ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ :

  • ಕಾಪು : ಪಿರ್ಯಾದಿ :ಝೀಯಾವುದ್ದೀನ್ ಪ್ರಾಯ : 41  ವರ್ಷ  ತಂದೆ : ದಿ. ಅಬ್ದುಲ್ ಹಮೀದ್ ವಾಸ : ಝೀನತ್‌ಮಂಜಿಲ್, ಕೊಂಬಗುಡ್ಡೆ, ಮಲ್ಲಾರು ಪಂಚಾಯತ್‌ಹಿಂಬದಿ ಮಲ್ಲಾರು ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು ದಿನಾಂಕ: 04/01/2023 ತನ್ನ ಬಾಬ್ತು ಸ್ಕೂಟರ್‌ನಲ್ಲಿ ಹೆಂಡತಿ ಝೀನತ್ ರವರನ್ನು ಸಹ ಸವಾರಳಾಗಿ ಕುಳ್ಳರಿಸಿಕೊಂಡು ರಾ ಹೆ 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ  1.45 ಉದ್ಯಾವರ  ಬ್ರಿಡ್ಜ್ ತಲುಪುತ್ತಿದ್ದಂತೆ, ಸಹ ಸವಾರಳ ಕನ್ನಡಕ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಸ್ವಲ್ಪ ಮುಂದಕ್ಕೆ ಹೋಗಿ ಸ್ಕೂಟರ್‌ನಿಲ್ಲಿಸಿದ್ದು, ಝೀನತ್ ರವರು  ಕನ್ನಡವನ್ನು ಹೆಕ್ಕಲು ನಡೆದುಕೊಂಡು ಹೋಗುತ್ತಿರುವಾಗ,  ಅದೇ ರಸ್ತೆಯಲ್ಲಿ  ಸುಜಾತ ರವರು ತನ್ನ ಬಾಬ್ತು ಕೆ.ಎ. 20 ಇ.ಯು. 8109 ನೇ ಸ್ಕೂಟರ್‌ನಲ್ಲಿ ಸಹಸವಾರಳನ್ನು ಕುಳ್ಳರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಝೀನತ್ ರವರಿಗೆ ಢಿಕ್ಕಿ ಹೊಡೆದು ಸ್ಕೂಟಿಯ ಸಮೇತ ರಸ್ತೆಗೆ ಬಿದ್ದಿದ್ದು, ಪರಿಣಾಮ ಝೀನತ್‌ರವರಿಗೆ ಕೈ, ಕಾಲು, ಮುಖಕ್ಕೆ  ರಕ್ತಗಾಯವಾಗಿದ್ದು, ಎದೆಗೆ ಗುದ್ದಿದ್ದ ನೋವು ಉಂಟಾಗಿರುತ್ತದೆ. ಸ್ಕೂಟಿಯ ಸವಾರೆಗೆ ಕಾಲಿಗೆ ಗಾಯವಾಗಿದ್ದು, ಪಿರ್ಯಾದಿದಾರರು ಇಬ್ಬರನ್ನು ಒಂದು ವಾಹನದಲ್ಲಿ  ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಹೋರರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 02/2023 ಕಲಂ 279, 337 ಐಪಿಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ : ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳ ಕೋಡಿ ಪಾಲಿಂಗೇರಿ ಪರಾರಿ ಮನೆಯಲ್ಲಿ ವಾಸವಾಗಿರುವ  ಪಿರ್ಯಾದು ಸವಿತಾ ಶೆಟ್ಟಿ (47) ಗಂಡ : ದಿ ಜಗದೀಶ್ ಶೆಟ್ಟಿ ವಾಸ: ಪಾಲಿಂಗೆರಿ ಪರಾರಿ ಮನೆ  , ಬೋಳ ಗ್ರಾಮ,ಕಾರ್ಕಳ ತಾಲೂಕು, ಉಡುಪಿ ಇವರ ತಾಯಿ ಲೀಲಾವತಿ ಶೆಡ್ತಿ(75) ರವರು  ದಿನಂಪ್ರತಿ ಬೆಳಿಗ್ಗೆ ಕೃಷಿ ಗದ್ದೆಗೆ ನೀರು ಹಾಯಿಸಲು ಮನೆಯ ಮುಂದಿನ ಪಂಪ್ ಶೆಡ್ ಗೆ  ಹೋಗಿ ಪಂಪ್ ಸ್ವಿಚ್ ಹಾಕಿ ನೀರನ್ನು ಗದ್ದೆಗೆ ಹಾಯಿಸುತ್ತಿದ್ದು ಎಂದಿನಂತೆ   ದಿನಾಂಕ 05/12/2023  ರ ಬೆಳಿಗ್ಗೆ 08:00 ಗಂಟೆಗೆ ಗದ್ದೆಗೆ ನೀರು ಹಾಯಿಸಲು ಮನೆಯ ಮುಂದಿನ ಪಂಪ್ ಶೆಡ್ ಗೆ ಪಂಪ್ ನ ಸ್ವಿಚ್ ಹಾಕಲು ಹೋದವರು ಆಕಸ್ಮಿಕವಾಗಿ ಮನೆಯ ಮುಂದಿನ ಅವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ಠಾಣೆ ಯುಡಿಆರ್‌ಕ್ರಮಾಂಕ : 05/2023 ಕಲಂ. 174 CRPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ಪಿರ್ಯಾಧಿ ಶ್ರೀಮತಿ ಯಾಲಕ್ಕ,  ಪ್ರಾಯ  43 ವರ್ಷ  ಗಂಡ: ದಿ.  ಪರಮೇಶ್ವರ ಪರಸನವರ  ವಾಸ ಹುಳಿಕಟ್ಟೆ ಗ್ರಾಮ,ಸವದತ್ತಿ  ಬೆಳಗಾವಿ ಜಿಲ್ಲೆ ಇವರ ಮಗ ಮಂಜುನಾಥ ಪರಸನವರನಿಗೆ 23 ವರ್ಷ ಪ್ರಾಯವಾಗಿದ್ದು ಈತನಿಗೆ ಸುಮಾರು 7-8 ವರ್ಷಗಳಿಂದ ವಿಪರೀತ ಶರಾಬು ಕುಡಿಯುವ ಅಭ್ಯಾಸವಿದ್ದು ಈತನು ಕುಂದಾಪುರ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 04/01/2023 ರಂದು ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 11:30 ಗಂಟೆಯ ನಡುವಿನ ಸಮಯದಲ್ಲಿ ತಾನು ಮಲಗಿದ್ದ ಕುಂದಾಪುರ ವಿನಯ ನರ್ಸಿಂಗ್ ಹೋಮ್ ಸಮೀಪ ಸ್ಥಳದಲ್ಲಿ ವಿಪರೀತ ಶರಾಬು ಕುಡಿತದಿಂದ ಯಾವುದೋ ಖಾಯಿಲೆ ಉಲ್ಬಣಗೊಂಡು ಮೃತಪಟ್ಟಿರುವ ಸಾದ್ಯತೆ ಇರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ UDR NO: 01/2023 ಕಲಂ: 174 CrPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳವು ಪ್ರಕರಣ

  • ಕುಂದಾಪುರ : ಪಿರ್ಯಾಧಿ B.P ರಂಗಪ್ಪ  ಪ್ರಾಯ  66 ವರ್ಷ  ತಂದೆ  ಫಕೀರಪ್ಪ  ವಾಸ ಜಿಯೋ ಡಿಜಿಟಲ್‌ ಫೈಬರ್‌ ಪ್ರೈ. ಲಿ. ಕಂ. , ನಂ:51, ವಸಂತ ನಗರ, ಅರಮನೆ ಕ್ರಾಸ್‌ ರಸ್ತೆ, ಬೆಂಗಳೂರು ಇವರು GIO digital Fibre private company ಬೆಂಗಳೂರಿನಲ್ಲಿ ಎಕ್ಸಿಕ್ಯೂಟಿವ್‌ ಕೆಲಸ ಮಾಡಿಕೊಂಡಿದ್ದು , ಕಂಪೆನಿಯವರು ಕುಂದಾಪುರ ತಾಲೂಕು ಕೋಣಿ ಗ್ರಾಮದ ಎಚ್‌ ಪಿ ಪೆಟ್ರೋಲ್‌ ಪಂಪ್‌ ಹತ್ತಿರ ನಿರ್ಮಿಸಿದ್ದ site ID(I-KA-KNDR-OSC-0011)ಟವರನ್ನು ಅಳವಡಿಸಿದ್ದು  ದಿನಾಂಕ: 29/10/2022ರಂದು 11:30 ಗಂಟೆ ಸಮಯಕ್ಕೆ ಸದ್ರಿ ಟವರ್‌ನ ಸಿಗ್ನಲ್‌ ಡೌನ್‌ ಆಗಿರುವುದರಿಂದ ಟವರ್‌ ನಿರ್ವಹಣೆಯ ಟೆಕ್ನಿಶಿಯನ್‌ ಸತೀಶರವರಿಗೆ ಮೆಸೇಜ್‌ ಬಂದಂತೆ  ಅವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ 1) SMPS-2KW,INV-0.65KVA, 19IN AL ODCEMERSN-1 Value Rs. 36092.00 2) ETHERNET, SWITCH, WITHOUT, SFP-1 Value Rs.10838.00 ಒಟ್ಟು ಮೌಲ್ಯ-ರೂ.46930.00 ದ ಸೊತ್ತುಗಳು ಕಳವಾಗಿರುವುದು ಗಮನಕ್ಕೆ ಬಂದಿರುತ್ತದೆ. ಸದ್ರಿ ಸೊತ್ತುಗಳನ್ನು ಯಾರೋ ಕಳ್ಳರು 29/10/2022 ರಂದು 11:30ಗಂಟೆ ಮೊದಲು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 01/2023 ಕಲಂ: 379    ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೋಸ ಪ್ರಕರಣ

  • ಕುಂದಾಪುರ : ಪಿರ್ಯಾದಿ: ಮನೋರಂಜನ್ ದಾಸ್ ಶೆಟ್ಟಿ  ಪ್ರಾಯ  62 ವರ್ಷ  ತಂದೆ  ಹೆಚ್‌ಶಿವರಾಮ ಶೆಟ್ಟಿ  ವಾಸ:  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಶ್ರೀ ಮೂಕಾಂಬಿಕಾ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ  (ನಿ) ಕುಂದಾಪುರ ನಂಬ್ರ #2 ನೆಲಮಹಡಿ. ಜ್ಯೂಲಿಯೋ ರೆಸಿಡೆನ್ಸಿ ಹಂಗಳೂರು ಕುಂದಾಫುರ ಇವರು ಕುಂದಾಪುರ ತಾಲೂಕು ಶ್ರೀ ಮೂಕಾಂಬಿಕಾ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ  ನಿಯಮಿತ ಕುಂದಾಫುರದ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದು  ಸದ್ರಿ  ಸಹಕಾರಿ ನಿಯಮಿತದಲ್ಲಿ  ಆರೋಪಿ  ಉದಯ ಮೆಂಡನ್  ಎಂಬಾತನು  ಸದಸ್ಯನಾಗಿರುತ್ತಾನೆ. ಆರೋಪಿಯು ಆತನ ಹಕ್ಕಿನ ಕುಂದಾಫುರ ತಾಲೂಕು ವಡೇರಹೋಬಳಿ ಗ್ರಾಮದ ಸರ್ವೆ ನಂಬ್ರ 166/1 ರಲ್ಲಿ 15 ಸೆಂಟ್ಸ್ ವಿಸ್ತೀರ್ಣದ  ಜಾಗವನ್ನು ಅಡಮಾನ  ಮಾಡಿ  ದಿನಾಂಕ  04/11/2015 ರಲ್ಲಿ  21 ಲಕ್ಷ  ರೂಪಾಯಿ ಸಾಲ ಪಡೆದುಕೊಂಡು ಜಮೀನಿನ ಹಕ್ಕಿನ ಕಾಗದ  ಪತ್ರವನ್ನು  ಪಿರ್ಯಾದಿದಾರರ ನಿಯಮಿತಕ್ಕೆ ಒತ್ತೆಯಾಗಿರಿಸಿ ಕುಂದಾಪುರ ಸ.ರಿ ಆಫೀಸಿನ 1 ನೇ  ಪುಸ್ತಕದ ದಸ್ತಾವೇಜು  ಸಂಖ್ಯೆ ಕೆಯುಎನ್‌1-03280-2015-16 ಸಿಡಿ  ನಂಬ್ರ  ಕೆಯುಎನ್‌ಡಿ 188 ರ ಮೇರೆಗೆ ನೋಂದಾವಣೆಯಾದ ಅಡಮಾನ ಪತ್ರವನ್ನು ಬರೆದುಕೊಟ್ಟಿರುತ್ತಾನೆ. ಆಪಾದಿತನು ಸಾಲವನ್ನು ಸಕಾಲದಲ್ಲಿ  ಪಾವತಿ ಮಾಡದೇ ಆರೋಪಿಯು ಶ್ರೀ ಮೂಕಾಂಬಿಕಾ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಮೊಹರನ್ನು ಸೃಷ್ಠಿಸಿ ಬಿಡುಗಡೆ ಪತ್ರ ಎನ್ನುವ ಖೋಟಾ ದಾಖಲೆಯನ್ನು ತಯಾರು ಮಾಡಿ ಸದ್ರಿ ದಾಖಲೆಗೆ  ಪಿರ್ಯಾದಿದಾರರ ಖೋಟಾ ಸಹಿ ಮಾಡಿ ಸದ್ರಿ ದಾಖಲೆ ಪತ್ರವನ್ನು ಕುಂದಾಫುರ ಉಪನೋಂದಣಾಧಿಕಾರಿಯವರ  ಸಮಕ್ಷಮ ನ್ಯಾಯವಾದ ದಾಖಲೆ ಎಂದು ನಂಬಿಸಿ ಕುಂದಾಪುರ ಸ.ರಿ ಆಫೀಸಿನ ದಸ್ತಾವೇಜು ಸಂಖ್ಯೆ ಕೆಯುಎನ್‌103563-2018-2019 ರಲ್ಲಿ  ಸಿಡಿ  ನಂಬ್ರ ಕೆಯುಎನ್‌ಡಿ 233 ರ ಮೇರೆಗೆ  ದಿನಾಂಕ 29/11/2018 ರಂದು ನೋಂದಾಯಿಸಿಕೊಂಡು ನಂತ್ರ ಸದ್ರಿ ನಕಲಿ ದಾಖಲಾತಿಯ ಆಧಾರದ ಮೇಲೆ  ಕುಂದಾಫುರದ ಮಿತ್ರ ವಿವಧೋದ್ದೇಶ ಸೌಹಾರ್ದ ಸಹಕಾರಿ (ನಿ) ಕುಂದಾಫುರದಲ್ಲಿ 10 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ಕುಂದಾಪುರ ತಾಲೂಕು ಶ್ರೀ ಮೂಕಾಂಬಿಕಾ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಕುಂದಾಫುರ ಇವರಿಗೆ   ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 02/2023 ಕಲಂ: 406, 465, 468, 471, 420, IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 05-01-2023 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080