ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 04/02/2021 ರಂದು ಶೇಖರ ಕೊಠಾರಿ ಎಂಬುವವರು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಎನ್‌.ಹೆಚ್‌ ರಲ್ಲಿ KA-20-EF-3765 TVS Wego ಮೋಟಾರ್ ಸೈಕಲ್‌ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 4:30 ಗಂಟೆಗೆ ತ್ರಾಸಿಯ ಕುಬೇರ ವಸತಿ ಗೃಹದ ಮುಂಭಾಗದಲ್ಲಿ ತಲುಪುವಾಗ ಮೋಟಾರ್‌ ಸೈಕಲ್ ಸವಾರನ ನಿಯಂತ್ರಣ ತಪ್ಪಿ ಮಧ್ಯದ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಶೇಖರ ಕೊಠಾರಿಯವರ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟಿರುತ್ತಾರೆ, ಎಂಬುದಾಗಿ ರಾಜೇಶ್ (44) ತಂದೆ: ಗೋಪಾಲ ದೇವಾಡಿಗ, ವಾಸ: ಜಾನಕಿ ಕೃಪಾ ಕಂಚಿಕಾನ್, ಬಿಜೂರು ಗ್ರಾಮ, ಬೈಂದೂರು ಇವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2021 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾಧ ವಿಜಯ(33), ತಂದೆ: ಸುಭಾಸ್ ಕುಲಾಲ್, ವಾಸ: ಮನೆ ನಂಬ್ರ 13/54ಎ, ಆದಿಲಕ್ಷ್ಮೀ ಉದ್ದಿನಹಿತ್ಲು ಕೊಡವೂರು ಉಡುಪಿ ಇವರ ತಮ್ಮ ಎಸ್ ವಿಕ್ರಮ್ (30) ಇವರು ಮಲ್ಪೆ ಎಂ.ಡಿ ಬಾರ್  ಬಳಿ  ಬಾಡಿಗೆ  ಮನೆಯಲ್ಲಿ ತನ್ನ  ತಂದೆಯ ಜೊತೆ ವಾಸ ಮಾಡಿಕೊಂಡಿದ್ದು ಟೆಂಪೋ ಚಾಲಕ  ಕೆಲಸ ಮಾಡಿಕೊಂಡಿರುತ್ತಾರೆ.  ವಿಜಯ ರವರು ದಿನಾಂಕ 05/02/2021 ರಂದು ಬೆಳಿಗ್ಗೆ 06:10 ಗಂಟೆಗೆ ವಿಕ್ರಮ್ ಗೆ ಕರೆ ಮಾಡಿದಾಗ ಫೋನ್ ಸ್ವೀಕರಿಸದೇ ಇದ್ದು ಬಾಡಿಗೆ ಮನೆಯಲ್ಲಿದ್ದ ತಂದೆಯವರಲ್ಲಿ ವಿಚಾರಿಸಿದಲ್ಲಿ ವಿಕ್ರಮ್ ನು ದಿನಾಂಕ 04/02/2021 ರಂದು ಬೆಳಿಗ್ಗೆ 9:00 ಗಂಟೆಗೆ ಮನೆಯಿಂದ ಹೊರಗೆ ಹೋದವನು ವಾಪಾಸು ಬಂದಿರುವುದಿಲ್ಲವಾಗಿ ತಿಳಿಸಿರುತ್ತಾರೆ. ವಿಜಯ ರವರು ವಿಕ್ರಮ್‌ನ ಬಾಡಿಗೆ ರೂಂ ನ ಪಕ್ಕದ ರೂಂನ ಬಾಗಿಲಿನ ಹೊರಗೆ ವಿಕ್ರಮ್ ನ ಚಪ್ಪಲಿಗಳಿದ್ದು ಕಿಟಕಿಯ ಮೂಲಕ ನೋಡಿದಾಗ  ಕೋಣೆಯ ಪ್ಯಾನ್ ಗೆ ವಿಕ್ರಮ್‌ನು ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡು ನೇತಾಡಿಕೊಂಡ ಸ್ಥಿತಿಯಲ್ಲಿರುತ್ತಾನೆ. ಮೃತರು  ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು  ಹಾಗೂ ಸರಿಯಾಗಿ ಕೆಲಸ  ಇಲ್ಲದೆ ಇದ್ದುದರಿಂದ ಜೀವನದಲ್ಲಿ ಬೇಸರಗೊಂಡು ದಿನಾಂಕ 04/02/2021 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ 05/02/2021 ರಂದು ಬೆಳಿಗ್ಗೆ 06:30 ಗಂಟೆಯ ಮದ್ಯಾವಧಿಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 08/2021, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಅಮಾಸೆಬೈಲು: ಪಿರ್ಯಾದಿದಾರರಾದ ಲಕ್ಷ್ಮಿ (28) ಗಂಡ:ಸೀತಾರಾಮ ಐತಾಳ ವಾಸ: ತೊಂಬಟ್ಟು ಮಠದಡಿ ಮಚ್ಚಟ್ಟು ಗ್ರಾಮ ಕುಂದಾಪುರ ಇವರ ಗಂಡ ಹಾಗೂ ಆರೋಪಿತ ಗಣೇಶ ಐತಾಳ ತೊಂಬಟ್ಟು ಮಠದಡಿ ಮಚ್ಚಟ್ಟು ಗ್ರಾಮ ಕುಂದಾಪುರ ಇತನು ಅಣ್ಣ ತಮ್ಮಂದಿರಾಗಿದ್ದು  ಇವರಿಬ್ಬರ ಮಧ್ಯೆ ತಂದೆಯ ಜಾಗದ ಪಾಲಿನ ವಿಚಾರಕ್ಕೆ ಸಂಬಂದಿಸಿದಂತೆ ಮೊದಲಿನಿಂದಲೂ ತಕರಾರು ಆರೋಪಿತನು ಲಕ್ಷ್ಮಿ ರವರನ್ನು ಮನೆ ಬಿಟ್ಟು ಹೋಗುವಂತೆ ಮೊದಲಿನಿಂದಲೂ ತೊಂದರೆ ಕೊಡುತ್ತಾ ಬಂದಿರುತ್ತಾರೆ. ಆರೋಪಿತನು ತೊಂಬಟ್ಟು ವೀರಭದ್ರ ದೇವಸ್ಥಾನದ ಅರ್ಚಕನಾಗಿದ್ದು ದಿನಾಂಕ  04/02/2021 ರಂದು ದೇವಸ್ಥಾನದಲ್ಲಿ ವರ್ದಂತಿ ಉತ್ಸವ ಇದ್ದು ಮಧ್ಯಾಹ್ನ ಪೂಜೆ ನಡೆದ ಬಳಿಕ ಆರೋಪಿತನು ಲಕ್ಷ್ಮೀ ರವರಿಗೆ ಪೂಜೆಯ ಪ್ರಸಾದ ಕೊಡಲು ಆಗುವುದಿಲ್ಲವೆಂದು ಪ್ರಸಾದ ಕೊಡಲು ನಿರಾಕರಿಸಿದ್ದು ಸಂಜೆ ಸುಮಾರು 4:30 ಗಂಟೆಸಮಯಕ್ಕೆ ಮಚ್ಚಟ್ಟು ಗ್ರಾಮದ ತೊಂಬಟ್ಟು ಮಠದಡಿ ಎಂಬಲ್ಲಿ ಇವರ ಮನೆಯ ಬಳಿ ಆರೋಪಿತನಲ್ಲಿ ಪ್ರಸಾದ ಕೊಡದ ಬಗ್ಗೆ ವಿಚಾರಿಸಿದುದಕ್ಕೆ ನೀನು ಯಾರು ಕೇಳಲಿಕ್ಕೆ ಬೇರೆ ಜಾತಿಯ ನಾಯಿ ನೀನು ಎಂದು ಅವಾಚ್ಯ ಶಬ್ದಗಳಿಂದ  ಬೈದು ಕೈಯಲ್ಲಿದ್ದ ಚೂರಿಯಿಂದ ಲಕ್ಷ್ಮೀ ಇವರಿಗೆ ಬೀಸಿ ಬಲಕೈಯ ಮಧ್ಯ ಬೆರಳಿಗೆ ಬಲಕೈ ಹಸ್ತದ ಮೇಲ್ಬಾಗ ಬಲಕೈ ಕಿರುಬೆರಳಿನ ಬುಡದಲ್ಲಿ ರಕ್ತಗಾಯ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2021 ಕಲಂ: 324 354 (B) 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 05-02-2021 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080