ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 03/12/2022  ರಂದು  ಸಂಜೆ ಸುಮಾರು 4:15  ಗಂಟೆಗೆ, ಕುಂದಾಪುರ ತಾಲೂಕಿನ, ಕೊಟೇಶ್ವರ ಗ್ರಾಮದ ಅಂಕದಕಟ್ಟೆಯ ಸರ್ಜನ್‌‌ ಆಸ್ಪತ್ರೆಯ ಹತ್ತಿರ, NH 66  ರಸ್ತೆಯಲ್ಲಿ, ಆಪಾದಿತ  ಕಿರಣ್‌ ಕುಮಾರ್‌ ಎಂಬವರು KA20-AA-1517ನೇ ಬಸ್‌‌‌‌ನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು,  NH 66  ರಸ್ತೆ ದಾಟುತ್ತಿದ್ದ ಗೋವಿಂದ ನಾಯ್ಕರವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೋವಿಂದ ನಾಯ್ಕರವರ ತಲೆಗೆ ಹಾಗೂ ಬಲಕೈಗೆ ಗಂಭೀರ ರಕ್ತಗಾಯವಾಗಿದ್ದು, ಅವರಿಗೆ ಅಂಕದಕಟ್ಟೆ ಸರ್ಜನ್‌  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿಕೊಂಡು ಹೆಚ್ಚಿನ  ಚಿಕಿತ್ಸೆಗೆ  ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 128/2022   ಕಲಂ 279, 304 (ಎ) ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಫಿರ್ಯಾದಿ ಬಿ.ರಾಘವೇಂದ್ರ ಇವರು ಗುತ್ತಿಗೆದಾರರಾದ ರವಿರಾಜ್ ಹೆಗ್ಗಡೆ ಎಂಬವರ  ಜೊತೆಯಲ್ಲಿ  ರೈಟರ್  ಕೆಲಸಮಾಡಿಕೊಂಡಿರುತ್ತಾರೆ.  ರವಿರಾಜ್  ಹೆಗ್ಗಡೆ  ರವರು   ಯಡ್ತರೆ  ಗ್ರಾಮದ  ಸಾರಂಕಿ ಎಂಬಲ್ಲಿ  ವಾಣಿ ರವರ ಮನೆಯಲ್ಲಿ  ಕೆರೆಯ ಗುತ್ತಿಗೆ  ಪಡೆದು  ಕೆಲಸ ಮಾಡಿಸುತ್ತಿದ್ದರು. ಪಿರ್ಯಾದುದಾರರು   ಅಲ್ಲಿ ರೈಟರ್  ಆಗಿ  ಕೆಲಸ  ನೋಡಿಕೊಂಡಿದ್ದರು.   ದಿನಾಂಕ  25-11-2022 ರಂದು  ಮಧ್ಯಾಹ್ನ  12-15  ಗಂಟೆಗೆ   ವಾಣಿ ರವರ ಜಾಗದಲ್ಲಿ   ಕೆರೆಯ ಮಣ್ಣು KA30-8610  ಟಿಪ್ಪರ್ ನಲ್ಲಿ  ತುಂಬಿಸಿದ  ಬಳಿಕ  ಚಾಲಕ   ಮಂಜುನಾಥ   ಎಂಬವರು  ಟಿಪ್ಪರ್  ನಲ್ಲಿ ಕುಳಿತು  ಚಾಲನೆ ಮಾಡಿಕೊಂಡು  ಬಿ ರಾಘವೇಂದ್ರ  ರವರಲ್ಲಿ  ಟಿಪ್ಪರಿನ ಹಿಂದಿನ  ಬಾಗಿಲನ್ನು ಹಾಕುವಂತೆ  ತಿಳಿಸಿರುತ್ತಾರೆ.  ಆ ಸಮಯದಲ್ಲಿ   ಬಿ ರಾಘವೆಂದ್ರ ರವರು  ಟಿಪ್ಪರಿನ ಹಿಂಭಾಗ ಹೋಗಿ   ಬಾಗಿಲಿನ  ಚಿಲಕ ಹಾಕಲು ಹಿಡಿದುಕೊಂಡಿರುತ್ತಾರೆ. ಆ  ಸಮಯ  ಟಿಪರನ್ನು ಚಾಲಕನು  ಯಾವುದೇ  ಸೂಚನೆ ನೀಡದೇ ಒಮ್ಮಲೇ ನಿರ್ಲಕ್ಷತನದಿಂದ   ಮುಂದಕ್ಕೆ ಚಲಾಯಿಸಿದ್ದು  ಆಗ ಟಿಪ್ಪರಿನ ಬಾಗಿಲು  ಎಡಕೈ ಮೇಲೆ ಬಿದ್ದು  ಎಡಕೈ ಹಸ್ತ ಮಧ್ಯ ಭಾಗವಾಗಿ,  ಹೆಬ್ಬೆರಳು ಮತ್ತು  ಮಧ್ಯ ಬೆರಳು  ತುಂಡಾಗಿ ,ಕಿರು ಬೆರಳಿಗೆ  ಗಾಯ  ಉಂಟಾಗಿರುತ್ತದೆ. ಗಾಯಾಳು ಬಿ. ರಾಘವೇಂದ್ರ  ರವರು  ಮಣಿಪಾಲ ಕೆ. ಎಂ.ಸಿ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ದಾಖಲಾಗಿ  ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 235/2022 ಕಲಂ. 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಫಿರ್ಯಾದಿ ಕೆ. ಸಂತೋಷ್‌ ಪ್ರಭು ಇವರು ದಿನಾಂಕ: 02.12.2022 ರಂದು ಬೆಳಿಗ್ಗೆ ಸಮಯ ತನ್ನ ಬಾಬ್ತು ಮೋಟಾರ್‌ ಸೈಕಲ್‌ ನಲ್ಲಿ ಕೆಲಸದ ನಿಮಿತ್ತ ಕೋಟದಿಂದ ಕುಂದಾಪುರಕ್ಕೆ ಹೊರಟಿದ್ದು, ಬೆಳಿಗ್ಗೆ ಸುಮಾರು 07:45 ಗಂಟೆಗೆ ಕೋಟ ಫ್ಲೈಓವರ್‌ ಮೇಲೆ ಹೋಗುವಾಗ ಹಿಂದಿನಿಂದ ಬಂದ ನಂ: AP 28 AT 360 ನೇ ಕಾರನ್ನು ಅದ ಚಾಲಕನು ಫಿರ್ಯಾದುದಾರರ ಮೋಟಾರ್‌ ಸೈಕಲ್‌ ಅನ್ನು ಹಾಗೂ ಅವರ ಮುಂದೆ ಸಾಗುತ್ತಿದ್ದ ಒಂದು ಸ್ಕೂಟಿಯನ್ನು ಸಹ ಅತೀವೇಗವಾಗಿ ಓವರ್ ಟೇಕ್‌ ಮಾಡಿಕೊಂಡು ಮುಂದೆ ಹೋಗಿ ಮಣೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರು ರಾ.ಹೆ. 66 ಮುಖ್ಯರಸ್ತೆಯಲ್ಲಿ ಯಾವುದೇ ಸೂಚನೆ ನೀಡದೇ ಅಜಾಗರೂಕತೆಯಿಂದ ಏಕಾಏಕಿ ರಸ್ತೆಯಲ್ಲಿ ನಿಲ್ಲಿಸಿದನು. ಪರಿಣಾಮ ಅದೇ ರಸ್ತೆಯಲ್ಲಿ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಬರುತ್ತಿದ್ದ ನಂ. KA 20 EA 4937 ನೇ ಸ್ಕೂಟಿಯನ್ನು ಅದರ ಸವಾರ ವಾಸುದೇವ ನಾಯಕ್‌ ಎಂಬವರಿಗೆ ನಿಯಂತ್ರಿಸಲಾಗದೇ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿರುತ್ತಾರೆ. ಪರಿಣಾಮ ಸ್ಕೂಟಿ ಸವಾರನು ರಸ್ತೆಗೆ ಬಿದ್ದು ಅವರ ಮುಖಕ್ಕೆ, ಸೊಂಟಕ್ಕೆ ಮತ್ತು ಕೈಕಾಲಿಗೆ ತೀವ್ರ ಗಾಯವಾಗಿರುತ್ತದೆ. ಅಪಘಾತದಲ್ಲಿ ಕಾರಿನ ಹಿಂಬದಿ ಹಾಗೂ ಸ್ಕೂಟಿಯ ಮುಂಭಾಗ ಜಖಂ ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 217/2022 ಕಲಂ: 279, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಫಿರ್ಯಾದಿ ರಾಜೇಶ್‌ ಶೆಣೈ ಇವರು ಐರೋಡಿ ಗ್ರಾಮದ ಪಂಚಾಯತ್‌ ಅಭಿವೃದ್ದಿ ಅಧಿಕಾರಿಯಾಗಿದ್ದು ಸರಕಾರಿ ನೌಕರರಾಗಿರುತ್ತಾರೆ. ಫಿರ್ಯಾದುದಾರರು ದಿನಾಂಕ: 03.12.2022 ರಂದು ಐರೋಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನೀರು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್‌ ಉಡುಪಿ ಜಿಲ್ಲೆ ರವರ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ್‌ ಮಿಷನ್‌ ಯೋಜನೆಯಡಿ ಸರ್ಕಾರಿ ಕೊಳವೆಬಾವಿ ಕಾಮಗಾರಿ ನಡೆಸುತ್ತಿರುವಾಗ ಸದ್ರಿ ಸ್ಥಳಕ್ಕೆ ದಿನಾಂಕ: 03.12.2022 ರಂದು ಸಂಜೆ 4 ಗಂಟೆಗೆ ಆರೋಪಿತನಾದ ಸಾಸ್ತಾನ ಟೋಲ್‌ ಪಿಆರ್‌ಓ ಸಿಬ್ಬಂದಿ ಯೋಗೀಶ್‌ ಎಂಬವರು ಬಂದು ಕಾಮಗಾರಿಗೆ ಅಡ್ಡಿಪಡಿಸಿ ಸರ್ಕಾರಿ ಅಧಿಕಾರಿಯಾದ ಫಿರ್ಯಾದುದಾರರಿಗೆ ವಿಧಿಬದ್ದ ಸರ್ಕಾರಿ ಕರ್ತವ್ಯ ನಿರ್ವಹಿಸದಂತೆ ತಡೆಯೊಡ್ಡಿರುತ್ತಾರೆ. ಈ ಬಗ್ಗೆ ಉಡುಪಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ದೂರವಾಣಿ ಮುಖೇನ ಆರೋಪಿಗೆ ಸೂಚಿಸಿದರೂ ಸಹ ಆರೋಪಿತನು ಅದನ್ನು ಕಡೆಗಣಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 218/2022 ಕಲಂ: 353 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಫಿರ್ಯಾದಿ ಶ್ರೀಮತಿ. ರಮಣಿ ಬಿ. ಶೆಡ್ತಿ ಇವರಿಗೂ ಹಾಗೂ ಆರೋಪಿತ 1) ಶ್ರೀಮತಿ. ಸುಮಾ ಶೆಟ್ಟಿ  2) ಭೋಜರಾಜ ಶೆಟ್ಟಿ (3) ಶ್ರೀಮತಿ. ಶ್ರೀಮತಿ ಶೆಟ್ಟಿ ಇವರುಗಳಿಗೂ ಜಾಗದ ವಿಚಾರದಲ್ಲಿ ಮಾನ್ಯ ಎಸ್‌ಡಿಎಂ ನ್ಯಾಯಾಲಯದಲ್ಲಿ ತಕರಾರು ವಿಚಾರಣೆಯಲ್ಲಿ ಬಾಕಿ ಇರುತ್ತದೆ. ಹೀಗಿರುವಾಗ ಆರೋಪಿಗಳು ಒಟ್ಟಾಗಿ ಸಮಾನ ಉದ್ದೇಶದಿಂದ ಫಿರ್ಯಾದುದಾರರ ಅನುಭೋಗದಲ್ಲಿರುವ ಜಾಗವು ತಮ್ಮ ಅನುಭೋಗದಲ್ಲಿರುವ ಜಾಗವೆಂದು ಬಿಂಬಿಸುವ ಸಲುವಾಗಿ ಆ ವಿವಾದಿತ ಜಾಗಕ್ಕೆ ಈ ದಿನ ದಿನಾಂಕ: 03.12.2022 ರಂದು ಬೆಳಿಗ್ಗೆ ಪೈಪ್‌ಗಳನ್ನು ಅಳವಡಿಸಿದ್ದು, ಅದನ್ನು ಫಿರ್ಯಾದುದಾರರು ಪ್ರಶ್ನಿಸಿದಾಗ, ಆರೋಪಿಗಳೆಲ್ಲರೂ ಕೈಯಲ್ಲಿ ಕತ್ತಿ ಹಾಗೂ ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಫಿರ್ಯಾದುದಾರರನ್ನು ಉದ್ದೇಶಿಸಿ ಬಾಯಿಗೆ ಬಂದಂತೆ ಬೈದು, ಸದ್ರಿ ವಿವಾದಿತ ಸ್ಥಳದ ಅನುಭೋಗವನ್ನು ಬಿಟ್ಟುಕೊಡಬೇಕು ಇಲ್ಲವಾದಲ್ಲಿ ಕಡಿದು ಹಾಕುವುದಾಗಿ ಧಮಕಿ ಹಾಕಿದ್ದು ಮಾತ್ರವಲ್ಲದೇ, ಆರೋಪಿಗಳು ಏಕಾಏಕಿ ಫಿರ್ಯಾದುದಾರರನ್ನು ನೆಲಕ್ಕೆ ದೂಡಿ ಫಿರ್ಯಾದುದಾರರು ಜೋರಾಗಿ ಬೊಬ್ಬೆ ಹೊಡೆದಾಗ ಫಿರ್ಯಾದುದಾರರ ಅಳಿಯ ಜಗನ್ನಾಥ ಶೆಟ್ಟಿ ಎಂಬವರು ಸ್ಥಳಕ್ಕೆ ಬರುವುದನ್ನು ಕಂಡು ಆರೋಪಿಗಳು ಫಿರ್ಯಾದುದಾರರನ್ನು ಉದ್ದೇಶಿಸಿ, “ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ, ನಿನಗೊಂದು ಗತಿ ಕಾಣಿಸುತ್ತೇವೆ ” ಎಂಬುದಾಗಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಓಡಿ ಹೋಗಿರುತ್ತಾರೆ ಎಂಬಿತ್ಯಾದಿ.  ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 219/2022 ಕಲಂ: 506 (2), 354, 323 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ:30.11.2022 ರಂದು ಮಧ್ಯಾಹ್ನ 14:30 ಗಂಟೆಗೆ ಶ್ರೀಶೈಲ ಮುರಗೋಡ ಪಿ.ಎಸ್.ಐ(ಕಾ & ಸು) ಕಾಪು ಪೊಲೀಸ್ ಠಾಣೆ ಅವರು ಠಾಣಾ ಸಿಬ್ಬಂದಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಉದ್ಯಾವರ ಗ್ರಾಮದ ಗ್ರಾಮ ಪಂಚಾಯತ್ ಕಛೇರಿಯ ಬಳಿ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡುಬಂದಿದ್ದು, ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಆತನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ಆತನ ಹೆಸರು, ವಿಳಾಸ ವಿಚಾರಿಸಿಲಾಗಿ ಆತನ ಹೆಸರು ಪೂಣೆ೯ಶ್‌ ಎಂದು ತಿಳಿಸಿದ್ದು ಸದ್ರಿಯವರಿಗೆ ಪೊಲೀಸ್ ನೋಟಿಸ್ ನೀಡಿ ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ ಮುಂದೆ ಹಾಜರುಪಡಿದ್ದು, ಪರೀಕ್ಷಿಸಿದ ವೈದ್ಯರು ದಿನಾಂಕ 03.12.2022 ರಂದು ಪೂರ್ಣೇಶ್‌ ಎಂಬಾತನು ಗಾಂಜಾ ಸೇವಿಸಿರುವ ಬಗ್ಗೆ ದೃಢಪತ್ರ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 132/2022 ಕಲಂ 27(b) NDPS Act ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ: 29-11-2022 ರಂದು ಪಿರ್ಯಾದಿ ಭರತ ಇವರ ಮೊಬೈಲ್ ಗೆ ಯಾರೋ ಅಪರಿಚಿತ ವ್ತಕ್ತಿಯ ಮೊಬೈಲ್ ನಿಂದ ಪಾರ್ಟ್ ಟೈಮ್ ಕೆಲಸದ ಬಗ್ಗೆ https://wa.me/918158092508 ಎಂಬ ನಮೂದಿನ ಲಿಂಕ್ ಒಂದನ್ನು ಹಾಕಿ ಸಂದೇಶ ಕಳುಹಿಸಿದ್ದು, ಸದ್ರಿ ಲಿಂಕ್ ನ್ನು ಕ್ಲಿಕ್ ಮಾಡಿದಾಗ Adrian Co (ಮೊಬೈಲ್ ನಂಬ್ರ: 8158092508) ಎಂಬವರ ಹೆಸರಿನಲ್ಲಿ ವಾಟ್ಸ್ ಅಫ್ ಖಾತೆ ಓಪನ್ ಆಗಿದ್ದು, ನಂತ್ರ ಸದ್ರಿ ಖಾತೆಯಲ್ಲಿ https://toshop.fun/index/user/register/23648.html ಎಂಬ ಲಿಂಕ್ ಇದ್ದು, ಅದಕ್ಕೆ ಫಿರ್ಯಾದಿದಾರರು ಲಾಗಿನ್ ಆದಾಗ ವೆಬ್ ಸೈಟ್ ಓಪನ್ ಆಗಿದ್ದು, ಅದರಲ್ಲಿ toshop.fun Trading ಎಂಬ ಸಂಸ್ಥೆ ಓಪನ್ ಆಗಿ ಅದರಲ್ಲಿ (MALL) Online Shopping Open ಆಗಿದ್ದು, ಅದಕ್ಕೆ ರಿಜಿಸ್ಟರ್ ಮಾಡಿದ್ದು, ಆಗ ಫಿರ್ಯಾಧಿ ಹೆಸರಿನಲ್ಲಿ ವ್ಯಾಲೆಟ್ ಕ್ರಿಯೆಟ್  ಆಗಿರುತ್ತದೆ. ಅದಕ್ಕೆ ಹಣ ಹಾಕುವಂತೆ ತಿಳಿಸಿದಂತೆ ದಿನಾಂಕ:29-11-2022 ರಂದು  ರೂ.964/- ಹಣವನ್ನು ಹಾಕಿದ್ದು, ಆ ನಂತರ ಅದೇ ದಿನ ಹಣ ರೂ.1,330/- ಹಣ ವಾಪಾಸ್ಸು ಬಂದಿದ್ದು, ಇದನ್ನು ನಂಬಿ ಪಿರ್ಯಾದಿದಾರರು ದಿನಾಂಕ: 30-11-2022 ರಂದು ತನ್ನ ಗೂಗಲ್ ಪೇ ಮೂಖಾಂತರ ಹಂತ ಹಂತ ವಾಗಿ ಒಟ್ಟು  ರೂ. 84630/-  ಹಾಗೂ ತನ್ನ ಸ್ನೇಹಿತ  ಮನೋಜ್  ರವರಿಂದ  ರೂ.17,040/- ಹಣ ಒಟ್ಟು ರೂ. 1,01,670/- ಹಣವನ್ನು ಪಾವತಿಸಿರುತ್ತಾರೆ. ಆರೋಪಿಗಳು ಪಾರ್ಟ ಟೈಮ್ Trading ಕೆಲಸ ಎಂದು ನಂಬಿಸಿ, toshop.fun Trading ಎಂಬ ಸಂಸ್ಥೆ ಬಿಂಬಿಸಿ, ಪಿರ್ಯಾದಿದಾರರಿಂದ  ಒಟ್ಟು ರೂ. 1,01,670/- ಹಣವನ್ನು ಪಡೆದು, ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 93/2022  ಕಲಂ 66(c), 66(D), ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ದಿನಾಂಕ: 03/12/2022 ರಂದು 20:30 ಗಂಟೆಯಿಂದ 22:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕಂಗಿತ್ಲು ಎಂಬಲ್ಲಿ ಇರುವ ಪಿರ್ಯಾದಿ ಶ್ರೀಮತಿ ಉಷಾ ಇವರ ಬಾಬ್ತು ನಿರೀಕ್ಷಾ ನಿವಾಸ ಎಂಬ ಮನೆಯ ಅಡುಗೆ ಮನೆಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಮನೆಯ ಒಳಗಡೆ ಪ್ರವೇಶಿಸಿ ಪಿರ್ಯಾದುದಾರರ ಮನೆಯ ಕೊಠಡಿಯಲ್ಲಿದ್ದ ಗೋದ್ರೆಜ್ ನಲ್ಲಿ ಪರ್ಸನಲ್ಲಿ ಹಾಗೂ ಸ್ಟೀಲಿನ ಡಬ್ಬದಲ್ಲಿ ಇರಿಸಿದ್ದ ಸುಮಾರು 4,50,000/- ರೂ ಮೌಲ್ಯದ ಸುಮಾರು 156 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 145/2022 ಕಲಂ:457,  380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌‌

  • ಕಾರ್ಕಳ: ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಗಾಂಧಿನಗರ ನಿವಾಸಿ ಪಿರ್ಯಾದಿ ಅಜಿತ್ ಇವರ  ತಂದೆ, ಗೋಪಾಲ , ಪ್ರಾಯ 57 ವರ್ಷ ಇವರು ವಿಪರೀತ ಮಧ್ಯಪಾನ ಮಾಡುವ ಅಭ್ಯಾಸ ಉಳ್ಳವರಾಗಿದ್ದು, ವಿಪರೀತ ಮಧ್ಯಪಾನ ಸೇವನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು   ದಿನಾಂಕ 03/12/2022 ರಂದು ಅಪರಾಹ್ನ 3:30 ಗಂಟೆಯಿಂದ 4:30 ಗಂಟೆಯ ಮಧ್ಯೆ ತಮ್ಮ ಮನೆಯ ಸಮೀಪ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯು.ಡಿ.ಆರ್ 41/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 04-12-2022 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080