದಿನಾಂಕ 04/02/2021 ರಂದು ಬೆಳಿಗ್ಗೆ 09:00 ಗಂಟೆಗೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಬಿ.ಸಿ ರಸ್ತೆ ಕ್ರಾಸ್‌ ಎಂಬಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಪಿರ್ಯಾದಿದಾರರಾದ ಗುರುಪ್ರಸಾದ್‌ (23), ತಂದೆ:ಶ್ರೀಧರ ಗೌಡ, ವಾಸ:ಗುರುಪ್ರಸಾದ್‌ ನಿವಾಸ ಪೇರಡ್ಕ ಮಾಳ ಕಾರ್ಕಳ ತಾಲೂಕು ಇವರು ತನ್ನ KA-20-EN-6167 ನೇ ದ್ವಿಚಕ್ರ ವಾಹನದಲ್ಲಿ  ಮೋನಪ್ಪ ಗೌಡ ಎಂಬುವವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಜಗೋಳಿ ಕಡೆಯಿಂದ   ಕಡೆಯಿಂದ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಪುಲ್ಕೇರಿ ಕಡೆಯಿಂದ ಬಜಗೋಳಿ ಕಡೆಗೆ KA-20-ET-6868 ನೇ ನೊಂದಣಿ ಸಂಖ್ಯೆಯ ಮೋಟಾರ್‌ಸೈಕಲ್‌‌ ನ್ನು ಅದರ ಸವಾರ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಿ.ಸಿ ರಸ್ತೆ ಕಡೆಗೆ ತಿರುಗಿಸುವ ರಭಸದಲ್ಲಿ ಪಿರ್ಯಾದಿದಾರರು ಸವಾರಿಕೊಂಡಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರ ಮೋನಪ್ಪ ಗೌಡರವರಿಗೆ ತಲೆಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು: ಪಿರ್ಯಾದಿದಾರರಾದ ತೇಜಪ್ಪ ಶೆಟ್ಟಿ (75), ತಂದೆ:ತಿಮ್ಮಪ್ಪ ಶೆಟ್ಟಿ, ವಾಸ:ಕೆಲ ಮುದ್ರಾಬೈಲು ಅಮಾಸೆಬೈಲು ಗ್ರಾಮ ಕುಂದಾಪುರ ತಾಲೂಕು ಇವರು  ದಿನಾಂಕ 03/02/20201 ರಂದು ಅವರ ಮಗ ವಿಶ್ವನಾಥ ಶೆಟ್ಟಿ ಯವರ KA-20-E-4456 ಮೋಟಾರ್ ಸೈಕಲಿನಲ್ಲಿ ಅಮಾಸೆಬೈಲಿನಿಂದ ಕೆಲಕ್ಕೆ ಹೋಗುವಾಗ ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ಕೆಲ ದುರ್ಗಾ ಪರಮೇಶ್ವರಿ ದೇವಸ್ಥಾನದ ಹಿಂದುಗಡೆ ಇಳಿಜಾರಿನಲ್ಲಿ ವಿಶ್ವನಾಥ ಶೆಟ್ಟಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸ್ಕಿಡ್ ಆಗಿ ಬಿದ್ದು ಪಿರ್ಯಾದಿದಾರರ ಮುಖ ಮತ್ತು ಎಡಕಾಲಿನ ಪಾದದ ಮೊಣಗಂಟಿನ ಮೇಲೆ ತರಚಿದ ಗಾಯ ಹಾಗೂ ದಂತಪಂಕ್ತಿಗೆ ಪೆಟ್ಟಾಗಿರುತ್ತದೆ. ಪಿರ್ಯಾದಿದಾರರು ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕಳವು ಪ್ರಕರಣ

 • ಅಜೆಕಾರು: ಪಿರ್ಯಾದಿದಾರರಾದ ಸುಧಾಕರ ಮಡಿವಾಳ (48), ತಂದೆ: ಸುಂದರ ಮಡಿವಾಳ, ವಾಸ: ಶ್ರೀ ಗುರುಪ್ರಸಾದ ನಿವಾಸ, ಗುಡ್ಡೆಯಂಗಡಿ, ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 01/02/2021 ರಂದು ಮದ್ಯಾಹ್ನ 11:00 ಗಂಟೆಗೆ ಹೆಂಡತಿ ಮನೆಯಾದ ಕಾರ್ಕಳಕ್ಕೆ ಸಂಸಾರ ಸಮೇತವಾಗಿ ಮನೆಗೆ ಬೀಗ ಹಾಕಿ ಹೋಗಿದ್ದು,  ದಿನಾಂಕ 04/02/2021 ರಂದು ಸಂಜೆ 4:15 ಗಂಟೆಗೆ ವಾಪಸ್ಸು ಮನೆಗೆ ಬಂದು ನೋಡಲಾಗಿ ಮನೆಯ ಎದುರಿನ ಬಾಗಿಲನ್ನು ಯಾರೋ ಕಳ್ಳರು ಬೀಗ ಮುರಿದು ಮನೆಯ ಒಳ ಪ್ರವೇಶಿಸಿ ಮಲಗುವ ಕೋಣೆಯ ಮಲಗುವ ಮಂಚದ ಕೆಳಗೆ ಪ್ಲಾಸ್ಟಿಕ್‌ ಟಬ್‌ನಲ್ಲಿ ಬಟ್ಟೆಯ ಮಧ್ಯದಲ್ಲಿ ಇರಿಸಿದ್ದ 3.5 ಪವನ್‌ ಚಿನ್ನದ ನೆಕ್ಲೇಸ್‌ ಹಾಗೂ 1 ಪವನ್‌ ಚಿನ್ನದ ಕರಿಮಣಿ ಸರ ವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ 3.5 ಪವನ್‌ ಚಿನ್ನದ ನೆಕ್ಲೇಸ್‌ ಮೌಲ್ಯ 1 ಲಕ್ಷ ರೂಪಾಯಿ ಹಾಗೂ 1 ಪವನ್‌ ಚಿನ್ನದ ಕರಿಮಣಿ ಸರ ಮೌಲ್ಯ ರೂಪಾಯಿ 30,000/- ಆಗಿದ್ದು, ಕಳವಾದ ಒಟ್ಟು  ಮೌಲ್ಯ ರೂಪಾಯಿ 1,30,000 /-  ಆಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2021  ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಶ್ರೀಕಾಂತ ಭಟ್ (32), ತಂದೆ :  ಜಯರಾಮ ಭಟ್, ವಾಸ : ಕುಂಜ ಮನೆ 2-43,  82 ಕುದಿ ಗ್ರಾಮ ಕೋಡಿಬೆಟ್ಟು ಅಂಚೆ ಕಾಪು ತಾಲೂಕು ಉಡುಪಿ ಜಿಲ್ಲೆ  ಮತ್ತು ದಿನೇಶ ಪ್ರಭು ರವರು ಮೂಡಬೆಟ್ಟು ಗ್ರಾಮದಲ್ಲಿ ಕೃಷಿ ಯಂತ್ರೋಪಕರಣ ಮಳಿಗೆ ಜೀವನ ಯಂತ್ರ ಅಗ್ರಿ ಸೆಲ್ಯುಷನ್ಸ್‌ ಎಂಬ ಮಳಿಗೆಯ ಪಾಲುದಾರರಾಗಿದ್ದು,  ದಿನಾಂಕ 04/02/2021 ರಂದು ಸಂಜೆ 5:45 ಗಂಟೆಗೆ ಸುಭಾಷ ಬಲ್ಲಾಳ ಮತ್ತು ಇತರರು ಮಧ್ಯಪಾನ ಮಾಡಿ ಪಿರ್ಯಾದಿದಾರರ ಮೂಡಬೆಟ್ಟಿನ ಮಳಿಗೆಗೆ ಬಂದು  ಪಿರ್ಯಾದಿದಾರರಿಗೆ ಮತ್ತು ದಿನೇಶ ಪ್ರಭು ರವರಿಗೆ ಹಲ್ಲೆ ನಡೆಸಿ,  ಮಳಿಗೆಯ ಮಹಿಳಾ ಸಿಬ್ಬಂದಿಯವರಿಗೂ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಮುಂದಾಗಿದ್ದು, ಹಲ್ಲೆಯಿಂದ ಪಿರ್ಯಾದಿದಾರರಗೆ ಎಡ ಎದೆ ಮತ್ತು ಕೈ ಭಾಗಕ್ಕೆ ನೋವಾಗಿದ್ದು ದಿನೇಶ ಪ್ರಭು ರವರಿಗೆ ಎರಡು ಕೈಗಳಿಗೆ ನೋವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021  ಕಲಂ: 448, 323, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  ಮಣಿಪಾಲ: ದಿನಾಂಕ 04/02/2021 ರಂದು 16:15 ಗಂಟೆಗೆ ಮಂಜುನಾಥ್.ಎಂ, ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ  ಉಡುಪಿಯಿಂದ ಕೊಳಲಗಿರಿಗೆ ತೆರಳುವ ಶೀಂಬ್ರಾ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಆಟೋರಿಕ್ಷಾ ನಂಬರ್ KA-20-C-3042 ನೇದರಲ್ಲಿ 3 ವ್ಯಕ್ತಿಗಳು ತೆರಳಿ ಗಾಂಜಾ ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ಆಪಾದಿತರಾದ 1)ಜೆಸ್ವಿಂದರ್ ಸಿಂಗ್, ಪ್ರಾಯ: 38 ವರ್ಷ, ತಂದೆ: ಸುವರ್ಣ ಸಿಂಗ್, ಹಾಲಿ ವಾಸ: ದೀವಾ, ಸಾಬೆ, ಮುಂಬೈ, 2) ಗೌತಮ್ರಾಜು ಶಿಮುಂಗೆ, ಪ್ರಾಯ: 30 ವರ್ಷ, ತಂದೆ: ರಾಜು ಶಿಮುಂಗೆ, ವಿಳಾಸ: ಬಿಲ್ಡಿಂಗ್ ನಂ: 36, ದತ್ತ ಕೃಪಾ ಸೊಸೈಟಿ, ರೂಂ ನಂಬರ್- 201, ಚೆಂಬೂರು ವಾಶಿನಾಕ, ಮಾಹುಲ್ ರೋಡ್, ಮುಂಬೈ, 3) ಕೃಷ್ಣ ಜಲಗಾರ್, ಪ್ರಾಯ: 40 ವರ್ಷ, ತಂದೆ: ದಿ. ಈಶ್ವರ, ವಿಳಾಸ: ಕೊಳಲಗಿರಿ, ಲಕ್ಷ್ಮೀನಗರ, ಚಕ್ಕುಲಿ ಕಟ್ಟೆ, ಉಪ್ಪೂರು ಗ್ರಾಮ ಇವರನ್ನು ವಶಕ್ಕೆ ಪಡೆದು  ಜೆಸ್ವಿಂದರ್ ಸಿಂಗ್ ಎಂಬಾತನ ವಶದಲ್ಲಿದ್ದ  4,838 ಗ್ರಾಂ  ಮಾದಕ ವಸ್ತು  ಗಾಂಜಾ ಮತ್ತು ಗೌತಮ್‌ ‌ರಾಜು ಶಿಮುಂಗೆ ಎಂಬಾತನ ವಶದಲ್ಲಿದ್ದ 4,039 ಗ್ರಾಂ ಮಾದಕ ವಸ್ತು  ಗಾಂಜಾ ಮತ್ತು ಆಪಾದಿತರ ವಶದಲ್ಲಿದ್ದ 2 ಮೊಬೈಲ್ ಫೋನ್, 1000 ರೂಪಾಯಿ ನಗದು ಹಣ, 2ಬ್ಯಾಗ್‌, ಮತ್ತು  ಆರೋಪಿಗಳು ಕೃತ್ಯಕ್ಕೆ ಬಳಸಿದ್ದ  KA-20-C-3042 ನೇ ನೋಂದಣಿ ನಂಬರ್‌ನ ಆಟೋರಿಕ್ಷಾವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/20201 ಕಲಂ : 8c, 20(b), (II)(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-02-2021 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080