ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಕಾರ್ಕಳ ತಾಲೂಕು ಬೋಳ ಗ್ರಾಮದ ಬಲ್ಯಾರ್ ದಡ್ಡು ಮನೆ ನಿವಾಸಿ ಸುರೇಶ್ ಶೆಟ್ಟಿ (52) ಇವರು ವಿಪರೀತ ಶರಾಬು ಕುಡಿಯುವ ಚಟವನ್ನು ಹೊಂದಿದ್ದು, ಅಲ್ಲದೇ ಬಿ.ಪಿ ಹಾಗೂ ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದವರು, ಮನೆಯವರು ತಿಳಿಸಿದ ಬಳಿಕ ಸುಮಾರು ಒಂದೆರಡು ತಿಂಗಳಿನಿಂದ ಶರಾಬು ಕುಡಿಯುವುದನ್ನು ಬಿಟ್ಟಿದ್ದು ಆ ಬಳಿಕ ಮಾನಸಿಕ ಖಿನ್ನತೆಯಿಂದ ಇದ್ದು ಇದೇ ಕಾರಣದಿಂದ ಮನನೊಂದು ದಿನಾಂಕ 04/01/2022 ರಂದು ಮಧ್ಯಾಹ್ನ 12:00 ಗಂಟೆಯ ನಂತರ ಎಂಬಲ್ಲಿ ಇರುವ ತಮ್ಮ ವಾಸ್ತವ್ಯದ ಮನೆಯ ಹಿಂಭಾಗದಲ್ಲಿ ಇರುವ ಕೊಟ್ಟಿಗೆಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಲಾಲ್ ಬಿಹಾರಿ (26), ಗಂಡ: ರಾಮ್ ದೇಹನ್ ಸಿಂಗ್, ವಾಸ: ಕೆಸವರ್ ಪುರ್ ಆರಾ ಜಿಲ್ಲೆ ಚಾಸ್ಸಿನ ಅಂಚೆ, ಬಿಹಾರ್ ರಾಜ್ಯ, ಹಾಲಿ ವಿಳಾಸ: ಚೈತ್ರ ವಿ ಅಡಪರವರ ಮನೆ, ಮೊಳಹಳ್ಳಿ, ಕೈಲ್ಕೇರಿ, ಕುಂದಾಪುರ ತಾಲೂಕು ಇವರು ಮೊಳಹಳ್ಳಿಯ ಕೈಲ್ಕೇರಿ ಮಾವಿನಕಟ್ಟೆಯಲ್ಲಿರುವ ಚೈತ್ರ ವಿ ಅಡಪರವರ ಮನೆಯಲ್ಲಿ ಹೈನುಗಾರಿಕೆ ಕೆಲಸ ಮಾಡಿಕೊಂಡಿದ್ದು ಒಂದು ಗಂಡು ಮಗು ಅನುರಾಜ್ (ಎರಡೂವರೆ ವರ್ಷ), ಮಗಳು ಅನುಷ್ಕಾ (4 ವರ್ಷ) ಹಾಗೂ ಹೆಂಡತಿ ಜೊತೆಯಲ್ಲಿ ಚೈತ್ರ ವಿ ಅಡಪರವರ ಮನೆ ಬಳಿ ವಾಸವಾಗಿದ್ದು , ಹಟ್ಟಿಯಲ್ಲಿ ಸುಮಾರು 30 ದನಗಳಿದ್ದು ಪಿರ್ಯಾದಿದಾರರು ಯಾವಾಗಲೂ ಹಟ್ಟಿಯನ್ನು ಸ್ವಚ್ಛಗೊಳಿಸುತ್ತಿದ್ದು,ಆ ನೀರು ಅಲ್ಲೇ ಹಿಂದೆ ಇರುವ   ಹೊಂಡದಲ್ಲಿ ತುಂಬುತ್ತಿತ್ತು. ದಿನಾಂಕ: 04/01/2022 ರಂದು ವಿದ್ಯುತ್ ಸರಬರಾಜು ಇಲ್ಲದ ಕಾರಣ ನೀರು ಖಾಲಿ ಮಾಡಲು ಆಗಲಿಲ್ಲ. ಸಂಜೆ 4:45 ಗಂಟೆಗೆ ಕೆಲಸದಿಂದ ಮನೆಗೆ ಹೋಗಿ ಮಕ್ಕಳ ಜೊತೆ ಚಹ  ಕುಡಿದು ಮಕ್ಕಳು ಹಾಲು ಕುಡಿದು ಅಲ್ಲಿಯೇ ಜೆ.ಸಿ.ಬಿ ಕೆಲಸ ಮಾಡುವುದನ್ನು ನೋಡುತ್ತಿದ್ದರು. ಸಂಜೆ 5:00 ಗಂಟೆಗೆ ಮನೆಯಿಂದ ಹೊರಗೆ ಬಂದು ನೋಡುವಾಗ  ಮಗ  ಅನುರಾಜ್ ನ ಚಪ್ಪಾಲ್  ಹಟ್ಟಿಯ ನೀರು ಹೋಗುವ ಹೊಂಡದ ಬಳಿ ಇದ್ದು ಒಂದು ಕೋಲು ಬಿದ್ದಿದ್ದು ಸಂಶಯಗೊಂಡು ಸಗಣಿ ನೀರಿನ ಹೊಂಡಕ್ಕೆ ಇಳಿದು ನೋಡಿದಾಗ ಮಗು ಮಾತನಾಡದೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದದನ್ನು ಕೂಡಲೇ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ  ಕರೆದುಕೊಂಡು ಬಂದಾಗ ವೈದ್ಯಾಧಿಕಾರಿಯವರು ಮಗುವನ್ನು  ಪರಿಕ್ಷೀಸಿ ಮಗು  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತ ಅನುರಾಜ್ ಈ ದಿನ ಸಂಜೆ 5:00 ಗಂಡೆಯಿಂದ 05:45 ಗಂಟೆಯ ಒಳಗೆಡೆ ಹಟ್ಟಿಯ ನೀರಿನ ಹೊಂಡದಲ್ಲಿ  ಆಕಸ್ಮಿಕವಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01 /2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಶಿರ್ವಾ: ದಿನಾಂಕ 04/01/2022 ರಂದು  ಮುಂಜಾನೆ 1:30 ಗಂಟೆಯಿಂದ   06:45 ಗಂಟೆಯ ನಡುವಿನ ಅವಧಿಯಲ್ಲಿ  ಯಾರೋ ಕಳ್ಳರು ಶಿರ್ವ ಗ್ರಾಮದಲ್ಲಿರುವ ಪಿರ್ಯಾದಿದಾರರಾದ ರಾಜೇಶ್‌ಆರ್‌. ಪ್ರಭು (36), ತಂದೆ: ರಮೇಶ್ ಆರ್. ಪ್ರಭು, ವಾಸ: ಶ್ರೀ ದಾಮೋದರ ಕೃಪಾ, ಜಾರಂದಾಯ ದೈವಸ್ಥಾನ ರೋಡ್‌, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ವಾಸದ ಮನೆಯ ಬಳಿ ತೆರೆದ  ಕಾರು ಶೆಡ್‌ನಲ್ಲಿ ಇರಿಸಿದ್ದ  TATA ACE  ವಾಹನ ನಂಬ್ರ  KA-20-B-4741 ನೇದರ ಬ್ಯಾಟರಿ-1 ಹಾಗೂ KA-46- 901 TATA ACE ನೇದರ ಬ್ಯಾಟರಿ-1ನ್ನು ಕಳವು ಮಾಡಿಕೊಂಡು ಹೋಗಿದ್ದು, 2 ಬ್ಯಾಟರಿಗಳ  ಒಟ್ಟು ಮೌಲ್ಯ 9,000/- ಆಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/22 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ನಿತ್ಯಾನಂದ ಶೇಟ್ (55), ವಾಸ: ರಂಗನಾಥ ಶೆಣೈ ಕಂಪೌಂಡ್ , ಪಿ.ಪಿ.ಸಿ ರಸ್ತೆ ಉಡುಪಿ, ಮಾಲೀಕರು ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ , ಡೋರ್ ನಂಬ್ರ 4-64, ಪಂಚಾಯತ್ ಕಟ್ಟಡ , ಅಂಬಾಗಿಲು ಉಪ್ಪುಂದ ಇವರು ಉಪ್ಪುಂದ ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಡೋರ್ ನಂಬ್ರ 4-64 ರಲ್ಲಿರುವ ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ್ ಎಂಬ ಚಿನ್ನಾಭರಣ ಮಳಿಗೆಯನ್ನು ದಿನಾಂಕ 19/05/2019 ರಂದು ಪ್ರಾರಂಭಿಸಿದ್ದು, ವ್ಯವಹಾರ  ನೋಡಿಕೊಳ್ಳಲು ಗಿರೀಶ್  ಶೇಟ್ ಎಂಬುವವರನ್ನು ಮೇನೇಜರ್ ಆಗಿ ನೇಮಿಸಿರುತ್ತಾರೆ.  ಮಳಿಗೆಯಲ್ಲಿ ದಿನಾಂಕ 01/04/2021 ರಿಂದ  31/12/2021 ರ ವರೆಗೆ 17,433.518 ಗ್ರಾಂ ಬಂಗಾರದ  ಅಭರಣ ವ್ಯವಹಾರ  ನಡೆದಿದ್ದು  ಅದರಲ್ಲಿ 6887.641 ಗ್ರಾಂ  ಬಂಗಾರದ  ಆಭರಣವನ್ನು  1 ನೇ ಆರೋಪಿ 1) ಗಿರೀಶ್ ಶೇಟ್ (39), ತಂದೆ: ರಾಮಚಂದ್ರ ಶೇಟ್, ವಾಸ: ಕಾಸನಾಡಿ ಉಪ್ಪುಂದ ಗ್ರಾಮ ಇವರು ಮಾರಾಟ ಮಾಡಿದ್ದು,  ಮತ್ತು 1666.000 ಗ್ರಾಂ ಚಿನ್ನವನ್ನು  ಹೊಸ ಹಾಲ್  ಮಾರ್ಕ ಗಾಗಿ ಹಿಂದೆ ಕಳುಹಿಸಿದ್ದು  ಅಂಗಡಿಯಲ್ಲಿ 9320.350 ಗ್ರಾಂ ಚಿನ್ನಾಭರಣಗಳು ಅಂಗಡಿಯಲ್ಲಿ ಇರಬೇಕಾಗಿದ್ದು ಪಿರ್ಯಾದಿದಾರರು ಹಾಗೂ ಅವರ ಮಕ್ಕಳು ಸ್ಟಾಕ್ ಚೆಕ್ ಮಾಡುವಾಗ   ಸಂಶಯಗೊಂಡು ಪರಿಶೀಲನೆ ಮಾಡಿದಾಗ ಅಂಗಡಿಯಲ್ಲಿ 4300 ಗ್ರಾಂ ಚಿನ್ನಾಭರಣಗಳು  ಮಾತ್ರ ಇದ್ದು ಉಳಿದ 5020 ಗ್ರಾಂ ಚಿನ್ನ ಇದ್ದಿರುವುದಿಲ್ಲ. ಈ ಬಗ್ಗೆ  ಪಿರ್ಯಾದಿದಾರರು ಆರೋಪಿತನಲ್ಲಿ ವಿಚಾರಿಸಿದಾಗ ಸ್ವಲ್ಪ ಚಿನ್ನ ಮನೆಯಲ್ಲಿದ್ದು ಹಾಗೂ ಸ್ವಲ್ಪ ಚಿನ್ನ ಗ್ರಾಹಕರಿಗೆ ನೋಡಲಿಕ್ಕೆ ನೀಡಿರುವುದಾಗಿ ಅಲ್ಲದೇ ಕೆಲವು ಚಿನ್ನ ಬಿಲ್ ಆಗಲು ಬಾಕಿಯಿರುವುದಾಗಿ ಬೇರೆ ಬೇರೆ ಕಾರಣಗಳನ್ನು ತಿಳಿಸಿ ಸಮಯಾವಕಾಶ ಕೇಳಿ ದಿನಗಳನ್ನು ಮುಂದಕ್ಕೆ ಹಾಕುತ್ತಿದ್ದು, ಅಂಗಡಿಯಲ್ಲಿ ದಿನಾಂಕ 01/04/2021 ರಿಂದ 31/12/2021 ರವರೆಗೆ ರೂಪಾಯಿ 3,35,73,197/- ಮೌಲ್ಯದ  ಚಿನ್ನಾಭರಣ ಮಾರಾಟ ವಾಗಿದ್ದು ಅದರ ಪೈಕಿ ಗ್ರಾಹಕರಿಂದ ರೂಪಾಯಿ 1,20,83,175/- ನಗದು ಬಂದಿದ್ದು   ಹಣದಲ್ಲಿ 1 ನೇ ಆರೋಪಿಯು ರೂಪಾಯಿ 61,83,175/- ನ್ನು ಪಿರ್ಯಾದಿದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದು ಬಾಕಿ ರೂಪಾಯಿ 59,00,000/- ಹಣವನ್ನು ಪಾವತಿಸಿರುವುದಿಲ್ಲ. ಅಲ್ಲದೇ 1 ನೇ ಆರೋಪಿಯು ಒಟ್ಟು ಮಾರಾಟ ಮಾಡಿರುವ ಚಿನ್ನಾಭರಣಗಳಲ್ಲಿ  ಪಿರ್ಯಾದಿದಾರರ ಅನುಮತಿಯಿಲ್ಲದೇ ಮನ ಬಂದಂತೆ ತಾನೇ ನಿರ್ಧಾರ ಕೈಗೊಂಡು ರೂಪಾಯಿ 69,86,000/- ಹಣವನ್ನು ಗ್ರಾಹಕರಲ್ಲಿ ಬಾಕಿ ನಿಲ್ಲಿಸಿದ್ದು,  ಒಟ್ಟು ರೂಪಾಯಿ 1,28,86,000/- ನ್ನು ಪಿರ್ಯಾದಿದಾರರಿಗೆ ಹಣವನ್ನು ನೀಡಲು ಬಾಕಿ ಇರುತ್ತದೆ. ಪಿರ್ಯಾದಿದಾರರು  ಹಣ ಹಾಗೂ ಚಿನ್ನಾಭರಣಗಳ ಬಗ್ಗೆ ವಿಚಾರಿಸಿ ಕೇಳಿದಾಗ ಚಿನ್ನವನ್ನು ಹಾಗೂ ಹಣವನ್ನು ತಾನು ಕೊಡುವುದಿಲ್ಲ, ತನ್ನನ್ನು ಏನೂ ಮಾಡಲು ಆಗುವುದಿಲ್ಲ, ತಾನಿಲ್ಲದ್ದಿದ್ದರೆ ಅಂಗಡಿಯೇ ಮುಚ್ಚಿ ಹೋಗುತ್ತದೆ ಎಂಬುದಾಗಿ ಹೇಳುತ್ತಿದ್ದು, ಗ್ರಾಹಕರಿಗೆ ತನ್ನ ಮನೆಗೆ ಬರುವಂತೆ ಅಲ್ಲಿ ಜಿಎಸ್ಟಿ ಇಲ್ಲದೇ ಕಡಿಮೆ ದರದಲ್ಲಿ ಚಿನ್ನವನ್ನು ಕೊಡುವುದಾಗಿ ಹೇಳುತ್ತಿರುವುದು ಪಿರ್ಯಾದಿದಾರರಿಗೆ ತಿಳಿದು ಬಂದಿದ್ದು, ಪಿರ್ಯಾದಿದಾರರಿಗೆ ವಂಚಿಸಿದ ಹಣ ಹಾಗೂ ಚಿನ್ನಾಭರಣಗಳನ್ನು 2 ನೇ ಆರೋಪಿ ವೆಂಕಟೇಶ್ ಶೇಟ್ (44), ತಂದೆ: ರಾಮಚಂದ್ರ ಶೇಟ್, ವಾಸ: ಕಾಸನಾಡಿ ಉಪ್ಪುಂದ ಗ್ರಾಮ ಇವರು ತನ್ನ ಮಾವನ ಮನೆಗೆ ಹಾಗೂ ಆರೋಪಿತ 1 ನೇಯವರ ಆಪ್ತ ಮಹಿಳೆಯ ಮನೆಗೆ ಸಾಗಿಸಿರುವುದರ ಬಗ್ಗೆ 3 ನೇ ಆರೋಪಿ ಹರೀಶ್ ಶೇಟ್ (35), ತಂದೆ: ರಾಮಚಂದ್ರ ಶೇಟ್, ವಾಸ: ಕಾಸನಾಡಿ ಉಪ್ಪುಂದ ಗ್ರಾಮ ಇವರು ಚಿನ್ನಾಭರಣಗಳನ್ನು ಬೆಂಗಳೂರಿಗೆ ಸಾಗಿಸಿರುವ ಬಗ್ಗೆ ಪಿರ್ಯಾದಿದಾರರಿಗೆ ಸಂಶಯವಿದ್ದಿರುತ್ತದೆ. ಪಿರ್ಯಾದಿದಾರರ ಚಿನ್ನದ ಅಂಗಡಿಯಲ್ಲಿ ವ್ಯವಹಾರ ಹಾಗೂ ಬಿಲ್ಲಿಂಗ್ ಉದ್ದೇಶಕ್ಕೆ ಗಣಕಯಂತ್ರ ಅಳವಡಿಸಿದ್ದು, ಅದರಲ್ಲಿನ ಲೆಕ್ಕಪತ್ರದ ನಮೂದುಗಳನ್ನು  ತಿರುಚಿದ್ದು, ಆರೋಪಿತರು ಪಿರ್ಯಾದಿದಾರರ ಅಂಗಡಿಯ ಬಾಡಿಗೆ, ತೆರಿಗೆ ಕಟ್ಟಿದ ಹಾಗೂ ಇತರ ಮೂಲ ದಾಖಲೆಗಳನ್ನು ಪಿರ್ಯಾದಿದಾರರ ಅನುಮತಿ ಇಲ್ಲದೇ ತೆಗೆದುಕೊಂಡು ಹೋಗಿರುತ್ತಾರೆ. ಆರೋಪಿತ 1 ನೇ ಯವರು ಪಿರ್ಯಾದಿದಾರರ ಅಂಗಡಿಯ ನೌಕರನಾಗಿದ್ದು ಆರೋಪಿತ 2 ಮತ್ತು 3 ನೇಯವರ ಜೊತೆ ಸೇರಿಕೊಂಡು ಪಿರ್ಯಾದಿದಾರರ ನಂಬಿಕಗೆ ದ್ರೋಹ ಎಸಗಿ , ಪಿರ್ಯಾದಿದಾರರ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಹಣವನ್ನು ಲಪಟಾಯಿಸಿ, ದುರುಪಯೋಗಪಡಿಸಿಕೊಂಡು,  ಮೋಸ ಹಾಗೂ ವಂಚನೆಯನ್ನು ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ: 420, 417, 409, 506, 468, 471 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಶಿರ್ವಾ: ದಿನಾಂಕ 03/01/2022 ಬೆಳಿಗ್ಗೆ ಆರೋಪಿ ಅಬ್ದುಲ್‌ ಸಮಾದ್‌ (29), ತಂದೆ: ನಜೀಬ್‌ಶೇಖ್‌, ವಾಸ:ಕೊಲ್ಲ ಬೆಟ್ಟು ಹೌಸ್‌, ಪಾದೂರು ಗ್ರಾಮ, ಕಾಪು ತಾಲೂಕು ಎಂಬಾತ ಕಾಪು  ತಾಲೂಕಿನ ಶಿರ್ವಾ ಗ್ರಾಮದ ಸ್ಯಾಮ್‌ಸ್ಕ್ವಾರ್‌ ಕಟ್ಟಡದ ಬಳಿ ಸಾರ್ವಜನಿಕ  ಸ್ಥಳದಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜವನ್ನು ಸೇವಿಸಿರುವುದು ಮೇಲ್ನೋಟಕ್ಕೆ ಖಚಿತವಾಗಿರುವುದರಿಂದ ಶ್ರೀಶೈಲ್‌ ಡಿ.ಎಮ್,  ಪೊಲೀಸ್ ಉಪನಿರೀಕ್ಷಕರು, ಶಿರ್ವ ಠಾಣೆ ಇವರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ತಜ್ಜ ಪರೀಕ್ಷೆ ಮಾಡಿಸಿದ್ದು ಆರೋಪಿಯು ಗಾಂಜಾ ಸೇವಿಸಿರುವುದಾಗಿ ದೃಡ ಪತ್ರ ನೀಡಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 05-01-2022 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080