ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಗುರು ಪ್ರಸಾದ್ (35), ತಂದೆ: ಯೋಗೀಶ್ ಆಚಾರ್ಯ,  ವಾಸ: # 7-70, ಮಹಾದೇವಿ ನಿಲಯ, ಬೇಂಗ್ರೆ ರಸ್ತೆ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಚಿಕ್ಕಪ್ಪ ನಾಗೇಶ್ ಆಚಾರ್ಯ(65) ರವರು ಮುದರಂಗಡಿಯಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸಿಕೊಂಡಿದ್ದು, ಎಂದಿನಂತೆ  ದಿನಾಂಕ 03/01/2023 ರಂದು ಅವರ KA-20-ES-0819 ನೇ ನಂಬ್ರದ ಜುಪಿಟರ್ ಸ್ಕೂಟಿಯಲ್ಲಿ ಪ್ರೆಸ್‌ಗೆ ಹೋಗಿ ಮನೆಗೆ ವಾಪಸ್ಸು ಬರುತ್ತಾ 18:35 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಕಾರ್ಕಳ ಜಂಕ್ಷನ್‌‌ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿರುವಾಗ KL-11-L-4365  ನೇ ನಂಬ್ರದ  ಮೋಟಾರ್ ಸೈಕಲ್ ಸವಾರ ಫೈಜಲ್ ಉಳ್ಳಾಲಕೋಡಿ  ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಮೋಟಾರ್‌ಸೈಕಲ್ಲನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ಟೆಂಪೋ ಒಂದನ್ನು ಓವರ್ ಟೇಕ್ ಮಾಡುತ್ತಾ ಕಾರ್ಕಳ ಜಂಕ್ಷನ್‌‌ನಲ್ಲಿ ಪಿರ್ಯಾದಿದಾರರ ಚಿಕ್ಕಪ್ಪನ ಸ್ಕೂಟಿಗೆ ಡಿಕ್ಕಿ ಹೊಡೆದು ಅಪಘಾತದಿಂದ ಸ್ಕೂಟಿ ಹಾಗೂ ಮೋಟಾರ್ ಸೈಕಲ್ ಸವಾರರಿಬ್ಬರೂ  ಸ್ಕೂಟಿ ಹಾಗೂ ಮೋಟಾರ್‌ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ನಾಗೇಶ್ ಆಚಾರ್ಯರವರ ತಲೆಗೆ, ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಪ್ರಜ್ಞಾಹೀನರಾಗಿದ್ದು,  ಮೋಟಾರ್ ಸೈಕಲ್‌‌ಸವಾರ ಫೈಜಲ್ ಉಳ್ಳಾಲಕೋಡಿ ರವರಿಗೂ ಕೂಡಾ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ನಂತರ ಗಾಯಾಳುವಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2023, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ದೀಪಕ್ (35), ತಂದೆ: ಜಗನ್ನಾಥ, ವಾಸ: ಸೀತ ನಿವಾಸ, ಕೊಪ್ಪಲತೋಟ, ಮಲ್ಪೆ, ಕೊಡವೂರು ಗ್ರಾಮ, ಉಡುಪಿ ತಾಲೂಕು ಇವರ  ಸ್ನೇಹಿತ  ಗರಡಿಮಜಲಿನ ಧೀರಜ್ (28)  ಇವರು  ಸ್ವಂತ ಡಿಜೆ ಪ್ಲೆಯರ್ ಹೊಂದಿದ್ದು , ದಿನಾಂಕ 31/12/2022 ರಂದು  ಹೊಸ ವರ್ಷದ ಕಾರ್ಯಕ್ರಮದ ಪ್ರಯುಕ್ತ ನಿಡಂಬಳ್ಳಿಗೆ ಡಿಜೆ ಪ್ಲೆ ಮಾಡಲು ಹೋಗಿದ್ದು, ದಿನಾಂಕ 01/01/2023 ರಂದು ಮುಂಜಾನೆ 3 :00 ಗಂಟೆ ಸಮಯಕ್ಕೆ   ಧೀರಜ್ ಮೊಬೈಲ್  ನಿಂದ ಹೂಡೆಯ ರಿಕ್ಷಾ ಚಾಲಕ  ಜಾಕೀರ್ ಎಂಬುವವರು ಮಾತನಾಡಿ ಧೀರಜ್ ಕೆಳನೇಜಾರಿನ  ಬಬ್ಬುಸ್ವಾಮಿ ದೈವಸ್ಥಾನದ ಬಳಿ ಆತನ ಮೋಟಾರು ಸೈಕಲ್ ನಂಬ್ರ KA-20-EU-9843 ನೇ ಸಮೇತ ರಸ್ತೆಗೆ ಬಿದ್ದಿದ್ದು , ಆತನಿಗೆ ತಲೆಗೆ ಒಳಜಖಂ ಆಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನನ್ನು ತನ್ನ ಆಟೋ ರಿಕ್ಷಾದಲ್ಲಿ ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ವಿಚಾರ ತಿಳಿಸಿದ್ದು , ಪಿರ್ಯಾದಿದಾರರು ಕೂಡಲೇ ಹೈಟೆಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಯಲ್ಲಿದ್ದ ಧೀರಜ್ ನನ್ನು  ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಅಂಬುಲೆನ್ಸ್  ಮಣಿಪಾಲದ ಕೆಎಂಸಿ ಆಸ್ಪತ್ರೆಗೆ  ಕರೆದುಕೊಂಡು ಬಂದು ಒಳರೋಗಿ ಆಗಿ ದಾಖಲು ಮಾಡಿದ್ದು ,ಧೀರಜ್  01-01-2023 ರಂದು  ಮುಂಜಾನೆ  ಡಿಜೆ ಕಾರ್ಯಕ್ರಮ ಮುಗಿಸಿ  ತನ್ನ ಮೋಟಾರು  ಸೈಕಲ್ ನಂಬ್ರ KA-20-EU-9843 ನೇಯದರಲ್ಲಿ ತನ್ನ ಮನೆಯಾದ ಗರಡುಮಜಲುಗೆ ಕೆಳನೇಜಾರು ಮಾರ್ಗವಾಗಿ ಬರುತ್ತಿರುವಾಗ ಬೆಳಗಿನ ಜಾವ 1:00 ಗಂಟೆಯಿಂದ 2:30 ಗಂಟೆಯ ಮಧ್ಯಾವಧಿಯಲ್ಲಿ  ಕೆಳನೇಜಾರಿನ  ಬಬ್ಬುಸ್ವಾಮಿ ದೈವಸ್ಥಾನದ ಬಳಿ ಆತನ ಮೋಟಾರು ಸೈಕಲ್  ಸ್ಕಿಡ್ ಆಗಿ ಬಿದ್ದು ಅಥವಾ ಇನ್ಯಾವುದೋ ವಾಹನ ಢಿಕ್ಕಿ ಆಗಿ ಆತನು ರಸ್ತೆಗೆ ಬಿದ್ದು ಆತನ ತಲೆಗೆ ತ್ರೀವ ಒಳಜಖಂ ಆಗಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023 ,ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ರತ್ನಾಕರ ಶೆಟ್ಟಿ (41),ತಂದೆ:ಮಹಾಬಲ ಶೆಟ್ಟಿ, ವಾಸ: ಮಾತೃಶ್ರೀ ನಿಲಯ, ವಸ್ರೆ, ತಗ್ಗರ್ಸೆ ಗ್ರಾಮ , ಬೈಂದೂರು ತಾಲೂಕು ಇವರು ದಿನಾಂಕ 04/01/2023 ರಂದು ಮಧ್ಯಾಹ್ನ 1:30 ಗಂಟೆಗೆ  ಅವರ ಮೋಟಾರ್ ಸೈಕಲ್ ನಲ್ಲಿ ಗೋಳಿಹೊಳೆ ಕಡೆಗೆ ಹೋಗುತ್ತಿರುವಾಗ ಅವರ ಎದುರಿನಿಂದ ಅವರ ಮಾವ  ರಾಜೀವ ಶೆಟ್ಟಿಯವರು ಅವರ KA-20-W-3959 ನೇ ಮೋಟಾರು ಸೈಕಲ್ ನಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಬೈಂದೂರಿನಿಂದ ಊಟವನ್ನು ತೆಗೆದುಕೊಂಡು ಗೋಳಿಹೊಳೆ ಕಡೆಗೆ ಹೋಗುತ್ತಾ ಯೆಳಜಿತ್ ಗ್ರಾಮದ ಮಾಸ್ಟರ್  ಮನೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 766 ಸಿ ರಲ್ಲಿಹೋಗುತ್ತಿರುವಾಗ ಎದುರಿನಿಂದ ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ KA-19-ME-2645 ನೇ ಓಮಿನಿ ಚಾಲಕನು ಆತನ ಓಮಿನಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಿರುವು ರಸ್ತೆಯಲ್ಲಿ ತೀರಾ ಬಲ ಭಾಗಕ್ಕೆ ಬಂದು ಪಿರ್ಯಾದಿದಾರರ ಮಾವ ರಾಜೀವ ಶೆಟ್ಟಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ  ಮೋಟಾರುಸೈಕಲ್ ಗೆ ಡಿಕ್ಕಿ ಹೊಡೆದು ಓಮಿನಿಯನ್ನು  ನಿಲ್ಲಿಸದೇ  ಪರಾರಿಯಾಗಿದ್ದು, ಅಪಘಾತದ ಪರಿಣಾಮ ಪಿರ್ಯಾದಿದಾರರ ಮಾವ ರಾಜೀವ ಶೆಟ್ಟಿಯವರು ರಸ್ತೆಗೆ ಬಿದ್ದಿದ್ದು  ಅಪಘಾತದಿಂದ ರಾಜೀವ ಶೆಟ್ಟಿಯವರ ಬಲ ಕಾಲಿನ ತೊಡೆಯ ಬಳಿ ಮೂಳೆ ಮುರಿತ ಉಂಟಾಗಿದ್ದು , ಬಲ ಭುಜಕ್ಕೆ, ಬಲ ಪಕ್ಕೆಲುಬಿಗೆ  ಒಳ ಜಖಂ ಆದವರನ್ನು  ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ದಾಖಲಿಸಿರುತ್ತಾರೆ. ಈ ಬಗ್ಗೆ    ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2023 ಕಲಂ:279, 338 ಐಪಿಸಿ & 134 (A&B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಅಪ್ಪು (60), ತಂದೆ: ಗಿಡ್ಡ, ವಾಸ:  ಗೇರುಕಟ್ಟೆ ಸೇನಾಪುರ ಗ್ರಾಮ ಕುಂದಾಫುರ ತಾಲೂಕು  ಉಡುಪಿ ಜಿಲ್ಲೆ ಇವರ ತಮ್ಮ ಚಂದ್ರ @ ಬಾಬು  (45)  ರವರು  ದಿನಾಂಕ 03/01/2023 ರಂದು ಮದ್ಯಾಹ್ನ  2:00  ಗಂಟೆಯಿಂದ ರಾತ್ರಿ 10:00 ಗಂಟೆಯ ನಡುವಿನ ಅವಧಿಯಲ್ಲಿ ವೈಯಕ್ತಿಕ ಸಮಸ್ಯೆಗಳಿಂದ ಜೀವನದಲ್ಲಿ  ಜಿಗುಪ್ಸೆಗೊಂಡು ತಾನು  ಹೆಂಡತಿ  ಮಕ್ಕಳೊಂದಿಗೆ  ವಾಸವಾಗಿರುವ ಕುಂದಾಫುರ  ತಾಲೂಕು  ವಂಡ್ಸೆ ಗ್ರಾಮದ ಅಬ್ಬಿ  ಎಂಬಲ್ಲಿ  ಮನೆಯ  ಸಮೀಪದ ಧರ್ಮರಾಜ್ ಶೆಟ್ಟಿಯವರ  ಹಾಡಿ ಜಾಗದಲ್ಲಿರುವ ಗೇರು  ಮ್ರದ  ಕೊಂಬೆಗೆ ನೈಲಾನ್ ಹಗ್ಗವನ್ನು  ಕಟ್ಟಿ  ಇನ್ನೊಂದು  ತುದಿಯನ್ನು  ಕುತ್ತಿಗೆಗೆ ಉರುಳು ಹಾಕಿಕೊಂಡು  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 02/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತರ ಪ್ರಕರಣ

  • ಉಡುಪಿ: ದಿನಾಂಕ: 04/01/2023 ರಂದು ಮಧ್ಯಾಹ್ನ13:00 ಗಂಟೆಗೆ ಉಡುಪಿ ಹಳೆ ಕೆ.ಎಸ್‌.ಆರ್‌.ಟಿ.ಸಿ. ಬಸ್  ನಿಲ್ದಾಣದ  ಬಳಿ ಇರುವ ಶಾಂಭವಿ ಲಾಡ್ಜ್ ನ  ರೂಮ್ ನಂಬ್ರ: 211 ರಲ್ಲಿ ವೇಶ್ಯಾವಾಟಿಕೆಯನ್ನು  ನಡೆಸುತ್ತಿರುವ ಬಗ್ಗೆ ಮಂಜುನಾಥ್ ಪ್ರಭಾರ ಪೊಲೀಸ್ ನಿರೀಕ್ಷಕರು ಸೆನ್ ಪೊಲೀಸ್ ಠಾಣೆ ಇವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಮಾನ್ಯ ಪೊಲೀಸ್ ಉಫಾಧೀಕ್ಷಕರು ಉಡುಪಿ ಉಪವಿಭಾಗ ರವರಿಂದ ಶೋಧನಾ  ವಾರಂಟ್ ನ್ನು ಪಡೆದು  ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಬೇಕಾದ ಸಲಕರಣೆಗಳನ್ನು ತೆಗೆದುಕೊಂಡು  ಸದ್ರಿ ಲಾಡ್ಜ್ ಗೆ ದಾಳಿ ಆರೋಪಿತರಾದ ಜಯಂತ್  ಸಾಲಿಯಾನ್ ಮತ್ತು ದಿನೇಶ್ ಎಸ್ ಇವರನ್ನು  ದಸ್ತಗಿರಿ ಮಾಡಿ, ಕೃತ್ಯಕ್ಕೆ ಸಂಬಂದಿಸಿದ 4  ಮೊಬೈಲ್ ಪೋನ್ , 5,600 /- ರೂಪಾಯಿ ನಗದು, ಹಾಗೂ ಇತರೆ ಸಾಕ್ಷ್ಯ ಸ್ವತ್ತು ಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿದ್ದಾಗಿದೆ ಆಪಾದಿತರಾದ ಶೇಖರ್, ಜಯಂತ್ ಮತ್ತು ದಿನೇಶ್ ಇವರು ಸೇರಿಕೊಂಡು ನೊಂದ ಮಹಿಳೆಯರನ್ನು ಲಾಡ್ಜ್ ನ ರೂಮಿನಲ್ಲಿರಿಸಿ ಗಿರಾಕಿಗಳಿಗೆ ಹಣಕ್ಕೆ ಒದಗಿಸಿ ಅಕ್ರಮವಾಗಿ ವೇಶ್ಯವಾಟಿಕೆ  ನಡೆಸಿ ವೇಶ್ಯಾವಾಟಿಕೆ ಯಿಂದ ಗಳಿಸಿದ ಹಣದಿಂದ ಜೀವನ ನಡೆಸುತ್ತಿರುವುದು ಹಾಗೂ ಎಲ್ಲಾ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ  ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2023  ಕಲಂ: 3,4,5,6 ಮತ್ತು 7 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿರುತ್ತದೆ.

      

ಇತ್ತೀಚಿನ ನವೀಕರಣ​ : 05-01-2023 10:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080